RCB Vs SRH: ತವರಿನಲ್ಲಿ ನಿರ್ಣಾಯಕ ಕದನ ಗೆಲ್ಲುತ್ತಾ ಆರ್‌ಸಿಬಿ? ಇಂದು ಸನ್‌ರೈಸರ್ಸ್ ಎದುರು ಪಂದ್ಯ

ಸತತ ಸೋಲು ಕಂಡಿರುವ ರಾಯಲ್ ಚಾಲೆಂಜರ್ಸ್‌ ಬೆಂಗಳೂರು (ಆರ್‌ಸಿಬಿ) ತಂಡ ಇಂದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಐಪಿಎಲ್ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ಎದುರಿಸಲಿದೆ.

ಈ ನಡುವೆ ಆರ್‌ಸಿಬಿ ತವರಿನಲ್ಲಿ ನಿರ್ಣಾಯಕ ಕದನ ಗೆಲ್ಲುತ್ತಾ ಎನ್ನುವ ಪ್ರಶ್ನೆ ಕ್ರಿಕೆಟ್ ಅಭಿಮಾನಿಗಳಲ್ಲಿ ಮೂಡಿದೆ. ಇಂದು ಸನ್‌ರೈಸರ್ಸ್ ವಿರುದ್ಧ ಮಹತ್ವದ ಪಂದ್ಯ ನಡೆಯಲಿದ್ದು, ಈಗಾಗಲೇ ಐದು ಪಂದ್ಯಗಳಲ್ಲಿ ಆರ್‌ಸಿಬಿ ಸೋತ್ತಿದ್ದು ಈ ಪಂದ್ಯದಲ್ಲಿ ಗೆಲ್ಲುವ ಅನಿವಾರ್ಯತೆ ಇದೆ. ಒಂದೆಡೆ ಮೊನಚು ಕಳೆದುಕೊಂಡ ಆರ್‌ಸಿಬಿ ಬೌಲರ್‌ಗಳಿಗೆ ಹೈದ್ರಾಬಾದ್ ಬ್ಯಾಟರ್ಸ್‌ಗಳ ಭಯ ಇದ್ದು, ಒಂದು ವೇಳೆ ಸೋತರೆ ಪ್ಲೇ-ಆಫ್ ಬಾಗಿಲು ಬಹುತೇಕ ಬಂದ್ ಆಗಲಿದೆ.

IPL 2024 RCB Vs SRH Match today at Chinnaswamy Stadium in Bengaluru

ಈ ಬಾರಿ ಐಪಿಎಲ್‌ನ ಅರ್ಧ ಭಾಗ ಮುಕ್ತಾಯಗೊಳ್ಳುವ ಮೊದಲೇ ಫ್ಲೇ-ಆಫ್ ರೇಸ್‌ನ ಅಳಿವು-ಉಳಿವಿನ ಲೆಕ್ಕಾಚಾರ ಆರಂಭಿಸಿರುವ ಆರ್‌ಸಿಬಿ ಈಗ ನಿರ್ಣಾಯಕ ಘಟ್ಟದಲ್ಲಿದೆ. ಗೆದ್ದರೆ ಪ್ಲೇ-ಆಫ್, ಸೋತರೆ ಮನೆಗೆ ಎಂಬ ಪರಿಸ್ಥಿತಿಯಲ್ಲಿರುವ ಆರ್‌ಸಿಬಿ ಸೋಮವಾರ ತವರಿನಲ್ಲಿ ಮಹತ್ವದ ಪಂದ್ಯದಲ್ಲಿ ಸನ್‌ ರೈಸರ್ಸ್ ಹೈದರಾಬಾದ್‌ ವಿರುದ್ಧ ಸೆಣಸಾಡಲಿದೆ.

ಫಾಫ್ ಡು ಪ್ಲೆಸಿ ಸಾರಥ್ಯದ ಆರ್‌ಸಿಬಿ ಆಡಿರುವ ಆರು ಪಂದ್ಯಗಳ ಪೈಕಿ ಐದರಲ್ಲಿ ಸೋಲು ಅನುಭವಿಸಿದೆ. ಎದ್ದು ಬಿದ್ದು ಒಂದು ಪಂದ್ಯ ಗೆದ್ದರಿವ ತಂಡ ಅಂಕಪಟ್ಟಿಯಲ್ಲಿ ಕೊನೆ ಸ್ಥಾನದಲ್ಲೇ ಬಾಕಿಯಾಗಿದೆ. ತಂಡಕ್ಕೆ ಸೋಮವಾರದ್ದು ಸೇರಿ ಇನ್ನು ಎಂಟು ಪಂದ್ಯ ಬಾಕಿ ಇದೆ.

ನೆಟ್ ರನ್‌ ರೇಟ್ ಲೆಕ್ಕ ಹಾಕಲು ಕ್ಯಾಲ್‌ಕ್ಯುಲೇಟರ್ ಮೊರೆ ಹೋಗದೆ, ಇತರ ತಂಡಗಳ ಸೋಲಿಗಾಗಿ ಪಾರ್ಥಿಸದೆ ಪ್ಲೇ-ಅಫ್‌ಗೇರಬೇಕಿದ್ದರೆ ಇನ್ನುಳಿದ ಎಲ್ಲಾ ಪಂದ್ಯಗಳನ್ನು ಆರ್‌ಸಿಬಿ ಗೆಲ್ಲಲೇಬೇಕು. ಸೋತರೆ ಪ್ಲೇ-ಆಫ್ ಹಾದಿ ಭಗ್ನಗೊಳ್ಳುವುದು ಬಹುತೇಕ ಖಚಿತ.

ಎಲ್ಲದರಲ್ಲೂ ವಿಫಲ: ಈ ಬಾರಿ ಆರ್‌ಸಿಬಿಯ ಪ್ರದರ್ಶನ ಬಗ್ಗೆ ಹೇಳಿಕೊಳ್ಳುವಂತದ್ದೇನೂ ಇಲ್ಲ. ಒನ್‌ ಮ್ಯಾನ್ ಶೋ ಎಂಬಂತೆ ವಿರಾಟ್ ಕೊಹ್ಲಿ ಮಾತ್ರ ಅಬ್ಬರಿಸುತ್ತಿದ್ದಾರೆ. ಯಳಿದಂತೆ ಯಾರೊಬ್ಬರೂ 200ಕ್ಕಿಂತ ಹೆಚ್ಚು ಮೊತ್ತ ಕಲೆಹಾಕಿಲ್ಲ. ಕಾರ್ತಿಕ್ ಡೆತ್ ಓವರ್‌ಗಳಲ್ಲಿ ಮಿಂಚುತ್ತಿದ್ದರೂ ಇತರರಿಂದ ಸೂಕ್ತ ಬೆಂಬಲ ಸಿಗುತ್ತಿಲ್ಲ.

ಇನ್ನು ಕೈ ಬೆರಳಿನ ಗಾಯಕ್ಕೆ ತುತ್ತಾಗಿದ್ದ ಮ್ಯಾಕ್ಸ್‌ವೆಲ ಚೇತರಿಸಿಕೊಂಡಿದ್ದು, ಈ ಪಂದ್ಯದಲ್ಲಿ ಆಡುವ ನಿರೀಕ್ಷೆಯಿದೆ. ತಂಡದ ಬೌಲಿಂಗ್‌ ವಿಭಾಗ ಎಷ್ಟು ಸೆಪ್ಟಿಯಾಗಿದೆ ಎಂದರೆ ಯಾರೊಬ್ಬರೂ ತಲಾ 5+ ಹೆಚ್ಚಿ ವಿಕೆಟ್‌ ಪಡೆದಿಲ್ಲ. ಈ ಪಂದ್ಯದಲ್ಲಾದರೂ ಬೌಲರ್‌ಗಳು ತಂಡದ ಕೈ ಹಿಡಿಯುತ್ತಾರಾ ನೋಡಬೇಕಿದೆ.

ಮತ್ತೊಂದೆಡೆ 5ರಲ್ಲಿ 3ಪಂದ್ಯ ಗೆದ್ದಿರುವ ಸನ್‌ ರೈಸರ್ಸ್ ತನ್ನ ಬ್ಯಾಟರ್‌ಗಳ ಮೇಲೆ ಹೆಚ್ಚು ನಿರೀಕ್ಷೆ ಇಟ್ಟುಕೊಂಡಿದೆ. ಬ್ಯಾಟರ್‌ಗಳ ಸ್ವರ್ಗ ಚಿನ್ನಸ್ವಾಮಿಯಲ್ಲಿ ಸನ್‌ರೈಸರ್ಸ್ ಬ್ಯಾಟರ್‌ಗಳನ್ನು ಕಟ್ಟಿಹಾಕಲು ಸವಾಲು ಆರ್‌ಸಿಬಿ ಬೌಲರ್‌ಗಳ ಮುಂದಿದೆ.

ಚಿನ್ನಸ್ವಾಮಿ ಕ್ರೀಡಾಂಗಣದ ಪಿಚ್ ಬ್ಯಾಟರ್‌ಗಳ ಸ್ವರ್ಗ ಎನಿಸಿಕೊಂಡಿದ್ದರೂ ಈ ಬಾರಿ ಮೂರು ಪಂದ್ಯಗಳಲ್ಲಿ ಒಮ್ಮೆಯೂ 190+ ಮೊತ್ತ ದಾಖಲಾಗಿಲ್ಲ. ಆದರೆ ಇಲ್ಲಿ ಚೇಸಿಂಗ್ ಸುಲಭವಾಗಲಿರುವ ಕಾರಣ ಟಾಸ್‌ ಗೆಲ್ಲುವ ತಂಡ ಫೀಲ್ಡಿಂಗ್ ಆಯ್ಕೆ ಮಾಡಿಕೊಳ್ಳುವ ಸಾಧ್ಯತೆ ಹೆಚ್ಚಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+