ಆರ್‌ಸಿಬಿ ಅಭಿಮಾನಿಗಳಿಗೆ ಅಶ್ವಿನಿ ಪುನೀತ್ ಅವರಿಂದ ಸರ್ಪ್ರೈಸ್!
ಇನ್ನೇನು ಕನ್ನಡಿಗರ ಪಾಲಿನ ಆರಾಧ್ಯ ದೈವ ಪುನೀತ್ ರಾಜ್‌ಕುಮಾರ್ ಅವರ ಹುಟ್ಟುಹಬ್ಬ ಬಂದೇ ಬಿಡುತ್ತೆ. ಈ ಸಮಯದಲ್ಲೇ ಅಭಿಮಾನಿಗಳು ಕೂಡ ಸಿಕ್ಕಾಪಟ್ಟೆ ಪ್ರಿಪರೇಷನ್ ಮಾಡಿ ಅಪ್ಪು ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಣೆ ಮಾಡಲು ಕಾಯುತ್ತಿದ್ದಾರೆ. ಹೀಗಿದ್ದಾಗ ದಿವಂಗತ ಪುನೀತ್ ರಾಜ್‌ಕುಮಾರ್ ಅವರ ಪತ್ನಿ ಅಶ್ವಿನಿ ಪುನೀತ್ ಅವರು ಆರ್‌ಸಿಬಿ ಟೀಂ ಅಭಿಮಾನಿಗಳಿಗೆ ಸರ್ಪ್ರೈಸ್ ಕೊಟ್ಟಿದ್ದಾರೆ.
ಐಪಿಎಲ್ ಶುರುವಾಯ್ತು ಅಂದ್ರೆ ಭಾರತದಲ್ಲಿ ಹಬ್ಬದ ರೀತಿ ಜನ ಸೆಲೆಬ್ರೇಷನ್ ಮಾಡ್ತಾರೆ. ಹೀಗೆ ಬೆಂಗಳೂರು ನಿವಾಸಿಗಳಿಗೆ & ಕನ್ನಡಿಗರಿಗೆ ಆರ್‌ಸಿಬಿ ತಂಡವೇ ಕಣ ಕಣದಲ್ಲೂ ಬೆರೆತು ಹೋಗಿದೆ ಹೀಗಿದ್ದರೂ ಆರ್‌ಸಿಬಿ ತಂಡ ಮಾತ್ರ ಕಳೆದ 16 ವರ್ಷದಿಂದಲೂ ಕಪ್ ಗೆದ್ದೇ ಇಲ್ಲ. ಹೀಗಿದ್ದರೂ ಕನ್ನಡಿಗರು ಮಾತ್ರ ಆರ್‌ಸಿಬಿ ತಂಡದ ಕೈಬಿಟ್ಟಿಲ್ಲ ಹಾಗೇ ಈ ಬಾರಿ ಅಂದ್ರೆ 17ನೇ ಬಾರಿ, IPLನ ಅಖಾಡದಲ್ಲಿ ಆರ್‌ಸಿಬಿ ಕಪ್ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ ಫ್ಯಾನ್ಸ್. ಈ ಸಂದರ್ಭದಲ್ಲಿ ನಮ್ಮ ಆರ್‌ಸಿಬಿ ತಂಡದ ಅಭಿಮಾನಿ ಆಗಿದ್ದ, ದಿವಂಗತ ಪುನೀತ್ ರಾಜ್‌ಕುಮಾರ್ ಅವರ ಧರ್ಮಪತ್ನಿ ಅವರಾದ ಅಶ್ವಿನಿ ಪುನೀತ್ ಅವರು ಅಭಿಮಾನಿಗಳಿಗೆ ಸರ್ಪ್ರೈಸ್ ಕೊಟ್ಟಿದ್ದಾರೆ.

ಬದಲಾಗುತ್ತಾ ಆರ್‌ಸಿಬಿ ಹೆಸರು?
ಬೆಂಗಳೂರು ತಂಡ ಐಪಿಎಲ್ ಕಪ್ ಗೆಲ್ಲುತ್ತೆ ಅಂತಾ ಫ್ಯಾನ್ಸ್ ಕಾಯುತ್ತಿದ್ದಾರೆ. ಹೀಗಾಗಿಯೇ 'ಈ ಸಲ ಕಪ್ ನಮ್ದೆ' ಘೋಷ ವಾಖ್ಯ ಮತ್ತೆ ವೈರಲ್ ಆಗಿದೆ ಹಾಗೂ ಆರ್‌ಸಿಬಿ ಬೆಂಗಳೂರು ತಂಡದ ಫ್ಯಾನ್ಸ್ ತಮ್ಮ ತಂಡದ ಗೆಲುವಿಗೆ ಕಾಯ್ತಾ ಕೂತಿದ್ದಾರೆ. ಅವರ ಆಸೆ ಈ ವರ್ಷ ನೆರವೇರುತ್ತಾ.? ಅನ್ನೋ ಕುತೂಹಲ ಕೂಡ ಡಬಲ್ ಆಗುತ್ತಿದೆ. ಅಲ್ಲದೆ ಈ ಬಾರಿ ಕಪ್ ಗೆಲ್ಲಲು ಆರ್‌ಸಿಬಿ ತಂಡ ಕೂಡ ಎಲ್ಲಾ ರೀತಿ ಎಫರ್ಟ್ಸ್ ಹಾಕುತ್ತಿದ್ದು. ಈ ಸಮಯದಲ್ಲೇ ಆರ್‌ಸಿಬಿ ತಂಡದ ಹೆಸರನ್ನೂ ಚೇಂಜ್ ಮಾಡಲಿದ್ದಾರೆ ಎಂಬ ಮಾತುಗಳ ನಡುವೆ ಇದೀಗ ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರು ನೀಡಿರುವ ಸರ್ಪ್ರೈಸ್ ಸಿಕ್ಕಾಪಟ್ಟೆ ಕುತೂಹಲ ಕೆರಳಿಸಿದೆ. ಆರ್‌ಸಿಬಿ ಫ್ಯಾನ್ಸ್‌ಗೆ ಹೀಗೆ ಹೊಸ ಕುತೂಹಲ ಹೆಚ್ಚಾಗಿದೆ.
ಅಶ್ವಿನಿ ಪುನೀತ್ ರಾಜಕುಮಾರ್ ಅವರು ಎನ್ ಮಾಡ್ತಿದ್ದಾರೆ ಅರ್ಥ ಆಯ್ತಾ?
— Royal Challengers Bangalore (@RCBTweets) March 14, 2024
Any idea what Ashwini Puneeth Rajkumar is doing here?
Find out more at the RCB Unbox event on 19th March. Last few tickets remaining!@Ashwini_PRK #ArthaAytha #RCBUnbox #PlayBold #ನಮ್ಮRCB pic.twitter.com/AmKTYC8mUJ
ಒಟ್ನಲ್ಲಿ ಐಪಿಎಲ್ 2024 ಭಾರಿ ಮಟ್ಟಿಗೆ ಹೈಪ್ ಕ್ರಿಯೇಟ್ ಮಾಡಿದೆ ಈ ಬಾರಿ ಯಾರು ಗೆಲ್ತಾರೆ? ಯಾರಿಗೆ ಸೋಲು ಎದುರಾಗುತ್ತೆ? ಆರ್‌ಸಿಬಿ ಈ ಬಾರಿಯಾದ್ರೂ ಕಪ್ ಗೆಲ್ಲುತ್ತಾ? ಅನ್ನೋದನ್ನು ಕಾದು ನೋಡಬೇಕಿದೆ. ಎಲ್ಲಕ್ಕಿಂತ ಹೆಚ್ಚಾಗಿ ಆರ್‌ಸಿಬಿ ತಂಡದ ಹೆಸರು ಈ ಬಾರಿ ಬದಲಾವಣೆ ಆಗುತ್ತಾ? ಅನ್ನೋ ಪ್ರಶ್ನೆ ಸಿಕ್ಕಾಪಟ್ಟೆ ಕುತೂಹಲ ಕೆರಳಿಸಿದೆ. ಹೀಗಾಗಿ ಈ ಪ್ರಶ್ನೆಗೆ ಉತ್ತರ, ಪಡೆಯೋದಕ್ಕೆ ಸ್ವಲ್ಪ ದಿನಗಳ ಕಾಲ ಕಾದು ನೋಡಬೇಕಿದೆ.












Click it and Unblock the Notifications