Shreyanka Patil: ರಾಜಸ್ಥಾನ ರಾಯಲ್ಸ್ ತಂಡ ಸೇರಿದ ಕನ್ನಡತಿ ಶ್ರೇಯಾಂಕಾ ಪಾಟೀಲ್
ಟೀಮ್ ಇಂಡಿಯಾದ ಆಟಗಾರರು ಸಾಮಾನ್ಯವಾಗಿ ಬೇರೆ ಲೀಗ್‌ಗಳಲ್ಲಿ ಆಡುವುದು ಅಪರೂಪ. ಈಗ ಕೆಲವು ಲೀಗ್‌ಗಳಲ್ಲಿ ಭಾರತದ ಆಟಗಾರರು ಕಾಣಿಸಿಕೊಳ್ಳುತ್ತಿದ್ದಾರೆ. ಅದ್ರಲ್ಲೂ ಮಹಿಳಾ ಆಟಗಾರ್ತಿಯರು ಮಹಿಳಾ ಬಿಗ್ ಬ್ಯಾಷ್ ಲೀಗ್‌ನಲ್ಲಿ ಆಡಿದ್ದನ್ನು ನೀವು ನೋಡಿರಬಹುದು. ಈಗ ಇದೇ ಸಾಲಿಗೆ ಮತ್ತೊಂದು ಲೀಗ್ ಸೇರ್ಪಡೆ ಆಗಿದೆ. ಕೆರಿಬಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಆಟಗಾರ್ತಿಯರು ಆಡುವುದನ್ನು ಕಾಣಬಹುದಾಗಿದೆ.
ಕರ್ನಾಟಕದ ಸ್ಟಾರ್ ಸ್ಪಿನ್ ಆಟಗಾರ್ತಿ ಶ್ರೇಯಾಂಕಾ ಪಾಟೀಲ್ ಸಹ ಮಹಿಳಾ ಕೆರೆಬಿಯನ್ ಲೀಗ್‌ನಲ್ಲಿ (ಡಬ್ಲ್ಯುಸಿಪಿಎಲ್) ಆಡಲಿದ್ದಾರೆ. ಇವರು ಕಳೆದ ಒಂದು ವರ್ಷಗಳಿಂದ ಗಾಯದ ಸಮಸ್ಯೆಯಿಂದ ತಂಡದಿಂದ ಹೊರಗಿದ್ದರು. ಶ್ರೇಯ್ಯಾಂಕ್ ಪಾಟೀಲ್, ಕೆರಿಬಿಯನ್ ಪ್ರೀಮಿಯರ್ ಲೀಗ್‌ನಲ್ಲಿ ರಾಜಸ್ಥಾನ್ ರಾಯಲ್ಸ್ ತಂಡ ಬಾರ್ಬಡೋಸ್ ರಾಯಲ್ಸ್ ಪರ ಆಡಲಿದ್ದಾರೆ. ಇವರು ಕಳೆದ ಆವೃತ್ತಿಯ ಡಬ್ಲ್ಯುಸಿಪಿಎಲ್‌ನಲ್ಲಿ ಆಡಿರಲಿಲ್ಲ. 2023ರಲ್ಲಿ ಗಯಾನಾ ವಾರಿಯರ್ಸ್ ತಂಡ ಫೈನಲ್ ತಲುಪಿರುವಲ್ಲಿ ಶ್ರೇಯಾಂಕ ಕೊಡುಗೆ ಅಪಾರ.

ಬಾರ್ಬಡೋಸ್ ರಾಯಲ್ಸ್ ಪರ ಕಣಕ್ಕೆ ಇಳಿಯಲಿರುವ ನಾಲ್ಕನೇ ವಿದೇಶಿ ಆಟಗಾರ್ತಿ ಎಂಬ ಶ್ರೇಯ ಶ್ರೇಯಾಂಕಾ ಪಾಟೀಲ್ ಅವರದ್ದಾಗಿದೆ. ಇವರನ್ನು ಬಿಟ್ಟು ಈ ತಂಡದಲ್ಲಿ ಶ್ರೀಲಂಕಾದ ಚಮರಿ ಅಟಪಟ್ಟು, ಹೇಲಿ ಮ್ಯಾಥ್ಯೂಸ್ ಸಹ ಈ ತಂಡದ ಭಾಗವಾಗಿದ್ದಾರೆ. ಶ್ರೇಯಾಂಕಾ ಪಾಟೀಲ್ ಆಗಮನದಿಂದ ನಿಶ್ಚಿತವಾಗಿ ಬಾರ್ಬಡೋಸ್ ತಂಡದ ಬೌಲಿಂಗ್ ವಿಭಾಗ ಬಲ ಬಂದಂತೆ ಆಗಿದೆ.
ರಾಯಲ್ಸ್ ತಂಡಕ್ಕೆ ಬಲ
ಶ್ರೇಯಾಂಕಾ ಪಾಟೀಲ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 2024ರಲ್ಲಿ ಚಾಂಪಿಯನ್ ಪಟ್ಟವನ್ನು ಅಲಂಕರಿಸುವಲ್ಲಿ ಪ್ರಮುಖ ಕೊಡುಗೆ ನೀಡಿದ್ದರು. ಇದಾದ ಬಳಿಕ ಇವರು ಭಾರತದ ಪರವೂ ಕೆಲವೇ ಪಂದ್ಯಗಳನ್ನು ಆಡಿದ್ದರು. ಗಾಯದ ಬಳಿಕ ಕಂಬ್ಯಾಕ್ ಮಾಡಲು ಕಾತುರಾಗಿರುವ ಶ್ರೇಯಾಂಕಾ, ಮಹಿಳಾ ಕೆರಿಬಿಯನ್ ಲೀಗ್‌ನಲ್ಲಿ ಅಬ್ಬರಿಸಲು ಪ್ಲ್ಯಾನ್ ಮಾಡಿಕೊಂಡಿದ್ದಾರೆ.

ಮಹಿಳಾ ಕೆರಿಬಿಯನ್ ಲೀಗ್‌ನಲ್ಲಿ 3 ಭಾರತೀಯರು
ಶ್ರೇಯಾಂಕ ಪಾಟೀಲ್ ಹೊರತುಪಡಿಸಿ, ಶಿಖಾ ಪಾಂಡೆ ಮತ್ತು ಸಲೋನಿ ಡಂಗೋರ್ ಮಹಿಳಾ ಕೆರಿಬಿಯನ್ ಪ್ರೀಮಿಯರ್ ಲೀಗ್ 2025 ರಲ್ಲಿ ಆಡಲಿರುವ ಇಬ್ಬರು ಭಾರತೀಯ ಆಟಗಾರ್ತಿಯರಾಗಿದ್ದಾರೆ. ಸೆಪ್ಟೆಂಬರ್ 6 ರಿಂದ ಮಹಿಳಾ ಕೆರಿಬಿಯನ್ ಪ್ರೀಮಿಯರ್ ಲೀಗ್ 2025 ಆರಂಭವಾಗಲಿದ್ದು, ಸೆಪ್ಟೆಂಬರ್ 17 ರಂದು ಕೊನೆಯಾಗಲಿದೆ. ಶ್ರೇಯಾಂಕಾ ಪಾಟೀಲ್ ಈಗಾಗಲೇ ಎರಡು ಬಾರಿ ಬಾರ್ಬಡೋಸ್ ರಾಯಲ್ಸ್ ಪರ ಆಡಿದ್ದಾರೆ. ಮಹಿಳಾ ಕೆರಿಬಿಯನ್ ಲೀಗ್‌ನಲ್ಲಿ ಬಾರ್ಬಡೋಸ್ ರಾಯಲ್ಸ್ ಮೂರು ಬಾರಿ ಫೈನಲ್ ತಲುಪಿದೆ.
ಶ್ರೇಯಾಂಕಾ ಸಾಧನೆ
22 ವರ್ಷದ ಕನ್ನಡತಿ ಶ್ರೇಯಾಂಕಾ ಈಗಾಗಲೇ ಭಾರತದ ಪರ ಆಡಿದ್ದಾರೆ. ಇವರು 3 ಏಕದಿನ ಹಾಗೂ 16 ಟಿ20 ಪಂದ್ಯಗಳನ್ನು ಆಡಿ ಸೈ ಎನಿಸಿಕೊಂಡಿದ್ದಾರೆ. ಒಟ್ಟಾರೆಯಾಗಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 25 ವಿಕೆಟ್ ಪಡೆದಿದ್ದಾರೆ.
ಬಾರ್ಬಡೋಸ್ ರಾಯಲ್ಸ್: ಹೇಲಿ ಮ್ಯಾಥ್ಯೂಸ್, ಚಿನೆಲ್ಲೆ ಹೆನ್ರಿ, ಅಫಿ ಫ್ಲೆಚರ್, ಆಲಿಯಾ ಅಲೀನ್, ಕಿಸಿಯಾ ನೈಟ್, ಸ್ಟೆಫಿ ಸೂಗ್ರಿಮ್, ಶಾಮಿಲಿಯಾ ಕಾನೆಲ್, ಶೆನೆಟಾ ಗ್ರಿಮ್ಮಂಡ್, ಕಿಯಾನಾ ಜೋಸೆಫ್, ಟ್ರಿಶನ್ ಹೋಲ್ಡರ್, ನೈಜಾನಿ ಕಂಬರ್‌ಬ್ಯಾಚ್, ಕೋರ್ಗ್‌ಬ್ಯಾತ್, ಗೆರ್ಗ್‌ಬ್ಯಾತ್ ವೀ, ಗೆರ್ಗ್‌ಪಾತ್ ವೀ ಶ್ರೇಯಾಂಕಾ ಪಾಟೀಲ್












Click it and Unblock the Notifications