WTC Points Table: ಎರಡನೇ ಸ್ಥಾನಕ್ಕೆ ಕುಸಿದ ಭಾರತ ತಂಡ: ಮೊದಲ ಸ್ಥಾನದಲ್ಲಿರುವ ತಂಡ ಯಾವುದು ತಿಳಿಯಿರಿ

ಭಾರತ ವೆಸ್ಟ್ ಇಂಡೀಸ್ ನಡುವಿನ ಟೆಸ್ಟ್ ಸರಣಿಯ ಎರಡನೇ ಮತ್ತು ಅಂತಿಮ ಪಂದ್ಯ ಡ್ರಾನಲ್ಲಿ ಅಂತ್ಯವಾಗಿದೆ. 5ನೇ ದಿನದಾಟ ಮಳೆಯಿಂದಾಗಿ ರದ್ದಾದ ನಂತರ ಪಂದ್ಯ ಡ್ರಾನಲ್ಲಿ ಅಂತ್ಯವಾಯಿತು. ಭಾರತ 1-0 ಅಂತರದಲ್ಲಿ ಸರಣಿ ಗೆದ್ದು ಸಂಭ್ರಮಿಸಿದೆ.

ಭಾರತ ವೆಸ್ಟ್ ಇಂಡೀಸ್ ನಡುವಿನ ಎರಡನೇ ಟೆಸ್ಟ್ ಡ್ರಾ ಆದ ನಂತರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಅಂಕಪಟ್ಟಿಯಲ್ಲಿ ಬದಲಾವಣೆಯಾಗಿದೆ. ಮೊದಲ ಟೆಸ್ಟ್ ಗೆದ್ದ ನಂತರ ಅಗ್ರಸ್ಥಾನದಲ್ಲಿ ಭಾರತ, ಈಗ ಎರಡನೇ ಸ್ಥಾನಕ್ಕೆ ಕುಸಿತ ಕಂಡಿದೆ.

 India Falls to 2nd Place in WTC Standings as IND vs WI 2nd Test Ends in Washout

ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ಮುಂದುವರೆಯಲು ಭಾರತ ತಂಡಕ್ಕೆ 12 ಅಂಕಗಳ ಅಗತ್ಯವಿತ್ತು. ಪಂದ್ಯ ಗೆಲ್ಲುವ ಭಾರತದ ಆಸೆಗೆ ಮಳೆ ಅಡ್ಡಿಯಾಯಿತು. ಇದರಿಂದ ಭಾರತ ಮೊದಲನೇ ಸ್ಥಾನ ಕಾಪಾಡಿಕೊಳ್ಳುವ ಅವಕಾಶ ಕೂಡ ತಪ್ಪಿ ಹೋಯಿತು. ಪಂದ್ಯ ಡ್ರಾದಲ್ಲಿ ಅಂತ್ಯವಾದ ಬಳಿಕ ಉಭಯ ತಂಡಗಳು ತಲಾ 6 ಅಂಕಗಳನ್ನು ಹಂಚಿಕೊಂಡಿವೆ.

ಭಾರತ ತನ್ನ ಮುಂದಿನ ಟೆಸ್ಟ್ ಸರಣಿಯನ್ನು ದಕ್ಷಿಣ ಆಫ್ರಿಕಾ ವಿರುದ್ಧ ಆಡಲಿದೆ. ಎರಡು ಪಂದ್ಯಗಳ ಸರಣಿ ಇದಾಗಿದ್ದು ಡಿಸೆಂಬರ್ ಮತ್ತು 2024ರ ಜನವರಿಯಲ್ಲಿ ನಡೆಯಲಿದೆ. ನಂತರ ಇಂಗ್ಲೆಂಡ್ ವಿರುದ್ಧ ತವರಿನಲ್ಲಿ 5 ಪಂದ್ಯಗಳ ಸರಣಿ ಆಡಲಿದ್ದು, ಭಾರತದ ಫೈನಲ್‌ ಹಾದಿಯನ್ನು ಈ ಸರಣಿ ನಿರ್ಧರಿಸಲಿದೆ.

ಅಗ್ರಸ್ಥಾನದಲ್ಲಿ ಪಾಕಿಸ್ತಾನ

ಇನ್ನು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಅಂಕಪಟ್ಟಿಯಲ್ಲಿ ಪಾಕಿಸ್ತಾನ ಅಗ್ರಸ್ಥಾನಕ್ಕೇರಿದೆ. ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಯ ಮೊದಲನೇ ಪಂದ್ಯದಲ್ಲಿ ಗೆಲುವು ಸಾಧಿಸಿದ ಬಳಿಕ ಪಾಕಿಸ್ತಾನ ಮೊದಲನೇ ಸ್ಥಾನಕ್ಕೇರಿದೆ.

ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಯ ಮೊದಲನೇ ಪಂದ್ಯದಲ್ಲಿ ಭರ್ಜರಿ ಗೆಲುವು ಸಾಧಿಸಿದ ಪಾಕಿಸ್ತಾನ 12 ಅಂಕಗಳು ಮತ್ತು 100 ಪಿಸಿಟಿ ಗಳೊಂದಿಗೆ ಮೊದಲ ಸ್ಥಾನದಲ್ಲಿದೆ. 16 ಅಂಕಗಳೊಂದಿಗೆ 66.67 ಪಿಸಿಟಿಗಳೊಂದಿಗೆ ಭಾರತ ಎರಡನೇ ಸ್ಥಾನದಲ್ಲಿದೆ.

ಮೂರನೇ ಸ್ಥಾನದಲ್ಲಿ ಆಸ್ಟ್ರೇಲಿಯಾ

ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ವಿಜೇತ ತಂಡ ಆಸ್ಟ್ರೇಲಿಯಾ ಸದ್ಯ ಈ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಆಶಸ್ ಸರಣಿನ್ನು ಆಡುತ್ತಿರುವ ಆಸ್ಟ್ರೇಲಿಯಾ ಎರಡು ಪಂದ್ಯಗಳನ್ನು ಗೆದ್ದು ಒಂದು ಪಂದ್ಯದಲ್ಲಿ ಸೋತಿದೆ ಮತ್ತು ಒಂದು ಪಂದ್ಯ ಡ್ರಾನಲ್ಲಿ ಅಂತ್ಯವಾಗುವ ಮೂಲಕ 26 ಅಂಕಗಳೊಂದಿಗೆ 54.17 ಪಿಸಿಟಿಯೊಂದಿಗೆ ಮೂರನೇ ಸ್ಥಾನದಲ್ಲಿದೆ. ಇಂಗ್ಲೆಂಡ್ ನಾಲ್ಕನೇ ಸ್ಥಾನದಲ್ಲಿದ್ದು, ವೆಸ್ಟ್ ಇಂಡೀಸ್ 5ನೇ ಸ್ಥಾನದಲ್ಲಿದೆ, ಶ್ರೀಲಂಕಾ ಸದ್ಯ 6ನೇ ಸ್ಥಾನದಲ್ಲಿದೆ.

ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಅಂಕಪಟ್ಟಿ

ಕ್ರಮಾಂಕ ತಂಡ ಪಂದ್ಯಗಳು ಗೆಲುವು ಸೋಲು ಡ್ರಾ ಅಂಕ
1 ಪಾಕಿಸ್ತಾನ 1 1 0 0 12
2 ಭಾರತ 2 1 0 1 16
3 ಆಸ್ಟ್ರೇಲಿಯಾ 4 2 1 1 26
4 ಇಂಗ್ಲೆಂಡ್ 4 1 2 1 14
5 ವೆಸ್ಟ್ ಇಂಡೀಸ್ 2 0 1 1 4
6 ಶ್ರೀಲಂಕಾ 1 0 1 0 0
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+