Vinesh Phogat: ವಿನೇಶ್ ಫೋಗಟ್‌ಗೆ ಬೆಳ್ಳಿ ಪದಕ ಬರೋದು ಗ್ಯಾರಂಟಿ?
ಭಾರತದ ಹೆಮ್ಮೆಯ ಪುತ್ರಿ ವಿನೇಶ್ ಫೋಗಟ್ ಒಲಿಂಪಿಕ್ಸ್ ಕುಸ್ತಿ ಅಖಾಡದಲ್ಲಿ ಬೆಳ್ಳಿ ಪದಕ ಗೆದ್ದಿದ್ದರೂ, ಒಲಿಂಪಿಕ್ಸ್ ಸಮಿತಿ ನಿಯಮದ ಪರಿಣಾಮ ಬೆಳ್ಳಿ ಪದಕ ಪಡೆಯಲು ಆಗುತ್ತಿಲ್ಲ. 50 ಕೆಜಿ ತೂಕ ವಿಭಾಗದ ಕುಸ್ತಿ ಸ್ಪರ್ಧೆಯಲ್ಲಿ ಕೇವಲ 100 ಗ್ರಾಂ ತೂಕ ಹೆಚ್ಚಾಗಿದೆ ಅನ್ನೋ ಕಾರಣಕ್ಕೆ, ವಿನೇಶ್ ಫೋಗಟ್ ಬೆಳ್ಳಿ ಪದಕ ಕಳೆದುಕೊಂಡರು. ಅಲ್ಲದೆ ಚಿನ್ನದ ಪದಕವನ್ನ ಗೆಲ್ಲುವ ಅವಕಾಶ ಕೂಡ ಕಳೆದುಕೊಂಡಿದ್ದರು. ಆದರೆ, ಇದೀಗ ಈ ವಿಚಾರದಲ್ಲಿ ಭರ್ಜರಿ ಸಿಹಿಸುದ್ದಿ ಸಿಕ್ಕಂತಾಗಿದೆ!
ಭಾರತೀಯ ಕ್ರೀಡಾ ಲೋಕಕ್ಕೆ ದೊಡ್ಡ ಆಘಾತ ನೀಡಿದ ಒಲಿಂಪಿಕ್ಸ್ ಅಂದ್ರೆ ಅದು ಪ್ಯಾರಿಸ್ ಒಲಿಂಪಿಕ್ಸ್ ಎನ್ನಬಹುದು. ಯಾಕಂದ್ರೆ ಭಾರತದ ವಿನೇಶ್ ಫೋಗಟ್ ಸೆಮಿಫೈನಲ್ ಮ್ಯಾಚ್ ಗೆದ್ದು, ಬೆಳ್ಳಿ ಪದಕ ಗ್ಯಾರಂಟಿ ಮಾಡಿಕೊಂಡು ಚಿನ್ನದ ಪದಕಕ್ಕಾಗಿ ಮ್ಯಾಚ್ ಆಡುತ್ತಿದ್ದರು ಕೂಡ 'ಒಲಿಂಪಿಕ್ಸ್ ಸಮಿತಿ' ಕೇವಲ 100 ಗ್ರಾಂ ತೂಕ ಹೆಚ್ಚಾಗಿದೆ ಎಂಬ ಕಾರಣಕ್ಕೆ ವಿನೇಶ್ ಫೋಗಟ್ ಅವರನ್ನು ಅನರ್ಹ ಮಾಡಿತ್ತು. ಈ ವಿಚಾರ ತಿಳಿಯುತ್ತಿದ್ದಂತೆ ಭಾರತೀಯರು & ಇಡೀ ಜಾಗತಿಕ ಕ್ರೀಡಾ ಲೋಕ ಆಕ್ರೋಶ ಹೊರಹಾಕಿತ್ತು. ಇದೀಗ ಈ ಆಕ್ರೋಶಕ್ಕೆ ಮಣಿದು ಭಾರತದ ವಿನೇಶ್ ಫೋಗಟ್ ಅವರಿಗೆ ಬೆಳ್ಳಿ ಪದಕ ನೀಡಲು 'ಒಲಿಂಪಿಕ್ಸ್ ಸಮಿತಿ' ನಿರ್ಧಾರ ಕೈಗೊಂಡಿದೆ ಎನ್ನಲಾಗಿದೆ.

ವಿನೇಶ್ ಫೋಗಟ್ ಬೆಳ್ಳಿ ಪದಕ?
ಭಾರತದ ವಿನೇಶ್ ಫೋಗಟ್ ಅವರು ಬೆಳ್ಳಿ ಪದಕ ಪಡೆಯಲು ಕೂಡ ಅನರ್ಹ ಮಾಡಿರುವ ರೆಫ್ರಿಗಳ ನಿರ್ಧಾರಕ್ಕೆ ಆಕ್ರೋಶ ವ್ಯಕ್ತವಾಗಿತ್ತು. ಅಲ್ಲದೆ ಈ ಬಗ್ಗೆ ನೇರವಾಗಿ ವಿನೇಶ್ ಫೋಗಟ್ ಅವರು ಮೇಲ್ಮನವಿ ಸಲ್ಲಿಸಿದ್ದರು. ಈ ವಿಚಾರಕ್ಕೆ ಸಂಬಂಧಪಟ್ಟಂತೆ ಕ್ರೀಡಾ ನ್ಯಾಯಮಂಡಳಿ ವಿಚಾರಣೆ ನಡೆಸಿದ್ದು, ಇಂದು ಸಂಜೆ ಸಮಯಕ್ಕೆ ಸರಿಯಾಗಿ ಅಂದ್ರೆ ಆಗಸ್ಟ್ 11ರ ಭಾನುವಾರ ಸಂಜೆ 6 ಗಂಟೆಗೆ ತೀರ್ಪು ಪ್ರಕಟಿಸುವ ಸಾಧ್ಯತೆ ಇದೆ. ಈ ಮೂಲಕ ವಿನೇಶ್ ಫೋಗಟ್ ಅವರಿಗೆ ಇಂದು ಸಂಜೆ ಬೆಳ್ಳಿ ಪದಕ ಸಿಕ್ಕರೆ ಭಾರತಕ್ಕೆ ಮತ್ತೊಂದು ಪದಕ ಕೂಡ ಸೇರಿಕೊಳ್ಳಲಿದೆ.
5-0 ಅಂತರದಿಂದ ಸೋಲಿಸಿ...
ಆಗಸ್ಟ್ 6ರಂದು ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ನಡೆದಿದ್ದ ಮಹಿಳೆಯರ 50 ಕೆಜಿ ತೂಕ ವಿಭಾಗದ ಕುಸ್ತಿ ಸ್ಪರ್ಧೆಯ, ಸೆಮಿಫೈನಲ್ ಪಂದ್ಯದಲ್ಲಿ ಭರ್ಜರಿ ಜಯ ಸಾಧಿಸಿದ್ದರು ವಿನೇಶ್ ಫೋಗಟ್. ಕ್ಯೂಬಾದ ಗುಜ್ಮನ್ ಲೋಪೆಜ್ ಅವರನ್ನ 5-0 ಅಂತರದಿಂದ ಸೋಲಿಸಿ ಫೈನಲ್‌ಗೆ ಪ್ರವೇಶಿಸಿದ್ದ ಭಾರತದ ಕುಸ್ತಿಪಟು ವಿನೇಶ್ ಫೋಗಟ್ ಸ್ಪರ್ಧೆಯಿಂದ ಅನರ್ಹ ಆಗಿದ್ದರು. ಇದಕ್ಕೆಲ್ಲಾ ಕಾರಣ ಅವರ ತೂಕದಲ್ಲಿ ಏರಿಕೆ ಆಗಿದ್ದು ಎಂದು ಹೇಳಲಾಗಿತ್ತು. ಕೇವಲ 100 ಗ್ರಾಂ ತೂಕ ಹೆಚ್ಚು ಆಗಿದೆ ಎಂಬ ಕಾರಣಕ್ಕೆ ಹೀಗೆಲ್ಲಾ ಮಾಡಿರುವುದು ಆಕ್ರೋಶ ಮೊಳಗುವಂತೆ ಮಾಡಿತ್ತು. ಈ ಕಾರಣಕ್ಕೆ ವಿನೇಶ್ ಫೋಗಟ್ ಅವರು ಮೇಲ್ಮನವಿ ಕೂಡ ಸಲ್ಲಿಸಿದ್ದರು. ಅದರ ತೀರ್ಪು ಇಂದು ಸಂಜೆ ಹೊರಬೀಳಲಿದ್ದು, ಹೀಗಾಗಿ ಭಾರಿ ಕುತೂಹಲ ಕೆರಳಿದೆ.
ವಿನೇಶ್ ಫೋಗಟ್ ಕಣ್ಣೀರು ಹಾಕಿದ್ದರು
ಈ ವಿಚಾರದ ದೊಡ್ಡ ಮಟ್ಟದ ತಿರುವು ಪಡೆಯುತ್ತಿದ್ದು, ಮುಂದಿನ ದಿನಗಳಲ್ಲಿ ಈ ಬಗ್ಗೆಯೂ ಮಾಹಿತಿ ಸಿಗಬಹುದು ಎಂಬ ಚರ್ಚೆ ಶುರುವಾಗಿದೆ ಅಲ್ಲದೆ ಮತ್ತೊಂದು ಕಡೆ ವಿನೇಶ್ ಫೋಗಟ್ ಅವರು ಪದಕ ಕಳೆದುಕೊಂಡ ದುಖಃದಲ್ಲಿ ಕಣ್ಣೀರು ಹಾಕಿ ಆಸ್ಪತ್ರೆ ಸೇರಿದ್ದರು. ಇಷ್ಟೆಲ್ಲದರ ನಡುವೆ ಕೂಡ ಈಗ ಸಂಭ್ರಮ ಮನೆಮಾಡಿದ್ದು, ಇಂದು ಸಂಜೆ ವಿನೇಶ್ ಫೋಗಟ್ ಅವರಿಗೆ ಬೆಳ್ಳಿ ಪದಕ ಸಿಗುವ ಸಾಧ್ಯತೆ ದಟ್ಟವಾಗಿದೆ.
ಎಷ್ಟು ಪದಕ ಗೆದ್ದಿದೆ ಭಾರತ?
ಭಾರತ ಪ್ಯಾರಿಸ್ ಒಲಿಂಪಿಕ್ಸ್-2024 ಕ್ರೀಡಾಕೂಟದಲ್ಲಿ ಈವರೆಗೂ ಒಟ್ಟು 6 ಪದಕ ಗೆದ್ದಿದೆ. ಇದರಲ್ಲಿ 1 ಬೆಳ್ಳಿ ಹಾಗೂ 5 ಕಂಚು ಸೇರಿದೆ. ಇದೀಗ ವಿನೇಶ್ ಫೋಗಟ್ ಅವರಿಗೆ ಇಂದು ಸಂಜೆ 1 ಬೆಳ್ಳಿ ಪದಕ ಘೋಷಣೆ ಆದರೆ ಆಗ ಭಾರತದ ಪದಕಗಳ ಸಂಖ್ಯೆ 7ಕ್ಕೆ ಏರಿಕೆಯನ್ನ ಕಾಣಲಿದೆ. ಹಾಗೇ ಭಾರತ ಪ್ಯಾರಿಸ್ ಒಲಿಂಪಿಕ್ಸ್ ಪದಕ ಪಟ್ಟಿಯಲ್ಲಿ ಕೂಡ ಮತ್ತಷ್ಟು ಮೇಲೆ ಏರಲಿದೆ. ಹೀಗಾಗಿ ಶತಕೋಟಿ ಭಾರತೀಯರು ಈ ಕ್ಷಣಕ್ಕಾಗಿ ಕಾಯುತ್ತಿದ್ದು, ಶೀಘ್ರದಲ್ಲೇ ಈ ಬಗ್ಗೆ ಭರ್ಜರಿ ಸುದ್ದಿ ಸಿಗುವ ನಿರೀಕ್ಷೆ ಇದೆ.












Click it and Unblock the Notifications