IPL 2024: ಪಂಜಾಬ್ ಕಿಂಗ್ ಈ ಯಂಗ್ ಪ್ಲೇಯರ್: ಐದು ಪಂದ್ಯಗಳಲ್ಲಿ ಔಟ್ ಆಗಿದ್ದು ಒಂದೇ ಬಾರಿ
ಐಪಿಎಲ್ ರೋಚಕ ಘಟ್ಟದತ್ತ ಮುಖ ಮಾಡುತ್ತಿದೆ. ಈಗಾಗಲೇ ಎಲ್ಲ ತಂಡಗಳು ಕನಿಷ್ಠ ಒಮ್ಮೆಯಾದರೂ ಮುಖಾಮುಖಿ ಆಗಿವೆ. ಸ್ಟಾರ್ ಆಟಗಾರರು ತಮ್ಮ ಕ್ಲಾಸಿಕ್ ಆಟದಿಂದ ಅಭಿಮಾನಿಗಳನ್ನು ರಂಜಿಸಿದರೆ, ಯುವ ಆಟಗಾರರು ಫ್ಯಾನ್ಸ್ ಮನಸ್ಸು ಕದಿಯುವ ಕೆಲಸ ಆರಂಭಿಸಿದ್ದಾರೆ. ಪಂಜಾಬ್ ಕಿಂಗ್ಸ್ ತಂಡದಲ್ಲೂ ಯುವ ಅಭಿಮಾನಿಗಳ ಚಿತ್ತ ಕದಿಯುವ ಪ್ಲೇಯರ್ ಒಬ್ಬ ಇದ್ದಾನೆ.
ಈ ಪ್ಲೇಯರ್ ಸ್ಪೇಷಾಲಿಟಿ ಎಂದರೆ, ಇದುವರೆಗೆ ಇವರು ಐಪಿಎಲ್‌ನಲ್ಲಿ ಐದು ಬಾರಿ ಕಣಕ್ಕೆ ಇಳಿದಿದ್ದು, ಒಂದು ಬಾರಿ ಮಾತ್ರ ಔಟ್ ಆಗಿದ್ದಾರೆ. ನಾಲ್ಕು ಬಾರಿ ಎದುರಾಳಿ ಬೌಲರ್‌ಗಳ ರಣ ತಂತ್ರವನ್ನು ಮೆಟ್ಟಿನಿಂತು ರನ್ ಮಹಲ್ ಕಟ್ಟಿದ್ದಾರೆ. ಭರ್ಜರಿ ಸ್ಟ್ರೈಕ್ ರೇಟ್ ಹಾಗೂ ಕ್ಲಾಸಿಕ್ ಶಾಟ್ ಸೆಲೆಕ್ಷನ್‌ನಿಂದಲೇ ಎಲ್ಲ ದೃಷ್ಟಿ ತಮ್ಮತ್ತ ಹರಿಯುವಂತೆ ಮಾಡಿದ ಆಟಗಾರನೇ ಪಂಜಾಬ್ ಕಿಂಗ್ಸ್ ತಂಡದ ಶಶಾಂಕ್ ಸಿಂಗ್.

ಪಂಜಾಬ್ ಕಿಂಗ್ಸ್‌ನ ಶಶಾಂಕ್ ಸಿಂಗ್ ಐಪಿಎಲ್ 2024 ರಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ತಮ್ಮ ಅತ್ಯುತ್ತಮ ಬ್ಯಾಟಿಂಗ್ ಮೂಲಕ ಎಲ್ಲರನ್ನೂ ಮಂತ್ರ ಮುಗ್ಧರನ್ನಾಗಿಸಿದ್ದಾರೆ. ಸನ್ ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲೂ ಪಂಜಾಬ್ ತಂಡಕ್ಕೆ ಇವರು ಆಸರೆ ಆದರು. ಇವರು ತಂಡಕ್ಕೆ ಗೆಲುವಿನ ಮಾಲೆ ತೊಡಿಸುವಲ್ಲಿ ವಿಫಲರಾಗಿರ ಬಹುದು ಆದರೆ ತಮ್ಮಲ್ಲಿರುವ ಶಕ್ತಿಯನ್ನು ಜಗತ್ತಿಗೆ ಪರಿಚಯಿಸಿದ್ದಾರೆ. ಮಂಗಳವಾರ ನಡೆದ ಪಂದ್ಯದಲ್ಲಿ ಸನ್ ತಂಡ 2 ರನ್ ಅಂತರದಲ್ಲಿ ಗೆಲುವು ಸಾಧಿಸಿತು.
ಶಶಾಂಕ್ ಮನೋಹರ
ಐಪಿಎಲ್ 2024 ರಲ್ಲಿ, ಶಶಾಂಕ್ ಸಿಂಗ್ ಪಂಜಾಬ್ ಕಿಂಗ್ಸ್‌ಗಾಗಿ ಐದು ಪಂದ್ಯಗಳನ್ನು ಆಡಿದ್ದಾರೆ ಮತ್ತು ಅವರು ಒಮ್ಮೆ ಮಾತ್ರ ಔಟಾಗಿದ್ದಾರೆ. ಉಳಿದ ನಾಲ್ಕು ಪಂದ್ಯಗಳಲ್ಲಿ ಎದುರಾಳಿ ತಂಡಗಳ ಬೌಲರ್‌ಗಳು ಇವರ ವಿಕೆಟ್ ಪಡೆಯಲು ಹೆಣಗಾಟ ನಡೆಸಿದ್ದಾರೆ. ಗುಜರಾತ್ ಟೈಟಾನ್ಸ್ ವಿರುದ್ಧ ಏಕಾಂಗಿಯಾಗಿ ಇವರು 29 ಎಸೆತಗಳಲ್ಲಿ 67 ರನ್ ಗಳಿಸಿ ತಂಡವನ್ನು ಗೆಲುವಿನತ್ತ ಮುನ್ನಡೆಸಿದರು ಮತ್ತು ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು. ಶಶಾಂಕ್ ಸಿಂಗ್ ಇದುವರೆಗೆ ಐಪಿಎಲ್‌ನಲ್ಲಿ 0, 21, 9, 61 ಮತ್ತು 46 ರನ್‌ಗಳ ಇನ್ನಿಂಗ್ಸ್‌ಗಳನ್ನು ಕಟ್ಟಿದ್ದಾರೆ.
20 ಲಕ್ಷಕ್ಕೆ ಖರೀದಿ
ಶಶಾಂಕ್ ಸಿಂಗ್ ಅವರನ್ನು ಪಂಜಾಬ್ ಕಿಂಗ್ಸ್ ತಂಡ 20 ಲಕ್ಷಕ್ಕೆ ಖರೀದಿಸಿದೆ. ಅವರು ಈ ಹಿಂದೆ ಡೆಲ್ಲಿ ಡೇರ್‌ಡೆವಿಲ್ಸ್, ರಾಜಸ್ಥಾನ ರಾಯಲ್ಸ್ ಮತ್ತು ಸನ್‌ರೈಸರ್ಸ್ ಹೈದರಾಬಾದ್‌ನ ಭಾಗವಾಗಿದ್ದರು. ಅವರು ಐಪಿಎಲ್ 2022 ರಲ್ಲಿ 10 ಪಂದ್ಯಗಳನ್ನು ಆಡಿದ್ದಾರೆ. ಆಗ ಅವರು 69 ರನ್ ಗಳಿಸಲಷ್ಟೇ ಶಕ್ತರಾದರು. ಆದರೆ ಐಪಿಎಲ್ 2024 ರಲ್ಲಿ, ಅವರು ಕೇವಲ ಐದು ಪಂದ್ಯಗಳನ್ನು ಆಡಿದ ನಂತರ 206 ರನ್ ಗಳಿಸಿದ್ದಾರೆ.

ಶಶಾಂಕ್ ಸಿಂಗ್ 21 ಪ್ರಥಮ ದರ್ಜೆ ಪಂದ್ಯಗಳಲ್ಲಿ 1 ಶತಕ ಮತ್ತು 6 ಅರ್ಧ ಶತಕಗಳನ್ನು ಬಾರಿಸಿದ್ದು, 858 ರನ್ ಗಳಿಸಿದ್ದಾರೆ. ಇದಲ್ಲದೆ, ಅವರು 30 ಲಿಸ್ಟ್-ಎ ಪಂದ್ಯಗಳಲ್ಲಿ 986 ರನ್ ಗಳಿಸಿದ್ದಾರೆ, ಇದರಲ್ಲಿ ಅವರು ಎರಡು ಶತಕಗಳನ್ನು ಗಳಿಸಿದ್ದಾರೆ. ಅವರು ಲಿಸ್ಟ್-ಎ ಕ್ರಿಕೆಟ್‌ನಲ್ಲಿ 33 ವಿಕೆಟ್‌ಗಳನ್ನು ಪಡೆದಿದ್ದಾರೆ. ಶಶಾಂಕ್ ದೊಡ್ಡ ಇನ್ನಿಂಗ್ಸ್ ಆಡುವ ಸಾಮರ್ಥ್ಯ ಹೊಂದಿದ್ದಾರೆ.












Click it and Unblock the Notifications