RCB VS CSK: ಚೆನ್ನೈ ವಿರುದ್ಧ ಗೆದ್ದು ಬೀಗುತ್ತಾ ಆರ್‌ಸಿಬಿ?
ಆರ್‌ಸಿಬಿ ತಂಡ ಇದೀಗ ಐಪಿಎಲ್ 2024ರ ಮೊದಲ ಪಂದ್ಯವನ್ನ ಆರಂಭ ಮಾಡಿದೆ. ಈ ಮೂಲಕ ಕಪ್ ಗೆಲ್ಲುವ ಗುರಿಯೊಂದಿಗೆ ಮುನ್ನುಗ್ಗಿದೆ. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಲು ಬಂದ ಡುಪ್ಲೆಸಿಸ್ ಪಡೆಗೆ ಆರಂಭದಲ್ಲಿ ಅದ್ಭುತ ಮುನ್ನಡೆ ಸಿಕ್ಕರೂ, ಆ ಬಳಿಕ ಭಾರಿ ಹಿನ್ನಡೆ ಉಂಟಾಗಿದೆ. ಹಾಗಾದರೆ ಆರ್‌ಸಿಬಿ ತಂಡ ಚೆನ್ನೈ ವಿರುದ್ಧ ಗೆಲ್ಲುತ್ತಾ? ಬನ್ನಿ ತಿಳಿಯೋಣ.
ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಆರ್‌ಸಿಬಿ ತಂಡದ ನಡುವೆ ಮ್ಯಾಚ್ ನಡೆಯುತ್ತೆ ಅಂದರೆ, ಇಡೀ ದೇಶವೇ ಈ ಕಡೆ ತಿರುಗಿ ನೋಡುತ್ತೆ. ಯಾಕಂದ್ರೆ ಇಬ್ಬರ ನಡುವಿನ ಮ್ಯಾಚ್ ಅಷ್ಟು ಹವಾ ಕ್ರಿಯೇಟ್ ಮಾಡುತ್ತದೆ. ಹೀಗಿದ್ದಾಗ ಚೆನ್ನೈ ಕ್ರೀಡಾಂಗಣದಲ್ಲಿ ಇದೀಗ ಕ್ರಿಕೆಟ್ ಪಂದ್ಯ ಶುರುವಾಗಿದೆ. ಹೀಗಾಗಿ ಕುತೂಹಲ ಕೂಡ ಡಬಲ್ ಆಗಿತ್ತು. ಆರಂಭದಲ್ಲೇ ಗೆಲ್ಲುವ ಕುದುರೆ ಅಂತಾ ಕರೆಸಿಕೊಂಡ ಬೆಂಗಳೂರು ತಂಡ, ಯಾಕೋ ಈಗ ಮೇಲಿಂದ ಮೇಲೆ ವಿಕೆಟ್‌ಗಳನ್ನ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ. ಹಾಗಾದ್ರೆ ಚೆನ್ನೈ ಕಟ್ಟಿಹಾಕಲು ಬೆಂಗಳೂರು ತಂಡ ಎಷ್ಟು ರನ್ ಗಳಿಸಬೇಕು? ಮುಂದೆ ಓದಿ.

200ಕ್ಕೂ ಹೆಚ್ಚು ರನ್ ಬೇಕು!
ಚೆನ್ನೈ ಸೂಪರ್ ಕಿಂಗ್ಸ್ ತಂಡ ಬೌಲಿಂಗ್ ಮಾತ್ರವಲ್ಲ, ಬ್ಯಾಟಿಂಗ್ ವಿಭಾಗದಲ್ಲೂ ಸಖತ್ ಗಟ್ಟಿಯಾಗಿದೆ. ಹೀಗಾಗಿ ಆರ್‌ಸಿಬಿ ತಂಡ ಇದೀಗ ಚೆನ್ನೈ ತಂಡದ ವಿರುದ್ಧ ಗೆಲುವು ಸಾಧಿಸಿ ಮೊದಲ ಪಂದ್ಯದಲ್ಲೇ ವಿಜಯ ಪತಾಕೆ ಹಾರಿಸಲು ಕನಿಷ್ಠ ಅಂದ್ರೂ 200ಕ್ಕೂ ಹೆಚ್ಚು ರನ್ ಬೇಕು. ಇಲ್ಲವಾದರೆ ಚೆನ್ನೈ ತಂಡ ಸುಲಭವಾಗಿ ಆರ್‌ಸಿಬಿ ಕೊಡುವ ಗುರಿಯನ್ನು ಬೆನ್ನತ್ತಿ, ಗೆಲುವು ಸಾಧಿಸುತ್ತದೆ. ಹೀಗಾಗಿ ಆರ್‌ಸಿಬಿ ಉತ್ತಮವಾಗಿ ಆಟವಾಡಿ ರನ್ ಕಲೆಹಾಕಬೇಕಿದೆ. ಈಗಿನ ಲೆಕ್ಕಾಚಾರದ ಪ್ರಕಾರ ಆರ್‌ಸಿಬಿ 200 ಕ್ಕೂ ಹೆಚ್ಚು ರನ್ ಗಳಿಸಲು ಬೇಕಿರುವ ಎಲ್ಲಾ ರೀತಿಯ ವಾತಾವರಣ ಇದೆ.
ಮೊದಲ ಪಂದ್ಯದಲ್ಲೇ ಆರ್‌ಸಿಬಿ ಹವಾ?
ಬಹು ನಿರೀಕ್ಷಿತ 17ನೇ ಆವೃತ್ತಿ ಐಪಿಎಲ್ ಶುರುವಾಗಿದೆ. 2024ರ ಐಪಿಎಲ್ ಟೂರ್ನಿ, ಮಾರ್ಚ್ 22 ರಿಂದ ಅಂದರೆ ಇಂದಿನಿಂದ ಆರಂಭ ಆಗಿದೆ. ಉದ್ಘಾಟನೆ ಪಂದ್ಯದಲ್ಲೇ ಹಾಲಿ ಚಾಂಪಿಯನ್ಸ್ ಚೆನ್ನೈ ಸೂಪರ್ ಕಿಂಗ್ಸ್ & ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳ ನಡುವೆ ಫೈಟ್ ಶುರು ಆಗಿದೆ. ಚಿದಂಬರಂ ಮೈದಾನದಲ್ಲಿ ಕಾದಾಟ ಆರಂಭವಾಗಿದೆ. ಹೀಗಾಗಿ ಬೆಂಗಳೂರು ತಂಡದ ಅಭಿಮಾನಿಗಳು ಮೈದಾನದಲ್ಲಿ ಸಂಭ್ರಮ ಆಚರಿಸುತ್ತಿದ್ದು, ಈ ಪಂದ್ಯದಲ್ಲಿ ಆರ್‌ಸಿಬಿ ತಂಡ ಭರ್ಜರಿ ಗೆಲುವು ಸಾಧಿಸಲು ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಂಡಿದೆ.

ಹೀಗೆ ಆರ್‌ಸಿಬಿ ಮತ್ತು ಸಿಎಸ್‌ಕೆ ನಡುವಿನ ಪಂದ್ಯ ಸಿಕ್ಕಾಪಟ್ಟೆ ಕುತೂಹಲ ಕೆರಳಿಸಿದೆ. ಈ ನಡುವೆ ಎರಡೂ ತಂಡಗಳ ಅಭಿಮಾನಿಗಳು ಚೆನ್ನೈನ ಮೈದಾನದಲ್ಲಿ ಭಾರಿ ಪ್ರಮಾಣದಲ್ಲೇ ಸೇರಿದ್ದು, ಗೆಲುವಿಗಾಗಿ ತಮ್ಮ ತಮ್ಮ ತಂಡಗಳನ್ನು ಬೆಂಬಲಿಸುತ್ತಿದ್ದಾರೆ. ಹೀಗಾಗಿ ಚೆನ್ನೈನ ಮೈದಾನದಲ್ಲಿ ಕಾವು ಒಂದಷ್ಟು ಜಾಸ್ತಿ ಇದ್ದು, ಸೋಲು & ಗೆಲುವಿನ ಲೆಕ್ಕಾಚಾರ ಇದೀಗ ಬಲು ಜೋರಾಗಿದೆ.












Click it and Unblock the Notifications