ಭಾರತ-ನ್ಯೂಜಿಲೆಂಡ್ ನಡುವಿನ ಹೈವೋಲ್ಟೇಜ್ ಪಂದ್ಯದ ನೇರಪ್ರಸಾರವನ್ನು ಉಚಿತವಾಗಿ ವೀಕ್ಷಿಸಬಹುದು
India Vs New Zealand 3rd T20: ಕ್ರೈಸ್ಟ್‌ಚರ್ಚ್‌ನಲ್ಲಿ ಮಂಗಳವಾರ (ಅಕ್ಟೋಬರ್ 27) ಭಾರತ ಮತ್ತು ನ್ಯೂಜಿಲೆಂಡ್ ನಡುವೆ ಮೂರನೇ ಟಿ20 ಪಂದ್ಯ ನಡೆಯಲಿದೆ. ಈ ಹೈವೋಲ್ಟೇಜ್ ಸಮರವನ್ನು ಉಚಿತವಾಗಿ ವೀಕ್ಷಿಸಬೇಕೆ? ಹಾಗಾದ್ರೆ ಈ ಕುರಿತ ಮಾಹಿತಿ ಇಲ್ಲಿದೆ ನೋಡಿ.
ಭಾರತ ಮತ್ತು ನ್ಯೂಜಿಲೆಂಡ್ ನಡುವೆ ನಡೆಯುತ್ತಿರುವ ಐದು ಪಂದ್ಯಗಳ ರೋಚಕ ಟಿ20 ಸರಣಿ ಸದ್ಯ ಅತ್ಯಂತ ಕುತೂಹಲಕಾರಿ ಘಟ್ಟವನ್ನು ತಲುಪಿದೆ. ಕ್ರೈಸ್ಟ್‌ಚರ್ಚ್‌ನಲ್ಲಿ ನಡೆದ ಸರಣಿಯ ಮೊದಲ ಹಾಗೂ ಎರಡನೇ ಪಂದ್ಯಗಳಲ್ಲಿ ಶ್ರೇಯಸ್ ಅಯ್ಯರ್ ನಾಯಕತ್ವದ ಟೀಮ್ ಇಂಡಿಯಾ ಕ್ರಿಕೆಟ್ ಪಡೆ ಅದ್ಭುತ ಪ್ರದರ್ಶನ ನೀಡಿ 2-0 ಅಂತರದ ಮುನ್ನಡೆ ಸಾಧಿಸಿದೆ.

ಸರಣಿಯಲ್ಲಿ ಸಂಪೂರ್ಣ ಹಿಡಿತ ಸಾಧಿಸಿರುವ ಭಾರತ ತಂಡವು, ಈಗ ಮೂರನೇ ಪಂದ್ಯವನ್ನೂ ಗೆದ್ದು ಇನ್ನೆರಡು ಪಂದ್ಯಗಳು ಬಾಕಿ ಇರುವಂತೆಯೇ ಸರಣಿಯನ್ನು ವಶಪಡಿಸಿಕೊಳ್ಳುವ ಲೆಕ್ಕಾಚಾರದಲ್ಲಿದೆ. ಮತ್ತೊಂದೆಡೆ ಸತತ ಎರಡು ಸೋಲುಗಳಿಂದ ಕಂಗೆಟ್ಟಿರುವ ಆತಿಥೇಯ ನ್ಯೂಜಿಲೆಂಡ್ ಕಮ್‌ಬ್ಯಾಕ್ ಮಾಡುವ ಭರವಸೆಯಲಿದೆ. ಹೀಗಾಗಿ ಉಭಯ ತಂಡಗಳ ನಡುವಿನ ಈ ಸಮರವು ಅಭಿಮಾನಿಗಳಿಗೆ ಭಾರಿ ಮನರಂಜನೆ ನೀಡುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.
ನೇರ ಪ್ರಸಾರ ವೀಕ್ಷಿಸುವುದು ಎಲ್ಲಿ?
ಭಾರತ ಮತ್ತು ನ್ಯೂಜಿಲೆಂಡ್ ಸರಣಿಯ ಪ್ರಸಾರದ ಹಕ್ಕುಗಳನ್ನು ಪ್ರಮುಖ ನೆಟ್‌ವರ್ಕ್‌ಗಳು ಪಡೆದುಕೊಂಡಿದ್ದು, ಟಿವಿ ಹಾಗೂ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳಲ್ಲಿ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿದೆ. ಹಾಗಾದ್ರೆ ಯಾವುದರಲ್ಲಿ ಉಚಿತವಾಗಿ ಎಲ್ಲಿ ವೀಕ್ಷಣೆ ಮಾಡಬಹುದು ಎನ್ನುವ ಪ್ರಶ್ನೆಗೆ ಉತ್ತರ ಇಲ್ಲಿದೆ ನೋಡಿ.
* ಭಾರತದಲ್ಲಿ ಈ ಸರಣಿಯ ಅಧಿಕೃತ ನೇರ ಪ್ರಸಾರದ ಹಕ್ಕನ್ನು ಸೋನಿ ಸ್ಪೋರ್ಟ್ಸ್ ನೆಟ್‌ವರ್ಕ್ (Sony Sports Network) ಪಡೆದುಕೊಂಡಿದೆ. ಕ್ರೀಡಾಭಿಮಾನಿಗಳು ಸೋನಿ ಸ್ಪೋರ್ಟ್ಸ್‌ನ ವಿವಿಧ ಭಾಷಿಕ ಚಾನೆಲ್‌ಗಳಲ್ಲಿ ಪಂದ್ಯದ ನೇರ ಪ್ರಸಾರವನ್ನು ವೀಕ್ಷಣೆ ಮಾಬಹುದು.
* ಮೊಬೈಲ್ ಮತ್ತು ಲ್ಯಾಪ್‌ಟಾಪ್: ಸೋನಿ ಲಿವ್ (Sony LIV) ಆ್ಯಪ್ ಹಾಗೂ ಅಧಿಕೃತ ವೆಬ್‌ಸೈಟ್ ಮೂಲಕ ಲೈವ್ ಸ್ಟ್ರೀಮಿಂಗ್ ನೋಡಬಹುದು.
* ಆದರೆ ಸೋನಿ ಸ್ಪೋರ್ಟ್ಸ್ ಚಾನೆಲ್‌ಗಳು ಮತ್ತು ಸೋನಿ ಲಿವ್ ಆ್ಯಪ್‌ನಲ್ಲಿ ವೀಕ್ಷಿಸಲು ಸೂಕ್ತ ಹಣ ಪಾವತಿಸಿ ಸಬ್‌ಸ್ಕ್ರಿಪ್ಷನ್ (ಚಂದಾದಾರಿಕೆ) ಪಡೆದುಕೊಳ್ಳುವುದು ಕಡ್ಡಾಯವಾಗಿದೆ.
ಉಚಿತವಾಗಿ ವೀಕ್ಷಿಸುವುದು ಹೇಗೆ?
* ಯಾವುದೇ ರೀತಿಯ ಹಣ ಪಾವತಿಸದೆ ಉಚಿತವಾಗಿ ಪಂದ್ಯವನ್ನು ವೀಕ್ಷಿಸಲು ಬಯಸುವ ಕ್ರೀಡಾಭಿಮಾನಿಗಳಿಗೆ ಉತ್ತಮ ಅವಕಾಶವಿದೆ. ನಿಮ್ಮಲ್ಲಿ ಡಿಡಿ ಫ್ರೀ ಡಿಶ್ ಸಂಪರ್ಕವಿದ್ದರೆ, ಡಿಡಿ ಸ್ಪೋರ್ಟ್ಸ್ (DD Sports) ಚಾನೆಲ್‌ನಲ್ಲಿ ಈ ಪಂದ್ಯವನ್ನು ಸಂಪೂರ್ಣವಾಗಿ ಉಚಿತವಾಗಿ ವೀಕ್ಷಣೆ ಮಾಡಬಹುದಾಗಿದೆ.
* ಡಿಡಿ ಸ್ಪೋರ್ಟ್ಸ್ ಉಚಿತ (Free-to-Air) ಚಾನೆಲ್ ಆಗಿರುವುದರಿಂದ ಯಾವುದೇ ಹೆಚ್ಚುವರಿ ಸಬ್‌ಸ್ಕ್ರಿಪ್ಷನ್ ಶುಲ್ಕವಿಲ್ಲದೆ ಪಂದ್ಯದ ಪ್ರತಿಯೊಂದು ಕ್ಷಣವನ್ನು ಆನಂದಿಸಬಹುದಾಗಿದೆ.
ಪಂದ್ಯದ ಸಮಯ ಮತ್ತು ಸ್ಥಳ
* ದಿನಾಂಕ: ಅಕ್ಟೋಬರ್ 27 (ಮಂಗಳವಾರ)
* ಪಂದ್ಯ ನಡೆಯುವ ಸ್ಥಳ: ವೆಲ್ಲಿಂಗ್ಟನ್‌ನ ಸ್ಕೈ ಸ್ಟೇಡಿಯಂ
* ಟಾಸ್ ಸಮಯ: ಭಾರತೀಯ ಕಾಲಮಾನ ಮಧ್ಯಾಹ್ನ 12:00 ಗಂಟೆಗೆ
* ಆರಂಭದ ಸಮಯ: ಭಾರತೀಯ ಕಾಲಮಾನ ಮಧ್ಯಾಹ್ನ 12:30ಕ್ಕೆ
ಭಾರತ ತಂಡ
ಶ್ರೇಯಸ್ ಅಯ್ಯರ್(ನಾಯಕ), ಸಂಜು ಸ್ಯಾಮ್ಸನ್(ವಿಕೆಟ್ ಕೀಪರ್), ಅಭಿಷೇಕ್ ಶರ್ಮಾ, ತಿಲಕ್ ವರ್ಮಾ (ಉಪನಾಯಕ), ನಮನ್ ಧೀರ್, ನಿತೀಶ್ ಕುಮಾರ್ ರೆಡ್ಡಿ, ಅಕ್ಷರ್ ಪಟೇಲ್, ಭುವನೇಶ್ವರ್ ಕುಮಾರ್, ಪ್ರಿನ್ಸ್ ಯಾದವ್, ಮಯಾಂಕ್ ಯಾದವ್, ಕುಲ್ದೀಪ್ ಯಾದವ್, ಶಿವಂ ದುಬೆ, ವರುಣ್ ಚಕ್ರವರ್ತಿ, ಅರ್ಶದೀಪ್ ಸಿಂಗ್, ವೈಭವ್ ಸೂರ್ಯವಂಶಿ, ಕುಮಾರ್ ಕುಶಾಗ್ರ.
ನ್ಯೂಜಿಲೆಂಡ್ ತಂಡ
ಮಿಚೆಲ್ ಸ್ಯಾಂಟ್ನರ್(ನಾಯಕ), ಫಿನ್ ಅಲೆನ್, ಟಿಮ್ ಸೀಫರ್ಟ್(ವಿಕೆಟ್ ಕೀಪರ್), ಡೆವೊನ್ ಕಾನ್ವೆ, ಗ್ಲೆನ್ ಫಿಲಿಫ್ಸ್, ಡೇರಲ್ ಮಿಚೆಲ್, ಮೈಕಲ್ ಬ್ರೇಸ್‌ವೆಲ್, ನೇಥನ್ ಸ್ಮಿತ್, ಕೈಲ್ ಜೇಮಿಸನ್, ಲಾಕಿ ಫರ್ಗ್ಯೂಸನ್, ಜೋಶ್ ಕ್ಲಾರ್ಕ್‌ಸನ್, ಜೇಕಬ್ ಡಫಿ, ಬೆವೊನ್ ಜೇಕಬ್ಸ್, ಆಡಂ ಮಿಲ್ನೆ, ಬ್ಲೈರ್ ಟಿಕ್ನರ್.


Click it and Unblock the Notifications
