Sunil Chhetri: ಭಾರತದ ಫುಟ್ಬಾಲ್ ತಂಡದ ನಾಯಕ ಅಂತಾರಾಷ್ಟ್ರೀಯ ಪಂದ್ಯಗಳಿಗೆ ದಿಢೀರ್ ನಿವೃತ್ತಿ
Sunil Chhetri: ಭಾರತದ ಫುಟ್ಬಾಲ್ ದಂತಕಥೆ ಸುನಿಲ್ ಛೆಟ್ರಿ ಅವರು ಅಂತಾರಾಷ್ಟ್ರೀಯ ಪಂದ್ಯಗಳಿಗೆ ದಿಢೀರ್ ನಿವೃತ್ತಿ ಘೋಷಣೆ ಮಾಡಿದ್ದಾರೆ.
ಭಾರತ ತಂಡದ ಪುಟ್ಬಾಲ್ ತಂಡದ ನಾಯಕರಿಂದ ಸುನೀಲ್ ಛೆಟ್ರಿ ಅವರು ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಆದರೆ ಇಂದು ಅವರು ಅಂತಾರಾಷ್ಟ್ರೀಯ ಪಂದ್ಯಗಳಿಗೆ ದಿಢೀರ್ ವಿದಾಯ ಹೇಳಿದ್ದು, ಇದು ಅಭಿಮಾನಿಗಳಿಗೆ ಬೇಸರ ತಂದಿದೆ.

ಜೂನ್ 6ರಂದು ಕೋಲ್ಕತ್ತಾದ ಸಾಲ್ಟ್ ಲೇಕ್ ಕ್ರೀಡಾಂಗಣದಲ್ಲಿ ನಡೆಯಲಿರುವ ಕುವೈತ್ ವಿರುದ್ಧದ ಪಂದ್ಯವೇ ಕೊನೆಯದಾಗಿದ್ದು, ಇದೀಗ ಅಂತಾರಾಷ್ಟ್ರೀಯ ಫುಟ್‌ಬಾಲ್ ಪಂದ್ಯಗಳಿಗೆ ಸಂಪೂರ್ಣವಾಗಿ ವಿದಾಯ ಹೇಳುವುದಾಗಿ ಛೆಟ್ರಿ ಅವರು ತಿಳಿಸಿದ್ದಾರೆ.
39 ವರ್ಷ ವಯಸ್ಸಿನ ಸುನಿಲ್ ಛೆಟ್ರಿ ಅವರು, ಭಾರತದ ಪರ ಈವರೆಗೆ 150 ಪಂದ್ಯಗಳನ್ನು ಆಡಿದ್ದು, ಈ ವೇಳೆ 94 ಗೋಲುಗಳನ್ನು ಗಳಿಸುವ ಮೂಲಕ ದಾಖಲೆ ಬರೆದಿದ್ದಾರೆ. ಈ ಮೂಲಕ ಅಂತಾರಾಷ್ಟ್ರೀಯ ಫುಟ್ಬಾಲ್ ಇತಿಹಾಸದಲ್ಲಿ ಅತಿಹೆಚ್ಚು ಗೋಲು ಗಳಿಸಿದವರ ಆಟಗಾರರ ಪಟ್ಟಿಯಲ್ಲಿ ಚೆಟ್ರಿ ಅವರು 4ನೇ ಸ್ಥಾನದಲ್ಲಿದ್ದಾರೆ.
I'd like to say something... pic.twitter.com/xwXbDi95WV
— Sunil Chhetri (@chetrisunil11) May 16, 2024
"ನಾನು ಮೊದಲ ಬಾರಿ ಭಾರತ ಪರ ಆಡಿದ ಪಂದ್ಯವನ್ನು ಎಂದೆಂದಿಗೂ ಮರೆಯುವುದಿಲ್ಲ. ಹಾಗೂ ಅದನ್ನು ಯಾವಾಗಲೂ ನೆನಪಿಸಿಕೊಳ್ಳುತ್ತಲೇ ಇರುತ್ತೇನೆ. ಅದೊಂದು ಮರೆಯಲಾಗದ ಕ್ಷಣ. ಆ ಪಂದ್ಯಕ್ಕೂ ಒಂದು ದಿನ ಮುಂಚೆ, ನಮ್ಮ ರಾಷ್ಟ್ರೀಯ ತಂಡದ ಕೋಚ್ ಆಗಿದ್ದ ಸುಖಿ ಸರ್ ಬಂದು ಆಡುವುದಕ್ಕೆ ತಾಯಾರಾಗಿದ್ದೀರಾ ಅಲ್ವಾ ಎಂದು ಕೇಳಿದರು. ಆ ಕ್ಷಣ ಸಂತೋಷಕ್ಕೆ ಮಾತ್ರ ಪಾರವೇ ಇರಲಿಲ್ಲ. ಅಷ್ಟರ ಮಟ್ಟಿಗೆ ಖುಷಿಯಾಗಿತ್ತು," ಎಂದರು.
"ನಾನು ನನ್ನ ಪಾದಾರ್ಪಣೆ ಪಂದ್ಯದಲ್ಲೇ 80ನೇ ನಿಮಿಷದ ಸುಮಾರಿಗೆ ಮೊದಲ ಗೋಲು ಹೊಡೆದೆ. ಆ ದಿನವನ್ನು ನಾನು ಯಾವತ್ತೂ ಮರೆಯಲು ಸಾಧ್ಯವಿಲ್. ಅದು ನನ್ನ ಪಾಲಿಗೆ ಭಾರತ ತಂಡದ ಪರ ಆಡಿದ ಅದ್ಭುತ ದಿನ ಎಂದು," ಆ ದಿನಗಳನ್ನು ಚೆಟ್ರಿ ಅವರು ಮೆಲುಕು ಹಾಕಿದರು.












Click it and Unblock the Notifications