ಶ್ರೇಯಾಂಕಾ ಪಾಟೀಲ್ ದೋಣಿ ಸವಾರಿ, ನದಿಯ ಮೇಲೆ ಕೂತು ‘ಟಗರು ಪುಟ್ಟಿ’ ಹೇಳಿದ್ದು ಏನು?
ಆರ್‌ಸಿಬಿ ತಂಡದ ಬೆಡಗಿ, ಭಾರತ ತಂಡದ ಬೆಸ್ಟ್ ಕ್ರಿಕೆಟರ್ & ನಮ್ಮ ಕನ್ನಡತಿ ಶ್ರೇಯಾಂಕಾ ಪಾಟೀಲ್ ಏನೇ ಮಾಡಿದರೂ ಈಗ ದೊಡ್ಡ ಸುದ್ದಿಯಾಗುತ್ತಿದೆ. ಅಂದಹಾಗೆ ಶ್ರೇಯಾಂಕಾಗೆ ಈಗ ಮಂಡ್ಯದಿಂದ ಹಿಡಿದು ಇಂಡಿಯಾ ಪೂರ್ತಿ ಅಭಿಮಾನಿಗಳು ಹುಟ್ಟಿಕೊಂಡಿದ್ದಾರೆ. ಈ ಕಾರಣಕ್ಕೆ ಶ್ರೇಯಾಂಕಾ ಪಾಟೀಲ್ ಫುಲ್ ಟ್ರೆಂಡ್ ಹುಟ್ಟುಹಾಕಿದ್ದಾರೆ. ಇಂತಿಪ್ಪ ಶ್ರೇಯಾಂಕಾ ಈಗ ದಿಢೀರ್ ದೋಣಿ ಹತ್ತಿ, ಸ್ನೇಹದ ಕಡಲಲ್ಲಿ ನೆನಪಿನ ದೋಣಿಯಲಿ ಅಂತಾ ಸಾಂಗ್‌ನ ಬೇರೆ ಹಾಡಿದ್ದಾರೆ! ಆ ವಿಡಿಯೋ ನೋಡಲು ಮುಂದೆ ಓದಿ.
ಹೌದು, ಭಾರತ ಕ್ರಿಕೆಟ್ ತಂಡದ ಮಹಿಳಾ ಆಟಗಾರರು ಇದೀಗ ಬಾಂಗ್ಲಾದೇಶಕ್ಕೆ ತಲುಪಿದ್ದು ಅಲ್ಲಿ ಬಾಂಗ್ಲಾ ತಂಡವನ್ನು ಬಗ್ಗು ಬಡಿಯಲು ಸಜ್ಜಾಗಿದ್ದಾರೆ. ಭಾರತ & ಬಾಂಗ್ಲಾದೇಶದ ನಡುವೆ 5 ಪಂದ್ಯಗಳ ಟಿ20 ಸರಣಿ ನಡೆಯುತ್ತಿದ್ದು, ಈಗಾಗಲೇ ಭಾರತ ತಂಡ 2 ಮ್ಯಾಚ್ ಗೆದ್ದು ಬೀಗಿದೆ. ಈ ಮೂಲಕ ಸರಣಿ ಗೆಲ್ಲಲು ಸಜ್ಜಾಗಿದೆ. ಇದೇ ಸಮಯದಲ್ಲಿ ಟೀಂ ಇಂಡಿಯಾ ಹುಡುಗಿಯರು ಸ್ವಲ್ಪ ರಿಲ್ಯಾಕ್ಸ್ ಮೂಡ್‌ಗೆ ಜಾರಿದ್ದು, ದೋಣಿ ಸವಾರಿ ಮಾಡಿದ್ದಾರೆ. ಇದೇ ವೇಳೆ ಶ್ರೇಯಾಂಕಾ ಪಾಟೀಲ್ ಕೂಡ ತಮ್ಮ ತಂಡದ ಆಟಗಾರ್ತಿಯರ ಜೊತೆಗೆ ದೋಣಿಯ ಮೇಲೆ ಕೂತು ರೈಡಿಂಗ್ ಮಾಡಿರುವ ವಿಡಿಯೋ ವೈರಲ್ ಆಗುತ್ತಿದ್ದು, ವಿಡಿಯೋ ನೋಡಲು ಮುಂದೆ ಓದಿ.

ಶ್ರೇಯಾಂಕಾ ಏನೇ ಮಾಡಿದರೂ ಟ್ರೆಂಡ್!
ಭಾರತ ಕ್ರಿಕೆಟ್ ತಂಡದ ಕ್ಯಾಪ್ಟನ್ ಸ್ಮೃತಿ ಮಂದಾನ ಮತ್ತು ಇತರ ಆಟಗಾರ್ತಿಯರ ಜೊತೆಗೆ ಶ್ರೇಯಾಂಕಾ ಪಾಟೀಲ್ ಬೋಟ್ ರೈಡ್ ಮಾಡಿದ್ದಾರೆ. ಬಾಂಗ್ಲಾದೇಶದ ನದಿ ಒಂದರ ಮೇಲೆ ಬೋಟ್ ಮೇಲೆ ಕೂತು ನಿಸರ್ಗದ ಅಂದ ಸವಿಯುತ್ತಿರುವ ಶ್ರೇಯಾಂಕಾ ಪಾಟೀಲ್ ವಿಡಿಯೋ ಸಖತ್ ವೈರಲ್ ಆಗುತ್ತಿದೆ. ಹಾಗೇ ಜನರು ಕೂಡ ಈ ವಿಡಿಯೋ ನೋಡಿ ಫುಲ್ ಖುಷಿಯಾಗಿ ರೆಸ್ಪಾನ್ಸ್ ಮಾಡುತ್ತಿದ್ದಾರೆ. ಹಾಗೇ ಶ್ರೇಯಾಂಕಾ ಪಾಟೀಲ್ ಅವರಿಗೆ ಅಭಿಮಾನಿಗಳು ಇದೀಗ ಆಲ್ ದಿ ಬೆಸ್ಟ್ ಅಂತಾ ವಿಶ್ ಕೂಡ ಮಾಡುತ್ತಿದ್ದಾರೆ. ಒಟ್ಟನಲ್ಲಿ ಶ್ರೇಯಾಂಕಾ ಪಾಟೀಲ್‌ಗೆ ಕೋಟ್ಯಂತರ ಅಭಿಮಾನಿಗಳು ಹುಟ್ಟಿಕೊಂಡಿದ್ದು, ಏನೇ ಮಾಡಿದರೂ ಟ್ರೆಂಡ್‌ನಲ್ಲಿ ಇದ್ದಾರೆ.
ಕ್ರಿಕೆಟ್ ಅಂಗಳದಲ್ಲಿ ಫುಲ್ ಮಿಂಚಿಂಗ್!
ಶ್ರೇಯಾಂಕಾ ಪಾಟೀಲ್ ಇನ್ನೂ ಚಿಕ್ಕ ಹುಡುಗಿ, ಅವರ ವಯಸ್ಸು ಈಗಿನ್ನು 21 ವರ್ಷ. ಆದರೂ ಅವರು ಮಾಡಿರುವ ಸಾಧನೆ ಇಡೀ ದೇಶಕ್ಕೆ ಇಷ್ಟವಾಗಿದೆ. ಆರ್‌ಸಿಬಿ ಮಾತ್ರ ಅಲ್ಲ, ಇಂಡಿಯನ್ ಕ್ರಿಕೆಟ್ ತಂಡಕ್ಕೂ ಆಡಿದ್ದಾರೆ ನಮ್ಮ ಕನ್ನಡತಿ ಶ್ರೇಯಾಂಕಾ. ಚಿಕ್ಕ ವಯಸ್ಸಿಗೆ, ಅವರು ದೊಡ್ಡ ಮಟ್ಟದಲ್ಲಿ ಹೆಸರನ್ನು ಸಂಪಾದಿಸಿದ್ದಾರೆ. ಹಾಗೇ ಕೋಟಿ ಕೋಟಿ ಅಭಿಮಾನಿಗಳ ಗಳಿಸಿದ್ದಾರೆ, ನಮ್ಮ ಕನ್ನಡತಿ ಶ್ರೇಯಾಂಕಾ ಪಾಟೀಲ್. ಹಾಗೂ ಮೂಲತಃ ಕಲಬುರಗಿ ಜಿಲ್ಲೆಯ ಶ್ರೇಯಾಂಕಾ ಪಾಟೀಲ್ ಅವರು ಬೆಂಗಳೂರಿನಲ್ಲೇ ಹುಟ್ಟಿ ಬೆಳೆದಿದ್ದು, ಈಗ ಕ್ರಿಕೆಟ್ ಅಂಗಳದಲ್ಲಿ ಮಿಂಚು ಹರಿಸುತ್ತಿದ್ದಾರೆ.












Click it and Unblock the Notifications