Get Updates
Get notified of breaking news, exclusive insights, and must-see stories!

IPL 2023: ರಾಜಸ್ಥಾನ್ ರಾಯಲ್ಸ್ ಆಟಗಾರನ್ನು ವಿಶ್ವದ ನಂಬರ್ 1 ಬ್ಯಾಟರ್ ಎಂದು ಕೊಂಡಾಡಿದ ಮಾಜಿ ಕ್ರಿಕೆಟಿಗ

ಐಪಿಎಲ್‌ನ ರೋಚಕತೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಬಹುತೇಕ ಪಂದ್ಯಗಳು ಕೊನೆಯ ಕ್ಷಣದಲ್ಲಿ ಫಲಿತಾಂಶವನ್ನು ಪಡೆದುಕೊಳ್ಳುತ್ತಿದ್ದು ಅಭಿಮಾನಿಗಳು ರೋಮಾಂಚನ ಅನುಭವ ಪಡೆಯುತ್ತಿದ್ದಾರೆ. ಇನ್ನು ಈ ಬಾರಿಯ ಐಪಿಎಲ್‌ನಲ್ಲಿ ಕೆಲ ಆಟಗಾರರ ಬ್ಯಾಟ್‌ನಿಂದ ಸ್ಥಿರ ಪ್ರದರ್ಶನ ಬರುತ್ತಿದ್ದು ಇದರಿಂದಾಗಿ ಆ ತಂಡಗಳು ಅದ್ಭುತ ಯಶಸ್ಸು ಸಾಧಿಸುತ್ತಿದೆ. ಅದರಲ್ಲಿ ಪ್ರಮುಖ ಆಟಗಾರ ರಾಜಸ್ಥಾನ್ ರಾಯಲ್ಸ್ ತಂಡದ ಜೋಸ್ ಬಟ್ಲರ್.

ಐಪಿಎಲ್‌ನಲ್ಲಿ ನಿರಂತರವಾಗಿ ಅದ್ಭುತ ಪ್ರದರ್ಶನ ನಿಡುತ್ತಿರುವ ಜೋಸ್ ಬಟ್ಲರ್ ಈ ಬಾರಿಯ ಆವೃತ್ತಿಯಲ್ಲಿಯೂ ಅಮೋಘ ಪ್ರದರ್ಶನ ನೀಡಿ ಮಿಂಚುತ್ತಿದ್ದಾರೆ. ಆಡಿರುವ ನಾಲ್ಕು ಪಂದ್ಯಗಳ ಪೈಕಿ ಬಟ್ಲರ್ ಈಗಾಗಲೇ ಮೂರು ಅರ್ಧ ಶತಕ ಸಿಡಿಸಿದ್ದು ಹಿಂದಿನ ಆವೃತ್ತಿಯ ಫಾರ್ಮ್‌ಅನ್ನು ಮುಂದುವರಿಸಿದ್ದಾರೆ. ಈ ಸಂದರ್ಭದಲ್ಲಿ ಜೋಸ್ ಬಟ್ಲರ್ ಆಟಕ್ಕೆ ಮನಸೋತಿರುವ ಭಾರತದ ಮಾಜಿ ಕಾಟಗಾರ ಹರ್ಭಜನ್ ಸಿಂಗ್ ಇಂಗ್ಲೆಂಡ್ ಮೂಲದ ಈ ಆಟಗಾರ ಪ್ರಸ್ತುತ ವಿಶ್ವದ ನಂಬರ್ 1 ಬ್ಯಾಟರ್ ಎಂದು ಕೊಂಡಾಡಿದ್ದಾರೆ.

IPL 2023: Jos Buttler is No.1 batter in world for me said Harbhajan Singh

ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿಯೂ ಜೋಸ್ ಬಟ್ಲರ್ ಆರ್ಆರ್ ತಂಡದ ಪರವಾಗಿ ಮತ್ತೊಂದು ಮ್ಯಾಚ್ ವಿನ್ನಿಂಗ್ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಎಂದಿನಂತೆ ಆರಂಭಿಕನಾಗಿ ಕಣಕ್ಕಿಳಿದು ಬಟ್ಲರ್ 36 ಎಸೆತಗಳನ್ನು ಎದುರಿಸಿ 52 ರನ್ ಬಾರಿಸಿದರು. ಉಳಿದಂತೆ ಪಡಿಕ್ಕಲ್ 38 ರನ್‌ಗಳಿಸಿದರೆ ಆರ್ ಅಶ್ವಿನ್ ಹಾಗೂ ಹೆಟ್ಮೇಯರ್ ತಲಾ 30 ರನ್‌ಗಳಿಸಿದರು. ಹೀಗಾಗಿ ಸಿಎಸ್‌ಕೆ ವಿರುದ್ಧ ಆರ್‌ಆರ್ ತಂಡ 175 ರನ್‌ಗಳನ್ನು ಗಳಿಸಲು ಸಾಧ್ಯವಾಗಿತ್ತು.

"ಜೋಸ್ ಬಟ್ಲರ್ ಬ್ಯಾಟಿಂಗ್ ಹೊಗಳಲು ನನ್ನ ಬಳಿ ಪದಗಳಿಲ್ಲ. ಕ್ರಿಕೆಟ್ ಜಗತ್ತಿನ ಸೂಕ್ತ ಬ್ಯಾಟರ್ ಆತ. ಅವರು ಕ್ರೀಸನ್ನು ಪರಿಪೂರ್ಣವಾಗಿ ಬಳತ್ತಿದ್ದು ಅತ್ಯುತ್ತಮ ಕೌಶಲ್ಯವನ್ನು ಹೊಂದಿದ್ದಾರೆ. ವೇಗ ಹಾಗೂ ಸ್ಪಿನ್ ಎರಡು ದಾಲಿಗಳ ವಿರುದ್ಧವೂ ಅವರಲ್ಲಿ ಅತ್ಯುತ್ತಮವಾದ ಫೂಟ್‌ವರ್ಕ್‌ ಇದೆ. ನನ್ನ ಪಾಲಿಗೆ ಈ ಕ್ಷಣದಲ್ಲಿ ಆತನೇ ನಂಬರ್ 1 ಬ್ಯಾಟರ್" ಎಂದು ಹೊಗಳಿದ್ದಾರೆ ಮಾಜಿ ಆಟಗಾರ ಹರ್ಭಜನ್ ಸಿಂಗ್.

ಈ ಪಂದ್ಯದಲ್ಲಿ ಸಂಜು ಸ್ಯಾಮ್ಸನ್ ನೇತೃತ್ವದ ರಾಜಸ್ಥಾನ್ ರಾಯಲ್ಸ್ ತಂಡ ಕೊನೆಯ ಎಸೆತದಲ್ಲಿ ಚೆನ್ನೂ ಸೂಪರ್ ಕಿಂಗ್ಸ್ ವಿರುದ್ಧ 3 ರನ್‌ಗಳ ಅಂತರದ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಯಿತು. ಈ ಗೆಲುವಿಗೆ ನಾಯಕ ಸಂಜು ಸ್ಯಾಮ್ಸನ್ ಸಂಪೂರ್ಣ ತಂಡಕ್ಕೆ ಗೆಲುವಿನ ಶ್ರೇಯಸ್ಸು ನೀಡಿದ್ದು ಚೆನ್ನೈಯಿಂದ ಅದ್ಭುತವಾದ ನೆನಪುಗಳನ್ನು ಹೊತ್ತೊಯ್ಯುತ್ತಿರುವುದಾಗಿ ಹೇಳಿಕೊಂಡಿದ್ದಾರೆ.

"ಈ ಮೈದಾನದಲ್ಲಿ ಇಷ್ಟು ಇಬ್ಬನಿಯಲ್ಲಿಯೂ ನೀಡಿದ ಹೋರಾಟಕ್ಕೆ ಸಂಪೂರ್ಣ ತಂಡಕ್ಕೆ ಗೆಲುವಿನ ಶ್ರೇಯಸ್ಸು ಸಲ್ಲಬೇಕು. ಈ ಗೆಲುವಿನಲ್ಲಿ ಎಲ್ಲರೂ ಕೂಡ ಭಾಗಿಯಾಗಿದ್ದರು ಹಾಗೂ ಎಲ್ಲರ ಗುರಿ ಕೂಡ ಗೆಲುವು ಒಂದೇ ಆಗಿತ್ತು. ಇಲ್ಲಿಂದ ನಾವು ಸಂತಸದ ನೆನಪುಗಳೊಂದಿಗೆ ಹೋಗಲು ಬಯಸಿದ್ದೆವು. ಈಗ ಎಲ್ಲರು ಕೂಡ ಉತ್ತಮ ನೆನಪುಗಳೊಂದಿಗೆ ವಾಪಾಸಾಗುತ್ತಿದ್ದೇವೆ. ಇಲ್ಲಿಂದ ನಾವು ಗೆದ್ದುಕೊಂಡೇ ಹೊಗಬೇಕು ಎಂದು ನಾವು ಬಯಸಿದ್ದೆವು" ಎಂದಿದ್ದಾರೆ ಸಂಜು ಸ್ಯಾಮ್ಸನ್.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+