‘ಈ ಸಲ ಕಪ್ ನಮ್ದೆ’ ಅಂತಿದ್ದಾರೆ RCB ತಂಡದ ಕನ್ನಡ ಅಭಿಮಾನಿಗಳು!

ಐಪಿಎಲ್ ಶುರುವಾಯ್ತು ಅಂದ್ರೆ ಭಾರತದಲ್ಲಿ ಒಂದು ಹಬ್ಬದ ರೀತಿ ಜನರು ಸೆಲೆಬ್ರೇಷನ್‌ನ ಮಾಡ್ತಾರೆ. ಅದರಲ್ಲೂ ಬೆಂಗಳೂರು ನಿವಾಸಿಗಳಿಗೆ ಹಾಗೂ ಕನ್ನಡಿಗರಿಗೆ ಆರ್‌ಸಿಬಿ ತಂಡವೇ ಕಣ ಕಣದಲ್ಲೂ ಬೆರೆತು ಹೋಗಿದೆ. ಹೀಗಿದ್ದರೂ ಆರ್‌ಸಿಬಿ ತಂಡ ಮಾತ್ರ ಕಳೆದ 16 ವರ್ಷ ಕಪ್ ಗೆದ್ದೇ ಇಲ್ಲ. ಇಷ್ಟೆಲ್ಲಾ ನಡೆದರೂ ಕನ್ನಡಿಗರು ಮಾತ್ರ ಆರ್‌ಸಿಬಿ ತಂಡದ ಕೈಬಿಟ್ಟಿಲ್ಲ ಹಾಗೇ ಈ ಬಾರಿ ಅಂದ್ರೆ 17ನೇ ಬಾರಿಯ ಐಪಿಎಲ್‌ನಲ್ಲಿ ಆರ್‌ಸಿಬಿ ಕಪ್ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇದೇ ಕಾರಣಕ್ಕೆ ಮತ್ತೆ 'ಈ ಸಲ ಕಪ್ ನಮ್ದೆ' ವೈರಲ್ ಆಗುತ್ತಿದೆ.

ಮೊದಲೇ ಹೇಳಿದಂತೆ 'ಐಪಿಎಲ್' ಟೂರ್ನಿ ಭಾರತೀಯರ ಭಾವನೆ ಜೊತೆ ಬೆರೆತು ಹೋಗಿದೆ. ಹೀಗಾಗಿಯೇ ಐಪಿಎಲ್ ಶುರುವಾಯ್ತು ಅಂದ್ರೆ ಅಭಿಮಾನಿಗಳು ಉಸಿರು ಬಿಗಿ ಹಿಡಿದು ಎಲ್ಲ ಪಂದ್ಯಕ್ಕೂ ಕಾಯುತ್ತಾರೆ. ಈಗಲೂ ಅಷ್ಟೇ ಐಪಿಎಲ್ ಟೂರ್ನಿಯ ವೇಳಾಪಟ್ಟಿ ಅನೌನ್ಸ್, ಮಾಡಿರುವ ಬಿಸಿಸಿಐ ಮೊದಲ ಪಂದ್ಯದಲ್ಲೇ ಆರ್‌ಸಿಬಿ & ಚೆನ್ನೈ ನಡುವೆ ಮ್ಯಾಚ್ ಇಟ್ಟಿದೆ. ಹೀಗಿದ್ದಾಗ ಫ್ಯಾನ್ಸ್ ಪಾಲಿಗೆ ಈ ಬಾರಿ ಕೂಡ ಸಂಭ್ರಮ ಸಿಗೋದು ಗ್ಯಾರಂಟಿ ಅಂತಿದ್ದಾರೆ, ಕ್ರಿಕೆಟ್ ತಜ್ಞರು. ಇದೇ ಸಮಯದಲ್ಲಿ 'ಈ ಸಲ ಕಪ್ ನಮ್ದೆ' ಪದ ಎಲ್ಲೆಲ್ಲೂ ಕಾಣಿಸುತ್ತಿದೆ.

IPL 2024 Schedule: Ee Sala Cup Namde Word Is Getting Viral To Support The RCB Team

ಎಲ್ಲಿ ನೋಡಿದರೂ ಆರ್‌ಸಿಬಿ + ಕೊಹ್ಲಿ!

ಐಪಿಎಲ್ ಟೈಂ ಟೇಬಲ್ ಘೋಷಣೆ ಆಗುತ್ತಿದ್ದಂತೆ ಸೋಷಿಯಲ್ ಮೀಡಿಯಾದಲ್ಲಿ ಇದೀಗ ಬೆಂಗಳೂರು ತಂಡ, ಅಂದ್ರೆ ಆರ್‌ಸಿಬಿ ಹಾಗೂ ಆರ್‌ಸಿಬಿ ತಂಡದ ಮಾಜಿ ಕ್ಯಾಪ್ಟನ್ ನಮ್ಮ ವಿರಾಟ್ ಕೊಹ್ಲಿ ವಿಚಾರ ಟ್ರೆಂಡ್ ಆಗುತ್ತಿದ್ದು. ವಿರಾಟ್ ಕೊಹ್ಲಿ ಅಭಿಮಾನಿಗಳು ಐಪಿಎಲ್ ಹಂಗಾಮದ ನಡುವೆ ಈ ಬಾರಿ ಕಪ್ ಗೆದ್ದೇ ಗೆಲ್ಲುತ್ತೇವೆ ಅಂತಾ ನಿರ್ಧಿಸಿದ್ದಾರೆ. ಹಾಗೇ ಈ ಬಾರಿ ಕೂಡ ಪ್ರತಿಬಾರಿ ರೀತಿಯೇ ಆರ್‌ಸಿಬಿ ತಂಡಕ್ಕೆ ತಮ್ಮ ಬೃಹತ್ ಬೆಂಬಲ ನೀಡೋಕೆ, ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ.

ಐಪಿಎಲ್ ಹಂಗಾಮದಲ್ಲಿ ಕನ್ನಡ ಡಿಂಡಿಮ!

ಅಷ್ಟಕ್ಕೂ ಇದೀಗ ಸಿಕ್ಕಿರುವ ಮಾಹಿತಿ ಪ್ರಕಾರ, ಬಹು ನಿರೀಕ್ಷಿತ 17ನೇ ಆವೃತ್ತಿ ಐಪಿಎಲ್‌ಗೆ ಅಧಿಕೃತ ಕೌಂಟ್‌ಡೌನ್ ಶುರುವಾಗಿದೆ. ಹೀಗಾಗಿ ಇಂಡಿಯನ್ ಪ್ರೀಮಿಯರ್ ಲೀಗ್​ ವೇಳಾಪಟ್ಟಿ ಭಾರತೀಯ ಕ್ರಿಕೆಟ್‌ ನಿಯಂತ್ರಂಣ ಮಂಡಳಿ ಪ್ರಕಟಿಸಿದೆ. 2024ರ ಐಪಿಎಲ್​ ಟೂರ್ನಿ ಮಾರ್ಚ್​ 22 ರಿಂದ ಆರಂಭವಾಗಲಿದೆ, ಉದ್ಘಾಟನೆ ಪಂದ್ಯದಲ್ಲೇ ಹಾಲಿ ಚಾಂಪಿಯನ್ಸ್‌ ಚೆನ್ನೈ ಸೂಪರ್ ಕಿಂಗ್ಸ್​ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ಕ್ರಿಕೆಟ್ ತಂಡಗಳ ನಡುವೆ ಫೈಟ್ ಪಕ್ಕಾ ಆಗಿದೆ. ಚೆನ್ನೈ ಚಿದಂಬರಂ ಕ್ರಿಕೆಟ್​ ಮೈದಾನದಲ್ಲಿ ಕಾದಾಟ ನಡೆಯಲಿದೆ. ಹೀಗೆ ಬೆಂಗಳೂರು ತಂಡದ ಅಭಿಮಾನಿಗಳು ಮೈದಾನದಲ್ಲಿ ಸಂಭ್ರಮ ಆಚರಿಸಲು ಸಿದ್ಧವಾಗಿದ್ದಾರೆ.

IPL 2024 Schedule: Ee Sala Cup Namde Word Is Getting Viral To Support The RCB Team

'ಈ ಸಲ ಕಪ್ ನಮ್ದೆ'

ಬೆಂಗಳೂರು ತಂಡ ಐಪಿಎಲ್ ಟೂರ್ನಿ ಗೆದ್ದೇ ಗೆಲ್ಲುತ್ತೆ ಅಂತಾ ಅಭಿಮಾನಿಗಳು ಕಾಯುತ್ತಾ ಕೂತಿದ್ದಾರೆ. ಹೀಗಾಗಿಯೇ 'ಈ ಸಲ ಕಪ್ ನಮ್ದೆ' ಘೋಷ ವಾಖ್ಯ ಕೂಡ ವೈರಲ್ ಆಗಿದೆ ಹಾಗೂ ಆರ್‌ಸಿಬಿ ಬೆಂಗಳೂರು ತಂಡದ ಅಭಿಮಾನಿಗಳು ತಮ್ಮ ತಂಡದ ಗೆಲುವಿಗೆ ಕಾಯ್ತಾ ಕೂತಿದ್ದಾರೆ. ಅವರ ಆಸೆ ಈ ವರ್ಷ ನೆರವೇರುತ್ತಾ? ಅನ್ನೋ ಕುತೂಹಲ ಕೂಡ ಡಬಲ್, ಆಗುತ್ತಿದೆ. ಅಲ್ಲದೆ ಈ ಬಾರಿ ಕಪ್ ಗೆಲ್ಲಲು ಆರ್‌ಸಿಬಿ ತಂಡ ಕೂಡ ಎಲ್ಲಾ ರೀತಿ ಎಫರ್ಟ್ಸ್ ಹಾಕುತ್ತಿದೆ. ಹೀಗಾಗಿ ಭಾರಿ ಕುತೂಹಲ ಕೆರಳಿಸಿದೆ ಐಪಿಎಲ್ 2024.

ಒಟ್ನಲ್ಲಿ ಐಪಿಎಲ್ 2024 ದೊಡ್ಡ ಮಟ್ಟಿಗೆ ಹೈಪ್ ಕ್ರಿಯೇಟ್ ಮಾಡಿದ್ದು, ಈ ಬಾರಿ ಯಾರು ಗೆಲ್ತಾರೆ? ಯಾರಿಗೆ ಸೋಲು ಎದುರಾಗುತ್ತೆ? ಆರ್‌ಸಿಬಿ ಈ ಬಾರಿಯಾದರೂ ಕಪ್ ಗೆಲ್ಲುತ್ತಾ? ಅನ್ನೋದನ್ನೆಲ್ಲಾ ಕಾದು ನೋಡಬೇಕಿದೆ. ಇದೆಲ್ಲಕ್ಕಿಂತ ಹೆಚ್ಚಾಗಿ ವಿರಾಟ್ ಕೊಹ್ಲಿ ಇದೀಗ, ಮತ್ತಷ್ಟು ದಾಖಲೆಗಳನ್ನ ಸೃಷ್ಟಿ ಮಾಡಲು ಸಜ್ಜಾಗಿದ್ದಾರೆ. ಹಾಗೇ ಆರ್‌ಸಿಬಿ ತಂಡ ಕೂಡ ಹೊಸ ಹುಮ್ಮಸ್ಸಿನಲ್ಲಿ ಟೂರ್ನಿಗೆ ಸಜ್ಜಾಗಿ ನಿಂತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+