T20 World Cup: ಐಪಿಎಲ್‌ನಲ್ಲಿ ಟೀಮ್ ಇಂಡಿಯಾಕ್ಕೆ ಸಿಕ್ಕ ಮೂವರು ಫಿನಿಶರ್: ರಿಂಕು ಸಿಂಗ್‌ಗೆ ನಡುಕ
ಟಿ20 ವಿಶ್ವಕಪ್‌ಗೆ ಎಲ್ಲ ತಂಡಗಳು ಭರ್ಜರಿ ತಯಾರಿ ನಡೆಸಿವೆ. ಈ ನಿಟ್ಟಿನಲ್ಲಿ ಟೀಮ್ ಇಂಡಿಯಾ ಸಹ ಮತ್ತೊಮ್ಮೆ ಕಪ್ ಎತ್ತಲು ಬೇಕಾಗಿರುವ ಎಲ್ಲ ತಂತ್ರವನ್ನು ಬಳಸಿಕೊಳ್ಳುತ್ತಿದೆ. ಇನ್ನೇನು ಕೆಲವೇ ದಿನಗಳಲ್ಲಿ ಟೀಮ್ ಇಂಡಿಯಾವನ್ನು ಬಿಸಿಸಿಐ ಆಯ್ಕೆ ಸಮಿತಿ ಪ್ರಕಟಿಸುವ ಸಾಧ್ಯತೆ ಇದೆ. ಯುವ ಆಟಗಾರರು ಸಹ ತಮ್ಮನ್ನು ಸಹ ಪರಿಗಣಿಸಿ ಎಂದು ಆಯ್ಕೆದಾರರ ಕದ ತಟ್ಟುತ್ತಿದ್ದಾರೆ.
17ನೇ ಆವೃತ್ತಿಯ ಐಪಿಎಲ್ ಆರಂಭವಾಗಿದೆ. ಟೀಮ್ ಇಂಡಿಯಾದ ಯುವ ಆಟಗಾರರು ತಮ್ಮ ಕ್ಷಮತೆಯನ್ನು ಪ್ರದರ್ಶಿಸುತ್ತಿದ್ದಾರೆ. ಈ ಮೂಲಕ ಟಿ20 ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆಯುವ ಕನಸು ಕಾಣುತ್ತಿದ್ದಾರೆ. ಅನ್‌ಕ್ಯಾಪ್ಡ್ ಯುವ ಆಟಗಾರರು ಧಮಾಕೆದಾರ್ ಪ್ರದರ್ಶನ ನೀಡುತ್ತಿದ್ದು ಎಲ್ಲರ ಚಿತ್ತ ಕದ್ದಿದ್ದಾರೆ. ಟೀಮ್ ಇಂಡಿಯಾದ ಮ್ಯಾಚ್ ಫಿನಿಶರ್ ಪಾತ್ರಕ್ಕೆ ಯುವ ಆಟಗಾರರು ಕರ್ಚಿಫ್ ಹಾಕುತ್ತಿದ್ದಾರೆ.

ರಿಂಕು ಸಿಂಗ್‌ಗೆ ನಡುಕ
ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಈಗಾಗಲೇ ಪದಾರ್ಪಣೆ ಮಾಡಿರುವ ರಿಂಕು ಸಿಂಗ್ ಮ್ಯಾಚ್ ಫಿನಿಶರ್ ಪಾತ್ರದಲ್ಲಿ ಕಾಣಿಸಿಕೊಳ್ಳುವ ಆಸೆಯನ್ನು ಹೊಂದಿದ್ದರು. ಆದರೆ ಯುವ ಆಟಗಾರರ ಆಟವನ್ನು ಕಂಡು ರಿಂಕು ಸಿಂಗ್ ಸ್ಥಾನದ ಮೇಲೆ ಅಪಾಯದ ತೂಗುಗತ್ತಿ ನೇತಾಡುವ ರೀತಿ ಕಾಣುತ್ತಿದೆ. ರಿಂಕು ಸಿಂಗ್ ಟಿ20 ಕ್ರಿಕೆಟ್‌ನಲ್ಲಿ ಅಬ್ಬರದ ಪ್ರದರ್ಶನ ನೀಡಿ ಮ್ಯಾಚ್ ಫಿನಿಶರ್ ರೂಪದಲ್ಲಿ ಕಾಣಿಸಿಕೊಳ್ಳುವ ಭರವಸೆ ಮೂಡಿಸಿದ್ದರು. ಆದರೆ ಐಪಿಎಲ್‌ನಲ್ಲಿ ಯುವ ಆಟಗಾರರು ಅಬ್ಬರದ ಪ್ರದರ್ಶನ ನೀಡುತ್ತಿದ್ದಾರೆ.
ಶಶಾಂಕ್ ಸಿಂಗ್
ಈ ಋತುವಿನಲ್ಲಿ ಪಂಜಾಬ್ ಕಿಂಗ್ಸ್ ಪರ ಶಶಾಂಕ್ ಸಿಂಗ್ ಕ್ಲಾಸಿಕ್ ಪ್ರದರ್ಶನ ನೀಡುತ್ತಿದ್ದಾರೆ. ಈ ಋತುವಿನಲ್ಲಿ ಶಶಾಂಕ್ ಪಂಜಾಬ್ ಪರ ಫಿನಿಶರ್ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸುತ್ತಿದ್ದಾರೆ. ಐಪಿಎಲ್ 2024 ರಲ್ಲಿ ಶಶಾಂಕ್ ಸಿಂಗ್ ಬ್ಯಾಟ್‌ನಿಂದ ಇಲ್ಲಿಯವರೆಗೆ 187 ರನ್ ಹರಿದು ಬಂದಿವೆ. ಇವರ ಪ್ರದರ್ಶನವನ್ನು ಕಂಡು ಮಾಜಿ ಆಟಗಾರರು ಇವರು ಶೀಘ್ರದಲ್ಲಿ ಟೀಮ್ ಇಂಡಿಯಾವನ್ನು ಪ್ರವೇಶಿಸಲಿದ್ದಾರೆ ಎಂದು ಭವಿಷ್ಯ ನುಡಿದಿದ್ದಾರೆ.

ಅಶುತೋಷ್ ಶರ್ಮಾ
ಪಂಜಾಬ್ ಕಿಂಗ್ಸ್‌ನ ಸ್ಫೋಟಕ ಬ್ಯಾಟ್ಸ್‌ಮನ್ ಅಶುತೋಷ್ ಶರ್ಮಾ ಈ ಬಾರಿ ಗಮನ ಸೆಳೆದ ಮತ್ತೊಬ್ಬ ಯುವ ಆಟಗಾರ. ಪಂಜಾಬ್ ತಂಡ ಗೆಲ್ಲದಿದ್ದರೂ ಅಶುತೋಷ್ ಪ್ರತಿ ಪಂದ್ಯದಲ್ಲೂ ರನ್ ಕಲೆ ಹಾಕಿ ತಂಡಕ್ಕೆ ನೆರವಾಗುತ್ತಿದ್ದಾರೆ. ಮುಂಬೈ ಇಂಡಿಯನ್ಸ್ ವಿರುದ್ಧ ಕೇವಲ 28 ಎಸೆತಗಳಲ್ಲಿ 61 ರನ್ ಅಮೋಘ ಇನ್ನಿಂಗ್ಸ್ ಮೂಡಿ ಬಂದಿದ್ದವು. ಈ ಋತುವಿನಲ್ಲಿ ಇಲ್ಲಿಯವರೆಗೆ, ಅಶುತೋಷ್ 205 ಸ್ಟ್ರೈಕ್ ರೇಟ್‌ನಲ್ಲಿ ಬ್ಯಾಟಿಂಗ್ ಮಾಡಿದ್ದಾರೆ.

ರಿಯಾನ್ ಪರಾಗ್
ದೇಶೀಯ ಋತುವಿನಲ್ಲಿ ಕಂಡುಕೊಂಡಿದ್ದ ಫಾರ್ಮನ್ನು ರಾಜಸ್ಥಾನ ರಾಯಲ್ಸ್ ತಂಡದ ರಿಯಾನ್ ಪರಾಗ್ ಐಪಿಎಲ್‌ನಲ್ಲಿ ಮುಂದುವರೆಸಿದ್ದಾರೆ. ಇದಲ್ಲದೆ ಐಪಿಎಲ್‌ನಲ್ಲಿ ಅತಿ ಹೆಚ್ಚು ರನ್ ಕಲೆ ಹಾಕಿರುವ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಸಿಕ್ಕ ಅವಕಾಶವನ್ನು ಬಳಸಿಕೊಂಡು ಸ್ಥಿರವಾಗಿ ರನ್ ಕಲೆ ಹಾಕುತ್ತಿರುವ ಇವರು, ಮಿಡ್ಲ್ ಆರ್ಡರ್ ಹಾಗೂ ಮ್ಯಾಚ್ ಫಿನಿಶರ್ ಪಾತ್ರದಲ್ಲಿ ಕಾಣಿಸಿಕೊಳ್ಳುವ ಭರವಸೆ ಮೂಡಿಸಿದ್ದಾರೆ.
ಈ ಮೂವರು ಯುವ ಆಟಗಾರರು ಭರ್ಜರಿ ಬ್ಯಾಟಿಂಗ್ ಮೂಲಕ ಟಿ20 ವಿಶ್ವಕಪ್‌ಗೆ ತಮ್ಮನ್ನು ಸಹ ಪರಿಗಣಿಸಿ ಎಂದು ಆಯ್ದೆದಾರರ ಕದ ತಟ್ಟುತ್ತಿದ್ದಾರೆ. ಈ ಮೂಲಕ ಇರುವ ಒಂದು ಸ್ಥಾನಕ್ಕೆ ನಾಲ್ವರು ಬ್ಯಾಟರ್‌ಗಳು ಭರ್ಜರಿ ಪೈಪೋಟಿ ನಡೆಸುತ್ತಿದ್ದಾರೆ.
ಇನ್ನೇನು ಕೆಲವೇ ದಿನಗಳಲ್ಲಿ ಟೀಮ್ ಇಂಡಿಯಾ ಆಯ್ಕೆಯು ಟಿ20 ವಿಶ್ವಕಪ್‌ಗೆ ನಡೆಯಲಿದ್ದು, ಯಾವೆಲ್ಲಾ ಯುವ ಆಟಗಾರರಿಗೆ ಆದ್ಯತೆ ಸಿಗಬಹುದು ಎಂಬ ಕುತೂಹಲ ಮೂಡಿದೆ. ಐಪಿಎಲ್‌ನಲ್ಲಿ ಮಿಂಚಿದ ಯುವ ಆಟಗಾರರಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಡುವ ಅವಕಾಶ ಲಭಿಸುತ್ತದಾ ಕಾದು ನೋಡಬೇಕಿದೆ.












Click it and Unblock the Notifications