IPL 2023, ರಾಯಲ್ ಚಾಲೆಂಜರ್ಸ್ ಬೆಂಗಳೂರು vs ರಾಜಸ್ಥಾನ್ ರಾಯಲ್ಸ್: ಸಂಭಾವ್ಯ XI, ಪಿಚ್ ರಿಪೋರ್ಟ್
ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಭಾನುವಾರ ಎರಡು ಪಂದ್ಯಗಳು ಆಯೋಜನೆಯಾಗಲಿದ್ದು ಮೊದಲ ಮುಖಾಮುಖಿಯಲ್ಲಿ ಆರ್‌ಸಿಬಿ ಕಣಕ್ಕಿಳಿಯಲಿದೆ. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಆರ್‌ಸಿಬಿ ತಂಡಕ್ಕೆ ರಾಜಸ್ಥಾನ್ ರಾಯಲ್ಸ್ ತಂಡ ಸವಾಲೊಡ್ಡಿದೆ. ಆರ್‌ಸಿಬಿ ಗೆಲುವಿನ ಲಯಕ್ಕೆ ಮರಳಿದ್ದು ಈ ಪಂದ್ಯದಲ್ಲಿ ಆ ಗೆಲುವಿನ ಲಯವನ್ನು ಮುಂದುವರಿಸುವ ವಿಶ್ವಾಸದಲ್ಲಿದೆ.
ಫಾಫ್ ಡು ಪ್ಲೆಸಿಸ್ ನೇತೃತ್ವದ ಆರ್‌ಸಿಬಿ ತಂಡ ಕಳೆದ ಆರು ಪಂದ್ಯಗಳಲ್ಲಿ ಮೂರು ಗೆಲುವು ಹಾಗೂ ಮೂರು ಸೋಲು ಅನುಭವಿಸಿದ್ದು ಖಾತೆಯಲ್ಲಿ ಆರು ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ 5ನೇ ಸ್ಥಾನದಲ್ಲಿದೆ. ಆದರೆ ರಾಜಸ್ಥಾನ್ ರಾಯಲ್ಸ್ ಸದ್ಯ ಅಂಕಪಟ್ಟಿಯ ಅಗ್ರಸ್ಥಾನದಲ್ಲಿದ್ದು ಆಡಿರುವ 6 ಪಂದ್ಯಗಳಲ್ಲಿ 4 ಗೆಲುವು ಸಾಧಿಸಿದ್ದು 8 ಅಂಕಗಳನ್ನು ಖಾತೆಯಲ್ಲಿ ಹೊಂದಿದೆ. ನೆಟ್ ರನ್‌ರೆಟ್‌ನಲ್ಲಿಯೂ ಉತ್ತಮವಾಗಿರುವ ಕಾರಣ ಮೊದಲ ಸ್ಥಾನದಲ್ಲಿದೆ.

ಮತ್ತೊಮ್ಮೆ ನಾಯಕನಾಗಿ ವಿರಾಟ್?
ಇನ್ನು ಕಳೆದ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡದ ವಿರುದ್ಧ ಆರ್‌ಸಿಬಿ ಕಣಕ್ಕಿಳಿದಿದ್ದಾಗ ವಿರಾಟ್ ಕೊಹ್ಲಿ ತಂಡವನ್ನು ಮುನ್ನಡೆಸಿದ್ದರು. ಖಾಯಂ ನಾಯಕ ಫಾಫ್ ಡು ಪ್ಲೆಸಿಸ್ ಪಕ್ಕೆಲುಬು ನೋಗೆ ಒಳಗಾಘಿರುವ ಕಾರಣ ಕೇವಲ ಬ್ಯಾಟಿಂಗ್‌ಗೆ ಮಾತ್ರವೇ ಆಗಮಿಸಿದ್ದು ಫೀಲ್ಡಿಂಗ್ ಸಂದರ್ಭದಲ್ಲಿ ಇಂಪಾಕ್ಟ್ ಪ್ಲೇಯರ್‌ಗೆ ಅವಕಾಶ ನೀಡಿದ್ದರು. ಈ ಪಂದ್ಯದಲ್ಲಿಯೂ ಇದೇ ರೀತಿಯಾಗಿ ವಿರಾಟ್ ಕೊಹ್ಲಿ ತಂಡವನ್ನು ಮುನ್ನಡೆಸುವ ಸಾಧ್ಯತೆ ಹೆಚ್ಚಿದೆ.
ಪಂದ್ಯದ ಮಾಹಿತಿ ಹಾಗೂ ನೇರಪ್ರಸಾರದ ವಿವರ
ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ರಾಜಸ್ಥಾನ್ ರಾಯಲ್ಸ್ ವಿರುದ್ಧದ ಈ ಪಂದ್ಯ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣ ಕ್ರೀಡಾಂಗಣದಲ್ಲಿ ಏಪ್ರಿಲ್ 23 ಭಾನುವಾರ ಮಧ್ಯಾಹ್ನ ಆಯೋಜನೆಯಾಗಲಿದೆ. ಮಧ್ಯಾಹ್ನ 3:30ಕ್ಕೆ ಈ ಪಂದ್ಯ ಆರಂಭವಾಗಲಿದ್ದು 3 ಗಂಟೆಗೆ ಟಾಸ್ ಪ್ರಕ್ರಿಯೆ ನಡೆಯಲಿದೆ. ಇನ್ನು ಸ್ಟಾರ್ ಸ್ಪೋರ್ಟ್ಸ್ ವಾಹಿನಿ ಪಂದ್ಯದ ನೇರಪ್ರಸಾರ ಮಾಡಿದರೆ ಜಿಯೋ ಸಿನಿಮಾದಲ್ಲಿ ಲೈವ್‌ಸ್ಟ್ರೀಮಿಂಗ್ ಮೂಲಕ ವೀಕ್ಷಿಸುವ ಅವಕಾಶವಿದೆ.
IPL 2023: ಒಂದೇ ಒಂದು ಕೆಟ್ಟ ಎಸೆತ ಎಸೆಯಲಿಲ್ಲ ಆತ: ಅನುಭವಿ ಆಲ್‌ರೌಂಡರ್ ಆಟಕ್ಕೆ ಹರ್ಭಜನ್ ಮೆಚ್ಚುಗೆ
ಪಿಚ್ ರಿಪೋರ್ಟ್ ಹಾಗೂ ಹವಾಮಾನ ವರದಿ
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದ ಪಿಚ್ ಬ್ಯಾಟಿಂಗ್‌ಗೆ ಹೇಳಿಮಾಡಿದಂತಾ ಪಿಚ್ ಆಗಿದೆ. ಇನ್ನಿಂಗ್ಸ್‌ನ ಆರಂಭದಿಂದಲೇ ಬ್ಯಾಟರ್‌ಗಳಿಗೆ ದೊಡ್ಡ ಹೊಡೆಗಳಿಗೆ ಮುಂದಾಗುವುದು ಇಲ್ಲಿ ಸಾಮಾನ್ಯ. ಚೆಂಡು ಸರಾಗವಾಗಿ ಬ್ಯಾಟ್‌ಗೆ ಬೀಳುವ ಕಾರಣ ಇಲ್ಲಿ ಬ್ಯಾಟಿಂಗ್ ನಡೆಸುವುದನ್ನು ಬ್ಯಾಟರ್‌ಗಳು ಆನಂದಿಸಲಿದ್ದಾರೆ. ಮತ್ತೊಂದು ಹೈಸ್ಕೋರಿಂಗ್ ಮ್ಯಾಚನ್ನು ಈ ಪಂದ್ಯದಲ್ಲಿ ನಿರೀಕ್ಷಿಸಬಹುದು.
ಹವಾಮಾನ ವರದಿ: ಪಂದ್ಯದ ಸಂದರ್ಭದಲ್ಲಿ ಮಳೆಯಾಗುವ ಆತಂಕವಿಲ್ಲದಿರುವ ಕಾರಣ ಬಹುತೇಕ ಪೂರ್ಣ ಪ್ರಮಾಣದ ಪಂದ್ಯಕ್ಕೆ ಅವಕಾಶ ದೊರೆಯಲಿದೆ. ವಾತಾವರಣ ಉಷ್ಣಾಂಶ 21-33 ಡಿಗ್ರಿ ಸೆಲ್ಸಿಯಸ್‌ನ ಮಧ್ಯೆ ಇರಲಿದೆ.
2011ರ ವಿಶ್ವಕಪ್ ಫೈನಲ್‌ನಲ್ಲಿ ಔಟ್ ಆದ ಕೂಡಲೇ ಬಂದ ಕೊಹ್ಲಿಗೆ ಏನು ಹೇಳಿದ್ದೆ ಎಂಬುದನ್ನು ಬಿಚ್ಚಿಟ್ಟ ಸಚಿನ್
ಇತ್ತಂಡಗಳ ಸಂಭಾವ್ಯ ಆಡುವ ಬಳಗ
ರಾಯಲ್ ಚಾಲೆಂಜರ್ಸ್ ಬೆಂಗಳೂರು: ವಿರಾಟ್ ಕೊಹ್ಲಿ (ವಿಕೆಟ್ ಕೀಪರ್), ಫಾಫ್ ಡು ಪ್ಲೆಸಿಸ್, ಮಹಿಪಾಲ್ ಲೊಮ್ರೋರ್, ಗ್ಲೆನ್ ಮ್ಯಾಕ್ಸ್‌ವೆಲ್, ಶಹಬಾಜ್ ಅಹ್ಮದ್, ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ವನಿಂದು ಹಸರಂಗ, ಸುಯಶ್ ಪ್ರಭುದೇಸಾಯಿ, ಹರ್ಷಲ್ ಪಟೇಲ್, ಡೇವಿಡ್ ವಿಲ್ಲಿ, ಮೊಹಮ್ಮದ್ ಸಿರಾಜ್.
ರಾಜಸ್ಥಾನ್ ರಾಯಲ್ಸ್: ಜೋಸ್ ಬಟ್ಲರ್, ಯಶಸ್ವಿ ಜೈಸ್ವಾಲ್, ಸಂಜು ಸ್ಯಾಮ್ಸನ್ (ನಾಯಕ & ವಿಕೆಟ್ ಕೀಪರ್), ದೇವದತ್ ಪಡಿಕ್ಕಲ್, ಶಿಮ್ರೋನ್ ಹೆಟ್ಮೆಯರ್, ಧ್ರುವ್ ಜುರೆಲ್, ರವಿಚಂದ್ರನ್ ಅಶ್ವಿನ್, ಜೇಸನ್ ಹೋಲ್ಡರ್, ಟ್ರೆಂಟ್ ಬೌಲ್ಟ್, ಸಂದೀಪ್ ಶರ್ಮಾ, ಯುಜ್ವೇಂದ್ರ ಚಾಹಲ್.












Click it and Unblock the Notifications