IPL 2023: ಸಿಎಸ್‌ಕೆ ತಂಡಕ್ಕೆ ಮತ್ತೊಂದು ಆಘಾತ: ನಾಯಕ ಧೋನಿ ಮೊಣಕಾಲಿಗೆ ಗಾಯ

ಇಂಡಿಯನ್ ಪ್ರೀಮಿಯರ್ ಲೀಗ್ 2023ರ ಆವೃತ್ತಿಯಲ್ಲಿ ಚೆನ್ನೈ ಸೂಪರ ಕಿಂಗ್ಸ್ ತಂಡಕ್ಕೆ ಮತ್ತೊಂದು ಆಘಾತಕಾರಿ ಸುದ್ದಿ ಎದುರಾಗಿದೆ. ತಂಡದ ನಾಯಕ ಎಂಎಸ್ ಧೋನಿ ಮೊಣಕಾಲಿನ ಗಾಯಕ್ಕೆ ತುತ್ತಾಗಿದ್ದಾರೆ. ತಂಡದ ಕೋಚ್ ಸ್ಟೀಫನ್ ಫ್ಲೆಮಿಂಗ್ ಕೂಡ ಈ ವಿಚಾರವನ್ನು ಸ್ಪಷ್ಟಪಡಿಸಿದ್ದಾರೆ. ಬುಧವಾರ ನಡೆದ ರಾಜಸ್ಥಾನ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಅವರು ರನ್ ಗಳಿಸಲು ಕಷ್ಟಪಡುತ್ತಿದ್ದದು ಸ್ಪಷ್ಟವಾಗಿ ಕಂಡುಬಂದಿದೆ.

41 ವರ್ಷದ ಧೋನಿ ಇಂದಿಗೂ ಅತ್ಯುತ್ತಮ ಫಿಟ್‌ನೆಸ್ ಕಾಪಾಡಿಕೊಂಡಿದ್ದಾರೆ. ಆದರೆ ಅವರು ಮೊಣಕಾಲಿನ ಗಾಯದಿಂದ ಬಳಲುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಐಪಿಎಲ್ 2023 ಆವೃತ್ತಿಯ ಉದ್ಘಾಟನಾ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ ವಿರುದ್ಧ ಕೀಪಿಂಗ್ ಮಾಡುವ ಸಂದರ್ಭದಲ್ಲೇ ಅವರು ಮೊಣಕಾಲಿನ ನೋವಿನಿಂದ ಬಳಲುತ್ತಿದ್ದರು. ಆದರೂ, ಕೋಚ್ ಸ್ಟೀಫನ್ ಫ್ಲೆಮಿಂಗ್ ಧೋನಿ ಫಿಟ್ ಆಗಿದ್ದಾರೆ ಎಂದು ಹೇಳಿದರು.

 IPL 2023: MS Dhoni Suffering From Knee Injury: CSK Concers About Captain Fitness

ನಂತರದ ಪಂದ್ಯಗಳಲ್ಲಿ ಅವರು ಫಿಟ್ ಆದಂತೆ ಕಂಡರೂ ಮೊದಲಿನಂತೆ ರನ್‌ ಓಡುತ್ತಿರಲಿಲ್ಲ. ಕೊನೆಯ ಒಂದೆರಡು ಓವರ್ ಇದ್ದಾಗ ಬ್ಯಾಟಿಂಗ್ ಮಾಡಲು ಬರುತ್ತಿದ್ದ ಅವರು ಹೆಚ್ಚಿನದಾಗಿ ಬೌಂಡರಿಗಳಲ್ಲಿ ರನ್ ಗಳಿಸುತ್ತಿದ್ದರು. ಆದರೆ, ರಾಜಸ್ಥಾನ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಮಾತ್ರ ಬೇಗನೆ ವಿಕೆಟ್ ಕಳೆದುಕೊಂಡಿದ್ದರಿಂದ ಮುಂಚಿತವಾಗಿ ಕ್ರೀಸ್‌ಗೆ ಬಂದರು, ರವೀಂದ್ರ ಜಡೇಜಾ ಜೊತೆಯಲ್ಲಿದ್ದರೂ, ಧೋನಿ ರನ್ ಓಡಲು ಕಷ್ಟಪಡುತ್ತಿದ್ದರು.

ಮಿಂಚಿನಂತಿದ್ದ ಧೋನಿ ರನ್‌ ಓಡಲು ಪರದಾಟ

ಹೌದು, ಧೋನಿ ಫೀಲ್ಡ್‌ನಲ್ಲಿದ್ದರೆ ಮಿಂಚಿನಂತೆ ವೇಗವಾಗಿ ಇರುತ್ತಾರೆ. ಕೀಪಿಂಗ್‌ನಲ್ಲಿ ಅವರ ಸಾಮರ್ಥ್ಯ ಏನು ಎಂದು ಗೊತ್ತಿದೆ. ಬ್ಯಾಟಿಂಗ್ ಮಾಡುವಾಗ ಕೂಡ ಅವರು ವೇಗವಾಗಿ ಓಡುತ್ತಾರೆ. ಒಂದು ರನ್ ಗಳಿಸುವ ಜಾಗದಲ್ಲಿ ಫೀಲ್ಡರ್ ಸ್ವಲ್ಪ ಎಡವಿದರೂ ಎರಡು ರನ್ ಗಳಿಸುವ ಬ್ಯಾಟರ್ ಅವರು. ಅಂತಹ ಧೋನಿ ಈಗ ರನ್ ಓಡಲು ಕಷ್ಟಪಟ್ಟರು. ಮೊಣಕಾಲು ನೋವಿನ ನಡುವೆಯೂ ತಂಡವನ್ನು ಗೆಲ್ಲಿಸಲು ಕೊನೆಯವರೆಗೂ ಹೋರಾಡಿದರೂ ವಿಫಲವಾದರು.

 IPL 2023: MS Dhoni Suffering From Knee Injury: CSK Concers About Captain Fitness

ವೀಕ್ಷಕ ವಿವರಣೆ ತಂಡದ ಭಾಗವಾಗಿರುವ ಆಸ್ಟ್ರೇಲಿಯಾದ ಮಾಜಿ ಬ್ಯಾಟರ್ ಮ್ಯಾಥ್ಯೂ ಹೇಡನ್ ಕೂಡ ಎಂಎಸ್ ಧೋನಿ ಮೊಣಕಾಲಿನ ಸಮಸ್ಯೆಯಿಂದ ಬಳಲುತ್ತಿರುವುದನ್ನು ಗಮನಿಸಿದರು. ಸಂದೀಪ್ ಶರ್ಮಾ ಅವರ ಓವರ್‌ನ ಅಂತಿಮ ಎಸೆತದಲ್ಲಿ ಧೋನಿಗೆ ಸಿಕ್ಸರ್ ಅಥವಾ ಬೌಂಡರಿ ಬಾರಿಸಲು ಸಾಧ್ಯವಾಗಲಿಲ್ಲ. ಪಂದ್ಯ ಮುಗಿದ ನಂತರ ಸಿಎಸ್‌ಕೆ ಕೋಚ್ ಸ್ಟೀಫನ್ ಫ್ಲೆಮಿಂಗ್ ಎಂಎಸ್ ಧೋನಿ ಗಾಯದ ಬಗ್ಗೆ ಆತಂಕ ವ್ಯಕ್ತಪಡಿಸಿದರು.

ಸ್ಪಷ್ಟನೆ ಕೊಟ್ಟ ಸಿಎಸ್‌ಕೆ ಕೋಚ್ ಸ್ಟೀಫನ್ ಫ್ಲೆಮಿಂಗ್

ಪಂದ್ಯದ ನಂತರದ ಪತ್ರಿಕಾಗೋಷ್ಠಿಯಲ್ಲಿ ಧೋನಿ ಕುರಿತು ಸಿಎಸ್‌ಕೆ ಕೋಚ್ ಸ್ಟೀಫನ್ ಫ್ಲೆಮಿಂಗ್, "ಅವರು ಮೊಣಕಾಲಿನ ಗಾಯದಿಂದ ಬಳಲುತ್ತಿದ್ದಾರೆ, ಅದನ್ನು ನೀವು ಅವರ ಕೆಲವು ಚಲನೆಗಳಲ್ಲಿ ನೋಡಬಹುದು. ಇದು ಅವರಿಗೆ ಸ್ವಲ್ಪ ಅಡ್ಡಿಯಾಗುತ್ತದೆ. ಆದರೆ, ಧೋನಿ ಫಿಟ್ನೆಸ್ ಯಾವಾಗಲೂ ತುಂಬಾ ವೃತ್ತಿಪರವಾಗಿದೆ. ಪಂದ್ಯಾವಳಿ ಪ್ರಾರಂಭವಾಗುವ ಒಂದು ತಿಂಗಳ ಮೊದಲು ಅವರಿಗೆ ಈ ಸಮಸ್ಯೆ ಕಾಣಿಸಿಕೊಂಡಿದೆ" ಎಂದು ಮಾಹಿತಿ ನೀಡಿದರು.

 IPL 2023: MS Dhoni Suffering From Knee Injury: CSK Concers About Captain Fitness

ಆದರೂ ಧೋನಿ ಮುಂದಿನ ಪಂದ್ಯದ ವೇಳೆಗೆ ಫಿಟ್ ಆಗುವ ಸಾಧ್ಯತೆ ಇದೆ ಎನ್ನುವ ವಿಶ್ವಾಸದಲ್ಲಿದೆ ಸಿಎಸ್‌ಕೆ. ಅವರು ಮುಂದಿನ ಪಂದ್ಯವನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಆಡಲಿದೆ. ತಂಡದ ವೇಗದ ಬೌಲರ್ ಸಿಸಂದಾ ಮಗಾಲಾ ಕೂಡ ಗಾಯಗೊಂಡಿದ್ದು, ಮುಂದಿನ ಒಂದೆರಡು ವಾರ ಪಂದ್ಯಗಳನ್ನು ತಪ್ಪಿಸಿಕೊಳ್ಳಲಿದ್ದಾರೆ. ಬೆನ್‌ಸ್ಟೋಕ್ಸ್ ಕೂಡ ಮುಂದಿನ ಪಂದ್ಯಕ್ಕೆ ಅಲಭ್ಯರಾಗುವ ಸಾಧ್ಯತೆ ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+