
ಭಾರತದ ಗೆಲುವಿನ ಜೊತೆ ಗಮನ ಸೆಳೆದ ವಿರಾಟ್ ಕೊಹ್ಲಿ ಸೆಲಬ್ರೇಶನ್
ಹೈದರಾಬಾದ್, ಸೆ. 27: ಆಸ್ಟ್ರೇಲಿಯಾ ವಿರುದ್ಧ ನಿನ್ನೆ ರಾತ್ರಿ ಮುಕ್ತಾಯಗೊಂಡ ಟಿ20 ಸರಣಿಯನ್ನು ಭಾರತ ಗೆದ್ದಿದೆ. ಸೋಮವಾರ ನಡೆದ 3ನೇ ಟಿ0 ಪಂದ್ಯದಲ್ಲಿ ಭಾರತ 6 ವಿಕೆಟ್‌ಗಳಿಂದ ಜಯಭೇರಿ ಬಾರಿಸಿತು. ಈ ಮೂಲಕ 3 ಪಂದ್ಯಗಳ ಟಿ20 ಸರಣಿಯನ್ನು ಭಾರತ 2-1ರಿಂದ ಗೆದ್ದಿತು.
ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ ಮತ್ತು ಅಕ್ಷರ್ ಪಟೇಲ್ ಭಾರತದ ಗೆಲುವಿನ ರೂವಾರಿ ಎನಿಸಿದರು. ವಿರಾಟ್ ಕೊಹ್ಲಿ ಮತ್ತು ಸೂರ್ಯಕುಮಾರ್ ಯಾದವ್ ಇಬ್ಬರೂ 10 ಓವರ್‌ನಲ್ಲಿ ನೂರಕ್ಕೂ ಹೆಚ್ಚು ರನ್ ಜೊತೆಯಾಟ ಆಡಿ ಭಾರತದ ಗೆಲುವಿನ ಹಾದಿ ಸುಗಮಗೊಳಿಸಿದರು.
India squad for T20 World Cup : ಟಿ20 ವಿಶ್ವಕಪ್ 2022ಗಾಗಿ ಟೀಂ ಇಂಡಿಯಾ ಪ್ರಕಟ
48 ಬಾಲ್‌ನಲ್ಲಿ 63 ರನ್ ಗಳಿಸಿದ ವಿರಾಟ್ ಕೊಹ್ಲಿ ಬ್ಯಾಟಿಂಗ್ ಲಯ ಕಂಡುಕೊಂಡಿರುವುವುದು ಟೀಮ್ ಇಂಡಿಯಾಗೆ ಶುಭ ಸೂಚನೆಯಾಗಿದೆ. ಅವರಿಗೆ ಈ ಸರಣಿಯಲ್ಲಿ "ಅತಿ ಉತ್ಸಾಹದ ಆಟಗಾರ" ಪ್ರಶಸ್ತಿ ಕೊಡಲಾಯಿತು. ಪ್ರಶಸ್ತಿ ಸ್ವೀಕರಿಸಿದ ಬಳಿಕ ಅವರು ಮಾಡಿದ ಡ್ಯಾನ್ಸ್ ಕ್ರಿಕೆಟ್ ಪ್ರೇಮಿಗಳ ಮನಸ್ಸನ್ನು ಗೆದ್ದಿತ್ತು. ವಿರಾಟ್ ಕೊಹ್ಲಿ ಭರ್ಜರಿ ಫಾರ್ಮ್‌ಗೆ ಮರಳಿದ ಸಮಾಧಾನ ಅವರಲ್ಲಿ ನೆಲಸಿರುವುದು ಅವರ ಈ ಉತ್ಸಾಹವೇ ದ್ಯೋತಕ ಎನಿಸಿದೆ.
ದುಬೈನಲ್ಲಿ ನಡೆದ ಏಷ್ಯಾ ಕಪ್‌ನಲ್ಲೇ ವಿರಾಟ್ ಕೊಹ್ಲಿ ಫಾರ್ಮ್‌ಗೆ ಮರಳಿದ್ದರು. ಅದು ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲೂ ಮುಂದುವರಿದಿದೆ. ವಿರಾಟ್ ಕೊಹ್ಲಿ ಕಳಪೆ ಫಾರ್ಮ್‌ನ ಸಂಕೋಲೆಯಿಂದ ಕೊನೆಗೂ ಹೊರಬಿದ್ದಿದ್ದು, ಅವರ ಈ ಹೊಸ ಬ್ಯಾಟಿಂಗ್ ಲಯ ಬಹಳ ವರ್ಷಗಳ ಕಾಲ ಮುಂದುವರಿಯಲಿ ಎಂಬುದು ಭಾರತೀಯ ಕ್ರಿಕೆಟ್ ಪ್ರೇಮಿಗಳ ಆಶಯ.
ದಕ್ಷಿಣ ಆಫ್ರಿಕಾ ವಿರುದ್ಧದ T20 ಸರಣಿಯಿಂದ ಹೊರಗುಳಿದ ಶಮಿ
ಯಾದವ್ ಆಟಕ್ಕೆ ಕೊಹ್ಲಿ ದಂಗು
ಸೋಮವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ 20 ಓವರ್‌ನಲ್ಲಿ 7 ವಿಕೆಟ್ ನಷ್ಟಕ್ಕೆ 186 ರನ್ ಗಳಿಸಿತು. ಕ್ಯಾಮರನ್ ಗ್ರೀನ್ ಮತ್ತು ಟಿಮ್ ಡೇವಿಡ್ ಅರ್ಧಶತಕಗಳನ್ನು ಗಳಿಸಿದರು. ಭಾರತದ ಪರ ಅಕ್ಷರ್ ಪಟೇಲ್ 33 ರನ್‌ಗೆ 3 ವಿಕೆಟ್ ಪಡೆದರು.
ಗೆಲ್ಲಲು 187 ರನ್ ಗುರಿ ಪಡೆದ ಭಾರತ 30 ರನ್‌ಗೆ 2 ವಿಕೆಟ್ ಕಳೆದುಕೊಂಡಿತಾದರೂ ವಿರಾಟ್ ಕೊಹ್ಲಿ ಮತ್ತು ಸೂರ್ಯಕುಮಾರ್ ಯಾದವ್ 3ನೇ ವಿಕೆಟ್‌ಗೆ 104 ರನ್ ಜೊತೆಯಾಟ ಆಡಿದರು. ಯಾದವ್ ಕೇವಲ 36 ರನ್‌ಗಳಲ್ಲಿ 69 ರನ್ ಗಳಿಸಿದರು. ಯಾದವ್ ಆಟ ಕಂಡು ಇನ್ನೊಂದು ಬದಿಯಲ್ಲಿ ಕೊಹ್ಲಿಯೇ ಮೂಕವಿಸ್ಮಿತರಾಗಿದ್ದರು. ಯಾದವ್ ಆಡುವಾಗ ಡಗ್ ಔಟ್‌ನಲ್ಲಿ ನಿಂತಿದ್ದಂತೆ ಭಾಸವಾಗುತ್ತಿತ್ತು ಎಂದು ಪಂದ್ಯದ ಬಳಿಕ ವಿರಾಟ್ ಕೊಹ್ಲಿ ಹೇಳಿಕೊಂಡರು.

ಸೂರ್ಯಕುಮಾರ್ ಯಾದವ್ ಔಟ್ ಆದ ಬಳಿಕ ವಿರಾಟ್ ಕೊಹ್ಲಿ ಆಕ್ರಮಣಕಾರಿ ಆಟವಾಡತೊಡಗಿದರು. ಅವರು ಮತ್ತು ಹಾರ್ದಿಕ್ ಪಾಂಡ್ ಇಬ್ಬರೂ ಭಾರತವನ್ನು ಗೆಲುವಿನತ್ತ ಕೊಂಡೊಯ್ದರು. 20ನೇ ಓವರ್‌ನ ಎರಡನೇ ಎಸೆತದಲ್ಲಿ ಕೊಹ್ಲಿ ಔಟಾದಾಗ ಭಾರತ ಗೆಲುವಿನ ಅಂಚಿಗೆ ಬಂದಿತ್ತು. ಹಾರ್ದಿಕ್ ಪಾಂಡ್ಯ ಮತ್ತು ದಿನೇಶ್ ಕಾರ್ತಿಕ್ ಕ್ರೀಸ್‌ನಲ್ಲಿದ್ದರಿಂದ ಭಾರತಕ್ಕೆ ಸೋಲಿನ ಭೀತಿ ಎದುರಾಗಲಿಲ್ಲ. ಪಾಂಡ್ಯ ಗೆಲುವಿನ ರನ್ ಹೊಡೆದರು.
ಈ ಟಿ20 ಸರಣಿಯಲ್ಲಿ ಆಸ್ಟ್ರೇಲಿಯಾ ಮೊದಲ ಪಂದ್ಯ ಗೆದ್ದಿತಾದರೂ ನಂತರದ ಎರಡು ಪಂದ್ಯಗಳನ್ನು ಭಾರತ ಜಯಿಸಿ ಸರಣಿಯನ್ನು ವಶಪಡಿಸಿಕೊಂಡಿತು.
ಸೌತ್ ಆಫ್ರಿಕಾ ವಿರುದ್ಧ ಸರಣಿ
ಇದೇ ಅಕ್ಟೋಬರ್ 16ರಿಂದ ನವೆಂಬರ್ 13ರವರೆಗೂ ಆಸ್ಟ್ರೇಲಿಯಾದಲ್ಲಿ ಟಿ20 ವಿಶ್ವಕಪ್ ನಡೆಯಲಿದೆ. ಅದರ ಅಭ್ಯಾಸದ ಭಾಗವಾಗಿ ಭಾರತ ವಿವಿಧ ತಂಡಗಳ ಜೊತೆ ಕ್ರಿಕೆಟ್ ಸರಣಿ ಆಡುತ್ತಿದೆ. ಈಗ ಸೌತ್ ಆಫ್ರಿಕಾ ವಿರುದ್ಧ ಟೀಮ್ ಇಂಡಿಯಾ ಟಿ20 ಮತ್ತು ಓಡಿಐ ಸರಣಿಗಳನ್ನು ಆಡಲಿದೆ. ಸೆಪ್ಟೆಂಬರ್ 28ರಂದು ತಿರುವನಂತಪುರಂನಲ್ಲಿ ಮೊದಲ ಟಿ20 ಪಂದ್ಯ ನಡೆಯಲಿದೆ. 3 ಟಿ20 ಮತ್ತು 3 ಏಕದಿನ ಕ್ರಿಕೆಟ್ ಪಂದ್ಯಗಳನ್ನು ಈ ಎರಡು ತಂಡಗಳು ಆಡಲಿವೆ.
ಅಕ್ಟೋಬರ್ 11ರಂದು ಸೌತ್ ಅಫ್ರಿಕಾ ವಿರುದ್ಧ ಸರಣಿ ಮುಗಿಸಿದ ಬಳಿಕ ಟೀಮ್ ಇಂಡಿಯಾ ನೇರವಾಗಿ ಆಸ್ಟ್ರೇಲಿಯಾಗೆ ತೆರಳಲಿದೆ. ಅಲ್ಲಿ ವಿಶ್ವಕಪ್‌ಗೆ ಮುನ್ನ 2 ವಾರ್ಮಪ್ ಪಂದ್ಯಗಳನ್ನು ಆಡುತ್ತಿದೆ. ವಿಶ್ವಕಪ್‌ನಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಮತ್ತೊಮ್ಮೆ ಮುಖಾಮುಖಿಯಾಗುತ್ತಿರುವುದು ವಿಶೇಷ.
(ಒನ್ಇಂಡಿಯಾ ಸುದ್ದಿ)
No wonder he is the " energetic player of the series " 😂😂pic.twitter.com/Bi3SJkQk2b
— Yashvi (@BreatheKohli) September 26, 2022