IPL 2024 Playoff: ಕೆಕೆಆರ್ vs ಎಸ್‌ಆರ್‌ಎಚ್‌, ಆರ್‌ಸಿಬಿ vs ಆರ್‌ಆರ್‌; ವೇಳಾಪಟ್ಟಿ, ಸಮಯ, ಲೈವ್‌ಸ್ಟ್ರೀಮಿಂಗ್ ವಿವರ

ಐಪಿಎಲ್ 2024 ಲೀಗ್ ಹಂತವು ಮುಕ್ತಾಯವಾಗಿದೆ. ನಾಲ್ಕು ತಂಡಗಳು ಪ್ಲೇಆಫ್‌ಗೆ ಅರ್ಹತೆ ಪಡೆದಿದ್ದು ಪ್ರತಿಷ್ಠಿತ ಪ್ರಶಸ್ತಿಗಾಗಿ ಸೆಣೆಸಾಟ ನಡೆಸಲಿವೆ. ಕೆಕೆಆರ್, ಎಸ್‌ಆರ್‌ಎಚ್‌, ಆರ್‌ಆರ್‌, ಆರ್‌ಸಿಬಿ ತಂಡಗಳು ಮುಂದಿನ ಹಂತದಲ್ಲಿ ಕಾದಾಡಲಿವೆ.

ಕೋಲ್ಕತ್ತಾ ನೈಟ್ ರೈಡರ್ಸ್ ಪ್ಲೇಆಫ್ ಸ್ಥಾನವನ್ನು ಖಚಿತಪಡಿಸಿಕೊಂಡ ಮೊದಲ ತಂಡವಾಗಿದ್ದು ಮಂಗಳವಾರ (ಮೇ 21) ಅಹಮದಾಬಾದ್‌ನಲ್ಲಿ ಕ್ವಾಲಿಫೈಯರ್ 1 ರಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ಎದರಿಸಲಿದೆ. ಕೆಕೆಆರ್ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದರೆ ಎಸ್‌ಆರ್‌ಎಚ್‌ ಪಂಜಾಬ್ ಕಿಂಗ್ಸ್ ತಂಡ ಮಣಿಸಿದ ಬಳಿಕ ಎರಡನೇ ಸ್ಥಾನಕ್ಕೇರಿತು.

IPL 2024 Playoffs KKR vs SRH RCB vs RR Schedule Venues and Live Streaming Details

ಬಳಿಕ ರಾಜಸ್ಥಾನ ರಾಯಲ್ಸ್ ಮತ್ತು ಕೆಕೆಆರ್ ನಡುವಿನ ಲೀಗ್ ಹಂತದ ಕೊನೆಯ ಪಂದ್ಯ ಮಳೆಯಿಂದ ರದ್ದಾದ ಬಳಿಕ ರಾಜಸ್ಥಾನ ರಾಯಲ್ಸ್ ಮೂರನೇ ಸ್ಥಾನಕ್ಕೆ ಕುಸಿದರೆ, ಕೆಕೆಆರ್ ಮೊದಲ ಸ್ಥಾನದಲ್ಲಿ ಉಳಿದುಕೊಂಡಿತು. ಮೂರನೇ ಸ್ಥಾನದಲ್ಲಿರುವ ರಾಜಸ್ಥಾನ ರಾಯಲ್ಸ್ ಈಗ ಎಲಿಮಿನೇಟರ್ ಪಂದ್ಯದಲ್ಲಿ ಆರ್ ಸಿಬಿ ತಂಡವನ್ನು ಎದುರಿಸಲಿದೆ. ಮೇ 22ರಂದು ಈ ಪಂದ್ಯ ನಡೆಯಲಿದೆ.

ಕ್ವಾಲಿಫೈಯರ್ 1 ರಲ್ಲಿ ಗೆಲ್ಲುವ ತಂಡ ನೇರವಾಗಿ ಫೈನಲ್‌ಗೆ ಅರ್ಹತೆ ಪಡೆಯಲಿದೆ. ಕ್ವಾಲಿಫೈಯರ್ 1 ರಲ್ಲಿ ಸೋಲುವ ತಂಡ ಎಲಿಮಿನೇಟರ್ ಪಂದ್ಯದಲ್ಲಿ ಗೆಲ್ಲುವ ತಂಡದ ವಿರುದ್ಧ ಕ್ವಾಲಿಫೈಯರ್ 2ರಲ್ಲಿ ಸೆಣೆಸಲಿದೆ. ಕ್ವಾಲಿಫೈಯರ್ 2 ರ ವಿಜೇತರು ಫೈನಲ್ ಪ್ರವೇಶಿಸುತ್ತಾರೆ ಮತ್ತು ಪ್ರಶಸ್ತಿಗಾಗಿ ಕ್ವಾಲಿಫೈಯರ್ 1 ರಲ್ಲಿ ಗೆದ್ದ ತಂಡದ ವಿರುದ್ಧ ಪ್ರಶಸ್ತಿಗಾಗಿ ಸೆಣೆಸಾಡುತ್ತಾರೆ.

ಪಂದ್ಯದ ಸ್ಥಳ, ಸಮಯ, ನೇರಪ್ರಸಾರ

ಕ್ವಾಲಿಫೈಯರ್ 1 ಮತ್ತು ಎಲಿಮಿನೇಟರ್ ಪಂದ್ಯಗಳು ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿವೆ. ಮೇ 21ರಂದು ಕೆಕೆಆರ್ ಎಸ್‌ಆರ್ ಎಚ್‌ ಸೆಣೆಸಿದರೆ, ಮೇ 22 ರಂದು ರಾಜಸ್ಥಾನ ರಾಯಲ್ಸ್ ಮತ್ತು ಆರ್ ಸಿಬಿ ಎಲಿಮಿನೇಟರ್ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ.

ಕ್ವಾಲಿಫೈಯರ್ 2 ಮತ್ತು ಫೈನಲ್ ಪಂದ್ಯಗಳು ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯಲಿವೆ. ಮೇ 24 ರಂದು ಕ್ವಾಲಿಫೈಯರ್ 2 ಪಂದ್ಯ ನಡೆಯಲಿದ್ದು, ಫೈನಲ್ ಪಂದ್ಯ ಮೇ 26 ಭಾನುವಾರ ನಡೆಯಲಿದೆ.

ಈ ನಾಲ್ಕು ಪಂದ್ಯಗಳು ರಾತ್ರಿ 7.30ಕ್ಕೆ ಆರಂಭವಾಗಲಿದೆ. ಮೊಬೈಲ್‌ನಲ್ಲಿ ಐಪಿಎಲ್ ಪಂದ್ಯಗಳನ್ನು ಜಿಯೋ ಸಿನಿಮಾದಲ್ಲಿ ಉಚಿತವಾಗಿ ವೀಕ್ಷಿಸಬಹುದು. ಟಿವಿಯಲ್ಲಿ ನೋಡುವವರು ಸ್ಟಾರ್ ಸ್ಪೋರ್ಟ್ಸ್‌ನಲ್ಲಿ ಈ ಪಂದ್ಯಗಳನ್ನು ನೋಡಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+