IPL 2023: ಐಪಿಎಲ್‌ನಲ್ಲಿ ಮುಂದುವರೆಯುತ್ತಾ ಇಂಪ್ಯಾಕ್ಟ್ ಪ್ಲೇಯರ್ ನಿಯಮ? ಪ್ರತಿಕ್ರಿಯೆ ಕೇಳಿದ ಬಿಸಿಸಿಐ

2023ರ ಐಪಿಎಲ್‌ನಲ್ಲಿ ಸಾಕಷ್ಟು ಗಮನ ಸೆಳೆಯುತ್ತಿರುವುದು ಇಂಪ್ಯಾಕ್ಟ್ ಪ್ಲೇಯರ್ ಎನ್ನುವ ಹೊಸ ನಿಯಮ. ಸೈಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಯಲ್ಲಿ ಬಿಸಿಸಿಐ ಈ ನಿಯಮವನ್ನು ಪ್ರಯೋಗಾತ್ಮಕವಾಗಿ ಜಾರಿ ಮಾಡಿ ಯಶಸ್ಸು ಕಂಡ ಬಳಿಕ, ಐಪಿಎಲ್‌ನಲ್ಲಿ ಜಾರಿ ಮಾಡಲು ಮುಂದಾಯಿತು. ಐಪಿಎಲ್ ಆರಂಭವಾಗಿ ಒಂದು ವಾರ ಮುಕ್ತಾಯವಾಗಿದ್ದು ಎಲ್ಲಾ ತಂಡಗಳು ಈಗಾಗಲೇ ಈ ನಿಯಮವನ್ನು ಬಳಸಿಕೊಂಡಿದೆ.

ಒಂದು ವಾರದ ಬಳಿಕ ಬಿಸಿಸಿಐ ಹೊಸ ನಿಯಮದ ಬಗ್ಗೆ ಅಭಿಪ್ರಾಯ ಸಂಗ್ರಹಿಸಲು ಮುಂದಾಗಿದೆ. ಐಪಿಎಲ್‌ನ ಎಲ್ಲಾ ಫ್ರಾಂಚೈಸಿಗಳು ಮತ್ತು ತಂಡದ ನಾಯಕರಿಗೆ ತಮ್ಮ ಪ್ರತಿಕ್ರಿಯೆ ನೀಡುವಂತೆ ಬಿಸಿಸಿಐ ಮನವಿ ಮಾಡಿದೆ. ಫ್ರಾಂಚೈಸಿ ಮತ್ತು ನಾಯಕರ ಅಭಿಪ್ರಾಯವನ್ನು ಪರಿಗಣಿಸಿ ಮುಂದಿನ ದಿನಗಳಲ್ಲಿ ಮುಂದುವರೆಸುವ ಬಗ್ಗೆ ನಿರ್ಧಾರ ಮಾಡುವ ಸಾಧ್ಯತೆ ಇದೆ.

IPL 2023: BCCI Asks Franchise & Captains Feedback About Impact Player Rule

ಇಂಪ್ಯಾಕ್ಟ್ ಪ್ಲೇಯರ್ ನಿಯಮ ಪರಿಚಯಿಸುವ ಮೂಲಕ ಪಂದ್ಯಗಳ ರೋಚಕತೆ ಹೆಚ್ಚಾಗಿದೆ. ಆಲ್‌ರೌಂಡರ್‌ನ ಪ್ರಭಾವ ಕಡಿಮೆಯಾಗಿದೆ. ನಿಯಮದ ಪರಿಣಾಮವನ್ನು ಅರ್ಥಮಾಡಿಕೊಳ್ಳಲು, ಬಿಸಿಸಿಐ ಫ್ರಾಂಚೈಸಿಗಳು ಮತ್ತು ನಾಯಕರಿಂದ ಪ್ರತಿಕ್ರಿಯೆಯನ್ನು ಕೇಳುತ್ತಿದೆ. ಇದುವರೆಗೂ, ಹೊಸ ನಿಯಮಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇನ್ನೂ ಕೆಲವು ಫ್ರಾಂಚೈಸಿಗಳು ಪರಿಣಾಮಗಳ ಬಗ್ಗೆ ತಿಳಿಯಲು ಇನ್ನಷ್ಟು ದಿನ ಕಾದು ನೋಡಬೇಕು ಎಂದು ಹೇಳಿವೆ.

ಎಲ್ಲರ ಅಭಿಪ್ರಾಯ ಸ್ವೀಕರಿಸುತ್ತೇವೆ

"ಇಂಪ್ಯಾಕ್ಟ್ ಪ್ಲೇಯರ್ ನಿಯಮದ ಬಗ್ಗೆ ನಾವು ಇಲ್ಲಿಯವರೆಗೆ ಉತ್ತಮ ಪ್ರತಿಕ್ರಿಯೆಯನ್ನು ಸ್ವೀಕರಿಸಿದ್ದೇವೆ. ಇದು ತಂಡಗಳಿಗೆ ಹೆಚ್ಚಿನ ಆಯ್ಕೆಯನ್ನು ನೀಡುತ್ತದೆ ಮತ್ತು ನಿರೀಕ್ಷೆಯ ಅರ್ಥವನ್ನು ನೀಡುತ್ತದೆ. ಎದುರಾಳಿ ತಂಡಕ್ಕೆ ಕೊನೆಯ ಕ್ಷಣದವರೆಗೂ ಯಾರು ಬರುತ್ತಾರೆ ಮತ್ತು ಯಾವ ರೀತಿಯ ಪ್ಲಾನಿಂಗ್ ಮಾಡಬೇಕು ಎಂಬುದು ತಿಳಿದಿಲ್ಲ. ನಾವು ಕೇವಲ 6-7 ಪಂದ್ಯಗಳನ್ನು ಮಾತ್ರ ನೋಡಿದ್ದವೇ, ಎಲ್ಲರೂ ಕಾಯುತ್ತಿದ್ದಾರೆ. ನಾವು ಬಲವಂತವಾಗಿ ನಿಯಮವನ್ನು ಹೇರುವುದಿಲ್ಲ, ಎಲ್ಲರ ಪ್ರತಿಕ್ರಿಯೆಯನ್ನು ಸ್ವಾಗತಿಸುತ್ತೇವೆ. ನಂತರ ನಿರ್ಧಾರ ಮಾಡುತ್ತೇವೆ" ಎಂದು ಬಿಸಿಸಿಐನ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ ಎಂದು ಇನ್‌ಸೈಡ್‌ಸ್ಪೋರ್ಟ್‌ ವರದಿ ಮಾಡಿದೆ.

IPL 2023: BCCI Asks Franchise & Captains Feedback About Impact Player Rule

ಇಂಪ್ಯಾಕ್ಟ್ ಪ್ಲೇಯರ್ ನಿಯಮವನ್ನು ಇದುವರೆಗೂ ಆಡಿರುವ ಎಲ್ಲಾ ಪಂದ್ಯಗಳಲ್ಲಿ ಎಲ್ಲಾ ತಂಡಗಳು ಬಳಿಸಿಕೊಂಡಿವೆ. ಮೊದಲನೇ ಪಂದ್ಯದಲ್ಲೇ ಗುಜರಾತ್ ಜೈಂಟ್ಸ್ ತಂಡಕ್ಕೆ ಇಂಪ್ಯಾಕ್ಟ್ ಪ್ಲೇಯರ್ ಆಗಿ ಬಂದ ಸಾಯಿ ಸುದರ್ಶನ್ ಗೆಲುವಿನಲ್ಲಿ ಮುಖ್ಯ ಪಾತ್ರ ವಹಿಸಿದ್ದರು. ಎರಡನೇ ಪಂದ್ಯದಲ್ಲಿ ಅವರು ಆಡುವ ಬಳಗದಲ್ಲಿ ನೇರವಾಗಿ ಸ್ಥಾನ ಪಡೆದುಕೊಂಡರು.

ಇಂಪ್ಯಾಕ್ಟ್ ಪ್ಲೇಯರ್ ನಿಯಮದಿಂದ ಭಾರತದ ಆಟಗಾರರಿಗೆ ಹೆಚ್ಚಿನ ಅವಕಾಶ ಸಿಗುತ್ತಿದೆ ಎನ್ನುವುದಂತೂ ಸತ್ಯ, ಹಲವು ಯುವ ಆಟಗಾರರು ಹೊಸ ನಿಯಮದ ಲಾಭ ಪಡೆದು ತಮ್ಮ ಸಾಮರ್ಥ್ಯ ಪ್ರದರ್ಶಿಸಿದ್ದಾರೆ. ಆರ್ ಸಿಬಿ ವಿರುದ್ಧದ ಪಂದ್ಯದಲ್ಲಿ ಇಂಪ್ಯಾಕ್ಟ್ ಪ್ಲೇಯರ್ ಆಗಿ ಬಂದ ಕೆಕೆಆರ್ ತಂಡದ ಸುಯಾಶ್ 3 ವಿಕೆಟ್ ಪಡೆದು ಮಿಂಚಿದ್ದು ಒಂದು ಉತ್ತಮ ಉದಾಹರಣೆ.

ಏನಿದು ಇಂಪ್ಯಾಕ್ಟ್ ಪ್ಲೇಯರ್ ನಿಯಮ?

ಇಂಪ್ಯಾಕ್ಟ್ ಪ್ಲೇಯರ್ ನಿಯಮದ ಪ್ರಕಾರ ಪ್ರತಿಯೊಂದು ತಂಡಕ್ಕೆ 12 ಆಟಗಾರರ ಜೊತೆ ಆಡುವ ಅವಕಾಶ ನೀಡುತ್ತದೆ. ಟಾಸ್‌ ಆದ ನಂತರ ಎರಡೂ ತಂಡಗಳ ನಾಯಕರು ಪ್ಲೇಯಿಂಗ್ ಇಲೆವೆನ್ ಜೊತೆ 5 ಇಂಪ್ಯಾಕ್ಟ್ ಆಟಗಾರರನ್ನು ಹೆಸರಿಸಬೇಕಾಗುತ್ತದೆ. ಆಟದ ಮಧ್ಯೆ ಯಾವುದೇ ಸಂದರ್ಭದಲ್ಲಿ ಈ ಐವರು ಇಂಪ್ಯಾಕ್ಟ್ ಆಟಗಾರರಲ್ಲಿ ಒಬ್ಬರು ಮೈದಾನದಲ್ಲಿ ಇರುವ ಆಟಗಾರರನ್ನು ಬದಲಾಯಿಸಬಹುದು. ಈ ಮೊದಲು ಆಟಗಾರ ಬ್ಯಾಟಿಂಗ್ ಅಥವಾ ಬೌಲಿಂಗ್ ಮಾಡಿದ್ದರೂ ಕೂಡ ಆತನ ಬದಲಾಗಿ ಬರುವ ಇಂಪ್ಯಾಕ್ಟ್ ಪ್ಲೇಯರ್ ಬ್ಯಾಟಿಂಗ್ ಮತ್ತು ಬೌಲಿಂಗ್ ಮಾಡಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+