IPL 2023: ಗುಜರಾತ್ ಟೈಟನ್ಸ್ ಯಶಸ್ಸಿಗೆ ಆತನೇ ಕಾರಣ: ನಾಯಕನ ಬಗ್ಗೆ ಡೇವಿಡ್ ಮಿಲ್ಲರ್ ವಿಶೇಷ ಪ್ರಶಂಸೆ
ಹಾಲಿ ಚಾಂಪಿಯನ್ ಗುಜರಾತ್ ಟೈಟನ್ಸ್ ತಂಡ ಈ ಬಾರಿಯ ಐಪಿಎಲ್‌ನಲ್ಲಿಯೂ ತನ್ನ ಅಬ್ಬರದ ಪ್ರದರ್ಶನವನ್ನು ಮುಂದುವರಿಸಿದೆ. ತಂಡದ ಬಹುತೇಕ ಆಟಗಾರರು ಅದ್ಭುತ ಲಯದಲ್ಲಿದ್ದು ಯಾವುದೇ ಎದುರಾಳಿ ತಂಡಕ್ಕೂ ಇದು ಸವಾಲಾಗುವುದು ನಿಶ್ಚಿತ. ಈ ಸಂದರ್ಭದಲ್ಲಿ ಗುಜರಾತ್ ಟೈಟನ್ಸ್ ತಂಡದ ಮಧ್ಯಮ ಕ್ರಮಾಂಕದ ಪ್ರಮುಖ ಆಟಗಾರ ಡೇವಿಡ್ ಮಿಲ್ಲರ್ ಪ್ರತಿಕ್ರಿಯೆ ನೀಡಿದ್ದು ತಂಡದ ಯಶಸ್ಸಿಗೆ ಕಾರಣ ಯಾರು ಎಂಬುದನ್ನು ವಿವರಿಸಿದ್ದಾರೆ.
ಗುಜರಾತ್ ಟೈಟನ್ಸ್ ತಂಡ ಈ ಬಾರಿಯ ಐಪಿಎಲ್‌ನಲ್ಲಿ ಸತತ ಎರಡನೇ ಪಂದ್ಯವನ್ನೂ ಗೆದ್ದು ಬೀಗುವಲ್ಲಿ ಯಶಸ್ವಿಯಾಗಿದೆ. ಮೊದಲ ಪಂದ್ಯದಲ್ಲಿ ಎಂಎಸ್ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಅದ್ಭುತ ಗೆಲುವು ಸಾಧಿಸಿದ್ದ ಜಿಟಿ ತಂಡ ಎರಡನೇ ಪಂದ್ಯದಲ್ಲಿ ಡೇವಿಡ್ ವಾರ್ನರ್ ನೇತೃತ್ವದ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು 6 ವಿಕೆಟ್‌ಗಳ ಅಂತರದಿಂದ ಮಣಿಸುವಲ್ಲಿ ಯಶಸ್ವಿಯಾಯಿತು. ಹೀಗಾಗಿ ಈ ಬಾರಿಯ ಆವೃತ್ತಿಯಲ್ಲಿಯೂ ತನ್ನ ಅಮೋಘ ಪ್ರದರ್ಶನ ಮುಂದುವರಿಸುವ ಸೂಚನೆ ನೀಡಿದೆ.

ಇನ್ನು ಸತತ ಎರಡನೇ ಗೆಲುವು ಸಾಧಿಸಿದ ಬಳಿಕ ಡೇವಿಡ್ ಮಿಲ್ಲರ್ ಪ್ರತಿಕ್ರಿಯಿಸಿದ್ದು ತಂಡದ ನಾಯಕ ಹಾರ್ದಿಕ್ ಪಾಂಡ್ಯ ಬಗ್ಗೆ ವಿಶೇಷ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. "ನಾನು ಆಡಿದ ಆಟಗಾರರ ಪೈಕಿ ಹಾರ್ದಿಕ್ ಪಾಂಡ್ಯ ಕೂಡ ಅತ್ಯುತ್ತಮ ಮಟ್ಟದ ಆಟಗಾರನಾಗಿದ್ದಾರೆ. ಐಪಿಎಲ್‌ನಲ್ಲಿ ನನ್ನ ಮೊದಲ ನಾಯಕ ಆಡಂ ಗಿಲ್‌ಕ್ರಿಸ್ಟ್. ಹಾಗಾಗಿ ಈ ಸ್ಥಾನದಲ್ಲಿರುವುದು ನನ್ನ ಅದೃಷ್ಟ" ಎಂದಿದ್ದಾರೆ ಡೇವಿಡ್ ಮಿಲ್ಲರ್.
Ruturaj Gaikwad: ಆರೆಂಜ್ ಕ್ಯಾಪ್ ಬಗ್ಗೆ ಯೋಚನೆಯಿಲ್ಲ: ತನ್ನ ಗುರಿಯನ್ನು ಬಹುರಂಗಪಡಿಸಿದ ಋತುರಾಜ್
ಮುಂದುವರಿದು ಅವರು "ಕಳೆದ ಆವೃತ್ತಿಯಲ್ಲಿ ಹಾರ್ದಿಕ್ ಬಗ್ಗೆ ಹೆಚ್ಚೇನೂ ತಿಳಿದಿರಲಿಲ್ಲ. ಮೈದಾನದಾಚೆ ಮಾತ್ರವೇ ತಿಳಿದಿತ್ತು. ಆತ ತನ್ನದೇ ಆದ ವ್ಯಕ್ತಿತ್ವವನ್ನು ರೂಪಿಸಿಕೊಂಡಿದ್ದು ತಂಡದಲ್ಲಿ ಸಾಕಷ್ಟು ಆತ್ಮವಿಶ್ವಾಸವನ್ನು ಬೆಳೆಸಿದ್ದಾರೆ. ಆತನೋರ್ವ ತಂಡದ ಆಟಗಾರನಾಗಿದ್ದು ಯುವ ಆಟಗಾರರಿಗಾಗಿ ಹೆಚ್ಚಿನ ಅವಧಿಯನ್ನು ನೀಡುತ್ತಾರೆ" ಎಂದಿದ್ದಾರೆ ಗುಜರಾತ್ ಟೈಟನ್ಸ್ ತಂಡದ ಸ್ಪೋಟಕ ಆಟಗಾರ ಡೇವಿಡ್ ಮಿಲ್ಲರ್.
ಇನ್ನು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ಪರವಾಗಿ ಮ್ಯಾಚ್ ವಿನ್ನಿಂಗ್ ಪ್ರದರ್ಶನ ನೀಡಿದ್ದು ಸಾಯಿ ಸುದರ್ಶನ್. 48 ಎಸೆತಗಳಲ್ಲಿ 62 ರನ್ ಬಾರಿಸಿದ ಸುದರ್ಶನ್ 4 ಬೌಂಡರಿ ಹಾಗೂ 2 ಸಿಕ್ಸರ್ ಬಾರಿಸಿ ಮಿಂಚಿದರು. ಅಲ್ಲದೆ ಪಂದ್ಯದಲ್ಲಿ ಸಮಯೋಚಿತ ಪ್ರದರ್ಶನ ನೀಡಿದ್ದು ತಂಡದ ಅಜೇಯವಾಗುಳಿದು ತಂಡವನ್ನು ಗೆಲ್ಲಿಸುವಲ್ಲಿ ಯಶಸ್ವಿಯಾದರು. ಈ ಬಗ್ಗೆ ಮಾತನಾಡಿದ ಮಿಲ್ಲರ್, "ಕಳೆದ ಬಾರಿಯೂ ಸಾಯಿ ಸುದರ್ಶನ್ ಸಿಕ್ಕ ಅವಕಾಶದಲ್ಲಿ ತನ್ನ ಸಾಮರ್ಥ್ಯವನ್ನು ಪ್ರದರ್ಶಿಸಿದ್ದರು. ನಿಜಕ್ಕೂ ಆತ ಪ್ರತಿಭಾವಂತ ಆಟಗಾರನಾಗಿದ್ದು ಅತನಿಗಿರುವ ಅಗತ್ಯವನ್ನು ತಂಡ ಪೂರೈಸಲಿದೆ. ಆತನಿಂದ ಉತ್ತಮ ಪ್ರದರ್ಶನ ಬಂದಿರುವುದು ಖುಷಿ ನೀಡಿದ್ದು ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದುಕೊಂಡಿರುವುದು ಸಂತಸ ಮೂಡಿಸಿದೆ" ಎಂದಿದ್ದಾರೆ.
ಗುಜರಾತ್ ಟೈಟನ್ಸ್ ಆಡುವ ಬಳಗ: ವೃದ್ಧಿಮಾನ್ ಸಹಾ (ವಿಕೆಟ್ ಕೀಪರ್), ಶುಬ್ಮನ್ ಗಿಲ್, ಸಾಯಿ ಸುದರ್ಶನ್, ಹಾರ್ದಿಕ್ ಪಾಂಡ್ಯ (ನಾಯಕ), ಡೇವಿಡ್ ಮಿಲ್ಲರ್, ರಾಹುಲ್ ತೆವಾಟಿಯಾ, ರಶೀದ್ ಖಾನ್, ಮೊಹಮ್ಮದ್ ಶಮಿ, ಜೋಶುವಾ ಲಿಟಲ್, ಯಶ್ ದಯಾಳ್, ಅಲ್ಜಾರಿ ಜೋಸೆಫ್
ಬೆಂಚ್: ರವಿಶ್ರೀನಿವಾಸನ್ ಸಾಯಿ ಕಿಶೋರ್, ಜಯಂತ್ ಯಾದವ್, ವಿಜಯ್ ಶಂಕರ್, ಅಭಿನವ್ ಮನೋಹರ್, ಶ್ರೀಕರ್ ಭರತ್, ಮೋಹಿತ್ ಶರ್ಮಾ, ಪ್ರದೀಪ್ ಸಾಂಗ್ವಾನ್, ಮ್ಯಾಥ್ಯೂ ವೇಡ್, ಒಡಿಯನ್ ಸ್ಮಿತ್, ಶಿವಂ ಮಾವಿ, ದರ್ಶನ್ ನಲ್ಕಂಡೆ, ಉರ್ವಿಲ್ ಪಟೇಲ್
ಡೆಲ್ಲಿ ಕ್ಯಾಪಿಟಲ್ಸ್: ಪೃಥ್ವಿ ಶಾ, ಡೇವಿಡ್ ವಾರ್ನರ್ (ನಾಯಕ), ಮಿಚೆಲ್ ಮಾರ್ಷ್, ರಿಲೀ ರೊಸೊವ್, ಸರ್ಫರಾಜ್ ಖಾನ್, ಅಕ್ಸರ್ ಪಟೇಲ್, ಅಬಿಷೇಕ್ ಪೊರೆಲ್ (ವಿಕೆಟ್ ಕೀಪರ್), ಅಮನ್ ಹಕೀಮ್ ಖಾನ್, ಕುಲದೀಪ್ ಯಾದವ್, ಅನ್ರಿಚ್ ನಾರ್ಕಿತಾ, ಮುಖೇಶ್ ಕುಮಾರ್
ಬೆಂಚ್: ಲಲಿತ್ ಯಾದವ್, ರೋವ್ಮನ್ ಪೊವೆಲ್, ಚೇತನ್ ಸಕರಿಯಾ, ಖಲೀಲ್ ಅಹ್ಮದ್, ಮನೀಶ್ ಪಾಂಡೆ, ಲುಂಗಿ ಎನ್‌ಗಿಡಿ, ಪ್ರವೀಣ್ ದುಬೆ, ಫಿಲಿಪ್ ಸಾಲ್ಟ್, ಇಶಾಂತ್ ಶರ್ಮಾ, ಕಮಲೇಶ್ ನಾಗರಕೋಟಿ, ರಿಪಾಲ್ ಪಟೇಲ್, ಯಶ್ ಧುಲ್, ವಿಕ್ಕಿ ಓಸ್ಟ್ವಾಲ್












Click it and Unblock the Notifications