ಐಪಿಎಲ್ 2023: ಉದ್ಘಾಟನಾ ಪಂದ್ಯಕ್ಕೆ ಸಜ್ಜಾದ ಧೋನಿ ಪಡೆ; ಅಹ್ಮದಾಬಾದ್‌ನತ್ತ ಪ್ರಯಾಣ
ಇಂಡಿಯನ್ ಪ್ರೀಮಿಯರ್ ಲೀಗ್‌ನ 16ನೇ ಆವೃತ್ತಿಯ ಮೊದಲ ಪಂದ್ಯ ಶುಕ್ರವಾರ ನಡೆಯಲಿದ್ದು ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಗುಜರಾತ್ ಟೈಟನ್ಸ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳ ನಡುವೆ ನಡೆಯಲಿದೆ. ಈ ಪಂದ್ಯಕ್ಕಾಗಿ ಎರಡು ತಂಡಗಳು ಕೂಡ ಭರ್ಜರಿ ಸಿದ್ಧತೆ ನಡೆಸಿದ್ದು ಅಭಿಮಾನಿಗಳು ಕುತೂಹಲದಿಂದ ಈ ಮುಖಾಮುಖಿಗಾಗಿ ಎದುರು ನೋಡುತ್ತಿದ್ದಾರೆ. ಈ ಬಾರಿಯ ಐಪಿಎಲ್‌ನ ಪ್ರಪ್ರಥಮ ಪಂದ್ಯವನ್ನಾಡಲು ಎಂಎಸ್ ಧೋನಿ ನೇತೃತ್ವದ ಸಿಎಸ್‌ಕೆ ತಂಡ ಸಜ್ಜಾಗಿದ್ದು ಚೆನ್ನೈನಿಂದ ಅಹ್ಮದಾಬಾದ್‌ಗೆ ಪ್ರಯಾಣ ಬೆಳಸಿದೆ.
ಗುಜರಾತ್ ಟೈಟನ್ಸ್ ತಂಡ ಈ ಬಾರಿಯ ಆವೃತ್ತಿಗೆ ಹಾಲಿ ಚಾಂಪಿಯನ್ ಆಗಿ ಕಣಕ್ಕಿಳಿಯುತ್ತಿದೆ. ಆದರೆ ಕಳೆದ ಬಾರಿಯ ಐಪಿಎಲ್‌ನಲ್ಲಿ ಕಳಪೆ ಪ್ರದರ್ಶನ ನೀಡಿದ್ದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಈ ಬಾರಿ ಅದ್ಭುತ ಪ್ರದರ್ಶನ ನೀಡುವ ವಿಶ್ವಾಸದಲ್ಲಿದೆ. ಅದಕ್ಕಾಗಿ ಭಾರಿ ಸಿದ್ಧತೆ ನಡೆಸಿದ್ದು ಮೈದಾನದಲ್ಲಿ ಯಾವ ರೀತಿಯ ಪ್ರದರ್ಶನ ನೀಡಲಿದೆ ಎಂಬುದು ಈಗ ಇರುವ ಕುತೂಹಲ.

ಎಂಎಸ್ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಮಂಗಳವಾರ ಸಂಜೆ ಅಹ್ಮದಾಬಾದ್‌ನತ್ತ ಪ್ರಯಾಣಬೆಳೆಸಿತು. ಸಿಎಸ್‌ಕೆ ತನ್ನ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಚೆನ್ನೈ ಏರ್‌ಪೋರ್ಟ್‌ನಲ್ಲಿ ಸಿಎಸ್‌ಕೆ ತಂಡದ ಪ್ರಮುಖ ಆಟಗಾರರಾದ ಎಂಎಸ್ ಧೋನಿ, ರವೀಂದ್ರ ಜಡೇಜಾ, ಋತುರಾಜ್ ಗಾಯಕ್ವಾಡ್, ಡೆವೋನ್ ಕಾನ್ವೆ ಹಾಗೂ ದೀಪಕ್ ಚಾಹರ್ ಮೊದಲಾದ ಆಟಗಾರರ ಫೋಟೋವನ್ನು ಹಂಚಿಕೊಂಡಿದೆ.
ಚೆನ್ನೈ ಸೂಪರ್ ಕಿಂಗ್ಸ್ ತಂಡದ ಆಟಗಾರರು ಕಳೆದ ಒಂದು ತಿಂಗಳಿನಿಂದ ಚೆನ್ನೈನ ಚೆಪಾಕ್ ಕ್ರೀಡಾಂಗಣದಲ್ಲಿ ಅಭ್ಯಾಸವನ್ನು ಪಡೆಸುತ್ತಿದೆ. ಅಹ್ಮದಾಬಾದ್‌ನಲ್ಲಿ ಮೊದಲ ಪಂದ್ಯ ಇರುವ ಕಾರಣ ಉದ್ಘಾಟನಾ ಪಂದ್ಯಕ್ಕೂ ಮುನ್ನಾ ದಿನ ಮತ್ತೊಮ್ಮೆ ಅಭ್ಯಾಸವನ್ನು ನಡೆಸಲಿದ್ದು ಅಲ್ಲಿನ ವಾತಾವರಣಕ್ಕೆ ಹೊಂದಿಕೊಳ್ಳುವ ಪ್ರಯತ್ನ ನಡೆಸಲಿದೆ. ಈ ಮೂಲಕ ಮೆಗಾ ಟೂರ್ನಿಗೆ ಸನ್ನಧವಾಗಲಿದೆ.
IPL 2023: ಧೋನಿ ಅಲ್ಲ, ಕೊಹ್ಲಿ ಅಲ್ಲ; ಈತ ಐಪಿಎಲ್‌ನ ಸಾರ್ವಕಾಲಿಕ ಶ್ರೇಷ್ಠ ಎಂದ ಅನಿಲ್ ಕುಂಬ್ಳೆ
ಇನ್ನು ಮೊದಲ ಪಂದ್ಯಕ್ಕಾಗಿ ಅಹ್ಮದಾಬಾದ್‌ನತ್ತ ಪ್ರಯಾಣ ಬೆಳೆಸಿದ ಸಿಎಸ್‌ಕೆ ನಾಯಕ ಎಂಎಸ್ ಧೋನಿ ಅವರಿಗೆ ಚೆನ್ನೈ ವಿಮಾನ ನಿಲ್ದಾಣದಲ್ಲಿ ಭವ್ಯವಾದ ಸ್ವಾಗತ ದೊರೆಯಿತು. ಇದಕ್ಕೂ ಮುನ್ನ ಸಿಎಸ್‌ಕೆ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ಅಭ್ಯಾಸವನ್ನು ನಡೆಸಿದ್ದು ಈ ಸಂದರ್ಭದಲ್ಲಿಯೂ ಸಾವಿರಾರು ಮಂದಿ ಸಿಎಸ್‌ಕೆ ಅಭಿಮಾನಿಗಳು ಕ್ರೀಡಾಂಗಣದಲ್ಲಿ ತುಂಬಿದ್ದರು.
ಇನ್ನು ಈ ಬಾರಿಯ ಐಪಿಎಲ್ ಟೂರ್ನಿ ಅದ್ದೂರಿ ಆರಂಭವನ್ನು ಪಡೆಯಲಿದ್ದು ಉದ್ಘಾಟನಾ ಪಂದ್ಯಕ್ಕೂ ಮುನ್ನ ಮನರಂಜನಾ ಕಾರ್ಯಕ್ರಮವನ್ನು ಬಿಸಿಸಿಐ ಏರ್ಪಡಿಸಿದೆ. 2018ರ ಬಳಿಕ ಇದೇ ಮೊದಲ ಬಾರಿಗೆ ಐಪಿಎಲ್‌ನಲ್ಲಿ ಉದ್ಘಾಟನಾ ಕಾರ್ಯಕ್ರಮ ನಡೆಯಲಿದ್ದು ಚಲನಚಿತ್ರರಂಗದ ಅನೇಕ ತಾರೆಯರು ವಿಶೇಷ ಕಾರ್ಯಕ್ರಮಗಳ ಮೂಲಕ ಅಭಿಮಾನಿಗಳನ್ನು ಮನರಂಜಿಸಲಿದ್ದಾರೆ. ಈ ಬಗ್ಗೆ ಐಪಿಎಲ್‌ನ ಆಡಳಿತ ಮಂಡಳಿ ಅಧಿಕೃತ ಮಾಹಿತಿ ನೀಡಿದೆ.
ಇನ್ನು ಈ ಭಾರಿ ಐಪಿಎಲ್ ಟೂರ್ನಿ ಸಾಂಪ್ರದಾಯಿಕ ಮಾದರಿಯಾದ ಹೋಮ್ ಹಾಗೂ ಅವೇ ಮಾದರಿಯಲ್ಲಿ ನಡೆಯಲಿರುವುದು ಕೂಡ ಅಭಿಮಾನಿಗಳಿಗೆ ಸಂತಸ ಹೆಚ್ಚಿಸಿದೆ. ಕೊರೊನಾ ವೈರಸ್‌ನ ಕಾರಣದಿಂದಾಗಿ ಕಳೆದ ಮೂರು ಆವೃತ್ತಿಗಳು ತಟಸ್ಥ ತಾಣಗಳಲ್ಲಿ ಆಯೋಜನೆಯಾಗಿದ್ದವು. ಆದರೆ ಈ ಬಾರಿ ಎಲ್ಲಾ ಫ್ರಾಂಚೈಸಿಗಳು ಕೂಡ ತಲಾ 7 ಪಂದ್ಯಗಳನ್ನು ತವರಿನಲ್ಲಿ ಆಡಲಿದ್ದು ತವರಿನ ಪ್ರೇಕ್ಷಕರ ಸಮ್ಮುಖದಲ್ಲಿ ಮತ್ತಷ್ಟು ಉತ್ಸಾಹದಿಂದ ಕಣಕ್ಕಿಳಿಯಲಿದೆ.












Click it and Unblock the Notifications