India vs Pakistan: ಮತ್ತೆ ಅಬ್ಬರಿಸಿದ ರೋಹಿತ್, ಅರ್ಧಶತಕ ಪೂರ್ಣ!

ಭಾರತ & ಪಾಕ್ ನಡುವಿನ ಹೈವೋಲ್ಟೇಜ್ ಪಂದ್ಯದಲ್ಲಿ ರೋಹಿತ್ ಶರ್ಮಾ ಅಬ್ಬರಿಸಿದ್ದು, ಪಾಕ್ ಬೆಚ್ಚಿದೆ. 2023ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲೇ ಗಮನ ಸೆಳೆದ ಪಂದ್ಯ ಇದಾಗಿತ್ತು. ಆದರೆ, ಭಾರತದ ಬೌಲಿಂಗ್ ಪಡೆ ಎದುರು ಈಗಾಗಲೇ ಪಾಕ್ ಧೂಳ್ ಧೂಳ್ ಆಗೋಗಿದೆ. ಈಗ ಭಾರತದ ಬ್ಯಾಟಿಂಗ್ ಅಬ್ಬರ ಶುರುವಾಗಿದ್ದು, ಈ ಹೊತ್ತಲ್ಲೇ ರೋಹಿತ್ ಶರ್ಮಾ ಪಾಕ್ ವಿರುದ್ಧ ಭರ್ಜರಿ ಅರ್ಧಶತಕ ಬಾರಿಸಿದ್ದಾರೆ.

ಪಾಕ್ ತಂಡದ ವಿರುದ್ಧ, ಐಸಿಸಿ ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡ ತನ್ನ ಗೆಲುವಿನ ಓಟ ಮುಂದುವರಿಸುವುದು ಬಹುತೇಕ ಪಕ್ಕಾ ಆಗಿದೆ. ಇಂದು ನಡೆದ ಪಂದ್ಯದಲ್ಲಿ ಪಾಕಿಸ್ತಾನ ತಂಡ ಕೇವಲ 191 ರನ್‌ಗೆ ಆಲೌಟ್ ಆಯಿತು. ಈ ಮೂಲಕ ಪಾಕಿಸ್ತಾನ ತಂಡವನ್ನು 200 ರನ್‌ಗಳ ಒಳಗೆ ಕಟ್ಟಿಹಾಕುವಲ್ಲಿ ಭಾರತ ತಂಡದ ಬೌಲರ್ಸ್ ಯಶಸ್ವಿಯಾದರು. ಇನ್ನು ಭಾರತ 2ನೇ ಇನ್ನಿಂಗ್ಸ್‌ನಲ್ಲಿ ಬ್ಯಾಟಿಂಗ್ ಆರಂಭಿಸಿದಾಗ ಗಿಲ್ ಔಟ್ ಆಗಿ ಪೆವಿಲಿಯನ್ ಸೇರಿದರು. ಇದು ಭಾರತಕ್ಕೆ ಮೊದಲ ಆಘಾತವಾಗಿತ್ತು, ಆದರೆ ರೋಹಿತ್ ಮೈಕೊಡವಿ ನಿಂತರು.

india-vs-pakistan-match

ರೋಹಿತ್ ಎದುರು ಪಾಕ್ ಬೌಲಿಂಗ್ ಧೂಳಿಪಟ

ಪಾಕಿಸ್ತಾನ ತಂಡದ ವಿರುದ್ಧ ಹೆಚ್ಚು ರನ್ ರೇಟ್ ಹೊಂದಿರುವ ವಿರಾಟ್ ಕೊಹ್ಲಿ ಇಂದು, ಅತಿ ಬೇಗನೇ ಔಟ್ ಆದರು. 16 ರನ್‌ ಗಳಿಸಿ ವಿರಾಟ್‌ ವಿಕೆಟ್‌ ಒಪ್ಪಿಸಿದರು. ಆದ್ರೆ ರೋಹಿತ್ ಶರ್ಮಾ ಮಾತ್ರ ತಮ್ಮ ಅಬ್ಬರದ ಬ್ಯಾಟಿಂಗ್ ನಿಲ್ಲಿಸಲಿಲ್ಲ. ಹೀಗಾಗಿ ಪಾಕ್ ಬೌಲಿಂಗ್ ಪಡೆ ತಂತ್ರ ಧೂಳಿಪಟ ಮಾಡಿದ ರೋಹಿತ್ 46 ಬೌಲ್‌ಗಳಲ್ಲಿ 65 ರನ್ ಚಚ್ಚಿ ಆಟವಾಡ್ತಿದ್ದಾರೆ. 4 ಬೌಂಡರಿ ಮತ್ತು 5 ಸಿಕ್ಸರ್ ಸಿಡಿಸಿರುವ ರೋಹಿತ್‌ಗೆ ಇದೀಗ ಸೆಂಚ್ಯುರಿ ಕೂಡ ಹತ್ತಿರದಲ್ಲಿ ಇದೆ. ಹೀಗಾಗಿ ಪಾಕಿಸ್ತಾನ ತಂಡ ಹೀನಾಯ ಸೋಲಿನ ಭೀತಿಯಲ್ಲಿ ಮುಳುಗಿದೆ.

192 ರನ್‌ಗಳ ಸುಲಭ ಗುರಿ!

ಭಾರತ & ಪಾಕ್ ನಡುವೆ ರೋಚಕ ವಿಶ್ವಕಪ್‌ ಪಂದ್ಯದಲ್ಲಿ ಟಾಸ್‌ ಗೆದ್ದಿದ್ದ ಭಾರತ, ಬೌಲಿಂಗ್‌ ಆಯ್ಕೆ ಮಾಡಿಕೊಂಡಿತ್ತು. ಆದರೆ ಬ್ಯಾಟಿಂಗ್ ಆರಂಭಿಸಿದ ಪಾಕ್ ತಂಡಕ್ಕೆ ಶುರುವಲ್ಲೇ ಆಘಾತ ಎದುರಾಗಿತ್ತು. ಪಾಕಿಸ್ತಾನ ತಂಡದ ಮೊತ್ತ 41 ರನ್ ಆಗಿದ್ದಾಗ 20 ರನ್ ಗಳಿಸಿದ್ದ ಅಬ್ದುಲ್ಲಾ ಶಫೀಕ್‌, ಭಾರತದ ಬೌಲರ್ ಮೊಹಮ್ಮದ್‌ ಸಿರಾಜ್‌ಗೆ ವಿಕೆಟ್‌ ಒಪ್ಪಿಸಿ ಪೆವಿಲಿಯನ್ ಸೇರಿದರು. ನಂತರ ಬಂದ ಬಾಬಾರ್ ಅಜಾಮ್ ಹಾಗೂ ರಿಜ್ವಾನ್ ಒಂದಷ್ಟು ಚೇತರಿಕೆ ನೀಡಿದ್ದನ್ನು ಬಿಟ್ಟರೆ ಪಾಕ್‌ನ ಯಾವ ಆಟಗಾರನೂ ಮಿಂಚಲೇ ಇಲ್ಲ. ಹೀಗಾಗಿ ಪಾಕ್ 191 ರನ್‌ಗಳಿಗೆ ಸರ್ವಪತನ ಕಂಡಿದೆ. ಇದೀಗ ಭಾರತ 192 ರನ್‌ಗಳ ಗುರಿ ಬೆನ್ನತ್ತಿದೆ.

india-vs-pakistan-match

ಭಾರತ ತಂಡದಿಂದ ಮತ್ತೊಂದು ಇತಿಹಾಸ?

ಇದುವರೆಗೂ ಭಾರತ & ಪಾಕಿಸ್ತಾನ ಆಡಿರುವ ಏಕದಿನ ಪಂದ್ಯಗಳ ಸಂಖ್ಯೆ 134 ಆಗಿದ್ದರೆ, ಈ ಪೈಕಿ 56 ಪಂದ್ಯಗಳಲ್ಲಿ ಭಾರತ ಗೆದ್ದು ಬೀಗಿದೆ. ಹಾಗೇ ಪಾಕಿಸ್ತಾನ 73 ಪಂದ್ಯಗಳಲ್ಲಿ ಗೆದ್ದಿದೆ. ಇನ್ನು 5 ಪಂದ್ಯಗಳ ಫಲಿತಾಂಶ ಬಂದಿಲ್ಲ. ಒಟ್ಟಾರೆ ಏಕದಿನ ಪಂದ್ಯಗಳಲ್ಲಿ ಪಾಕಿಸ್ತಾನ ತಂಡ ಭಾರತದ ವಿರುದ್ಧ ಹೆಚ್ಚು ಪಂದ್ಯ ಗೆದ್ದಿದ್ರೂ ವಿಶ್ವಕಪ್ ಅಖಾಡದಲ್ಲಿ ಭಾರತವೇ ಕಿಂಗ್ ಆಗಿದೆ. ಹೇಗೆಂದರೆ ಭಾರತ ಮತ್ತು ಪಾಕ್ ನಡುವೆ ಈವರೆಗೆ ಒಟ್ಟು 7 ವಿಶ್ವಕಪ್ ಪಂದ್ಯಗಳು ನಡೆದಿದ್ದು, ಇದರಲ್ಲಿ ಭಾರತ ತಂಡವೇ ಎಲ್ಲಾ ಪಂದ್ಯಗಳನ್ನು ಗೆದ್ದಿದೆ. ಇಂದು ನಡೆಯುತ್ತಿರುವ ಪಂದ್ಯ ಕೂಡ ಬಹುತೇಕ ಭಾರತದ ಪರವೇ ಇದ್ದು, ಈ ಅಂತರ 8-0 ಆಗಲಿದೆ.

ಒಟ್ನಲ್ಲಿ ಭಾರತ ಇನ್ನೇನು ಗೆಲುವಿಗೆ ಸಮೀಪ ಇದ್ದು, 2023ರ ವಿಶ್ವಕಪ್ ಟೂರ್ನಿಯಲ್ಲಿ ತನ್ನ ಗೆಲುವಿನ ನಾಗಾಲೋಟ ಮುಂದುವರಿಸಲಿದೆ. ಈ ಮೂಲಕ ಸತತ 3ನೇ ಗೆಲುವಿಗೂ ಮುತ್ತಿಡಲು ಭಾರತ ಸಜ್ಜಾಗಿದೆ. ಆದರೆ ಪಾಕಿಸ್ತಾನ ಮತ್ತೊಮ್ಮೆ ಭಾರತ ತಂಡದ ಎದುರು ವಿಶ್ವಕಪ್ ಅಖಾಡದಲ್ಲಿ ಮುಗ್ಗರಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+