ಹ್ಯಾಟ್ರಿಕ್ ಪದಕದ ನಿರೀಕ್ಷೆಯಲ್ಲಿ ಮನು: ಶನಿವಾರ ಭಾರತದ ಸಂಪೂರ್ಣ ವೇಳಾ ಪಟ್ಟಿ
ಭಾರತದ ಸ್ಟಾರ್ ಕ್ರೀಡಾಟುಗಳು ಪ್ಯಾರೀಸ್ ಒಲಿಂಪಿಕ್ಸ್‌ನಲ್ಲಿ ಅಮೋಘ ಸಾಧನೆ ಮಾಡಿದ್ದಾರೆ. ಶುಕ್ರವಾರ ನಡೆದ ಸ್ಪರ್ಧೆಯಲ್ಲಿ ಅಬ್ಬರದ ಆಟವನ್ನು ಆಡಿದ ಆಟಗಾರರು ಎಲ್ಲರ ಚಿತ್ತ ಕದ್ದಿದ್ದಾರೆ. ಶನಿವಾರವೂ ಭಾರತೀಯ ಆಟಗಾರರು ಪದಕವನ್ನು ಬಾಚಿಕೊಳ್ಳುವ ಕನಸು ಹೊಂದಿದ್ದಾರೆ.
ಭಾರತದ ಸ್ಟಾರ್ ಬ್ಯಾಡ್ಮಿಂಟನ್ ಆಟಗಾರ ಲಕ್ಷ್ಯ ಸೇನ್ ಅವರು ಪುರುಷರ ಸಿಂಗಲ್ಸ್ ಸ್ಪರ್ಧೆಯಲ್ಲಿ ಸೆಮಿಫೈನಲ್ ಪ್ರವೇಶಿಸಿದ್ದಾರೆ. ಈ ಮೂಲಕ ಪದಕದ ಆಸೆಯನ್ನು ಚಿಗುರಿಸಿದ್ದಾರೆ. ಉಪಾಂತ್ಯ ಪಂದ್ಯವನ್ನು ಇವರು ಭಾನುವಾರ ಮಧ್ಯಾಹ್ನ ಆಡಲಿದ್ದಾರೆ. ಲಕ್ಷ್ಯ ಸೇನ್ ಪದಕದಿಂದ ಒಂದೇ ಗೆಲುವು ದೂರ ನಿಂತಿದ್ದಾರೆ.

ಈಗಾಗಲೇ ಈ ಒಲಿಂಪಿಕ್ಸ್‌ನಲ್ಲಿ ಎರಡು ಪದಕ ಗೆದ್ದಿರುವ ಭಾರತದ ಸ್ಟಾರ್ ಶೂಟರ್ ಮನು ಭಾಕರ್ ಇಂದು ಹ್ಯಾಟ್ರಿಕ್ ಪದಕದ ಕನಸಿನೊಂದಿಗೆ ಅಂಗಳಕ್ಕೆ ಪ್ರವೇಶಿಸಲಿದ್ದಾರೆ. ಇವರು ಮಹಿಳೆಯರ 25 ಮೀ ಪಿಸ್ತೂಲ್ ಫೈನಲ್‌ನಲ್ಲಿ ಮತ್ತೊಂದು ಪದಕವನ್ನು ಗೆಲ್ಲುವ ವಿಶ್ವಾಸವನ್ನು ಹೊಂದಿದ್ದಾರೆ. ಈ ಪಂದ್ಯ ಮಧ್ಯಾಹ್ನ 1 ಗಂಟೆಗೆ ಆರಂಭವಾಗಲಿದೆ. ಇನ್ನು ಆರ್ಚರಿಯಲ್ಲಿ ಭಾರತದ ಸ್ಟಾರ್ ಕ್ರೀಡಾ ಪಟು ದೀಪಿಕಾ ಕುಮಾರಿ ಪದಕದ ಕನಸಿನೊಂದಿಗೆ ಶನಿವಾರ ಅಂಗಳಕ್ಕೆ ಪ್ರವೇಶಿಸಲಿದ್ದಾರೆ.
ಭಾರತದ ಕ್ರೀಡಾಪಟುಗಳ ವೇಳಾ ಪಟ್ಟಿ
12.30 PM, ಪುರುಷರ ಗಾಲ್ಫ್
12.30 PM, ಪುರುಷರ ಸ್ಕೀಟ್ ಅರ್ಹತೆ
12.30 PM, ಮಹಿಳೆಯರ ಸ್ಕೀಟ್ ಅರ್ಹತೆ
01.00 PM, ಮಹಿಳೆಯರ 25 ಮೀ ಪಿಸ್ತೂಲ್ ಫೈನಲ್
01.50 PM, ಆರ್ಚರಿ, ಮಹಿಳೆಯರ ಸಿಂಗಲ್ಸ್
02.05 PM, ಆರ್ಚರಿ, ಮಹಿಳೆಯರ ಸಿಂಗಲ್ಸ್
03.35 PM, ಮಹಿಳೆಯರ ಡಿಂಗಿ ರೋಯಿಂಗ್
04.00 PM, ಸೀಲಿಂಗ್,
12.18 AM, ಪುರುಷರ ಬಾಕ್ಸಿಂಗ್ 71 ಕೆಜಿ ವಿಭಾಗದ ಕ್ವಾರ್ಟರ್-ಫೈನಲ್












Click it and Unblock the Notifications