Asia Cup 2023: ಭಾರತ & ಪಾಕಿಸ್ತಾನ ಪಂದ್ಯಕ್ಕೆ ವರುಣ ದೇವನ ಅಡ್ಡಿ, ಆತಂಕ!
ಕ್ರಿಕೆಟ್ ಜಗತ್ತಿನಲ್ಲಿ ಕೋಟ್ಯಂತರ ಅಭಿಮಾನಿಗಳು ಉಸಿರು ಬಿಗಿಹಿಡಿದು ಕಾಯುವ ಮ್ಯಾಚ್ ಅಂದ್ರೆ ಅದು ಭಾರತ & ಪಾಕಿಸ್ತಾನ ಪಂದ್ಯ ಮಾತ್ರ. ಜಿದ್ದು, ಕೋಪ ಹಾಗೂ ಆಕ್ರೋಶ ಇದೆಲ್ಲದರ ಜೊತೆಗೆ ವೈರತ್ವ ಭಾರತ & ಪಾಕಿಸ್ತಾನ ಪಂದ್ಯದಲ್ಲಿ ಬೆರೆತು ಹೋಗಿರುತ್ತದೆ. ಇವತ್ತು ಕೂಡ ಇದೇ ಸೀನ್ ಟಿವಿ ಪರದೆ ಮೇಲೆ ಅಪ್ಪಳಿಸಲಿದ್ದು, ಭಾರತ & ಪಾಕಿಸ್ತಾನ ಪಂದ್ಯ ಇನ್ನೇನು ಆರಂಭವಾಗಲಿದೆ. ಆದರೆ ಇದೇ ವೇಳೆ ಆತಂಕವೊಂದು ಎದುರಾಗಿದೆ!
ಹೌದು ಭಾರತ & ಪಾಕಿಸ್ತಾನ ಪಂದ್ಯ ಅಂದ್ರೆ ಭಾರತೀಯರು ಅಥವಾ ಪಾಕಿಸ್ತಾನಿ ಪ್ರಜೆಗಳು ಮಾತ್ರವಲ್ಲ ಇಡೀ ಜಗತ್ತೇ ಕಾದು ನೋಡುತ್ತದೆ. ಅದರಲ್ಲೂ ಎರಡೂ ತಂಡಗಳ ನಡುವೆ ನಡೆಯುವ ಜಿದ್ದಾಜಿದ್ದಿನ ಆಟ ನೋಡಿದವನೆ ಧನ್ಯ. ಇಂತಿಪ್ಪ ಭಾರತ & ಪಾಕ್ ಪಂದ್ಯಕ್ಕೆ ಈಗ ಮಳೆರಾಯ ಅಡ್ಡಿ ಮಾಡುವ ಆತಂಕ ಎದುರಾಗಿದೆ. ನೆರೆ ದ್ವೀಪರಾಷ್ಟ್ರ ಶ್ರೀಲಂಕಾದ ಕ್ಯಾಂಡಿಯ ಪಲ್ಲೆಕೆಲೆ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಇಂದು, ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕ್ ತಂಡಗಳು ಈ ಹೈ-ವೋಲ್ಟೇಜ್ ಘರ್ಷಣೆಯಲ್ಲಿ ಗೆದ್ದು ಬೀಗಲು ಪೈಪೋಟಿ ನಡೆಸಲಿವೆ. 2023ರ ಏಷ್ಯಾ ಕಪ್ ಮತ್ತಷ್ಟು ರಂಗು ಪಡೆಯಲಿದೆ.

ಟಾಸ್‌ಗೂ ಮೊದಲೇ ಮಳೆ ಆತಂಕ!
ಅಂದಹಾಗೆ ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವೆ ಮ್ಯಾಚ್ ನಡೆಯುತ್ತೆ ಅಂದರೆ, ಆ ಪಂದ್ಯಕ್ಕೆ ಕೋಟ್ಯಂತರ ರೂಪಾಯಿ ಖರ್ಚು ಆಗಿರುತ್ತೆ. ಆದ್ರೆ ಇದೀಗ ಆ ದುಡ್ಡನ್ನು ಮಳೆ ಕೊಚ್ಚಿಹಾಕಲು ಸಿದ್ಧವಾಗಿದೆ. ಕ್ಯಾಂಡಿಯಲ್ಲಿ ಬೆಳಗ್ಗೆಯಿಂದಲೇ ಮೋಡ ಕವಿದ ವಾತಾವರಣ ಅವರಿಸಿದ್ದು, ಕ್ರಿಕೆಟ್ ಅಭಿಮಾನಿಗಳಿಗೆ ದೊಡ್ಡ ಚಿಂತೆಯಾಗಿದೆ. ಪಂದ್ಯ ಆರಂಭವಾದ್ರೂ ಈ ಮಳೆರಾಯ ಮಧ್ಯದಲ್ಲಿ ಅಡ್ಡಿ ಮಾಡುವ ಭಯವು ಕಾಡುತ್ತಿದೆ. ಹೀಗಾಗಿ ಪಿಚ್ ರಕ್ಷಣೆಗಾಗಿ ಬೇಕಾದ ಎಲ್ಲಾ ಸಿದ್ಧತೆ ಮಾಡಿಕೊಳ್ಳಲಾಗಿದೆ. ಕ್ರೀಡಾಂಗಣದ ಸಿಬ್ಬಂದಿ ಸಿದ್ಧವಾಗಿದ್ದಾರೆ.

ಇಲ್ಲಿ ಓದಿ ಸಿಹಿಸುದ್ದಿ ಸಿಗುತ್ತೆ!
ಭಾರತ & ಪಾಕಿಸ್ತಾನದ ನಡುವಿನ ದೊಡ್ಡ ಪಂದ್ಯಕ್ಕೂ ಮುನ್ನ, ಕ್ರೀಡಾಂಗಣದಲ್ಲಿ ಶೇಕಡಾ 80ರಷ್ಟು ಮಳೆಯಾಗುವ ಸಾಧ್ಯತೆಯಿದೆ ಎಂದು ಶ್ರೀಲಂಕಾ ಹವಾಮಾನ ಇಲಾಖೆ ಮುನ್ಸೂಚನೆ ನೀಡಿತ್ತು. ಆದರೂ ಭಾರತ ಮತ್ತು ಪಾಕಿಸ್ತಾನ ಕ್ರಿಕೆಟ್ ಅಭಿಮಾನಿಗಳಿಗೆ ಸಿಹಿ ಸುದ್ದಿಯೊಂದು ಸಿಕ್ಕಿದ್ದು, ಮಧ್ಯಾಹ್ನದ ನಂತರ ಮತ್ತು ಸಂಜೆ ಕ್ಯಾಂಡಿಯ ಹವಾಮಾನ ಸುಧಾರಿಸಲಿದೆ ಎಂದು ಶ್ರೀಲಂಕಾ ಹವಾಮಾನ ಇಲಾಖೆ ತಿಳಿಸಿದೆ. ಹೀಗಾಗಿ ಕ್ರಿಕೆಟ್ ಫ್ಯಾನ್ಸ್ ಅದರಲ್ಲೂ ಭಾರತ & ಪಾಕಿಸ್ತಾನ ಪಂದ್ಯದ ಅಭಿಮಾನಿಗಳು ನಸುನಗೆ ಬೀರಿದ್ದಾರೆ.
ಮೊದಲು ಬ್ಯಾಟಿಂಗ್ ಆರಂಭಿಸಿದ ಭಾರತ
ಪಾಕಿಸ್ತಾನ ವಿರುದ್ಧದ ಪಂದ್ಯದ ಆರಂಭದಲ್ಲೇ ಭಾರತಕ್ಕೆ ಸಿಹಿಸುದ್ದಿ ಸಿಕ್ಕಿದ್ದು, ಮಳೆ ಭೀತಿ ನಡುವೆ ಟಾಸ್ ಗೆದ್ದು ಬೀಗಿದೆ. ಹಾಗೇ ಟಾಸ್ ಗೆದ್ದಿರುವ ಭಾರತ ತಂಡ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ. ಆರಂಭಿಕರಾಗಿ ಕಣಕ್ಕಿಳಿದಿರುವ ಶುಭ್‌ಮನ್ ಗಿಲ್ ಮತ್ತು ರೋಹಿತ್ ಶರ್ಮಾ ಇದೀಗ ಪಾಕಿಸ್ತಾನದ ಬೌಲರ್‌ಗಳ ಬೆವರು ಇಳಿಸಲು ಸಜ್ಜಾಗಿದ್ದಾರೆ. ಪಾಕಿಸ್ತಾನದ ಬೌಲರ್ ಶಾಹೀನ್ ಆಫ್ರಿದಿ ಮಾಡಿದ ಮೊದಲ ಓವರ್‌ನಲ್ಲಿ ಭಾರತ 6 ರನ್ ಗಳಿಸಿದೆ. ಹಾಗೇ ಮೊದಲ ಓವರ್‌ನ ಎರನಡೇ ಎಸೆತವನ್ನು ಬೌಂಡರಿಗೆ ಕಳಿಸಿದ್ದಾರೆ ರೋಹಿತ್ ಶರ್ಮಾ.
ಅಂದುಕೊಂಡಂತೆ ಅಡ್ಡಿ ಮಾಡಿದ ಮಳೆ
ಇನ್ನು ಭಾರತ ತಂಡವು ಟಾಸ್ ಗೆದ್ದು ಮೊದಲ ಓವರ್‌ನಲ್ಲಿ ಒಂದು ಬೌಂಡರಿ ಗಳಿಸಿತ್ತು. ಹಾಗೇ ಮೊದಲ ಓವರ್‌ನಲ್ಲಿ ಶಾಹೀನ್ ಅಫ್ರಿದಿ 6 ರನ್ ನೀಡಿ, 2ನೇ ಓವರ್‌ನಲ್ಲಿ ನಸೀಮ್ ಶಾ 3 ರನ್ ನೀಡಿದರು. ಮತ್ತೆ 3ನೇ ಓವರ್ ಓವರ್ ಮಾಡಿದ ಶಾಹೀನ್ ಅಫ್ರಿದಿ ಒಂದು ವೈಡ್ ಸೇರಿ 5 ರನ್ ನೀಡಿದರು. ಹಿಟ್‌ಮ್ಯಾನ್ ರೋಹಿತ್ ಶರ್ಮಾ 2 ಬೌಂಡರಿ ಬಾರಿಸಿದರು. 4 ಓವರ್‌ಗೆ ಟೀ ಇಂಡಿಯಾ 15 ರನ್ ಗಳಿಸಿತ್ತು. ಆದರೆ 5ನೇ ಓವರ್ ಶುರುವಾಗಿ 4.2 ಓವರ್ ಆಗಿದ್ದಾಗ ಮಳೆರಾಯನ ಅಬ್ಬರ ಶುರುವಾಗಿ ಪಂದ್ಯ ನಿಂತು ಹೋಗಿದೆ. ಈಗ ಭಾರತ ವಿಕೆಟ್ ನಷ್ಟ ಇಲ್ಲದೆ 15 ರನ್ ಗಳಿಸಿದೆ.












Click it and Unblock the Notifications