Team India New Jersey: ಶ್ರೀಲಂಕಾ ವಿರುದ್ಧದ ಸರಣಿಯಲ್ಲಿ ಟೀಮ್ ಇಂಡಿಯಾ ಜೆರ್ಸಿ ಚೇಂಜ್
ಟೀಮ್ ಇಂಡಿಯಾ ಸದ್ಯ ಶ್ರೀಲಂಕಾ ಪ್ರವಾಸವನ್ನು ಕೈಗೊಂಡಿದೆ. ಈ ಪ್ರವಾಸದಲ್ಲಿ ಟೀಮ್ ಇಂಡಿಯಾ ಏಕದಿನ ಹಾಗೂ ಟಿ20 ಪಂದ್ಯಗಳನ್ನು ಆಡಲಿದೆ. ಮುಖ್ಯ ಕೋಚ್ ಸ್ಥಾನಕ್ಕೆ ಆಯ್ಕೆ ಆದ ಗೌತಮ್ ಗಂಭೀರ್ ಅವರಿಗೆ ಇದು ಮೊದಲ ಪರೀಕ್ಷೆ ಆಗಿದೆ. ಈ ಪ್ರವಾಸದ ಟಿ20 ಸರಣಿಯಲ್ಲಿ ಟೀಮ್ ಇಂಡಿಯಾ ಯಂಗ್ ಪ್ಲೇಯರ್‌ಗಳೊಂದಿಗೆ ಕಣಕ್ಕೆ ಇಳಿಯಲಿದೆ. ಈ ವೇಳೆ ಟೀಮ್ ಇಂಡಿಯಾದ ಜೆರ್ಸಿ ಲುಕ್ ಚೇಂಜ್ ಆಗಿರಲಿದೆ.
ಟೀಮ್ ಇಂಡಿಯಾ, ಶ್ರೀಲಂಕಾ ಪ್ರವಾಸದಲ್ಲಿ ನ್ಯೂ ಜೆರ್ಸಿಯಲ್ಲಿ ಕಣಕ್ಕೆ ಇಳಿಯುವುದು ಪಕ್ಕಾ ಆಗಿದೆ. ಈ ಜೆರ್ಸಿಯನ್ನು ಒಮ್ಮೆ ಅಭಿಮಾನಿಗಳು ನೋಡಿದರೆ ಖುಷಿ ಪಡುವುದು ಗ್ಯಾರಂಟಿ. ಹಾಗಿದ್ರೆ ಈ ಜೆರ್ಸಿಯಲ್ಲಿ ಏನೆಲ್ಲಾ ಬದಲಾವಣೆ ಮಾಡಲಾಗಿದೆ ಎಂಬುದರ ಬಗ್ಗೆ ವರದಿ ಇಲ್ಲಿದೆ.

ಎರಡು ಸ್ಟಾರ್
ಹೌದು.. ಟೀಮ್ ಇಂಡಿಯಾ ಜಿಂಬಾಬ್ವೆ ಪ್ರವಾಸವನ್ನು ಆರಂಭಿಸಿದಾಗ ಎಲ್ಲರ ಪ್ರಶ್ನೆ ಇದೆ ಆಗಿತ್ತು. ಟೀಮ್ ಇಂಡಿಯಾ ಜಿಂಬಾಬ್ವೆ ಪ್ರವಾಸದ ವೇಳೆ ಒಂದೇ ಸ್ಟಾರ್ ಹಾಕಿಕೊಂಡಿರುವ ಜೆರ್ಸಿ ತೊಟ್ಟು ಕಣಕ್ಕೆ ಇಳಿದಿತ್ತು. ಆಗ ಅಭಿಮಾನಿಗಳು ಕೆಂಡ ಕಾರಿದ್ದರು. ಬಿಸಿಸಿಐ ಸಮಯದ ಅಭಾವ ಇದ್ದ ಕಾರಣ ನೂತನ ಜೆರ್ಸಿಯನ್ನು ಶ್ರೀಲಂಕಾ ಪ್ರವಾಸದಲ್ಲಿ ಆಟಗಾರರಿಗೆ ನೀಡಲಾಗುವುದು ಎಂದು ತಿಳಿಸಿದ್ದರು. ಅದರಂತೆ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಟೀಂ ಇಂಡಿಯಾ ಈ ಹೊಸ ಜೆರ್ಸಿಯಲ್ಲಿ ಆಡಲಿದೆ.
ಬಿಸಿಸಿಐ ಲಾಂಛನದ ಮೇಲೆ ಎರಡು ಸ್ಟಾರ್ ಏಕೆ?
ಆಟಗಾರರು ತೊಡುವ ಜೆರ್ಸಿಯ ಬಲ ಭಾಗದಲ್ಲಿ ಬಿಸಿಸಿಐ ಲಾಂಛನವನ್ನು ಅಳವಡಿಸಲಾಗಿದೆ. ಈ ಲಾಂಛನ ಎದೆಯ ಮೇಲೆ ಇರುತ್ತದೆ. ಮೊದಲು ಟೀಮ್ ಇಂಡಿಯಾ 2007ರಲ್ಲಿ ಟಿ20 ವಿಶ್ವಕಪ್ ಗೆದ್ದಿದ್ದರಿಂದ ಕೇವಲ ಒಂದು ಸ್ಟಾರ್ ಹಾಕಿಕೊಂಡು ಕಣಕ್ಕೆ ಇಳಿದಿತ್ತು. ಅಲ್ಲದೆ 2024 ಟಿ20 ವಿಶ್ವಕಪ್‌ನಲ್ಲೂ ರೋಹಿತ್ ಪಡೆ ಇದೇ ಜೆರ್ಸಿಯನ್ನು ಹಾಕಿಕೊಂಡಿತ್ತು. ಆದರೆ 2024ರ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದ ಮೇಲೆ, ಈ ಸ್ಟಾರ್‌ಗಳ ಸಂಖ್ಯೆ ಎರಡಕ್ಕೆ ಏರಿಕೆ ಆಗಿದೆ.
ಹೀಗಾಗಿ ಶ್ರೀಲಂಕಾ ವಿರುದ್ಧ ಸರಣಿಯ ವೇಳೆ ಟೀಮ್ ಇಂಡಿಯಾ ಆಟಗಾರರು ಎರಡು ಸ್ಟಾರ್ ಹೊಂದಿರುವ ಜೆರ್ಸಿಯನ್ನು ತೊಟ್ಟು ಆಡಲಿದ್ದಾರೆ.
ODI ಜರ್ಸಿಯಲ್ಲೂ ಎರಡು ಸ್ಟಾರ್
ಟೀಂ ಇಂಡಿಯಾದ ODI ಜರ್ಸಿಯಲ್ಲಿಯೂ ಎರಡು ಸ್ಟಾರ್‌ಗಳಿವೆ. ಟೀಂ ಇಂಡಿಯಾ ಕೂಡ ಎರಡು ಬಾರಿ ಏಕದಿನ ವಿಶ್ವಕಪ್ ಜಯಿಸಿದೆ. ಈ ಪ್ರಶಸ್ತಿಯನ್ನು ಟೀಮ್ ಇಂಡಿಯಾ 1983 ಮತ್ತು 2011ರಲ್ಲಿ ಗೆದ್ದುಕೊಂಡಿತ್ತು.
Recharged and raring to go. See you on the pitch 🇮🇳💙 pic.twitter.com/mpCBXe7XFk
— Mohammed Siraj (@mdsirajofficial) July 25, 2024
ಜಿಂಬಾಬ್ವೆ ಪ್ರವಾಸದಲ್ಲಿ ಒಂದು ಸ್ಟಾರ್
T20 ವಿಶ್ವಕಪ್ 2024 ರ ಪ್ರಶಸ್ತಿಯನ್ನು ಗೆದ್ದ ನಂತರವೇ ಟೀಮ್ ಇಂಡಿಯಾದ ಜೆರ್ಸಿಯಲ್ಲಿ ಈ ವಿಶೇಷ ಬದಲಾವಣೆಯನ್ನು ಮಾಡಲಾಗಿದೆ. ಆದರೆ ಜಿಂಬಾಬ್ವೆ ಪ್ರವಾಸದ ಸಮಯದಲ್ಲಿ ಆಟಗಾರರು ಈ ಜೆರ್ಸಿಯಲ್ಲಿ ಆಡಲು ಸಾಧ್ಯವಾಗಲಿಲ್ಲ. ಟೀಂ ಇಂಡಿಯಾ ವಿಶ್ವಕಪ್ ಫೈನಲ್ ಪಂದ್ಯ ಆಡುವ ಮುನ್ನವೇ ಭಾರತ ತಂಡದ ಸದಸ್ಯರು ಜಿಂಬಾಬ್ವೆ ಪ್ರವಾಸಕ್ಕೆ ತೆರಳಿರುವುದು ಇದಕ್ಕೆ ಕಾರಣ. ಆದ್ದರಿಂದ, ಆಗ ಆಟಗಾರರು ಒಂದು ಸ್ಟಾರ್ ಹೊಂದಿದ್ದ ಜೆರ್ಸಿ ತೊಟ್ಟು ಆಡಿದ್ದಾರೆ.












Click it and Unblock the Notifications