ವಿಶ್ವಕಪ್‌ನಲ್ಲಿ ಮತ್ತೆ ಭಾರತ-ಪಾಕಿಸ್ತಾನ ಫೈಟ್: ಯಾವಾಗ?
ಭಾರತ ಹಾಗೂ ಪಾಕಿಸ್ತಾನ ನಡುವಣ ಫೈಟ್ ಅಂದ್ರೆ ಅಭಿಮಾನಿಗಳು ಈ ಪಂದ್ಯಕ್ಕಾಗಿ ತುದಿಗಾಲಿನಲ್ಲಿ ನಿಲ್ಲುತ್ತಾರೆ. ಉಭಯ ದೇಶಗಳ ನಡುವಣ ದ್ವಿಪಕ್ಷೀಯ ಸರಣಿಗಳು ನಿಂತು ವರ್ಷಗಳೇ ಕಳೆದಿವೆ. ಆದರೆ ಈ ಉಭಯ ತಂಡಗಳು ಈಗ ಐಸಿಸಿ ಟೂರ್ನಿಗಳಲ್ಲಿ ಮಾತ್ರ ಕಾದಾಟ ನಡೆಸುತ್ತವೆ. ಈಗ ಟೀಮ್ ಇಂಡಿಯಾ ಮತ್ತೆ ಪಾಕಿಸ್ತಾನ ಮತ್ತೊಮ್ಮೆ ಕ್ರಿಕೆಟ್ ಅಖಾಡದಲ್ಲಿ ಎದುರಾಗಲಿವೆ. ಯಾವ ಟೂರ್ನಿಯಲ್ಲಿ ಎರಡೂ ದೇಶಗಳು ಕಾದಾಟ ನಡೆಸಲಿವೆ ಎಂಬ ಬಗ್ಗೆ ಮಾಹಿತಿ ಇಲ್ಲಿದೆ.
ಈ ವರ್ಷದದಲ್ಲಿ ಭಾರತ ಮಹಿಳಾ ವಿಶ್ವಕಪ್ ಆಯೋಜಿಸುತ್ತಿದೆ. ಈ ಟೂರ್ನಿಗೆ ಸಂಬಂಧಿಸಿದಂತೆ ದೊಡ್ಡ ಸುದ್ದಿಯೊಂದು ಬಂದಿದೆ. ಎಲ್ಲವೂ ಅಂದುಕೊಂಡಂತೆ ಆದರೆ ಭಾರತ ಹಾಗೂ ಪಾಕಿಸ್ತಾನ ತಂಡಗಳು ಅಕ್ಟೋಬರ್ 5 ರಂದು ಶ್ರೀಲಂಕಾದ ಕೋಲಂಬೊದಲ್ಲಿ ಕಾದಾಟ ನಡೆಸಲಿವೆ. ಉಭಯ ತಂಡಗಳು ತಟಸ್ಥ ಸ್ಥಳದಲ್ಲಿ ಹೋರಾಟ ನಡೆಸಲಿವೆ. ಬಿಸಿಸಿಐ ಹಾಗೂ ಪಿಸಿಬಿ ನಡುವಿನ ಒಪ್ಪಂದದಂತೆ ಈ ಸ್ಥಳವನ್ನು ನಿಗದಿಪಡಿಸಲಾಗುತ್ತದೆ. ಉಭಯ ದೇಶಗಳ ಫೈಟ್ ಕಣ್ಣು ತುಂಬಿಕೊಳ್ಳಲು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.

ಭಾರತದಲ್ಲಿ ನಡೆಯಲಿರುವ ಮಹಿಳಾ ಏಕದಿನ ವಿಶ್ವಕಪ್ ಸೆಪ್ಟಂಬರ್ 30 ರಿಂದ ಆರಂಭವಾಗುತ್ತದೆ. ಉದ್ಘಾಟನಾ ಪಂದ್ಯದಲ್ಲಿ ಭಾರತ ಹಾಗೂ ಶ್ರೀಲಂಕಾ ತಂಡಗಳು ಕಾದಾಟ ನಡೆಸಲಿವೆ. ಇಎಸ್‌ಪಿಎನ್ ಕ್ರಿಕ್‌ಇನ್ಫೋ ವರದಿಯ ಪ್ರಕಾರ ಭಾರತ ಹಲವು ಅಂಗಳದಲ್ಲಿ ಈ ಪಂದ್ಯಗಳನ್ನು ಆಡಲಿದೆ. ಬೆಂಗಳೂರು ಹಾಗೂ ಕೋಲಂಬೊದಲ್ಲಿ ಭಾರತ ತನ್ನು ಪಂದ್ಯಗಳನ್ನು ಆಡಲಿದೆ. ಬೆಂಗಳೂರನಲ್ಲಿ ಭಾರತ ಅಕ್ಟೋಬರ್ 26 ರಂದು ಬಾಂಗ್ಲಾ ವಿರುದ್ಧ ಕಾದಾಟ ನಡೆಸಲಿದೆ. ಈ ವಿಶ್ವಕಪ್ ರೌಂಡ್ ರಾಬಿನ್ ಫಾರ್ಮೆಟ್‌ನಲ್ಲಿ ಆಡಲಾಗುತ್ತದೆ.
ಬಿಗ್ ಫೈಟ್
ಪಾಕಿಸ್ತಾನ ಏಕದಿನ ವಿಶ್ವಕಪ್‌ಗೆ ಲಾಹೋರ್‌ದಲ್ಲಿ ನಡೆದ ಅರ್ಹತಾ ಪಂದ್ಯಗಳ ಮೂಲಕ ಅರ್ಹತೆ ಪಡೆದಿದೆ. ಪಾಕ್ ಈ ವಿಶ್ವಕಪ್‌ನಲ್ಲಿ ತನ್ನ ಎಲ್ಲ ಪಂದ್ಯಗಳನ್ನು ಕೋಲಂಬೊದಲ್ಲಿ ಆಡಲಿದೆ. ಉಭಯ ದೇಶಗಳಲ್ಲಿ ಐಸಿಸಿ ಟೂರ್ನಿಗಳು ಆಯೋಜಿತವಾದರೆ, ಎರಡೂ ದೇಶಗಳು ತಟಸ್ಥ ಸ್ಥಳದಲ್ಲಿ ಪಂದ್ಯವನ್ನು ಆಡುವುದಾಗಿ ಒಪ್ಪಂದವನ್ನು ಮಾಡಿಕೊಂಡಿವೆ. ಹೀಗಾಗಿ ಪಾಕ್ ಭಾರತ ವಿಶ್ವಕಪ್ ಆಯೋಜಿಸಿದರೂ ಸಹ ತನ್ನ ಎಲ್ಲ ಪಂದ್ಯಗಳನ್ನು ಕೋಲಂಬೊದಲ್ಲಿ ಆಡಲಿದೆ. ಪಾಕ್‌ನಲ್ಲಿ ನಡೆದ ಚಾಂಪಿಯನ್ಸ್ ಟ್ರೋಪಿಗೂ ಟೀಮ್ ಇಂಡಿಯಾ ಪ್ರಯಾಣ ಬೆಳೆಸಿರಲಿಲ್ಲ. ತನ್ನ ಎಲ್ಲ ಪಂದ್ಯಗಳನ್ನು ಭಾರತ ದುಬೈನಲ್ಲಿ ಆಡಿತ್ತು.
ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ ಅಕ್ಟೋಬರ್ 1 ರಂದು ನ್ಯೂಜಿಲೆಂಡ್ ವಿರುದ್ಧದ ಪಂದ್ಯದ ಮೂಲಕ ತನ್ನ ಅಭಿಯಾನವನ್ನು ಆರಂಭಿಸಲಿದೆ. ಇನ್ನು ಪಾಕಿಸ್ತಾನ ವಿರುದ್ಧ ಅ.8ರಂದು ಕೋಲಂಬೊದಲ್ಲಿ ಪಂದ್ಯವನ್ನು ಆಡಲಿದೆ. ಟೂರ್ನಿಯಲ್ಲಿ ಒಟ್ಟು 28 ಲೀಗ್ ಪಂದ್ಯಗಳು ನಡೆಯಲಿದ್ದು, ಮೂರು ನಾಕೌಟ್ ಪಂದ್ಯಗಳು ನಡೆಯಲಿವೆ. ಒಟ್ಟಾರೆ ಈ ಬಾರಿಯ ಮಹಿಳಾ ವಿಶ್ವಕಪ್ ಐದು ಸ್ಥಳಗಳಲ್ಲಿ ನಡೆಯಲಿದೆ. ಅಕ್ಟೋಬರ್ 29, 30 ರಂದು ಸೆಮಿಫೈನಲ್ ಪಂದ್ಯಗಳು ನಡೆಯಲಿವೆ. ಇನ್ನು ನವೆಂಬರ್ 2ರಂದು ಫೈನಲ್ ಪಂದ್ಯ ನಡೆಯಲಿದೆ.












Click it and Unblock the Notifications