Paris Olympics: ಪದಕದತ್ತ "ಲಕ್ಷ್ಯ" ನೆಟ್ಟಿರುವ ಸೇನ್‌: ಇಲ್ಲಿದೆ ಭಾನುವಾರದ ಸಂಪೂರ್ಣ ವೇಳಾಪಟ್ಟಿ

ಭಾರತದ ಕ್ರೀಡಾ ಪಟುಗಳು ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಸ್ಥಿರ ಪ್ರದರ್ಶನ ನೀಡುತ್ತಿದ್ದಾರೆ. ಶನಿವಾರ ನಡೆದ ಸ್ಪರ್ಧೆಗಳಲ್ಲಿ ಭಾರತೀಯ ಅಥ್ಲಿಟ್‌ಗಳು ಕೊಂಚ ನಿರಾಸೆ ಅನುಭವಿಸಿದ್ದು, ಭಾನುವಾರ ದೇಶದ ಕ್ರೀಡಾ ಅಭಿಮಾನಿಗಳ ಮುಖದಲ್ಲಿ ಕ್ರೀಡಾ ಪಟುಗಳು ಮಂದಹಾಸ ಮೂಡಿಸಲು ಸಜ್ಜಾಗಿದ್ದಾರೆ.

ಪುರುಷರ 72 ಕೆಜಿ ವಿಭಾಗದಲ್ಲಿ ನಿಶಾಂತ್‌ ದೇವ್‌, ಮೊದಲ ಸೆಟ್‌ನಲ್ಲಿ ಅಬ್ಬರದ ಪ್ರದರ್ಶನ ನೀಡಿದರೂ, ಸೆಮಿಫೈನಲ್‌ ಪ್ರವೇಶಿಸುವಲ್ಲಿ ವಿಫಲರಾಗಿದ್ದಾರೆ. ಇನ್ನು ಭಾರತದ ಸ್ಟಾರ್ ಆರ್ಚರಿ ಪಟು ದೀಪಿಕಾ ಕುಮಾರಿ ಸಹ ಕ್ವಾರ್ಟರ್‌ ಫೈನಲ್‌ನಲ್ಲಿ ತಮ್ಮ ಅಭಿಯಾನವನ್ನು ಪೂರ್ಣಗೊಳಿಸಿದ್ದಾರೆ. ಭಾರತದ ಪದಕದ ಆಸೆ ಚಿಗುರಿಸಿರುವ ಅಥ್ಲಿಟ್‌ಗಳು ಭಾನುವಾರ ಅಖಾಡ ಪ್ರವೇಶಿಸಲಿದ್ದಾರೆ.

India s Olympic Lineup for August 4 Events Timings and Key Athletes

ಭಾರತದ ಚಿತ್ತ ಕದ್ದಿರುವ ಲಕ್ಷ್ಯ ಸೇನ್‌, ಪುರುಷರ ಸಿಂಗಲ್ಸ್‌ನಲ್ಲಿ ಸೆಮಿಫೈನಲ್‌ ಪ್ರವೇಶಿಸಿದ್ದು, ಇಂದು ಅವರು ಡೆನ್ಮಾರ್ಕನ್‌ ವಿಕ್ಟರ್ ಆಕ್ಸೆಲ್ಸೆನ್ ಅವರ ವಿರುದ್ಧ ಕಾದಾಟವನ್ನು ನಡೆಸಲಿದ್ದಾರೆ. ಈ ಪಂದ್ಯದಲ್ಲಿ ಗೆದ್ದು ಫೈನಲ್‌ಗೆ ಪ್ರವೇಶಿಸುವ ಕನಸು ಲಕ್ಷ್ಯ ಅವರದ್ದಾಗಿದೆ. ಇನ್ನು ಭಾರತ ಪುರುಷರ ಹಾಕಿ ತಂಡ ಕ್ವಾರ್ಟರ್‌ ಫೈನಲ್‌ನಲ್ಲಿ ಗ್ರೇಟ್‌ ಬ್ರಿಟನ್‌ ವಿರುದ್ಧ ಕಾದಾಟ ನಡೆಸಲಿದ್ದು, ಮುಂದಿನ ಹಂತ ಪ್ರವೇಶಿಸುವ ವಿಶ್ವಾಸ ಹೊಂದಿದೆ.

ಭಾನುವಾರ ಭಾರತೀಯ ಕ್ರೀಡಾ ಪಟುಗಳ ವೇಳಾಪಟ್ಟಿ

  • 12:30 PM, ಶೂಟಿಂಗ್‌, ಪುರುಷರ 25 ಮೀಟರ್‌ ರ್ಯಾಪಿಡ್ ಫೈರ್ ಪಿಸ್ತೂಲ್‌
  • 12:30 PM, ಪುರುಷರ ಗಾಲ್ಫ್, ನಾಲ್ಕನೇ ಸುತ್ತು
  • 1:00 PM, ಶೂಟಿಂಗ್, ಮಹಿಳೆಯರ ಸ್ಕಿಟ್ ಅರ್ಹತೆ
  • 1:30 PM, ಹಾಕಿ, ಪುರುಷರ ಕ್ವಾಟರ್ ಫೈನಲ್‌ ( ಭಾರತ ವಿರುದ್ಧ ಗ್ರೇಟ್ ಬ್ರಿಟನ್)
  • 1:35 PM, ಅಥ್ಲಿಟಿಕ್ಸ್‌, ಮಹಿಳೆಯರ 3000 ಮೀಟರ್ ಸ್ಟೀಪಲ್ ಚೇಸ್
  • 2:30 PM, ಅಥ್ಲಿಟಿಕ್ಸ್‌, ಪುರುಷರ ಲಾಂಗ್ ಜಂಪ್
  • 3:02 PM, ಬಾಕ್ಸಿಂಗ್, ಮಹಿಳೆಯರ 75 ಕೆಜಿ ವಿಭಾಗ
  • 3:30 PM, ಬ್ಯಾಡ್ಮಿಂಟನ್‌, ಪುರುಷರ ಸಿಂಗಲ್ಸ್‌
  • 3:35 PM, ಪುರುಷರ ಸೀಲಿಂಗ್ ಸ್ಪರ್ಧೆ
  • 6:05 PM, ಮಹಿಳೆಯರ ಸೀಲಿಂಗ್ ಸ್ಪರ್ಧೆ
  • 7:00 PM, ಮಹಿಳೆಯರ ಸ್ಕೀಟ್‌ ಫೈನಲ್‌

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+