IPL 2023: ಐಪಿಎಲ್ ಮೇಲೆ ಕೋವಿಡ್-19 ಭೀತಿ: ಸೋಂಕಿತ ಆಟಗಾರರಿಗೆ 7 ದಿನ ಐಸೊಲೇಷನ್

ಮೂರು ವರ್ಷಗಳ ಕೋವಿಡ್-19 ಸಾಂಕ್ರಾಮಿಕದ ಬಳಿಕ ಐಪಿಎಲ್ ಸಾಂಪ್ರದಾಯಿಕ ಶೈಲಿಗೆ ಮರಳಿದೆ. ಮೂರು ಆವೃತ್ತಿಯ ನಂತರ ಐಪಿಎಲ್ ಪಂದ್ಯಗಳು ತವರಿಗೆ ಮರಳುತ್ತಿವೆ. ಎಲ್ಲಾ 10 ತಂಡಗಳು ತಮ್ಮ ತವರಿನ ಅಭಿಮಾನಿಗಳ ಮುಂದೆ ಪಂದ್ಯನ್ನಾಡಲು ಸಜ್ಜಾಗಿದ್ದಾರೆ.
ಆದರೆ ದೇಶದಲ್ಲಿ ಕೊರೊನಾ ಸೋಂಕಿತ ಪ್ರಕರಣಗಳು ಹೆಚ್ಚಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಬಿಸಿಸಿಐ 2023ರ ಐಪಿಎಲ್‌ಗೆ ಕೋವಿಡ್ ನಿಯಮಗಳನ್ನು ರೂಪಿಸಿದೆ. ಸೋಂಕಿತ ಆಟಗಾರರು 7 ದಿನಗಳ ಐಸೋಲೇಷನ್‌ಗೆ ಒಳಗಾಗುವುದು ಕಡ್ಡಾಯ ಎಂದು ಹೇಳಿದೆ.
NZ Vs SL 2nd Test: ಇನ್ನಿಂಗ್ಸ್ ಸೋಲಿನ ಭೀತಿಯಲ್ಲಿ ಶ್ರೀಲಂಕಾ: ಸರಣಿ ವೈಟ್‌ವಾಶ್ ಮಾಡುವತ್ತ ನ್ಯೂಜಿಲೆಂಡ್
ಕಳೆದ ಎರಡು ಆವೃತ್ತಿಯಲ್ಲಿ ಬಿಸಿಸಿಐ ಇದೇ ನಿಯಮಗಳನ್ನು ರೂಪಿಸಿತ್ತು. 2023ರ ಐಪಿಎಲ್ ಆವೃತ್ತಿಯಲ್ಲೂ ಇದೇ ನಿಯಮ ಮುಂದುವರೆಸುವುದಾಗಿ ಹೇಳಿದೆ. ಕೋವಿಡ್ ಸೋಂಕಿಗೆ ತುತ್ತಾಗುವ ಆಟಗಾರ ಕನಿಷ್ಠ 7 ದಿನಗಳು ಪ್ರತ್ಯೇಕವಾಗಿ ಇರಬೇಕಾಗುತ್ತದೆ ಎಂದು ಆದೇಶದಲ್ಲಿ ತಿಳಿಸಿದೆ.
ಆದರೂ ಈ ಬಾರಿ ಆಟಗಾರರು ಬಯೋ ಬಬಲ್ ಕಡ್ಡಾಯವಾಗಿ ಇರುವುದಿಲ್ಲ. ಬದಲಾಗಿ ಮುನ್ನೆಚ್ಚರಿಕೆ ತೆಗೆದುಕೊಳ್ಳಲು ನಿರ್ಧರಿಸಿದೆ ಬಿಸಿಸಿಐ, ಐಪಿಎಲ್ ಆಟಗಾರರು ಎಚ್ಚರಿಕೆಯಿಂದ ಇರಲು ಸೂಚನೆ ನೀಡಲಾಗಿದೆ. ಕೋವಿಡ್-19 ಪಾಸಿಟಿವ್ ಹೊಂದಿರುವ ಆಟಗಾರರನ್ನು ತರಬೇತಿ ಅಥವಾ ಪಂದ್ಯಗಳಲ್ಲಿ ಭಾಗವಹಿಸಲು ಅನುಮತಿ ನೀಡುವುದಿಲ್ಲ ಎಂದು ಹೇಳಿದೆ. ನೆಗೆಟಿವ್ ವರದಿ ಬಂದ ಬಳಿಕವೇ ಆಟಗಾರರಿಗೆ ತರಬೇತಿಯಲ್ಲಿ ಪಾಲ್ಗೊಳ್ಳಲು ಮತ್ತು ಪಂದ್ಯದಲ್ಲಿ ಭಾಗವಹಿಸಲು ಅವಕಾಶ ಸಿಗಲಿದೆ.

ಎಚ್ಚರಿಕೆಯಿಂದ ಇರುವುದು ಮುಖ್ಯ
ಭಾರತದಲ್ಲಿ ಕೋವಿಡ್-19 ಪ್ರಕರಣಗಳ ಸಂಖ್ಯೆಯಲ್ಲಿ ಇಳಿಕೆಯಾಗಿದ್ದರೂ, ಹಲವು ಹೊಸ ತಳಿಗಳ ಸೋಂಕುಗಳು ಆಗಾಗ್ಗೆ ವರದಿಯಾಗುತ್ತಿರುವ ಕಾರಣ, ನಾವು ಎಚ್ಚರಿಕೆಯಿಂದ ಇರಬೇಕಾಗುತ್ತದೆ ಎಂದು ಎಂದು ಐಪಿಎಲ್‌ನ ವೈದ್ಯಕೀಯ ಮಾರ್ಗಸೂಚಿಗಳನ್ನು ಈ ವಾರ ಫ್ರಾಂಚೈಸಿಗಳಿಗೆ ವಿತರಿಸಲಾಗಿದೆ.
"ಕೊರೊನಾ ಸೋಂಕಿತ ಆಟಗಾರರು ಗರಿಷ್ಠ ಏಳು ದಿನಗಳವರೆಗೆ ಪ್ರತ್ಯೇಕವಾಗಿ ಇರಬೇಕಾಗುತ್ತದೆ. ಆಟಗಾರನ ಐಸೋಲೇಷನ್ ಅವಧಿಯಲ್ಲಿ ತರಬೇತಿ ಅಥವಾ ಪಂದ್ಯಗಳಲ್ಲಿ ಭಾಗವಹಿಸಲು ಅನುಮತಿ ನೀಡಲಾಗುವುದಿಲ್ಲ" ಎಂದು ಸ್ಪಷ್ಟವಾಗಿ ಹೇಳಿದೆ.
ರೋಗ ಲಕ್ಷಣಗಳನ್ನು ಹೊಂದಿರುವ ಆಟಗಾರರಿಗೆ ಮಾತ್ರ ಪರೀಕ್ಷೆ ಮಾಡಲಾಗುವುದು. ರೋಗ ಲಕ್ಷಣ ಇಲ್ಲ ಆಟಗಾರರಿಗೆ ಕೋವಿಡ್ ಪರೀಕ್ಷೆ ಮಾಡುವುದಿಲ್ಲ ಎಂದು ಹೇಳಿದೆ. ಸೋಂಕಿತ ಆಟಗಾರ 7 ದಿನಗಳ ಬಳಿಕ ಎರಡು ಬಾರಿ ನಕಾರಾತ್ಮಕ ಕೋವಿಡ್-19 ಪರೀಕ್ಷೆಗಳನ್ನು ಎದುರಿಸಿದ ಬಳಿಕ ತಂಡಕ್ಕೆ ವಾಪಸಾಗಲು ಅನುಮತಿ ಸಿಗುತ್ತದೆ.

ಐದನೇ ದಿನ ಆರ್‌ಟಿ-ಪಿಸಿಆರ್ ಪರೀಕ್ಷೆ
ಸೋಂಕಿತ ಆಟಗಾರರಿಗೆ ಐದನೇ ದಿನ ಆರ್‌ಟಿ-ಪಿಸಿಆರ್ ಪರೀಕ್ಷೆ ನಡೆಸಲಾಗುತ್ತದೆ. 24 ಗಂಟೆಗಳ ಕಾಲ ಯಾವುದೇ ಔಷಧಿಗಳ ಸಹಾಯವಿಲ್ಲದೆ, ಸೋಂಕಿನ ಲಕ್ಷಣ ಹೊಂದಿಲ್ಲದೇ ಇರಬೇಕು. 2ನೇ ಪರೀಕ್ಷೆಯನ್ನು ಮೊದಲ ಪರೀಕ್ಷೆಯ 24 ಗಂಟೆಗಳ ಬಳಿಕ ಮಾಡಲಾಗುತ್ತದೆ. ಎರಡನೇ ಬಾರಿಯೂ ನೆಗೆಟಿವ್ ಬಂದರೆ ಮಾತ್ರ ಆಟಗಾರರನ್ನು ಆಯ್ಕೆಗೆ ಪರಿಗಣಿಸಲಾಗುತ್ತದೆ"
ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಕೋವಿಡ್-19 ಸಾಂಕ್ರಾಮಿಕಕ್ಕೆ ಸಂಬಂಧಿಸಿದ ನಿರ್ಬಂಧಗಳನ್ನು ತೆರವುಮಾಡಲಾಗುತ್ತಿದೆ. ಕಳೆದ ವರ್ಷ ಆಗಸ್ಟ್‌ನಲ್ಲಿ ಆಸ್ಟ್ರೇಲಿಯಾದ ಆಲ್‌ರೌಂಡರ್ ತಹ್ಲಿಯಾ ಮೆಕ್‌ಗ್ರಾತ್ ವೈರಸ್‌ಗೆ ಧನಾತ್ಮಕ ಪರೀಕ್ಷೆಯ ಹೊರತಾಗಿಯೂ ಕ್ರಿಕೆಟ್ ಪಂದ್ಯವನ್ನು ಆಡಿದ ಮೊದಲ ಆಟಗಾರರಾದರು. ಕಾಮನ್‌ವೆಲ್ತ್ ಗೇಮ್ಸ್ 2022 ಕ್ರಿಕೆಟ್ ಪಂದ್ಯಾವಳಿಯ ಫೈನಲ್‌ನಲ್ಲಿ ಭಾರತದ ವಿರುದ್ಧದ ಆಡಿದ್ದರು, ಆ ಪಂದ್ಯದಲ್ಲಿ ಆಸ್ಟ್ರೇಲಿಯಾ ಗೆಲುವು ಸಾಧಿಸಿತ್ತು.
ಆಸ್ಟ್ರೇಲಿಯಾದಲ್ಲಿ ನಡೆದ ಐಸಿಸಿ ಟಿ 20 ವಿಶ್ವಕಪ್ 2022 ರ ಸಂದರ್ಭದಲ್ಲಿ, ಕೋವಿಡ್ 19 ಪರೀಕ್ಷೆಯ ನಂತರ ಆಸೀಸ್ ವಿಕೆಟ್‌ಕೀಪರ್-ಬ್ಯಾಟರ್ ಮ್ಯಾಥ್ಯೂ ವೇಡ್, ಇಂಗ್ಲೆಂಡ್ ವಿರುದ್ಧದ ತನ್ನ ತಂಡದ ಪಂದ್ಯದಲ್ಲಿ ಆಡಿದ್ದರು.
ಐಪಿಎಲ್ 2023 ರ ಮೊದಲ ಪಂದ್ಯವು ಮಾರ್ಚ್ 31 ರಂದು ಹಾಲಿ ಚಾಂಪಿಯನ್ ಗುಜರಾತ್ ಟೈಟಾನ್ಸ್ ಮತ್ತು ನಾಲ್ಕು ಬಾರಿಯ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ (CSK) ನಡುವೆ ನಡೆಯಲಿದೆ.












Click it and Unblock the Notifications