‘ಸೆಡೆ’ ಆಂಗ್ಲರಿಗೆ ‘ವಡೆ’ ತಿನ್ನಿಸಿದ ಭಾರತ!
ಭಾರತ ಕ್ರಿಕೆಟ್ ತಂಡ ಮತ್ತೊಮ್ಮೆ ಇಡೀ ಜಗತ್ತೇ ತಿರುಗಿ ನೋಡುವಂತೆ ಆಟ ಆಡಿದೆ. ಈಗ ಇಂಗ್ಲೆಂಡ್ & ಭಾರತ ನಡುವಿನ 4ನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾಗೆ ಭರ್ಜರಿಯಾದ ಗೆಲುವು ಸಿಕ್ಕಿದೆ. ಅದರಲ್ಲೂ 'ಸೆಡೆ' ಆಂಗ್ಲರಿಗೆ 'ವಡೆ' ತಿನ್ನಿಸಿದ ಭಾರತ! ಅಂತಾ ಇದೀಗ, ಭಾರತದ ಕ್ರಿಕೆಟ್ ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ.
ಭಾರತದ ಬೌಲಿಂಗ್ ವಿಭಾಗ ಅದೆಷ್ಟು ಖಡಕ್ ಆಗಿದೆ ಅನ್ನೋದಕ್ಕೆ ಇಂಗ್ಲೆಂಡ್ ತಂಡದ ವಿರುದ್ಧ ನಡೆದ 2ನೇ ಇನ್ನಿಂಗ್ಸ್ ಸಾಕ್ಷಿ ಆಗಿತ್ತು. ಭಾರತ VS ಇಂಗ್ಲೆಂಡ್ ಕ್ರಿಕೆಟ್ ತಂಡಗಳ ನಡುವಿನ 4ನೇ ಟೆಸ್ಟ್ ಮ್ಯಾಚ್‌ನಲ್ಲಿ ಇಂಗ್ಲೆಂಡ್ ಕ್ರಿಕೆಟ್ ತಂಡ ಧೂಳಿಪಟವಾಗಿತ್ತು. 2ನೇ ಇನ್ನಿಂಗ್ಸ್‌ನಲ್ಲಿ ಕೇವಲ 145 ರನ್‌ಗೆ ತನ್ನ ಎಲ್ಲಾ ವಿಕೆಟ್ ಕಳೆದುಕೊಂಡು, ಭಾರತದ ವಿರುದ್ಧ ಮಂಡಿಯೂರಿತ್ತು. ಈ ನಡುವೆ ಭಾರತ ತಂಡ ಬ್ಯಾಟಿಂಗ್‌ನಲ್ಲಿ ಕೂಡ ತನ್ನ ತಾಕತ್ ಏನು ಅನ್ನೋದನ್ನ ಜಗತ್ತಿಗೆ ತೋರಿಸಿದೆ.

ಗೆದ್ದ ಭಾರತ, ಸೋತ ಆಂಗ್ಲರು
ಇಂಗ್ಲೆಂಡ್ ತಂಡದ ವಿರುದ್ಧ ಭಾರತ ಈಗಾಗಲೇ ಸಾಲು ಸಾಲು ಜಯವನ್ನ ದಾಖಲಿಸಿ ಮಿಂಚಿದೆ ಅದೇ ರೀತಿ ಈಗ 4ನೇ ಟೆಸ್ಟ್ ಪಂದ್ಯದಲ್ಲಿ ಕೂಡ ಭಾರತ ಭರ್ಜರಿ ಗೆಲುವು ದಾಖಲಿಸಿದೆ. ಕೇವಲ 192 ರನ್ ಗುರಿ ನೀಡಿದ್ದ ಇಂಗ್ಲೆಂಡ್ ಈಗ ನೆಲಕಚ್ಚಿದೆ. ನಿನ್ನೆ ವಿಕೆಟ್ ನಷ್ಟವಿಲ್ಲದೆ 40 ರನ್ ಗಳಿಸಿ ಆಟ ಮುಗಿಸಿ, ಇಂದು ಆಟ ಆರಂಭಿಸಿದ ಭಾರತ ತಂಡಕ್ಕೆ ಆರಂಭದಲ್ಲಿಯೆ ಎಲ್ಲವೂ ಉತ್ತಮವಾಗಿತ್ತು. ಆದರೆ 80 ರನ್ ದಾಟಿದ ನಂತರ, ಭಾರತ ತಂಡ ಸಾಲು ಸಾಲು ವಿಕೆಟ್ ಕಳೆದುಕೊಂಡ ಪರಿಣಾಮ ಭಾರಿ ಸಂಕಷ್ಟಕ್ಕೆ ಸಿಲುಕಿತ್ತು.
ನೆರವಿಗೆ ಬಂದ ಗಿಲ್, ಜುರೆಲ್!
ಭಾರತ ತಂಡ ನೋಡ ನೋಡುತ್ತಲೇ 5 ವಿಕೆಟ್ ಕಳೆದುಕೊಂಡು ಭಾರಿ ಸಂಕಷ್ಟಕ್ಕೆ ಸಿಲುಕಿ ಒದ್ದಾಡಿತ್ತು. ಆಗಲೇ ಎಂಟ್ರಿ ಕೊಟ್ಟಿದ್ದು ಧ್ರುವ್ ಜುರೆಲ್. ಮೊದಲ ಇನ್ನಿಂಗ್ಸ್‌ನಲ್ಲಿ ಕೂಡ ಭಾರತೀಯ ಕ್ರಿಕೆಟ್ ತಂಡಕ್ಕೆ ನೆರವಾಗಿದ್ದ ಧ್ರುವ್ ಜುರೆಲ್, ಇದೀಗ 2ನೇ ಇನ್ನಿಂಗ್ಸ್‌ನಲ್ಲೂ ಭಾರತಕ್ಕೆ ನೆರವಾದರು. ಹೀಗೆ ಶುಭಮನ್ ಗಿಲ್ & ಧ್ರುವ್ ಜುರೆಲ್ ಒಟ್ಟಾಗಿ ಸೇರಿ ಭರ್ಜರಿ 72 ರನ್‌ಗಳ ಜೊತೆಯಾಟ ನೀಡಿ ಭಾರತ ತಂಡವನ್ನು ಗೆಲುವಿನ ದಡ ಮುಟ್ಟಿಸಿದರು. ಈ ಮೂಲಕ ಭಾರತ ಕ್ರಿಕೆಟ್ ತಂಡ ಇಂಗ್ಲೆಂಡ್ ವಿರುದ್ಧ ಮತ್ತೊಂದು ಗೆಲುವು ಸಾಧಿಸಿದೆ.

124 ಬಾಲ್ ಆಡಿದ್ದ ಶುಭಮನ್ ಗಿಲ್ 52 ರನ್ ಚಚ್ಚಿದರು, ಗಿಲ್ ಆಡಿದ ಆಟದಲ್ಲಿ ಒಟ್ಟು 2 ಸಿಕ್ಸರ್ ಮಾತ್ರ ಬಂದವು. ಹಾಗೇ 77 ಬಾಲ್ ಆಡಿ 75 ನಿಮಿಷ ಆಟ ಆಡಿದ ಜುರೇಲ್‌ಗೆ ಭರ್ಜರಿ 39 ರನ್ ಒಲಿದು ಬಂತು. ಈ ಮೂಲಕ ಧ್ರುವ್ ಜುರೇಲ್ ಈ ಪಂದ್ಯದಲ್ಲಿ ಕೇವಲ 2 ಬೌಂಡರಿ ಬಾರಿಸಿ ಆಂಗ್ಲರನ್ನ ಕಾಡಿದರು. ಭಾರತ ತಂಡ 5 ವಿಕೆಟ್ ಅಂತರದಲ್ಲಿ ಇದೀಗ ಗೆಲುವಿನ ನಗೆ ಬೀರಲು ಕಾರಣರಾದರು.












Click it and Unblock the Notifications