IPL 2024: ಮಿಚೆಲ್ ಸ್ಟಾರ್ಕ್ ಫೇಲ್: ಕೆಕೆಆರ್ ಯಂಗ್ ಸ್ಟರ್ಸ್ ಫುಲ್ ಶೈನ್
ಐಪಿಎಲ್ 2024 ರೋಚಕ ಘಟ್ಟದತ್ತ ಮುಖ ಮಾಡಿದೆ. ನಿರೀಕ್ಷೆ ಮೂಡಿಸಿರುವ ಆಟಗಾರರು ಬಿಗ್ ಪರ್ಫಾಮೆನ್ಸ್ ನೀಡುವಲ್ಲಿ ವಿಫಲರಾಗುತ್ತಿದ್ದಾರೆ. ಆದರೆ ಅನ್‌ಕ್ಯಾಪ್ಡ್ ಪ್ಲೇಯರ್‌ಗಳು ಮಾತ್ರ ಸಿಕ್ಕ ಅವಕಾಶವನ್ನು ಎರಡೂ ಕೈಗಳಲ್ಲಿ ಬಳಸಿಕೊಂಡು ತಮ್ಮ ತಮ್ಮ ತಂಡಗಳಿಗೆ ನೆರವಾಗುತ್ತಿದ್ದಾರೆ. ಕೆಕೆಆರ್ ತಂಡದಲ್ಲಿ ಸದ್ದು ಮಾಡುತ್ತಿರುವ ಸ್ಟಾರ್ ಯುವ ಆಟಗಾರರ ಬಗ್ಗೆ ಪರಿಚಯ ಇಲ್ಲಿದೆ.
ಐಪಿಎಲ್ 2024 ರ ಹರಾಜಿನ ಸಮಯದಲ್ಲಿ, ಕೋಲ್ಕತ್ತಾ ನೈಟ್ ರೈಡರ್ಸ್ ತಂಡವು ಡೆತ್ ಓವರ್‌ಗಳಲ್ಲಿ ತಂಡಕ್ಕಾಗಿ ಉತ್ತಮವಾಗಿ ಬೌಲಿಂಗ್ ಮಾಡುವ ಮತ್ತು ಹೆಚ್ಚು ರನ್ ನೀಡದ ಬೌಲರ್‌ಗಾಗಿ ಬಿಡ್ ಮಾಡಿತ್ತು. ಮತ್ತೊಂದೆಡೆ, ಅವರು ಪವರ್‌ಪ್ಲೇ ಓವರ್‌ಗಳ ಸಮಯದಲ್ಲಿ ವಿಕೆಟ್‌ಗಳನ್ನು ಪಡೆಯಬಲ್ಲ ಕ್ಷಮತೆ ಇರುವ ಆಟಗಾರರಿಗೆ ಮಣೆ ಹಾಕಲಾಗಿತ್ತು. ಇದರ ಪರಿಣಾಮ ವಿಶ್ವ ವಿಜೇತ ತಂಡದ ಆಟಗಾರ ಮಿಚೆಲ್ ಸ್ಟಾರ್ಕ್‌ಗೆ 24.75 ಕೋಟಿ ರೂಪಾಯಿ ಖರ್ಚು ಮಾಡಲು ಇದು ಒಂದು ಕಾರಣವಾಗಿತ್ತು.

ಕೈ ಹಿಡಯುತ್ತಿಲ್ಲ ಸ್ಟಾರ್ಕ್ ಅನುಭವ
ಆಸ್ಟ್ರೇಲಿಯಾದ ವೇಗದ ಬೌಲರ್ ಮಿಚೆಲ್ ಸ್ಟಾರ್ಕ್ ಎಂಟು ಪಂದ್ಯಗಳಲ್ಲಿ ಕೇವಲ ಏಳು ವಿಕೆಟ್‌ಗಳನ್ನು ಪಡೆದಿದ್ದಾರೆ. ರನ್ ಗಳಿಗೆ ಕಡಿವಾಣ ಹಾಕುವಲ್ಲಿ ಹಿಂದೆ ಬಿದ್ದಿದ್ದಾರೆ. ಇವರು ಉತ್ತಮವಾಗಿ ಬೌಲಿಂಗ್ ಮಾಡದೇ ಇದ್ದರೂ ಸಹ ತಂಡದ ಮೇಲೆ ಪರಿಣಾಮ ಬೀರುತ್ತಿಲ್ಲ. ಇದಕ್ಕೆ ಕಾರಣ ಯುವ ವೇಗದ ಬೌಲರ್‌ಗಳು ತಮ್ಮ ಕೆಲಸವನ್ನು ಅಚ್ಚು ಕಟ್ಟಾಗಿ ಮಾಡುತ್ತಿದ್ದಾರೆ.
ಯುವ ವೇಗದ ಬೌಲರ್‌ಗಳಾದ ವೈಭವ್ ಅರೋರಾ ಮತ್ತು ಹರ್ಷಿತ್ ರಾಣಾ. ಈ ಋತುವಿನಲ್ಲಿ ಈ ಇಬ್ಬರೂ ಆಟಗಾರರು ತಮ್ಮ ಶಿಸ್ತು ಬದ್ಧ ದಾಳಿಯಿಂದಲೇ ಎಲ್ಲರ ಮನ ಗೆದ್ದಿದ್ದಾರೆ. ಅದರಲ್ಲೂ ವೈಭವ್ ಎದುರಾಳಿ ತಂಡಕ್ಕೆ ಕಾಟ ನೀಡಿದ್ದಾರೆ. ಹಿಮಾಚಲ ಪ್ರದೇಶದ ವೇಗದ ಬೌಲರ್ ಪ್ರತಿ ಓವರ್‌ಗೆ 9.05 ಎಕಾನಮಿಯಲ್ಲಿ ರನ್ ನೀಡಿದ್ದಾರೆ. ವೈಭವ್ 2021 ರಿಂದ KKR ಜೊತೆಗೆ ಇದ್ದಾರೆ ಮತ್ತು ಅವರು ಆ ಋತುವಿನಲ್ಲಿ ಅವರು ಮೂಲ ಬೆಲೆಗೆ ತಂಡ ಸೇರಿಕೊಂಡಿದ್ದರು.
ವೈಭವ್ ಪ್ರದರ್ಶನ ಹೇಗಿದೆ?
ವಿಶಾಖಪಟ್ಟಣಂನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ವೈಭವ್ ಅತ್ಯುತ್ತಮ ಬೌಲಿಂಗ್ ಪ್ರದರ್ಶನ ನೀಡಿದರು. ಇವರು ಬಿಗುವಿನ ದಾಳಿ ನಡೆಸಿ 27 ರನ್‌ಗಳಿಗೆ 3 ವಿಕೆಟ್‌ಗಳನ್ನು ಕಬಳಿಸಿದರು ಮತ್ತು ಕೋಲ್ಕತ್ತಾ 106 ರನ್‌ಗಳಿಂದ ಪಂದ್ಯಗೆಲ್ಲಲು ನೆರವಾದರು. ಇನ್ನು ವೈಭವ್ ಐಪಿಎಲ್‌ನಲ್ಲೂ ಹೆಚ್ಚು ಪಂದ್ಯಗಳನ್ನು ಆಡದ ಕಾರಣ ಅವರಿಗೆ ಇನ್ನು ಅವಕಾಶ ಸಿಗಬೇಕಿದೆ. ಇವರು ಕೇವಲ 15 ಪಂದ್ಯಗಳನ್ನು ಆಡಿದ್ದು, 9.13 ರ ಎಕಾನಮಿ ದರದಲ್ಲಿ 17 ವಿಕೆಟ್ ಪಡೆದಿದ್ದಾರೆ. ಪ್ರಸಕ್ತ ಐಪಿಎಲ್‌ನಲ್ಲಿ ವೈಭವ್ ಆರೋರ್ ಆಡಿರುವ 5 ಪಂದ್ಯಗಲ್ಲಿ 18.11 ಸರಾಸರಿಯಲ್ಲಿ 9 ವಿಕೆಟ್ ಕಬಳಿಸಿದ್ದಾರೆ.

ದೇಶೀಯ ಕ್ರಿಕೆಟ್‌ನಲ್ಲಿ ಅಬ್ಬರ
24 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿರುವ ಅನುಭವ ಹೊಂದಿರುವ, ವೈಭವ್ ದೇಶೀಯ ಋತುವಿನಲ್ಲಿ ತಮ್ಮ ಪ್ರಭಾವ ಬೀರಿದ್ದಾರೆ. ಅವರು ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 88 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಈ ವೇಳೆ ಅವರ ಸರಾಸರಿ 22.35 ಆಗಿದೆ. ಇದರಲ್ಲಿ ನಾಲ್ಕು ಬಾರಿ ಐದು-ವಿಕೆಟ್‌ಗಳ ಸಾಧನೆ ಮಾಡಿದ್ದಾರೆ. ಪ್ಲೇಆಫ್‌ನಲ್ಲಿ ಸ್ಥಾನ ಪಡೆಯಲು ಕೆಕೆಆರ್ ಪ್ರಬಲ ಸ್ಪರ್ಧಿಯಾಗಿದೆ. ವೈಭವ್ ತನ್ನ ಅಬ್ಬರದ ದಾಳಿಯಿಂದ ಎದುರಾಳಿ ಬ್ಯಾಟರ್‌ಗಳನ್ನು ಕಟ್ಟಿ ಹಾಕುವ ಕ್ಷಮತೆಯನ್ನು ಹೊಂದಿದ್ದಾರೆ.
ಮುಂದಿನ ದಿನಗಳಲ್ಲಿ ಇವರಿಗೆ ಹೆಚ್ಚಿನ ಅವಕಾಶ ಸಿಗಬೇಕಿದೆ. ಅಲ್ಲದೆ ಇಂತಹ ಯುವ ವೇಗಿಗಳು ಸ್ಥಿರ ಪ್ರದರ್ಶನವನ್ನು ನೀಡಿ ರಾಷ್ಟ್ರೀಯ ತಂಡಕ್ಕೆ ಎಂಟ್ರಿ ನೀಡಬೇಕಿದೆ.












Click it and Unblock the Notifications