Paris Olympics 2024: ಪದಕದ ಭರವಸೆ ಮೂಡಿಸಿದ ಆರ್ಚರಿ ತಂಡ; ಕ್ವಾರ್ಟರ್‍‌ಫೈನಲ್‌ಗೆ ಪ್ರವೇಶ

ಪ್ಯಾರಿಸ್ ಒಲಿಂಪಿಕ್ 2024ರ ಪಂದ್ಯಾವಳಿಗೆ ಇಂದು ಚಾಲನೆ ಸಿಗಲಿದ್ದು, ಪಂದ್ಯಾವಳಿ ಆರಂಭಕ್ಕೂ ಮುನ್ನವೆ ಭಾರತದ ಬಿಲ್ಲುಗಾರಿಕೆ (ಆರ್ಚರಿ) ತಂಡವು ಪದಕ ಗೆಲ್ಲುವ ಭರವಸೆ ಮೂಡಿಸಿದೆ.

ಭಾರತದ ಆರ್ಚರಿ ಪುರುಷರ ಮತ್ತು ಮಹಿಳೆಯರ ಎರಡೂ ತಂಡಗಳು ಕ್ವಾರ್ಟರ್‌ಫೈನಲ್‌ಗೆ ನೇರ ಅರ್ಹತೆಯನ್ನು ಪಡೆದುಕೊಂಡಿವೆ. ಆರಂಭಿಕ ದಿನದಂದು ತಂಡದ ಪ್ರದರ್ಶನವು ಐತಿಹಾಸಿಕ ಪದಕ ಗೆಲ್ಲುವ ಭರವಸೆಯನ್ನು ಮೂಡಿಸಿದೆ.

India s Archery Team Aims for Historic Wins at Paris Olympics

ಪ್ರಬಲವಾದ ಆರ್ಚರಿ ತಂಡವನ್ನೇ ಒಲಿಂಪಿಕ್ಸ್‌ಗೆ ಆಯ್ಕೆ ಮಾಡಲಾಗಿದ್ದು, ಎಲ್ಲಾ ಐದು ಸ್ಪರ್ಧೆಗಳಲ್ಲಿ ಪದಕ ಗೆಲ್ಲಲು ಸೆಣೆಸಲಿದೆ. ಪುರುಷರ ಮತ್ತು ಮಹಿಳೆಯರ ತಂಡ ಮತ್ತು ವೈಯಕ್ತಿಕ ಮತ್ತಯ ಮಿಶ್ರ ತಂಡಗಳು ಒಲಿಂಪಿಕ್ಸ್‌ನಲ್ಲಿ ಪದಕದ ಭೇಟೆಗೆ ಸಜ್ಜಾಗಿವೆ. ಆರಂಭಿಕ ದಿನದಂದು ತಂಡದ ಪ್ರಭಾವಿ ಪ್ರದರ್ಶನ, ಧೀರಜ್ ಬೊಮ್ಮದೇವರ ಅವರ ವೈಯಕ್ತಿಕ ಶ್ರೇಯಾಂಕ ಗಮನ ಸೆಳೆದಿದ್ದು, ಪದಕದ ಆಸೆ ಹೆಚ್ಚಿಸಿದೆ.

ಕ್ವಾರ್ಟರ್ ಫೈನಲ್‌ಗೆ ಅರ್ಹತೆ

ಮೊದಲ ದಿನವೇ ಭಾರತದ ಪುರುಷ ಮತ್ತು ಮಹಿಳಾ ಅರ್ಚರಿ ತಂಡ ಕ್ವಾರ್ಟರ್ ಫೈನಲ್‌ಗೆ ಅರ್ಹತೆ ಪಡೆದುಕೊಂಡಿದೆ. ಪುರುಷರ ತಂಡವು ಪ್ರಬಲವಾದ ದಕ್ಷಿಣ ಕೊರಿಯಾದ ತಂಡದ ಜೊತೆ ಕ್ವಾರ್ಟರ್ ಫೈನಲ್‌ನಲ್ಲಿ ಸ್ಪರ್ಧಿಸುವುದನ್ನು ತಪ್ಪಿಸಿಕೊಂಡಿದ್ದು, ಪದಕ ಗೆಲ್ಲುವ ಸಾಧ್ಯತೆ ಹೆಚ್ಚಿಸಿದೆ.

ಮೊದಲ ದಿನದ ಪ್ರದರ್ಶನದ ನಂತರ ಭಾರತವು ಬಿಲ್ಲುಗಾರಿಕೆಯಲ್ಲಿ ಪುರುಷರ ತಂಡ, ಮಹಿಳಾ ತಂಡ ಮತ್ತು ಪುರುಷರ ವೈಯಕ್ತಿಕ ವಿಭಾಗದಲ್ಲಿ ಮೂರು ಪದಕಗಳನ್ನು ನಿರೀಕ್ಷೆ ಮಾಡಲಾಗಿದೆ.

ಅಂಕಿತಾ ಭಕತ್ ಅವರ ಆಕರ್ಷಕ ಚೊಚ್ಚಲ ಪ್ರದರ್ಶನ ಮತ್ತು ಧೀರಜ್ ಬೊಮ್ಮದೇವರ ಅವರ ಸ್ಥಿರ ಪ್ರದರ್ಶನದಿಂದ ಭಾರತದ ಬಿಲ್ಲುಗಾರರು ಗಮನಾರ್ಹ ಫಾರ್ಮ್ ಅನ್ನು ತೋರಿಸಿದ್ದಾರೆ. ಮಹಿಳೆಯರ ವೈಯಕ್ತಿಕ ಶ್ರೇಯಾಂಕದ ಸುತ್ತಿನಲ್ಲಿ ಭಕತ್ ಅವರ 11 ನೇ ಸ್ಥಾನವು ಅತ್ಯುತ್ತಮ ಪ್ರದರ್ಶನವಾಗಿದ್ದು, ದೀಪಿಕಾ ಕುಮಾರಿ ಅವರನ್ನು ಮೀರಿಸಿದೆ.

ಧೀರಜ್ ಬೊಮ್ಮದೇವರ ಅವರು ಅತ್ಯುತ್ತಮ ಬಿಲ್ಲುಗಾರಿಕೆ ಪ್ರದರ್ಶಿಸುವ ಮೂಲಕ ಪುರುಷರ ವೈಯಕ್ತಿಕ ಶ್ರೇಯಾಂಕದಲ್ಲಿ ನಾಲ್ಕನೇ ಸ್ಥಾನ ಪಡೆದರು.

ಧೀರಜ್ ಬೊಮ್ಮದೇವರ, ತರುಣ್‌ದೀಪ್ ರೈ ಮತ್ತು ಪ್ರವೀಣ್ ಜಾಧವ್ ಅವರನ್ನೊಳಗೊಂಡ ಭಾರತೀಯ ಪುರುಷರ ತಂಡವು ತಂಡ ರ‍್ಯಾಂಕಿಂಗ್ ಸುತ್ತಿನಲ್ಲಿ ಮೂರನೇ ಸ್ಥಾನ ಪಡೆದು ಟರ್ಕಿ ಅಥವಾ ಕೊಲಂಬಿಯಾ ವಿರುದ್ಧ ಕ್ವಾರ್ಟರ್‌ಫೈನಲ್ ಸ್ಪರ್ಧೆ ಮಾಡುವುದನ್ನು ಖಚಿತಪಡಿಸಿಕೊಂಡಿದೆ.

ಅಂಕಿತಾ ಭಕತ್, ಕುಮಾರಿ ಮತ್ತು ಭಜನ್ ಕೌರ್ ಅವರನ್ನೊಳಗೊಂಡ ಮಹಿಳಾ ತಂಡವು ನಾಲ್ಕನೇ ಸ್ಥಾನವನ್ನು ಪಡೆದುಕೊಂಡಿತು, ಮುಂದಿನ ಸುತ್ತಿನಲ್ಲಿ ಫ್ರಾನ್ಸ್ ಅಥವಾ ನೆದರ್ಲೆಂಡ್ಸ್ ವಿರುದ್ಧ ಸೆಣೆಸಲಿದೆ.

ಧೀರಜ್ ಬೊಮ್ಮದೇವರ ಮೇಲೆ ಎಲ್ಲರ ಚಿತ್ತ

ಧೀರಜ್ ಬೊಮ್ಮದೇವರ ಅವರು ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾರತದ ಆರ್ಚರಿ ತಂಡದ ತಾರೆಯಾಗಿ ಹೊರಹೊಮ್ಮಿದ್ದಾರೆ, ವೈಯಕ್ತಿಕ ಶ್ರೇಯಾಂಕದ ಸುತ್ತಿನಲ್ಲಿ ನಾಲ್ಕನೇ ಸ್ಥಾನದೊಂದಿಗೆ ಸಂಭಾವ್ಯ ಐತಿಹಾಸಿಕ ಪದಕ ಗೆಲುವಿಗೆ ಭರವಸೆ ಮೂಡಿಸಿದ್ದಾರೆ.

ಮಿಶ್ರ ತಂಡ ಸ್ಪರ್ಧೆಯಲ್ಲಿ ಬೊಮ್ಮದೇವರ ಮತ್ತು ಭಕತ್ ಭಾಗವಹಿಸಲಿದ್ದಾರೆ. ಇವರಿಬ್ಬರು ಶ್ರೇಯಾಂಕದ ಸುತ್ತಿನಲ್ಲಿ ಐದನೇ ಸ್ಥಾನವನ್ನು ಗಳಿಸಿದರು, ಇಂಡೋನೇಷ್ಯಾ ವಿರುದ್ಧ ಪ್ರಿ ಕ್ವಾರ್ಟರ್‌ಫೈನಲ್‌ನಲ್ಲಿ ಮುಖಾಮುಖಿಯಾಗಲಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+