Rinku Singh: ಹೆಸರು ನೆನಪಿಟ್ಟುಕೊಳ್ಳಿ: ರಿಂಕು ಆಟಕ್ಕೆ ಮೆಚ್ಚುಗೆಯ ಮಹಾಪೂರ

ರಿಂಕು ಸಿಂಗ್ ಅಮೋಘ ಆಟದ ನೆರವಿನಿಂದ ಕೆಕೆಆರ್ ತಂಡ ಗುಜರಾತ್ ಟೈಟಾನ್ಸ್ ವಿರುದ್ಧ 3 ವಿಕೆಟ್‌ಗಳ ರೋಚಕ ಗೆಲುವು ಸಾಧಿಸಿತು. ಕೆಕೆಆರ್ ತಂಡದ ಯುವ ಬ್ಯಾಟರ್ ರಿಂಕು ಸಿಂಗ್ ಪಂದ್ಯದ ಗೆಲುವಿನ ರೂವಾರಿಯಾದರು. ಕೊನೆಯ ಓವರ್ ನಲ್ಲಿ ಗೆಲುವಿಗೆ 29 ರನ್ ಬೇಕಿದ್ದಾಗ ಕೆಕೆಆರ್ ಗೆಲುವು ಸಾಧಿಸುತ್ತದೆ ಎಂದು ಯಾರೂ ಎಣಿಸಿರಲಿಲ್ಲ. ಉಮೇಶ್ ಯಾದವ್ ಮೊದಲನೇ ಎಸೆತದಲ್ಲಿ ಒಂದು ರನ್ ಪಡೆದರು.

ಕೆಕೆಆರ್ ಗೆಲ್ಲಬೇಕಾದರೆ 5 ಎಸೆತಗಳಲ್ಲಿ 28 ರನ್ ಗಳಿಸಬೇಕಿತ್ತು. ರಿಂಕು ಸಿಂಗ್ ಐದು ಎಸೆತಗಳಲ್ಲಿ ಸತತವಾಗಿ 5 ಸಿಕ್ಸರ್ ಸಿಡಿಸುವ ಮೂಲಕ ಕೆಕೆಆರ್ ತಂಡಕ್ಕೆ 3 ವಿಕೆಟ್‌ಗಳ ರೋಚಕ ಗೆಲುವು ತಂದುಕೊಟ್ಟರು. ಗುಜರಾತ್ ಟೈಟನ್ಸ್ ಈ ಐಪಿಎಲ್‌ನಲ್ಲಿ ಮೊದಲನೇ ಸೋಲು ಕಂಡಿತು, ಮೊದಲ ಪಂದ್ಯವನ್ನು ಸೋತ ಬಳಿಕ ಕೆಕೆಆರ್ ಎರಡು ಪಂದ್ಯಗಳಲ್ಲಿ ಸತತವಾಗಿ ಗೆಲುವು ಸಾಧಿಸಿತು.

Rinku Sing

ರಿಂಕು ಸಿಂಗ್ ಆಟವನ್ನು ನೋಡಿ ಇಡೀ ಕ್ರಿಕೆಟ್ ಜಗತ್ತೇ ದಂಗಾಗಿದೆ. ಇದೇ ಮೊದಲ ಬಾರಿಗೆ ಕೊನೆಯ ಓವರ್ ನಲ್ಲಿ 29 ರನ್‌ಗಳನ್ನು ಯಶಸ್ವಿಯಾಗಿ ಚೇಸ್ ಮಾಡಿ ಗೆಲ್ಲಲಾಗಿದೆ. ರಿಂಕು ಸಿಂಗ್ ಆಟಕ್ಕೆ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಸೇರಿದಂತೆ ಹಲವು ಮಂದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ರೋಹಿತ್-ಸೆಹ್ವಾಗ್ ಮೆಚ್ಚುಗೆ

ರಿಂಕು ಸಿಂಗ್ ಆಟಕ್ಕೆ ರೋಹಿತ್ ಶರ್ಮಾ ಮತ್ತು ವೀರೇಂದ್ರ ಸೆಹ್ವಾಗ್ ಮನಸೋತಿದ್ದಾರೆ. ಟ್ವೀಟ್ ಮಾಡಿರುವ ರೋಹಿತ್ ಶರ್ಮಾ "ಪ್ರತಿಭೆಗಳಿಗೆ ಐಪಿಎಲ್‌ ಸೂಕ್ತವಾದ ವೇದಿಕೆಯಾಗಿದೆ. ನಂಬಲಸಾಧ್ಯವಾದ ಇನ್ನಿಂಗ್ಸ್, ರಿಂಕು. ಯಶ್‌ ದಯಾಳ್ ಬಗ್ಗೆ ಮರುಕವಾಗುತ್ತಿದೆ. ಇದರಿಂದ ನೀವು ಕಲಿಯಬೇಕು" ಎಂದು ಹೇಳಿದ್ದಾರೆ. ವೀರೇಂದ್ರ ಸೆಹ್ವಾಗ್ ಟ್ವೀಟ್ ಮಾಡಿ "ಲಾರ್ಡ್ ರಿಂಕು ಸಿಂಗ್‌ ಅವರಿಗೆ ಜಯವಾಗಲಿ, ಚೇಸ್ ಮಾಡುವಾಗ ಕೊನೆಯ ಓವರ್ ನ 5 ಎಸೆತಗಳಲ್ಲಿ 5 ಸಿಕ್ಸರ್ ಗಳು. ಕೊನೆಯ ಓವರ್ ನಲ್ಲಿ ನಾನು ನೋಡಿದ ಅತ್ಯುತ್ತಮ ಹೊಡೆತಗಳು" ಎಂದು ಹೊಗಳಿದ್ದಾರೆ.

ಐಸಿಸಿ ಕೂಡ ರಿಂಕು ಸಿಂಗ್ ಆಟಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದೆ. ಇಂಗ್ಲೆಂಡ್ ವಿರುದ್ಧ ಟಿ20 ವಿಶ್ವಕಪ್‌ ಫೈನಲ್ ಪಂದ್ಯದಲ್ಲಿ ಕೊನೆಯ ಓವರ್ ನಲ್ಲಿ ನಾಲ್ಕು ಸಿಕ್ಸರ್ ಸಿಡಿಸಿ ಗೆಲ್ಲಿಸಿದ್ದ ವೆಸ್ಟ್‌ ಇಂಡೀಸ್‌ನ ಕಾರ್ಲೊಸ್ ಬ್ರಾಥ್‌ವೈಟ್ ಫೋಟೊ ಜೊತೆ ರಿಂಕು ಸಿಂಗ್ ಫೋಟೊ ಹಂಚಿಕೊಂಡಿದ್ದು, ರಿಂಕು ಸಿಂಗ್ ಈ ಹೆಸರು ನೆನಪಿಟ್ಟುಕೊಳ್ಳಿ ಎಂದು ಟ್ವೀಟ್ ಮಾಡಿದೆ. ಚೆನ್ನೈ ಸೂಪರ್ ಕಿಂಗ್ಸ್ ಅಧಿಕೃತ ಟ್ವಿಟರ್ ಹ್ಯಾಂಡಲ್ ಕೂಡ "ರಿಂಕು ಸಿಂಗ್, ಹೆಸರು ನೆನಪಿಟ್ಟುಕೊಳ್ಳಿ" ಎಂದು ಹೇಳಿದೆ.

ಬೆನ್‌ಸ್ಟೋಕ್ಸ್, ಆಕಾಶ್ ಚೋಪ್ರಾ, ಇರ್ಫಾನ್ ಪಠಾಣ್ ಸೇರಿದಂತೆ ಹಲವು ಮಾಜಿ ಕ್ರಿಕೆಟಿಗರು, ಕ್ರಿಕೆಟಿಗರು, ದಿಗ್ಗಜರು ಕೂಡ ರಿಂಕು ಆಟಕ್ಕೆ ಮನಸೋತಿದ್ದಾರೆ. ಇನ್ನು ತಂಡದ ಮಾಲೀಕ ಶಾರೂಖ್ ಖಾನ್ ಕೂಡ ರಿಂಕು ಆಟವನ್ನು ಮನಸಾರೆ ಕೊಂಡಾಡಿದ್ದಾರೆ. ಅಲ್ಲದೇ ವಿಶೇಷ ಗೌರವವನ್ನು ಸಲ್ಲಿಸಿದ್ದಾರೆ.

ಇತ್ತೀಚಿನ ಪಠಾಣ್ ಸಿನಿಮಾದ ಪೋಸ್ಟರ್ ನಲ್ಲಿ ತಮ್ಮ ಬದಲಾಗಿ ರಿಂಕು ಸಿಂಗ್ ಇರುವ ಫೋಟೊವನ್ನು ಟ್ವಿಟರ್ ನಲ್ಲಿ ಹಂಚಿಕೊಳ್ಳುವ ಮೂಲಕ ರಿಂಕು ಸಿಂಗ್ ಆಟಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. "ರಿಂಕು ಸಿಂಗ್, ನಿತೀಶ್ ರಾಣಾ, ವೆಂಕಟೇಶ್ ಅಯ್ಯರ್ ನೀವು ಮನಮೋಹಕ. ನಂಬಿಕೆ ಇಟ್ಟಿದ್ದಕ್ಕೆ ಸಿಕ್ಕ ಪ್ರತಿಫಲ. ಕೆಕೆರೈಡರ್ಸ್ ಮತ್ತು ವೆಂಕಿ ಮೈಸೂರು ನಿಮ್ಮ ಹೃದಯಗಳು ಜೋಪಾನ" ಎಂದು ಟ್ವೀಟ್ ಮಾಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+