ಕೊಹ್ಲಿ vs ಧೋನಿ vs ರೋಹಿತ್ ಶರ್ಮಾ: ಅತಿಹೆಚ್ಚು ಇನ್ಸ್ಟಾಗ್ರಾಮ್ ಫಾಲೋವರ್ಸ್ ಹೊಂದಿರುವ ಆಟಗಾರ ಯಾರು?

ಪ್ರಸ್ತುತ ಹದಿನಾರನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ನಡೆಯುತ್ತಿದ್ದು, ವಿಶ್ವದ ಅತಿ ಖ್ಯಾತ ಫ್ರಾಂಚೈಸ್ ಕ್ರಿಕೆಟ್ ತಂಡ ಎನಿಸಿಕೊಂಡಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಅಂಕಪಟ್ಟಿಯಲ್ಲಿ ಆರನೇ ಸ್ಥಾನ ಪಡೆದುಕೊಳ್ಳುವ ಮೂಲಕ ಲೀಗ್ ಹಂತದಲ್ಲಿಯೇ ಟೂರ್ನಿಯಿಂದ ಹೊರಬಿದ್ದಿತ್ತು.
ಇನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮಾಜಿ ನಾಯಕ ಹಾಗೂ ಪ್ರಮುಖ ಆಟಗಾರ ವಿರಾಟ್ ಕೊಹ್ಲಿ ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಭರ್ಜರಿ ಪ್ರದರ್ಶನ ನೀಡಿದ್ದು, ಎರಡು ಶತಕಗಳನ್ನೂ ಸಹ ಬಾರಿಸಿ ಮಿಂಚಿ ಭರಪೂರ ಮನರಂಜನೆ ನೀಡಿದರು.
ಹೀಗೆ ಭರ್ಜರಿಯಾಗಿ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಪ್ರದರ್ಶನ ನೀಡಿದ ವಿರಾಟ್ ಕೊಹ್ಲಿ ಸದ್ಯ ಇಂಗ್ಲೆಂಡ್ ಪ್ರವಾಸ ಕೈಗೊಂಡಿದ್ದು, ಪ್ರತಿಷ್ಟಿತ ವಿಶ್ವ ಟೆಸ್ಟ್ ಚಾಂಪಿಯನ್
ಶಿಪ್ ಫೈನಲ್ ಪಂದ್ಯದಲ್ಲಿ ಭಾಗವಹಿಸಲಿದ್ದಾರೆ. ಜೂನ್ 7ರಿಂದ ಈ ಮಹತ್ವದ ಪಂದ್ಯ ಆರಂಭಗೊಳ್ಳಲಿದೆ.
ಈ ನಡುವೆಯೇ ವಿರಾಟ್ ಕೊಹ್ಲಿ ಮಹತ್ತರವಾದ ಮತ್ತೊಂದು ಮೈಲಿಗಲ್ಲನ್ನು ನೆಟ್ಟಿದ್ದಾರೆ. ಆನ್‌ಲೈನ್ ಇರಲಿ ಅಥವಾ ಆಫ್‌ಲೈನ್ ಇರಲಿ, ಸದಾ ರೆಕಾರ್ಡ್ ಸೃಷ್ಟಿ ಮಾಡುವಲ್ಲಿ ನಿರತರಾಗಿರುವ ವಿರಾಟ್ ಕೊಹ್ಲಿ ತನ್ನ ಅಧಿಕೃತ ಇನ್ಸ್ಟಾಗ್ರಾಮ್‌ನಲ್ಲಿ 250 ಮಿಲಿಯನ್ ಫಾಲೋವರ್ಸ್ ಅನ್ನು ಪೂರೈಸಿದ್ದಾರೆ.
ಹೌದು, ಇಂದು ( ಮೇ 26 ) ವಿರಾಟ್ ಕೊಹ್ಲಿ ಈ ಮೈಲಿಗಲ್ಲನ್ನು ಮುಟ್ಟಿದ್ದು, ವಿಶ್ವದಲ್ಲಿಯೇ ಈ ಮೈಲಿಗಲ್ಲನ್ನು ಮುಟ್ಟಿದ ಮೊದಲ ಕ್ರಿಕೆಟಿಗ ಎಂಬ ದಾಖಲೆ ಬರೆದಿದ್ದರೆ, ಈ ಮೈಲಿಗಲ್ಲನ್ನು ಮುಟ್ಟಿದ ಮೂರನೇ ಅಥ್ಲಿಟ್ ಎನಿಸಿಕೊಂಡಿದ್ದಾರೆ.
ಈ ಹಿಂದೆ ಫುಟ್‌ಬಾಲ್ ತಾರೆಯರಾದ ಕ್ರಿಸ್ಟಿಯಾನೋ ರೊನಾಲ್ಡೊ ಹಾಗೂ ಲಿಯೊನಲ್ ಮೆಸ್ಸಿ ಈ ಮೈಲಿಗಲ್ಲನ್ನು ಮುಟ್ಟಿದ್ದರು. ಇದೀಗ ಈ ಇಬ್ಬರ ಬಳಿಕ ವಿರಾಟ್ ಕೊಹ್ಲಿ ಈ ಸಾಧನೆ ಮಾಡಿದ್ದಾರೆ. ಇನ್ನು ಭಾರತ ವ್ಯಕ್ತಿಯೋರ್ವ ಮೊದಲ ಬಾರಿಗೆ ಈ ಮೈಲಿಗಲ್ಲನ್ನು ಮುಟ್ಟಿದ್ದು, ಯಾವುದೇ ರಾಜಕೀಯ ವ್ಯಕ್ತಿ, ಸಿನಿಮಾ ನಟಿಯೂ ಸಹ ಇದನ್ನು ಮಾಡಿಲ್ಲ. ಹೀಗಾಗಿ ಭಾರತದ ಪಾಲಿಗೆ ಇದೊಂದು ಮಹತ್ತರವಾದ ದಾಖಲೆಯಾಗಿದೆ.
ವಿರಾಟ್ ಕೊಹ್ಲಿ ಈ ಮೈಲಿಗಲ್ಲನ್ನು ಮುಟ್ಟಿರುವುದರ ಬಗ್ಗೆ ಪೋಸ್ಟ್ ಹಂಚಿಕೊಂಡಿರುವ ಅಭಿಮಾನಿಗಳು ತಮ್ಮ ನೆಚ್ಚಿನ ಕ್ರಿಕೆಟಿಗನಿಗೆ ಇರುವ ಫ್ಯಾನ್ ಬೇಸ್, ಕ್ರೇಜ್ ಅನ್ನು ಹೊಗಳಿ ಟ್ರೆಂಡ್ ಮಾಡುತ್ತಿದ್ದಾರೆ.
ಇನ್ನು ವಿರಾಟ್ ಕೊಹ್ಲಿ ರೀತಿ ದೊಡ್ಡ ಫಾಲೋವರ್ಸ್ ಸಂಖ್ಯೆಯನ್ನು ಭಾರತದ ಯಾವ ಕ್ರಿಕೆಟಿಗರೂ ಸಹ ಹೊಂದಿಲ್ಲ. ಸದ್ಯ ರೋಹಿತ್ ಶರ್ಮಾ 28.5 ಮಿಲಿಯನ್ ಫಾಲೋವರ್ಸ್ ಹೊಂದಿದ್ದರೆ, ಎಂಎಸ್ ಧೋನಿ 42.5 ಫಾಲೋವರ್ಸ್ ಹೊಂದಿದ್ದಾರೆ.












Click it and Unblock the Notifications