• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತೀಯ ಕ್ರಿಕೆಟರ್, ಕನ್ನಡತಿ ರಾಜೇಶ್ವರಿ ಗಾಯಕ್ವಾಡ್‌ಗೆ ಗೌರವ ಡಾಕ್ಟರೇಟ್‌

|
Google Oneindia Kannada News

ಬೆಂಗಳೂರು, ನವೆಂಬರ್ 16: ಭಾರತ ಮಹಿಳಾ ಕ್ರಿಕೆಟ್‌ ತಂಡದ ಆಟಗಾರ್ತಿ ಹಾಗೂ ಕನ್ನಡತಿಯಾಗಿರುವ ವಿಜಯಪುರದ ರಾಜೇಶ್ವರಿ ಗಾಯಕ್ವಾಡ್‌ಗೆ ಗೌರವ ಡಾಕ್ಟರೇಟ್‌ ದೊರೆತಿದೆ. ರಾಜೇಶ್ವರಿಗೆ ರಾಜಸ್ಥಾನದ ಉದಯಪುರ ಎಸ್‌ಪಿಎಸ್‌ಯು ವಿಶ್ವವಿದ್ಯಾಲಯ ಡಾಕ್ಟರೇಟ್ ನೀಡಿ ಭಾರತೀಯ ಸ್ಪಿನ್ನರ್‌ರನ್ನು ಗೌರವಿಸಿದೆ.

ಉದಯಪುರ ಎಸ್‌ಪಿಎಸ್‌ಯು ವಿಶ್ವವಿದ್ಯಾಲಯದಲ್ಲಿ ನಡೆದ ಘಟಿಕೋತ್ಸವದಲ್ಲಿ ಮಹಿಳಾ ಕ್ರಿಕೆಟರ್‌ಗೆ ರಾಜೇಶ್ವರಿ ಗಾಯಕವಾಡ್‌ಗೆ ಎಸ್‌ಪಿಎಸ್‌ಯು ವಿವಿಯ ಅಧ್ಯಕ್ಷ ಡಾ.ಪದ್ಮಕಲಿ ಬ್ಯಾನರ್ಜಿ ಹಾಗೂ ಡಾ.ನಿಧಿಪತಿ ಸಿಂಗಾನಿಯಾ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದ್ದಾರೆ. ಈ ಮೂಲಕ ಗೌರವ ಡಾಕ್ಟರೇಟ್ ಪಡೆದ ಭಾರತದ ಮೊದಲ ಮಹಿಳಾ ಕ್ರಿಕೆಟರ್‌ ಎಂಬ ಶ್ರೇಯಕ್ಕೆ ಪಾತ್ರರಾಗಿದ್ದಾರೆ.

ಬೆಳಗಾವಿ: ಕ್ರಿಕೆಟ್‌ ದೇವರ ಭೇಟಿ ನಂತರ ದುಪ್ಪಟ್ಟಾಯ್ತು ಚಹಾ ಅಂಗಡಿ ವ್ಯಾಪಾರ ಬೆಳಗಾವಿ: ಕ್ರಿಕೆಟ್‌ ದೇವರ ಭೇಟಿ ನಂತರ ದುಪ್ಪಟ್ಟಾಯ್ತು ಚಹಾ ಅಂಗಡಿ ವ್ಯಾಪಾರ

ಭಾರತ ತಂಡದ ಖಾಯಂ ಸದಸ್ಯೆಯಾಗಿರುವ ರಾಜೇಶ್ವರಿ 2014ರಲ್ಲಿ ಭಾರತ ಮಹಿಳಾ ತಂಡಕ್ಕೆ ಪದಾರ್ಪಣೆ ಮಾಡಿದ್ದರು. ಶ್ರೀಲಂಕಾ ವಿರುದ್ಧ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಗಾಯಕ್ವಾಡ್‌ 2 ಟೆಸ್ಟ್‌, 64 ಏಕದಿನ , 44 ಟಿ20 ಪಂದ್ಯಗಳಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದು, 158 ವಿಕೆಟ್‌ ಪಡೆದಿದ್ದಾರೆ.

ಎಡಗೈ ಸ್ಪಿನ್ನರ್ ಆಗಿರುವ ರಾಜೇಶ್ವರಿ ಇದೇ ವರ್ಷ ಇಂಗ್ಲೆಂಡ್‌ ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆದ ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲಿ ಬೆಳ್ಳಿ ಗೆದ್ದ ಭಾರತ ತಂಡದ ಸದಸ್ಯರಾಗಿದ್ದರು. ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲಿ ಇದೇ ಮೊದಲ ಬಾರಿಗೆ ಕ್ರಿಕೆಟ್‌ಗೆ ಅವಕಾಶ ನೀಡಲಾಗಿತ್ತು. ಮೊದಲ ಬಾರಿಗೆ ಫೈನಲ್ ಪ್ರವೇಶಿಸಿದರೂ ಫೈನಲ್‌ನಲ್ಲಿ ಇಂಗ್ಲೆಂಡ್ ತಂಡದೆದುರು ಸೋಲು ಕಂಡು ರನ್ನರ್ ಅಪ್ ಆಗಿತ್ತು.

2017ರ ಏಕದಿನ ವಿಶ್ವಕಪ್‌ನಲ್ಲಿ ಫೈನಲ್ ಪ್ರವೇಶಿಸಿದ್ದ ಭಾರತ ತಂಡದಲ್ಲೂ ರಾಜೇಶ್ವರಿ ಗಾಯಕ್ವಾಡ್‌ ಅವಕಾಶ ಪಡೆದಿದ್ದರು. ಅದರಲ್ಲೂ ಭಾರತ ತಂಡದ 9 ರನ್‌ಗಳ ರೋಚಕ ಸೋಲು ಕಂಡು ರನ್ನರ್ ಅಪ್‌ಗೆ ತೃಪ್ತಿಪಟ್ಟುಕೊಂಡಿತ್ತು.

English summary
Karntaka's Rajeshwari Gayakwad who represent indian women cricket team felicitated honorary doctorate by SPSU university, Udayapur,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X