Virat Kohli: ನನ್ನನ್ನು ಹಾಗೆ ಕರೆಯಬೇಡಿ; ಅಭಿಮಾನಿಗಳಿಗೆ ವಿರಾಟ್ ಕೊಹ್ಲಿ ಮನವಿ

ವಿರಾಟ್ ಕೊಹ್ಲಿ, ವಿಶ್ವ ಕ್ರಿಕೆಟ್‌ನಲ್ಲಿ ಅಪಾರ ಅಭಿಮಾನಿ ಬಳಗವನ್ನು ಹೊಂದಿರುವ ಆಟಗಾರ. ಅಭಿಮಾನಿಗಳು ಪ್ರೀತಿಯಿಂದ ಅವರನ್ನು 'ಕಿಂಗ್ ಕೊಹ್ಲಿ' ಎಂದು ಕರೆಯುತ್ತಾರೆ. ದಾಖಲೆಗಳನ್ನು ಬರೆಯುವ ವಿಚಾರದಲ್ಲಿ ವಿರಾಟ್ ಕೊಹ್ಲಿ ಕಿಂಗ್ ಎಂದೇ ಅಭಿಮಾನಿಗಳ ಅನಿಸಿಕೆ.

ಸುದೀರ್ಘ ವಿರಾಮದ ಬಳಿಕ ವಿರಾಟ್ ಕೊಹ್ಲಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಆರ್‌ಸಿಬಿ ಅನ್‌ಬಾಕ್ಸ್‌ ಇವೆಂಟ್‌ನಲ್ಲಿ ಅಭಿಮಾನಿಗಳು 'ಕಿಂಗ್ ಕೊಹ್ಲಿ' ಎಂದು ಕೂಗಿದ್ದಾರೆ. ನಿರೂಪಕ ಡ್ಯಾನಿಶ್ ಸೇಟ್ ಕೂಡ ಕಿಂಗ್ ಕೊಹ್ಲಿ ಎಂದು ಕರೆದರು. ಅದಕ್ಕೆ ಪ್ರತಿಕ್ರಿಯೆ ನೀಡಿದ ಕೊಹ್ಲಿ ದಯವಿಟ್ಟು ಹಾಗೆ ಕರೆಯಬೇಡಿ ಎಂದು ಮನವಿ ಮಾಡಿದರು.

IPL 2024 Virat Kohli Requests RCB Fans Please Don t Call Me King

ನನ್ನನ್ನು ದಯವಿಟ್ಟು ಹಾಗೆ (ಕಿಂಗ್ ಕೊಹ್ಲಿ) ಎಂದು ಕರೆಯಬೇಡಿ. ನೀವು ಹಾಗೆ ಕರೆದಾಗಲೆಲ್ಲ ನನಗೆ ಮುಜುಗರವಾಗುತ್ತದೆ ಎಂದು ಹೇಳಿದರು. ಇಂದು ರಾತ್ರಿ ನಾವು ಚೆನ್ನೈಗೆ ಬೇಗನೆ ಹೋಗಬೇಕು. ನಮಗೆ ಚಾರ್ಟರ್ ಫ್ಲೈಟ್ ಇದೆ, ಆದ್ದರಿಂದ ನಮಗೆ ಹೆಚ್ಚು ಸಮಯವಿಲ್ಲ ಎಂದು ಮಾತು ಆರಂಭಿಸಿದ ಅವರು, "ಮೊದಲು, ನೀವು ನನ್ನನ್ನು ಆ ಪದ (ಕಿಂಗ್) ಎಂದು ಕರೆಯುವುದನ್ನು ನಿಲ್ಲಿಸಬೇಕು, ದಯವಿಟ್ಟು ನನ್ನನ್ನು ವಿರಾಟ್ ಎಂದು ಕರೆಯಿರಿ, ನನ್ನನ್ನು ಆ ಪದ (ಕಿಂಗ್) ಎಂದು ಕರೆಯಬೇಡಿ, ನಾನು ಫಾಫ್ ಡು ಪ್ಲೆಸಿಸ್‌ಗೆ ಹೇಳುತ್ತಿದ್ದೆ, ನೀವು ನನ್ನನ್ನು ಆ ಪದದಿಂದ ಕರೆಯುವಾಗ ನನಗೆ ಪ್ರತಿ ವರ್ಷ ಮುಜುಗರವಾಗುತ್ತದೆ. ಹಾಗಾಗಿ ನನ್ನನ್ನು ವಿರಾಟ್ ಎಂದು ಕರೆಯಿರಿ, ದಯವಿಟ್ಟು ಇನ್ನು ಮುಂದೆ ಆ ಪದವನ್ನು ಬಳಸಬೇಡಿ, ಇದು ನನಗೆ ತುಂಬಾ ಮುಜುಗರದ ಸಂಗತಿ" ಎಂದು ಕೊಹ್ಲಿ ಹೇಳಿದ್ದಾರೆ.

ಕಪ್ ಗೆಲ್ಲುವ ಆಸೆ ವ್ಯಕ್ತಪಡಿಸಿದ ಕೊಹ್ಲಿ

ಮಾರ್ಚ್ 22 ರಿಂದ ಪ್ರಾರಂಭವಾಗುವ ಐಪಿಎಲ್‌ ಲೀಗ್ ಪಂದ್ಯಾವಳಿಯಲ್ಲಿ ಈ ಬಾರಿ ಕಪ್ ಗೆಲ್ಲಬೇಕು ಎಂದು ಕೊಹ್ಲಿ ಆಸೆ ವ್ಯಕ್ತಪಡಿಸಿದ್ದಾರೆ. ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ ಆರ್ ಸಿಬಿ ತಂಡ ಕಪ್ ಗೆದ್ದು ಇತಿಹಾಸ ನಿರ್ಮಿಸಿದ್ದು, ಈ ವರ್ಷ ನಾವು ಕಪ್ ಗೆದ್ದು ಖುಷಿಯನ್ನು ಡಬಲ್ ಮಾಡಬೇಕು ಎಂದಿದ್ದಾರೆ.

"ಇದು ಸಂಪೂರ್ಣವಾಗಿ ಅದ್ಭುತವಾಗಿತ್ತು. ಮಹಿಳಾ ತಂಡ ಪ್ರಶಸ್ತಿ ಗೆದ್ದಾಗ ನಾವು ನೋಡುತ್ತಿದ್ದೆವು. ಆಶಾದಾಯಕವಾಗಿ, ನಾವು ಟ್ರೋಫಿಗಳೊಂದಿಗೆ ಅದನ್ನು ದ್ವಿಗುಣಗೊಳಿಸಬಹುದು ಮತ್ತು ಅದು ನಿಜವಾಗಿಯೂ ವಿಶೇಷವಾದದ್ದು" ಎಂದು ಆರ್‌ಸಿಬಿ ಅನ್‌ಬಾಕ್ಸ್ ಈವೆಂಟ್‌ನಲ್ಲಿ ಕೊಹ್ಲಿ ಹೇಳಿದರು.

ಐಪಿಎಲ್ 2024 ರಲ್ಲಿ ಆರ್‌ಸಿಬಿಯೊಂದಿಗೆ ತನ್ನ 17 ನೇ ಋತುವನ್ನು ಪ್ರಾರಂಭಿಸಲಿರುವ ಕೊಹ್ಲಿ, ಈ ವರ್ಷ ಐಪಿಎಲ್ ಟ್ರೋಫಿಯನ್ನು ಗೆಲ್ಲುವ ಕನಸನ್ನು ನನಸು ಮಾಡಲು ತನ್ನ ಕೌಶಲ್ಯ ಮತ್ತು ಅನುಭವವನ್ನು ಧಾರೆ ಎರೆಯುವುದಾಗಿ ಹೇಳಿದರು.

"ಐಪಿಎಲ್ ಟ್ರೋಫಿ ಗೆದ್ದಾಗ ಅನುಭವ ಹೇಗಿರುತ್ತದೆ ಎನ್ನುವುದನ್ನು ತಿಳಿದುಕೊಳ್ಳುವುದು ನನ್ನ ಕನಸು. ಮೊದಲ ಬಾರಿಗೆ ಟ್ರೋಫಿ ಗೆದ್ದ ತಂಡದ ಭಾಗವಾಗುತ್ತೇನೆ. ನನ್ನ ಸಾಮರ್ಥ್ಯ, ನನ್ನ ಅನುಭವದೊಂದಿಗೆ ನಾನು ನನ್ನ ಅತ್ಯುತ್ತಮ ಪ್ರಯತ್ನ ಮಾಡುತ್ತೇನೆ. ಅಭಿಮಾನಿಗಳು ಮತ್ತು ಫ್ರಾಂಚೈಸಿಗಾಗಿ ಅದನ್ನು ಮಾಡಬೇಕು" ಎಂದು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+