India vs Pakistan Match : ಕೊಲಂಬೋದಲ್ಲಿ ಅಬ್ಬರಿಸಿದ ಮಳೆ: ಮೀಸಲು ದಿನಕ್ಕೆ ಪಂದ್ಯ

ನಿರೀಕ್ಷೆಯಲ್ಲಿ ಕೊಲಂಬೋದಲ್ಲಿ ಮಳೆ ಅಬ್ಬರಿಸಿದ್ದಾನೆ, ಈ ಮೂಲಕ ಭಾರತ-ಪಾಕಿಸ್ತಾನ ನಡುವಿನ ಪಂದ್ಯ ಅರ್ಧಕ್ಕೆ ನಿಂತಿದ್ದು, ಮೀಸಲು ದಿನಕ್ಕೆ ಮುಂದೂಡಲಾಗಿದೆ. ಭಾನುವಾರ ಕೊಲಂಬೋದ ಪ್ರೇಮದಾಸ ಕ್ರೀಡಾಂಗಣದಲ್ಲಿ ಮೊದಲು ಭಾರತದ ಆರಂಭಿಕರು ಅಬ್ಬರಿಸಿದರೆ, ನಂತರ ಮಳೆ ಭರ್ಜರಿ ಪ್ರದರ್ಶನ ನೀಡಿದೆ.

ಟಾಸ್ ಗೆದ್ದ ಪಾಕಿಸ್ತಾನ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿತು. ಮೊದಲು ಬ್ಯಾಟಿಂಗ್ ಮಾಡಿದ ಭಾರತ 24.1 ಓವರ್ ಗಳಲ್ಲಿ 2 ವಿಕೆಟ್ ಕಳೆದುಕೊಂಡು 147 ರನ್ ಗಳಿಸಿ ಬೃಹತ್ ಮೊತ್ತ ಗಳಿಸುವತ್ತ ಮುನ್ನಡೆಯುತ್ತಿದ್ದಾಗ ಮಳೆ ಪಂದ್ಯವನ್ನು ಅಡ್ಡಿಪಡಿಸಿತು.

India vs Pakistan

ಹಲವು ಬಾರಿ ಮಳೆ ಬಿಡುವು ಕೊಟ್ಟರು ನಂತರ ಮರಳಿ ಬಂದಿತು. ಮಳೆ ಹೆಚ್ಚಾದ ಕಾರಣ ಅಂಪೈರ್ ಗಳು ಇಂದು ಪಂದ್ಯವನ್ನು ನಡೆಸಿದರಲು ತೀರ್ಮಾನಿಸಿದರು. ಮೀಸಲು ದಿನ ಇರುವ ಕಾರಣ ಸೋಮವಾರ ಪಂದ್ಯ ನಡೆಯಲಿದೆ.

ಸೋಮವಾರ ಮಧ್ಯಾಹ್ನ 3 ಗಂಟೆಗೆ ಪಂದ್ಯ ಆರಂಭವಾಗಲಿದ್ದು, ಭಾರತ 24.1 ಓವರ್ ಬ್ಯಾಟಿಂಗ್ ಆಡಿದ್ದು, ಅಲ್ಲಿಂದಲೇ ತನ್ನ ಇನ್ನಿಂಗ್ಸ್ ಮುಂದುವರೆಸಲಿದೆ. ಮಳೆ ಇಲ್ಲದಿದ್ದರೆ ನಾಳೆ 50 ಓವರ್ ಗಳ ಪಂದ್ಯ ಸಂಪೂರ್ಣವಾಗಿ ನಡೆಯಲಿದೆ.

ಭಾರತದ ಉತ್ತಮ ಆರಂಭ

ಮೊದಲು ಬ್ಯಾಟಿಂಗ್ ಮಾಡಿದ ಭಾರತಕ್ಕೆ ನಾಯಕ ರೋಹಿತ್ ಶರ್ಮಾ ಮತ್ತು ಶುಭಮನ್ ಗಿಲ್ ಅತ್ಯುತ್ತಮ ಆರಂಭ ಒದಗಿಸಿದರು. ಪಾಕಿಸ್ತಾನದ ಮಾರಕ ವೇಗದ ಬೌಲಿಂಗ್ ದಾಳಿಯನ್ನು ಯಶಸ್ವಿಯಾಗಿ ಎದುರಿಸಿದ ಈ ಜೋಡಿ, ಮನಬಂದಂತೆ ದಂಡಿಸಿದರು.

ಮೊದಲು ಶುಭಮನ್ ಗಿಲ್ ಎದುರಾಳಿ ಬೌಲರ್ ಗಳ ವಿರುದ್ಧ ಆಕ್ರಮಣಕಾರಿ ಆಟವಾಡಿದರು. ಮಾರಕ ವೇಗಿ ಎನಿಸಿಕೊಂಡಿರುವ ಶಾಹೀನ್ ಅಫ್ರಿದಿ ವಿರುದ್ಧ ಅಬ್ಬರಿಸಿದ ಗಿಲ್ ಬೌಂಡರಿಗಳನ್ನು ಸಿಡಿಸಿದರು. 37 ಎಸೆತಗಳಲ್ಲೇ ತಮ್ಮ ಅರ್ಧಶತಕ ಪೂರೈಸುವ ಮೂಲಕ ಮತ್ತೊಂದು ದೊಡ್ಡ ಇನ್ನಿಂಗ್ಸ್‌ ಆಡುವ ವಿಶ್ವಾಸ ಹೊಂದಿದ್ದರು.

ಆದರೆ ಅಂತಿಮವಾಗಿ 52 ಎಸೆತಗಳಲ್ಲಿ 58 ರನ್ ಗಳಿಸಿದರು, ಇದರಲ್ಲಿ 10 ಭರ್ಜರಿ ಬೌಂಡರಿ ಸೇರಿದ್ದವು. ನಾಯಕ ರೋಹಿತ್ ಶರ್ಮಾ ಕೂಡ 49 ಎಸೆತಗಳಲ್ಲಿ 6 ಬೌಂಡರಿ 4 ಭರ್ಜರಿ ಸಿಕ್ಸರ್ ಸಹಿತ 56 ರನ್ ಗಳಿಸಿ ಶದಾಬ್‌ ಖಾನ್‌ಗೆ ವಿಕೆಟ್ ಒಪ್ಪಿಸಿದರು.

ಕೊಹ್ಲಿ - ರಾಹುಲ್ ಆಟ

ಇಬ್ಬರೂ ಆರಂಭಿಕರು ಔಟಾದ ಬಳಿಕ ಜೊತೆಯಾದ ಕೆಎಲ್ ರಾಹುಲ್ ಮತ್ತು ವಿರಾಟ್ ಕೊಹ್ಲಿ ಎಚ್ಚರಿಕೆಯಿಂದ ಬ್ಯಾಟಿಂಗ್ ಮಾಡುತ್ತಿದ್ದರು. ವಿರಾಟ್ ಕೊಹ್ಲಿ 16 ಎಸೆತಗಳಲ್ಲಿ ಅಜೇಯ 8 ರನ್ ಗಳಿಸಿದ್ದರೆ, ಕೆಎಲ್ ರಾಹುಲ್ 28 ಎಸೆತಗಳಲ್ಲಿ 17 ರನ್ ಗಳಿಸಿ ಬ್ಯಾಟಿಂಗ್ ಮಾಡುತ್ತಿದ್ದರು. ಈ ಸಂದರ್ಭದಲ್ಲಿ ಮಳೆ ಬಂದ ಕಾರಣ ಪಂದ್ಯವನ್ನು ಅರ್ಧಕ್ಕೆ ನಿಲ್ಲಿಸಲಾಯಿತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+