VIrat Kohli: ಒಂದೇ ದಾಖಲೆಯ ಮೇಲೆ ವಿರಾಟ್ ಕೊಹ್ಲಿ, ರೋಹಿತ್ ಹಾಗೂ ಬಾಬರ್ ಕಣ್ಣು
ವೆಸ್ಟ್ ಇಂಡೀಸ್ ಹಾಗೂ ಅಮೆರಿಕದಲ್ಲಿ ಟಿ20 ವಿಶ್ವಕಪ್ ಆರಂಭವಾಗಿದೆ. ಈ ಟೂರ್ನಿಯಲ್ಲಿ ಟೀಮ್ ಇಂಡಿಯಾ ಸಹ ಭಾಗವಹಿಸುತ್ತಿದೆ. ಎರಡನೇ ಬಾರಿ ಚಾಂಪಿಯನ್ ಪಟ್ಟಕ್ಕೆ ಏರುವ ಕನಸು ಟೀಮ್ ಇಂಡಿಯಾದ್ದಾಗಿದೆ. ಬುಧವಾರದಿಂದ ಟೀಮ್ ಇಂಡಿಯಾ ತನ್ನ ಅಭಿಯಾನವನ್ನು ಆರಂಭಿಸಲಿದೆ. ಭಾನುವಾರ ಟೀಮ್ ಇಂಡಿಯಾ ಹಾಗೂ ಪಾಕಿಸ್ತಾನ ನಡುವಣ ಹೈ ವೋಲ್ಟೇಜ್ ಪಂದ್ಯ ನಡೆಯಲಿದೆ.
ಈ ಬಾರಿಯ ವಿಶ್ವಕಪ್‌ನಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಹಾಗೂ ಪಾಕ್ ನಾಯಕ ಬಾಬರ್ ಅಜಮ್ ನಡುವೆ ಒಂದು ದಾಖಲೆಗಾಗಿ ಹಣಾಹಣಿ ನಡೆಯಲಿದೆ. ಇನ್ನು ಇದರಲ್ಲಿ ಯಾವ ಆಟಗಾರ ಗೆಲ್ಲುತ್ತಾನೆ ಎಂಬುದನ್ನು ಕಾದು ನೋಡಬೇಕಿದೆ. ಹೆಚ್ಚು ರನ್ ಬಾರಿಸಿದ ಆಟಗಾರರ ಪಟ್ಟಿಯಲ್ಲಿ ಪ್ರಸ್ತುತ ವಿರಾಟ್ ಕೊಹ್ಲಿ ಮೊದಲ ಸ್ಥಾನದಲ್ಲಿದ್ದರೆ, ಬಾಬರ್ ಅಜಮ್ ಎರಡನೇ ಸ್ಥಾನದಲ್ಲಿ ಮತ್ತು ರೋಹಿತ್ ಶರ್ಮಾ ಮೂರನೇ ಸ್ಥಾನದಲ್ಲಿದ್ದಾರೆ.

1. ವಿರಾಟ್ ಕೊಹ್ಲಿ
ವಿರಾಟ್ ಕೊಹ್ಲಿ ಇದುವರೆಗೆ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 117 ಪಂದ್ಯಗಳಲ್ಲಿ 4037 ರನ್ ಗಳಿಸಿದ್ದಾರೆ. ಈ ವೇಳೆ ಅವರು ಒಂದು ಶತಕ ಮತ್ತು 37 ಅರ್ಧಶತಕಗಳನ್ನು ಬಾರಿಸಿದ್ದಾರೆ. ಅಫ್ಘಾನಿಸ್ತಾನ ವಿರುದ್ಧ ಕೊಹ್ಲಿ ಔಟಾಗದೆ 122 ರನ್ ಗಳಿಸಿದ್ದು ಅಂತಾರಾಷ್ಟ್ರೀಯ ಟಿ20ಯಲ್ಲಿ ವಿರಾಟ್ ಗರಿಷ್ಠ ಸ್ಕೋರ್.
2. ಬಾಬರ್ ಆಜಮ್
ಗರಿಷ್ಠ ರನ್ ಬಾರಿಸಿದವರ ಪಟ್ಟಿಯಲ್ಲಿ ಬಾಬರ್ ಅಜಮ್ ಎರಡನೇ ಸ್ಥಾನದಲ್ಲಿದ್ದಾರೆ. ಇವರು 119 ಪಂದ್ಯಗಳಲ್ಲಿ 4023 ರನ್ ಗಳಿಸಿದ್ದು, ಇದರಲ್ಲಿ 3 ಶತಕ ಹಾಗೂ 36 ಅರ್ಧ ಶತಕ ಸೇರಿವೆ. ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಬಾಬರ್ ಅವರ ಗರಿಷ್ಠ ಸ್ಕೋರ್ 122 ರನ್.
3. ರೋಹಿತ್ ಶರ್ಮಾ
ಹಿಟ್ ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ 151 ಪಂದ್ಯಗಳನ್ನು ಆಡಿದ್ದು 3974 ರನ್ ಸಿಡಿಸಿದ್ದಾರೆ. ಚುಟುಕು ಮಾದರಿಯಲ್ಲಿ ಮುಂಬೈಕರ್ 5 ಶತಕ ಹಾಗೂ 29 ಅರ್ಧ ಶತಕ ಸಿಡಿಸಿದ್ದಾರೆ. ಈ ಮಾದರಿಯಲ್ಲಿ ರೋಹಿತ್ ಅವರ ಗರಿಷ್ಠ ಸ್ಕೋರ್ ಅಜೇಯ 121 ರನ್ ಆಗಿದೆ.

ರೋಹಿತ್ ಶರ್ಮಾ ಅವರಿಗೆ ಈಗ 37, ವಿರಾಟ್ ಕೊಹ್ಲಿಗೆ 35, ಬಾಬರ್ ಅಜಮ್‌ಗೆ 29 ವಯಸ್ಸು. ಟೀಮ್ ಇಂಡಿಯಾದ ಇಬ್ಬರೂ ಸೂಪರ್ ಸ್ಟಾರ್‌ಗಳಿಗೆ ಇದುವೆ ಕೊನೆಯ ಚಾನ್ಸ್ ಎಂದು ಹೇಳಲಾಗುತ್ತಿದೆ. ಹೀಗಾಗಿ ಇವರು ಈ ಬಾರಿ ವಿಶ್ವಕಪ್ ಗೆಲ್ಲುವ ಅನಿವಾರ್ಯತೆ ಇದೆ.
ಟಿ20 ಕ್ರಿಕೆಟ್‌ನಲ್ಲಿ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಅಬ್ಬರದ ಪ್ರದರ್ಶನ ನೀಡುವ ಇರಾದೆಯನ್ನು ಹೊಂದಿದ್ದಾರೆ. ವಿರಾಟ್ ಭಾರತದಲ್ಲಿ ನಡೆದ ಐಪಿಎಲ್‌ನಲ್ಲಿ ಭರ್ಜರಿ ಪ್ರದರ್ಶನ ನೀಡಿದ್ದರು. ಅಲ್ಲದೆ ಆರೆಂಜ್ ಕ್ಯಾಪನ್ನು ತನ್ನ ತಲೆಯಲ್ಲಿ ಅಲಂಕರಿಸಿದ್ದರು. ವಿರಾಟ್ ಅಪ್‌ಡೇಟ್ ವರ್ಷನ್ ಆಟವನ್ನು ನೋಡಲು ವಿಶ್ವದ ಅಭಿಮಾನಿಗಳು ಸಹ ಕಾತುರರಾಗಿದ್ದಾರೆ.












Click it and Unblock the Notifications