U19 Women's Asia Cup: ಮೊದಲ ಆವೃತ್ತಿಯಲ್ಲೇ ಚಾಂಪಿಯನ್ ಆದ ಭಾರತ

ಪುರುಷರ ಅಂಡರ್ 19 ಏಷ್ಯಾಕಪ್‌ ಫೈನಲ್‌ನಲ್ಲಿ ಸೋತು ಆಘಾತ ಅನುಭವಿಸಿದ್ದ ಭಾರತಕ್ಕೆ ಮಹಿಳಾ ತಂಡ ಗೆಲುವಿನ ಟಾನಿಕ್ ಕೊಟ್ಟಿದೆ. ಫೈನಲ್‌ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ ಭರ್ಜರಿ ಗೆಲುವು ಸಾಧಿಸಿದ ಭಾರತ ಮಹಿಳಾ ತಂಡ ಅಂಡರ್ 19 ಮಹಿಳಾ ಏಷ್ಯಾಕಪ್‌ ಉದ್ಘಾಟನಾ ಆವೃತ್ತಿಯಲ್ಲೇ ಚಾಂಪಿಯನ್ ಆದ ಸಾಧನೆ ಮಾಡಿದೆ.

ಕೌಲಾಲಂಪುರದಲ್ಲಿ ಭಾನುವಾರ ನಡೆದ ಫೈನಲ್ ಪಂದ್ಯದಲ್ಲಿ ಭಾರತ ಮಹಿಳಾ ತಂಡ ಅತ್ಯುತ್ತಮ ಪ್ರದರ್ಶನ ನೀಡಿತು. ಗೊಂಗಾಡಿ ತ್ರಿಷಾ ಬ್ಯಾಟಿಂಗ್‌ನಲ್ಲಿ ಮಿಂಚಿದರೆ ಬೌಲರ್ ಗಳ ಸಾಂಘಿಕ ಪ್ರದರ್ಶನದಿಂದ ಭಾರತ ಫೈನಲ್‌ನಲ್ಲಿ ಸುಲಭ ಗೆಲುವು ಸಾಧಿಸಿ ಮಿಂಚಿತು.

india under 19 womens asia cup champions

2023ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ನಡೆದ ಮಹಿಳಾ ಟಿ20 ವಿಶ್ವಕಪ್‌ನಲ್ಲಿ ಭಾರತದ ಗೆಲುವಿನಲ್ಲಿ ಮುಖ್ಯ ಕಾರಣವಾಗಿದ್ದ ತ್ರಿಶಾ ಅತ್ಯುತ್ತಮ ಬ್ಯಾಟಿಂಗ್‌ ಮೂಲಕ ಕೌಲಾಲಂಪುರದಲ್ಲಿ ಭಾರತದ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದರು.

ಟಾಸ್ ಗೆದ್ದ ಬಾಂಗ್ಲಾದೇಶ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿತು. ಮೊದಲು ಬ್ಯಾಟಿಂಗ್ ಮಾಡಿದ ಭಾರತ 20 ಓವರ್ ಗಳಲ್ಲಿ 7 ವಿಕೆಟ್ ಕಳೆದುಕೊಂಡು 117 ರನ್‌ಗಳ ಸಾಧಾರಣ ಮೊತ್ತ ಕಲೆಹಾಕಿತು. ತ್ರಿಶಾ ಬಿಟ್ಟರೆ ಉಳಿದ ಯಾವೊಬ್ಬ ಬ್ಯಾಟರ್ ಕೂಡ ದೊಡ್ಡ ಮೊತ್ತ ಗಳಿಸಲು ಆಗಲಿಲ್ಲ.

ಏಕಾಂಗಿ ಹೋರಾಟ ನೀಡಿದ ತ್ರಿಶಾ 47 ಎಸೆತಗಳಲ್ಲಿ 5 ಬೌಂಡರಿ 2 ಸಿಕ್ಸರ್ ಸಹಿತ 52 ರನ್ ಗಳಿಸಿದರು. ಮಿಥಿಲಾ ವಿನೋದ್ 17 ರನ್ ಗಳಿಸಿದರೆ, ನಿಕಿ ಪ್ರಸಾದ್ 12 ರನ್ ಮತ್ತು ಆಯುಶಿ ಶುಕ್ಲಾ 10 ರನ್ ಗಳಿಸಿದರು. ಉಳಿದ ಬ್ಯಾಟರ್ ಗಳು ಕೇವಲ ಒಂದಂಕಿ ರನ್ ಮಾತ್ರ ಗಳಿಸಿದರು. ಬಾಂಗ್ಲಾದೇಶದ ಪರವಾಗಿ 4 ವಿಕೆಟ್ ಪಡೆದ ಫರ್ಜಾನ ಇಯಾಸ್ಮಿನ್ ಯಶಸ್ವಿ ಬೌಲರ್ ಎನಿಸಿಕೊಂಡರು.

ಭಾರತದ ಮಾರಕ ಬೌಲಿಂಗ್

118 ರನ್‌ಗಳ ಸಾಧಾರಣ ಗುರಿಯನ್ನು ಬೆನ್ನತ್ತಿದ ಬಾಂಗ್ಲಾದೇಶ ಭಾರತದ ಬಿಗಿ ಬೌಲಿಂಗ್ ದಾಳಿ ಎದುರು ಮಕಾಡೆ ಮಲಗಿತು.18.3 ಓವರ್ ಗಳಲ್ಲಿ 76 ರನ್ ಗಳಿಸುವಷ್ಟರಲ್ಲಿ ಆಲೌಟ್ ಆಗುವ ಮೂಲಕ ಸೋಲೊಪ್ಪಿಕೊಂಡಿತು.

ಆರಂಭಿಕರಾದ ಮೊಸಮ್ಮತ್ ಇವಾ 2 ಎಸೆತಗಳಲ್ಲಿ ಯಾವುದೇ ರನ್ ಗಳಿಸಿದೆ ಔಟಾದರು. ಸುಮಯ್ಯಾ ಅಖ್ತರ್ ಕೇವಲ 8 ರನ್ ಗಳಿಸಿ ಔಟಾದರು. ಫಹೋಮಿದಾ ಚೋಯಾ 18 ರನ್ ಗಳಿಸಿದರೆ, ಜುವೈರಿಯಾ ಫೆರ್ದೌಸ್ 22 ರನ್ ಗಳಿಸಿದರು. ಈ ಜೋಡಿ ಕೆಲ ಹೊತ್ತು ಬಾಂಗ್ಲಾದೇಶಕ್ಕೆ ಗೆಲುವಿನ ಭರವಸೆ ನೀಡಿದರೂ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ಉಳಿಯಲು ಆಗಲಿಲ್ಲ. ಇವರಿಬ್ಬರನ್ನು ಹೊರತುಪಡಿಸಿ ಉಳಿದ ಯಾವ ಬ್ಯಾಟರ್ ಕೂಡ ಎರಡಂಕಿ ದಾಟಲಿಲ್ಲ.

ಆಯುಶಿ ಶುಕ್ಲಾ 3.3 ಓವರ್ ಗಳಲ್ಲಿ 17 ರನ್ ನೀಡಿ 3 ವಿಕೆಟ್ ಪಡೆದು ಮಿಂಚಿದರು. ಪರುಣಿಕಾ ಸಿಸೋಡಿಯಾ ಮತ್ತು ಸೋನಮ್ ಯಾದವ್ ತಲಾ ಎರಡು ವಿಕೆಟ್ ಪಡೆದುಕೊಂಡರು. ವಿಜೆ ಜೋಶಿರಾ ಒಂದು ವಿಕೆಟ್ ಪಡೆದರು.

Photo courtesy; bcci

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+