India vs West Indies: 406, 43.3.. ಏಕದಿನ ಇತಿಹಾಸದಲ್ಲೇ ಹೊಸ ದಾಖಲೆ ಬರೆದ ಟೀಮ್ ಇಂಡಿಯಾ

India vs West Indies 2nd ODI: ಗುವಾಹಟಿಯ ಬರ್ಸಾಪರ ಕ್ರಿಕೆಟ್ ಕ್ರೀಡಾಂಗಣದಲ್ಲಿ ಬುಧವಾರ (ಸೆಪ್ಟೆಂಬರ್ 30) ನಡೆದ ಎರಡನೇ ಏಕದಿನ ಪಂದ್ಯದಲ್ಲಿ ಪಂದ್ಯದಲ್ಲಿ ಟೀಮ್ ಇಂಡಿಯಾ 8 ವಿಕೆಟ್‌ಗಳಿದ ಭರ್ಜರಿ ಜಯ ಸಾಧಿಸಿ ಐತಿಹಾಸಿಕ ಸಾಧನೆ ಮಾಡಿತು. ಈ ಗೆಲುವಿಗೆ ಪ್ರಮುಖ ಕಾರಣವಾಗಿದ್ದು ನಾಯಕ ಶುಭ್‌ಗಿಲ್‌ ಹಾಗೂ ರೋಹಿತ್ ಶರ್ಮಾ ಅವರ ಆಕ್ರಮಣಕಾರಿ ಬ್ಯಾಟಿಂಗ್. ಈ ಕುರಿತ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.

ಟಾಸ್‌ ಗೆದ್ದ ಟೀಮ್ ಇಂಡಿಯಾ ನಾಯಕ ಶುಭ್‌ಮನ್ ಗಿಲ್ ಅವರು ಬೌಲಿಂಗ್ ಆಯ್ಕೆ ಮಾಡಿಕೊಂಡರು. ಅದರಂತೆಯೇ ಮೊಡಲು ಬ್ಯಾಸ್‌ ಬೀಸಿದ ವೆಸ್‌ ಇಂಡೀಸ್ ನಿಗದಿತ 50 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 405 ರನ್‌ಗಳ ಬೃಹತ್ ಮೊತ್ತ ಕಲೆಹಾಕಿತು. ಆದರೂ ಬಳಿಕ ಬ್ಯಾಟ್‌ ಬೀಸಿದ ಭಾರತ ಈ ದೊಡ್ಡ ಮತ್ತದ ಗುರಿಯನ್ನು ಸುಲಭವಾಗಿ ಮುಟ್ಟುವ ಮೂಲಕ ಏಕದಿನ ಇತಿಹಾಸದಲ್ಲೇ ಹೊಸ ದಾಖಲೆ ಬರೆಯಿತು.

India vs West Indies 2nd ODI Shubman Gill Rohit Sharma Power Team India to Record 406-Run Chase

ಟೀಮ್ ಇಂಡಿಯಾ ಐತಿಹಾಸಿಕ ದಾಖಲೆ

ಗುವಾಹಟಿಯಲ್ಲಿ ನಡೆದ ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಶುಭ್‌ಮನ್ ಗಿಲ್ ಅಜೇಯ 223(133) ರನ್ ಬಾರಿಸಿದ್ದು, ಈ ಮೂಲಕ ಭಾರತ ತಂಡವು 406 ರನ್‌ಗಳ ಬೃಹತ್ ಗುರಿಯನ್ನು ಕೇವಲ 43.3 ಓವರ್‌ಗಳಲ್ಲಿ ಬೆನ್ನಟ್ಟಿ ತನ್ನ ಏಕದಿನ ಕ್ರಿಕೆಟ್ ಇತಿಹಾಸದಲ್ಲೇ ಅತ್ಯಂತ ಯಶಸ್ವಿ ರನ್ ಚೇಸ್ ಸಾಧಿಸಿತು.

ನಾಯಕ ಶುಭ್‌ಮನ್ ಗಿಲ್‌ ಅಮೋಘ ಸಾಧನೆ

ನಾಯಕ ಶುಭ್‌ಮನ್ ಗಿಲ್ ಅವರು ಕೇವಲ 117 ಎಸೆತಗಳಲ್ಲಿ ದ್ವಿಶತಕ ಪೂರೈಸುವ ಮೂಲಕ ಏಕದಿನ ಇತಿಹಾಸದಲ್ಲೇ ಅತ್ಯಂತ ವೇಗದ ದ್ವಿಶತಕ ಸಿಡಿಸಿದ ಸಾಧನೆ ಮಾಡಿದರು. ಅಲ್ಲದೆ, ಭಾರತದ ನಾಯಕನಾಗಿ ಅತ್ಯಂತ ವೇಗದ ಶತಕ ಬಾರಿಸಿದ ಹೆಗ್ಗಳಿಕೆಗೂ ಪಾತ್ರರಾದರು.

ಮಿಂಚಿದ ಗಿಲ್, ರೋಹಿತ್ ಶರ್ಮಾ

ಅಷ್ಟೇ ಅಲ್ಲದೆ, ಏಕದಿನ ಪಂದ್ಯದ ರನ್ ಚೇಸ್‌ನಲ್ಲಿ ಭಾರತೀಯ ಬ್ಯಾಟರ್ ಗಳಿಸಿದ ಅತ್ಯುನ್ನತ ವೈಯಕ್ತಿಕ ಮೊತ್ತ ಎಂಬ ದಾಖಲೆ ಬರೆದರು. ಇನ್ನೂ ಈ ಚೇಸಿಂಗ್‌ಗೆ ರೋಹಿತ್ ಶರ್ಮಾ ಅವರಿಂದ ಅತ್ಯುತ್ತಮ ಸಾಥ್ ಸಿಕ್ಕಿತು. ರೋಹಿತ್ 72 ಎಸೆತಗಳಲ್ಲಿ ಶತಕ ಸಿಡಿಸಿ, 101 ರನ್‌‌ಗಳಿಗೆ ವಿಕೆಟ್‌ ಒಪ್ಪಿಸಿದರು. ಬಳಿಕ ಬಂದ ವಿರಾಟ್‌ ಕೊಹ್ಲಿ 28(19), ರುತುರಾಜ್ ಗಾಯಕ್ವಾಡ್ ಅಜೇಯ 31(37) ರನ್‌ಗಳ ಕೊಡುಗೆ ನೀಡಿದರು.

ವೆಸ್ಟ್‌ ಇಂಡೀಸ್‌ ಬ್ಯಾಟರ್‌ಗಳ ಅಬ್ಬರ

ಇದಕ್ಕೂ ಮುನ್ನ ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡ ಗಿಲ್ ನಿರ್ಧಾರಕ್ಕೆ ಪ್ರತಿಯಾಗಿ ವೆಸ್ಟ್ ಇಂಡೀಸ್ ಪಡೆ 50 ಓವರ್‌ಗಳಲ್ಲಿ 405/7 ರನ್‌ಗಳ ಬೃಹತ್ ಮೊತ್ತ ಪೇರಿಸಿತ್ತು. ವೆಸ್ಟ್ ಇಂಡೀಸ್ ಪರ ಜಾನ್ ಕ್ಯಾಂಪ್‌ಬೆಲ್ (101), ಶಾಯ್ ಹೋಪ್ (104) ಮತ್ತು ಅಮೀರ್ ಜಂಗೂ (114) ಮೂವರೂ ಶತಕ ಬಾರಿಸಿದರು.

ಕ್ಯಾಂಪ್‌ಬೆಲ್ 65 ಎಸೆತಗಳಲ್ಲಿ ಶತಕ ಸಿಡಿಸಿ, ಭಾರತದ ವಿರುದ್ಧ ವೆಸ್ಟ್ ಇಂಡೀಸ್ ಆಟಗಾರನೊಬ್ಬ ಬಾರಿಸಿದ ಅತಿ ವೇಗದ ಶತಕದ ದಾಖಲೆ ಬರೆದರು. ನಾಯಕ ಶಾಯ್ ಹೋಪ್ 94 ಎಸೆತಗಳಲ್ಲಿ 104 ರನ್ ಗಳಿಸಿದರು. ಜಂಗೂ 70 ಎಸೆತಗಳಲ್ಲಿ ತಮ್ಮ ಶತಕ ಪೂರೈಸಿ, ಒಟ್ಟು 77 ಎಸೆತಗಳಲ್ಲಿ 114 ರನ್ ಚಚ್ಚಿದರು.

ಕುಲದೀಪ್ ಯಾದವ್ ಹೊಸ ಸಾಧನೆ

ಭಾರತದ ಪರ ಬೌಲಿಂಗ್‌ ಮಾಡಿದ ಗುರ್ನೂರ್ ಬ್ರಾರ್, ಕುಲದೀಪ್ ಯಾದವ್ ಮತ್ತು ರವೀಂದ್ರ ಜಡೇಜಾ ತಲಾ ಎರಡು ವಿಕೆಟ್ ಪಡೆದರೆ, ಪ್ರಸಿದ್ಧ್‌ ಕೃಷ್ಣ 1 ವಿಕೆಟ್‌ ಕಬಳಿಸಿದರು. ಇನ್ನೂ ಇದೇ ಪಂದ್ಯದಲ್ಲಿ ಕುಲದೀಪ್ ಯಾದವ್ ತಮ್ಮ ಏಕದಿನ ವೃತ್ತಿಜೀವನದ 200 ವಿಕೆಟ್‌ಗಳ ಮೈಲಿಗಲ್ಲನ್ನು ಪೂರೈಸಿದರು. ಒಟ್ಟಿನಲ್ಲಿ ಹೇಳುವುದಾದರೆ, ಟೀಮ್ ಇಂಡಿಯಾದಲ್ಲಿ ಎಷ್ಟೇ ರನ್‌ಗಳಿದ್ದರೂ ಕೂಡ ನಾವು ಚೇಸಿಂಗ್ ಮಾಡಲು ಸಿದ್ಧ ಎನ್ನುವುದನ್ನು ಬ್ಯಾಟಿಂಗ್ ಪಡೆ ತೀರಿಸಿಕೊಟ್ಟಿದೆ. ಅದರಲ್ಲೀ ನಾಯಕ ಗಿಲ್ ಅವರ ಸಿಡಿಲಬ್ಬರದ ಬ್ಯಾಟಿಂಗ್‌ಗೆ ವೆಸ್ಟ್‌ ಇಂಡೀಸ್‌ ಬೌಲರ್‌ಗಳು ದಿಕ್ಕು ತಪ್ಪಿ ಸುಸ್ತು ಹೊಡೆದಿದಂತೂ ಅಷ್ಟೇ ನಿಜ ಅಂದರೆ ತಪ್ಪಾಗಲಾರದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+