RCB vs RR Eliminator: ಆರ್‌ಸಿಬಿ ಬ್ಯಾಟರ್‌ಗಳಿಗೆ ಕಾಟ ಕೊಡುವ ಬೌಲರ್ ಯಾರು? ವಿರಾಟ್‌ನ ಕಾಡ್ತಾರಾ ಆ ವೇಗಿ?
ಬುಧವಾರ (ಮೇ 22) ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಅಂಗಳದಲ್ಲಿ ನಡೆಯಲಿರುವ ಎಲಿಮಿನೇಟರ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ರಾಜಸ್ಥಾನ ರಾಯಲ್ಸ್ ತಂಡಗಳು ಕಾದಾಟ ನಡೆಸಲಿವೆ. ಈ ಪಂದ್ಯ ಹೈವೋಲ್ಟೇಜ್‌ನಿಂದ ಕೂಡಿದ್ದು, ಅಭಿಮಾನಿಗಳು ಕಾತುರರಾಗಿದ್ದಾರೆ.
ಮೇ ತಿಂಗಳಲ್ಲಿ ಭರ್ಜರಿ ಪ್ರದರ್ಶನ ನೀಡಿರುವ ಆರ್‌ಸಿಬಿ ಸತತ ಆರು ಪಂದ್ಯಗಳನ್ನು ಗೆದ್ದು ಪ್ಲೇ ಆಫ್ ಪ್ರವೇಶಿಸಿದೆ. ಎಲಿಮಿನೇಟರ್ ಪಂದ್ಯದಲ್ಲಿ ಗೆಲುವು ಸಾಧಿಸಿ, ಮುಂದಿನ ಹಂತಕ್ಕೆ ಪ್ರವೇಶಿಸುವ ಕನಸು ಕಾಣುತ್ತಿದೆ. ಈ ಮಹತ್ವದ ಪಂದ್ಯದಲ್ಲಿ ಆಟಗಾರರ ನಡುವಿನ ಕಾದಾಟವನ್ನು ಸಹ ನೋಡಬಹುದು.

ವಿರಾಟ್ ಕೊಹ್ಲಿ V/S ಸಂದೀಪ್ ಶರ್ಮಾ
ಪ್ರಸಕ್ತ ಐಪಿಎಲ್ ಋತುವಿನಲ್ಲಿ ಭರ್ಜರಿ ಪ್ರದರ್ಶನ ನೀಡಿರುವ ವಿರಾಟ್ ಕೊಹ್ಲಿ, ಎಲಿಮಿನೇಟರ್ ಪಂದ್ಯದಲ್ಲಿ ಅಬ್ಬರಿಸುವ ಇರಾದೆಯನ್ನು ಹೊಂದಿದ್ದಾರೆ. ಐಪಿಎಲ್ 2024ರಲ್ಲಿ ಈಗಾಗಲೇ 700ಕ್ಕೂ ಅಧಿಕ ರನ್ ಕಲೆ ಹಾಕಿರುವ ವಿರಾಟ್ ಕೊಹ್ಲಿ ಅವರಿಗೆ ಸವಾಲು ಹಾಕಲು ರಾಜಸ್ಥಾನ ರಾಯಲ್ಸ್ ತಂಡದ ಸಂದೀಪ್ ಶರ್ಮಾ ಸಿದ್ಧರಾಗಿದ್ದಾರೆ. ಈ ಇಬ್ಬರು ಸ್ಟಾರ್ ಆಟಗಾರರ ನಡುವಿನ ಕಾದಾಟವನ್ನು ಕಣ್ಣು ತುಂಬಿಕೊಳ್ಳಲು ಅಭಿಮಾನಿಗಳು ಕಾತರರಾಗಿದ್ದಾರೆ. ಇಬ್ಬರ ನಡುವಿನ ಕಾದಾಟದಲ್ಲಿ ಸಂದೀಪ್ ಶರ್ಮಾ ಏಳು ಬಾರಿ ವಿರಾಟ್ ವಿಕೆಟ್ ಪಡೆದಿದ್ದಾರೆ. ವಿರಾಟ್, ಸಂದೀಪ್ ವಿರುದ್ಧ 67 ಎಸೆತಗಳಲ್ಲಿ 129.9 ಸ್ಟ್ರೈಕ್ ರೇಟ್‌ನಲ್ಲಿ 87 ರನ್ ಸಿಡಿಸಿದ್ದಾರೆ.

ರಜತ್ ಪಟಿದಾರ್ V/S ಅಶ್ವಿನ್
ಈ ಬಾರಿಯ ಐಪಿಎಲ್‌ನ ಎರಡನೇ ಚರಣದಲ್ಲಿ ಭರ್ಜರಿಯಾಗಿ ರನ್ ಕಲೆ ಹಾಕುತ್ತಿರುವ ರಜತ್ ಪಟಿದಾರ್, ವೇಗವಾಗಿ ರನ್ ಕಲೆ ಹಾಕಲು ಹೆಸರುವಾಸಿ. ಅಲ್ಲದೆ ಈ ಬಾರಿಯ ಟೂರ್ನಿಯಲ್ಲಿ ಸತತ ಐದು ಅರ್ಧಶತಕ ಬಾರಿಸಿದ್ದಾರೆ. ಇವರು ಈ ಬಾರಿಯ ಐಪಿಎಲ್‌ನಲ್ಲಿ ಸ್ಪಿನ್ ಬೌಲರ್‌ಗಳ ವಿರುದ್ಧ ಸ್ಥಿರವಾಗಿ ರನ್ ಕಲೆ ಹಾಕುತ್ತಿದ್ದಾರೆ. ಎಲಿಮಿನೇಟರ್ ಪಂದ್ಯದಲ್ಲಿ ರವಿಚಂದ್ರನ್ ಅಶ್ವಿನ್ ಹಾಗೂ ರಜತ್ ನಡುವಿನ ಕಾದಾಟದ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ಅಶ್ವಿನ್ ಅವರು ಪಟಿದಾರ್ ಅವರನ್ನು ಎರಡು ಬಾರಿ ಖೆಡ್ಡಾ ತೋಡಿದ್ದಾರೆ.

ಫಾಫ್ ಡುಪ್ಲೇಸಿಸ್ V/S ಟ್ರೆಂಟ್ ಬೋಲ್ಟ್
ಆರ್‌ಸಿಬಿ ತಂಡದ ನಾಯಕ ಫಾಫ್ ಡುಪ್ಲೇಸಿಸ್ ಸೊಗಸಾದ ಪ್ರದರ್ಶನ ನಿಡುತ್ತಿದ್ದಾರೆ. ಇವರು ಮಹತ್ವದ ಪಂದ್ಯದಲ್ಲಿ ಮೈ ಚಳಿ ಬಿಟ್ಟು ಆಡುವ ಕ್ಷಮತೆಯನ್ನು ಹೊಂದಿದ್ದಾರೆ. ಇನ್ನು ಫಾಫ್ ಡುಪ್ಲೇಸಿಸ್ ಅವರ ವಿಕೆಟ್ ರಾಜಸ್ಥಾನ ತಂಡಕ್ಕೆ ಮುಖ್ಯ. ರಾಜಸ್ಥಾನ ತಂಡದ ಸ್ಟಾರ್ ವೇಗಿ ಟ್ರೆಂಟ್ ಬೋಲ್ಟ್, ಫಾಫ್‌ಗೆ ಕಾಟ ನೀಡಬಲ್ಲರು. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಕಿವೀ ಪ್ಲೇಯರ್ ಎರಡು ಬಾರಿ ಫಾಫ್‌ಗೆ ಖೆಡ್ಡಾ ತೋಡಿದರೆ, ನಾಲ್ಕು ಬಾರಿ ಐಪಿಎಲ್‌ನಲ್ಲಿ ಪೆವಿಲಿಯನ್ ಹಾದಿ ತೋರಿಸಿದ್ದಾರೆ. ಈ ಇಬ್ಬರ ಕಾದಾಟ ನೊಡಲು ಫ್ಯಾನ್ಸ್ ತುದಿಗಾಲಿನಲ್ಲಿ ನಿಂತಿದ್ದಾರೆ.

ಸಂಜು ಸ್ಯಾಮ್ಸನ್ V/S ಮೊಹಮ್ಮದ್ ಸಿರಾಜ್
ರಾಜಸ್ಥಾನ ರಾಯಲ್ಸ್ ತಂಡದ ನಾಯಕ ಸಂಜು ಸ್ಯಾಮ್ಸನ್ ಭರ್ಜರಿ ಫಾರ್ಮ್‌ನಲ್ಲಿದ್ದಾರೆ. ಇವರ ಆಟಕ್ಕೆ ಬ್ರೇಕ್ ಹಾಕಲು ಆರ್‌ಸಿಬಿ ಪ್ಲ್ಯಾನ್ ಮಾಡಿಕೊಂಡಿದೆ. ಆರ್‌ಸಿಬಿ ಇವರನ್ನು ಕಟ್ಟಿ ಹಾಕಲು ಮೊಹಮ್ಮದ್ ಸಿರಾಜ್ ಅವರನ್ನು ಕಣಕ್ಕೆ ಇಳಿಸುವ ಸಾಧ್ಯತೆ ಇದೆ. ಇವರ ವಿಕೆಟ್ ಪಡೆಯುವಲ್ಲಿ ಸಿರಾಜ್ ನಾಲ್ಕು ಬಾರಿ ಯಶಸ್ವಿಯಾಗಿದ್ದಾರೆ. ಸಿರಾಜ್ ಅವರ 31 ಎಸೆತಗಳನ್ನು ಎದುರಿಸಿದ ಸಂಜು 36 ರನ್ ಸಿಡಿಸಿದ್ದಾರೆ.

ರಿಯನ್ ಪರಾಗ್ V/S ಲಾಕಿ ಫಾರ್ಗ್ಯೂಸನ್
ರಾಜಸ್ಥಾನ ರಾಯಲ್ಸ್ ತಂಡದ ಮಿಡ್ಲ್ ಆರ್ಡರ್ ಬ್ಯಾಟರ್ ರಿಯಾನ್ ಪರಾಗ್ ಅವರಿಗೆ ಕಾಟ ನೀಡಲು ಲಾಕಿ ಫಾರ್ಗ್ಯೂಸನ್ ಸಿದ್ಧರಾಗಿದ್ದಾರೆ. ಪರಾಗ್ ರಾಜಸ್ಥಾನ ತಂಡದ ಮಿಡ್ಲ್ ಆರ್ಡರ್‌ಗೆ ಆಧಾರ. ರಿಯಾನ್ ಅವರಿಗೆ ಲಾಕಿ ಒಮ್ಮೆ ಖೆಡ್ಡಾ ತೋಡಿದ್ದು ರೋಚಕತೆ ಹೆಚ್ಚಿಸಿದೆ.












Click it and Unblock the Notifications