IPL 2023: ಮುಂದುವರಿದ ಡಿಕೆ ಫ್ಲಾಪ್ ಶೋ; ನಿವೃತ್ತಿ ಯಾವಾಗ ಎಂದ ನೆಟ್ಟಿಗರು!

ದಿನೇಶ್ ಕಾರ್ತಿಕ್ ಕಳೆದ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಅಬ್ಬರಿಸಿದ ಅನುಭವಿ ಕ್ರಿಕೆಟಿಗ. 36 ವರ್ಷಗಳಾಗಿದ್ದರೂ ಸಹ ದಿನೇಶ್ ಕಾರ್ತಿಕ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಟೂರ್ನಿಯುದ್ದಕ್ಕೂ ನೀಡಿದ ಭರ್ಜರಿ ಪ್ರದರ್ಶನ ಅವರಿಗೆ ಟೀಮ್ ಇಂಡಿಯಾದಲ್ಲಿ ಸ್ಥಾನ ಸಿಗುವಂತೆ ಮಾಡಿತ್ತು.

ಹೌದು, ಕಳೆದ ವರ್ಷ ಆಸ್ಟ್ರೇಲಿಯಾದಲ್ಲಿ ನಡೆದ ಪ್ರತಿಷ್ಠಿತ ಐಸಿಸಿ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಗೆ ಪ್ರಕಟವಾದ ಟೀಮ್ ಇಂಡಿಯಾದಲ್ಲಿ ದಿನೇಶ್ ಕಾರ್ತಿಕ್ ಸ್ಥಾನ ಗಿಟ್ಟಿಸಿಕೊಂಡಿದ್ದರು. ಇಷ್ಟು ದಿನಗಳವರೆಗೆ ಯುವ ಆಟಗಾರರನ್ನು ಐಪಿಎಲ್ ಪ್ರದರ್ಶನದ ಮೇಲೆ ಆಯ್ಕೆ ಮಾಡುತ್ತಿದ್ದ ಬಿಸಿಸಿಐ ಅದೇ ಮೊದಲ ಬಾರಿಗೆ 36 ವರ್ಷ ವಯಸ್ಸಿನ ಆಟಗಾರನನ್ನು ವಯಸ್ಸನ್ನು ಲೆಕ್ಕಿಸದೇ ಪ್ರದರ್ಶನವನ್ನು ಗಮನದಲ್ಲಿಟ್ಟುಕೊಂಡು ತಂಡದಲ್ಲಿ ಸ್ಥಾನ ನೀಡಿತ್ತು. ಅದರಲ್ಲಿಯೂ ವಿಶ್ವಕಪ್ ತಂಡದಲ್ಲಿ ದಿನೇಶ್ ಕಾರ್ತಿಕ್‌ಗೆ ಸ್ಥಾನ ಲಭಿಸಿತ್ತು.

IPL 2023: Netizens urge Dinesh Karthik to announce retirement after his back to back flop knock

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ತನ್ನನ್ನು ಆಯ್ಕೆ ಮಾಡಿಕೊಂಡ ಕೂಡಲೇ ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡಿ ಟಿ ಟ್ವೆಂಟಿ ವಿಶ್ವಕಪ್‌ಗೆ ಪ್ರಕಟವಾಗುವ ಭಾರತ ತಂಡದಲ್ಲಿ ಸ್ಥಾನ ಪಡೆದುಕೊಳ್ಳುವುದೇ ನನ್ನ ಗುರಿ ಎಂದಿದ್ದ ದಿನೇಶ್ ಕಾರ್ತಿಕ್ ಕಳೆದ ಬಾರಿಯ ಐಪಿಎಲ್ ಟೂರ್ನಿಯಲ್ಲಿ 16 ಇನ್ನಿಂಗ್ಸ್ ಆಡಿ 330 ರನ್ ಬಾರಿಸಿ ಅಬ್ಬರಿಸಿದ್ದರು. ಈ ಪೈಕಿ ಒಂದು ಅರ್ಧಶತಕವನ್ನೂ ಸಹ ಗಳಿಸಿದ್ದ ದಿನೇಶ್ ಕಾರ್ತಿಕ್ ಗರಿಷ್ಠ 66 ರನ್ ಕೂಡ ಗಳಿಸಿದ್ದರು.

ಹೀಗೆ ಕಳೆದ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಅಬ್ಬರಿಸಿದ್ದ ದಿನೇಶ್ ಕಾರ್ತಿಕ್ ಆ ರೀತಿಯ ಪ್ರದರ್ಶನವನ್ನು ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ನೀಡುವಲ್ಲಿ ಅಕ್ಷರಶಃ ವಿಫಲವಾಗಿದ್ದಾರೆ.

ಟೂರ್ನಿಯಲ್ಲಿ ಆರ್‌ಸಿಬಿ ಆಡಿದ ಮುಂಬೈ ಇಂಡಿಯನ್ಸ್ ವಿರುದ್ಧದ ಪ್ರಥಮ ಪಂದ್ಯದಲ್ಲಿ 3 ಎಸೆತಗಳಲ್ಲಿ ಡಕ್ಔಟ್ ಆಗಿದ್ದ ದಿನೇಶ್ ಕಾರ್ತಿಕ್ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಎರಡನೇ ಪಂದ್ಯದಲ್ಲಿ 8 ಎಸೆತಗಳಿಗೆ 9 ರನ್, ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ 1 ಎಸೆತಕ್ಕೆ 1 ರನ್, ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಗೋಲ್ಡನ್ ಡಕ್ಔಟ್, ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ 14 ಎಸೆತಗಳಲ್ಲಿ 28 ರನ್ ಹಾಗೂ ಇಂದು ( ಏಪ್ರಿಲ್ 20 ) ನಡೆದ ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ 5 ಎಸೆತಗಳಿಗೆ ಅಜೇಯ 7 ರನ್ ಗಳಿಸಿದ್ದಾರೆ.

IPL 2023: Netizens urge Dinesh Karthik to announce retirement after his back to back flop knock

ಇಲ್ಲಿಯವರೆಗೂ 6 ಪಂದ್ಯಗಳಲ್ಲಿ ಕಣಕ್ಕಿಳಿದಿರುವ ದಿನೇಶ್ ಕಾರ್ತಿಕ್ ಕೇವಲ 43 ರನ್ ಕಲೆಹಾಕಿದ್ದಾರೆ. ಹೀಗೆ ಬ್ಯಾಕ್ ಟು ಬ್ಯಾಕ್ ಕಳಪೆ ಪ್ರದರ್ಶನ ಕಂಡಿರುವ ದಿನೇಶ್ ಕಾರ್ತಿಕ್ ವಿರುದ್ಧ ಇಂದಿನ ಪಂದ್ಯದ ಪ್ರದರ್ಶನದ ಬಳಿಕ ನೆಟ್ಟಿಗರು ತಿರುಗಿಬಿದ್ದಿದ್ದಾರೆ. ಕಳೆದ ಬಾರಿ ಚೆನ್ನಾಗಿ ಆಡಿ ಈ ಬಾರಿ ರನ್ ಹೊಡೆಯೋದ ಬೇಡ್ವಾ ಎನ್ನುವ ರೀತಿ ಅಸಡ್ಡೆಯಾಗಿ ಬ್ಯಾಟಿಂಗ್ ಮಾಡುತ್ತಿದ್ದಾರೆ ಎಂದು ದಿನೇಶ್ ಕಾರ್ತಿಕ್ ಕಾಲನ್ನು ಎಳೆದಿದ್ದಾರೆ.

ಇಷ್ಟು ಕಳಪೆ ಪ್ರದರ್ಶನ ನೀಡುತ್ತಿರುವ ದಿನೇಶ್ ಕಾರ್ತಿಕ್‌ಗೆ ಪದೇ ಪದೇ ಅವಕಾಶ ನೀಡುತ್ತಿರುವುದಾದರೂ ಯಾಕೆ ಎಂದು ಪ್ರಶ್ನೆಗಳನ್ನು ಹಾಕಿದ್ದಾರೆ. ಅಲ್ಲದೇ ನಿವೃತ್ತಿ ಘೋಷಿಸುವ ಸಮಯ ಹತ್ತಿರ ಬರುತ್ತಿದ್ದು, ಯಾವಾಗ ನಿವೃತ್ತಿ ಪಡೆದುಕೊಳ್ತೀರ ಎಂದು ಪ್ರಶ್ನೆಗಳನ್ನು ಹಾಕಿದ್ದಾರೆ. ಕ್ರಿಕೆಟ್ ಆಡುವುದನ್ನು ಬಿಟ್ಟು ಕಾಮೆಂಟರಿ ಮಾಡಿಕೊಂಡೇ ಇದ್ದುಬಿಡಿ ಎಂಬ ಕಾಮೆಂಟ್‌ಗಳು ದೊಡ್ಡ ಸಂಖ್ಯೆಯಲ್ಲಿ ಹರಿದು ಬರುತ್ತಿವೆ.

ಹೀಗೆ ಹಿಗ್ಗಾಮುಗ್ಗಾ ಟೀಕೆಗೆ ಒಳಗಾಗಿರುವ ದಿನೇಶ್ ಕಾರ್ತಿಕ್ ಮುಂದಿನ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಿ ಟೀಕಾಕಾರರ ಬಾಯಿ ಮುಚ್ಚಿಸುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+