Olympics Hockey: ಪೆನಾಲ್ಟಿ ಶೂಟೌಟ್ ಗೆದ್ದ ಭಾರತ ಸೆಮಿಫೈನಲ್‌ಗೆ: ಮಿಂಚಿದ ಶ್ರೀಜೇಶ್
ಭಾರತ ಹಾಗೂ ಗ್ರೇಟ್ ಬ್ರಿಟನ್ ನಡುವಣ ಕ್ವಾರ್ಟರ್ ಫೈನಲ್ ಪಂದ್ಯ ನಿರ್ಣಾಯಕ ಪಂದ್ಯದ ವರೆಗೆ ಉಭಯ ತಂಡಗಳು ಡ್ರಾ ಸಾಧಿಸಿದ್ದವು. ಹೀಗಾಗಿ ಪಂದ್ಯದ ಫಲಿತಾಂಶವನ್ನು ಅರಿಯಲು ಪೆನಾಲ್ಟಿ ಶೂಟೌಟ್ ಮೊರೆ ಹೋಗಲಾಯಿತು. ಪೆನಾಲ್ಟಿ ಶೂಟೌಟ್‌ನಲ್ಲಿ ಸೊಗಸಾದ ಪ್ರದರ್ಶನ ನೀಡಿದ ಭಾರತ ಪ್ಯಾರಿಸ್ ಒಲಿಂಪಿಕ್ಸ್ ಹಾಕಿ ಟೂರ್ನಿಯ ಸೆಮಿಫೈನಲ್‌ಗೆ ಪ್ರವೇಶ ಪಡೆಯಿತು.
ಭಾರತ ತಂಡದ ಆಟಗಾರನಿಗೆ ಎರಡನೇ ಅವಧಿಯಲ್ಲಿ ರೆಡ್ ಕಾರ್ಡ್ ಸಿಕ್ಕಿತು. ಪರಿಣಾಮ ಭಾರತ ಮೂರೂ ಅವಧಿಗೂ ಹೆಚ್ಚು ಕಾಲ ಭಾರತ ತಂಡ ಕೇವಲ 10 ಆಟಗಾರರಿಂದ ಆಟ ಆಡಿತು. ಈ ವೇಳೆ ಭಾರತ ತಂಡದ ರಕ್ಷಣಾ ವಿಭಾಗ ಮನಮೋಹಕ ಪ್ರದರ್ಶನ ನೀಡಿತು. ಪರಿಣಾಮ ಉಭಯ ತಂಡಗಳು ನಿಗದಿತ ಸಮಯದಲ್ಲಿ ಎದುರಾಳಿ ತಂಡಕ್ಕೆ ಯಾವುದೇ ಗೋಲು ನೀಡದಂತೆ ತಡೆಯುವಲ್ಲಿ ಸಫಲರಾದರು.

ಅಬ್ಬರದ ಆಟ
ಉಭಯ ತಂಡಗಳು ಕಳೆದ ಒಲಿಂಪಿಕ್ಸ್ ಟೊಕಿಯೋ ಒಲಿಂಪಿಕ್ಸ್‌ನಲ್ಲಿ ಕ್ವಾರ್ಟರ್ ಫೈನಲ್‌ನಲ್ಲಿ ಕಾದಾಟ ನಡೆಸಿದ್ದವು. ಆ ವೇಳೆಯೂ ಭಾರತ ಅಮೋಘ ಪ್ರದರ್ಶನ ನೀಡಿ ಸೆಮಿಫೈನಲ್‌ಗೆ ಪ್ರವೇಶ ಪಡೆದಿತ್ತು. ಈ ಬಾರಿಯ ಒಲಿಂಪಿಕ್ಸ್‌ನಲ್ಲೂ ಭಾರತ ಇದೇ ಫಲಿತಾಂಶವನ್ನು ಪುನರಾವರ್ತಿಸಿತು. ಅಲ್ಲದೆ ಕ್ವಾರ್ಟರ್ ಫೈನಲ್‌ನಲ್ಲಿ ಉತ್ತಮ ಪ್ರದರ್ಶನ ನೀಡಿ ಸೆಮಿಫೈನಲ್‌ಗೆ ಪ್ರವೇಶ ಪಡೆಯಿತು. ಈ ಪಂದ್ಯದ ಮೊದಲಾವಧಿಯಲ್ಲಿ ಉಭಯ ತಂಡಗಳು ಗೋಲು ರಹಿತವಾಗಿ ಕೊನೆ ಗೊಳಿಸಿದವು.
ಎರಡನೇ ಅವಧಿಯಲ್ಲಿ ತಲಾ ಒಂದೊಂದು ಗೋಲು
ಎರಡನೇ ಅವಧಿಯಲ್ಲಿ ಉಭಯ ತಂಡಗಳು ಇದೇ ಗೋಲಿನ ಕನಸಿನೊಂದಿಗೆ ಅಂಗಳಕ್ಕೆ ಇಳಿದವು. ಈ ಪಂದ್ಯದಲ್ಲಿ ಸಿಕ್ಕ ಪೆನಾಲ್ಟಿ ಅವಕಾಶವನ್ನು ಎರಡೂ ಕೈಗಳಿಂದ ಬಳಸಿಕೊಂಡ ಹರ್ಮನ್ ಪ್ರೀತ್ ಸಿಂಗ್ ಭಾರತಕ್ಕೆ ಮುನ್ನಡೆ ದೊರಕಿಸಿಕೊಟ್ಟರು. ಇದೇ ವೇಳೆ ಗ್ರೇಟ್ ಬ್ರಿಟನ್ ಸಹ ಒಂದು ಗೋಲು ಬಾರಿಸಿ ಅಬ್ಬರಿಸಿತು. ಪರಿಣಾಮ ಎರಡೂ ತಂಡಗಳು ಈ ಅವಧಿಯಲ್ಲಿ ತಲಾ ಒಂದು ಗೋಲು ಬಾರಿಸಿ ಅಬ್ಬರಿಸಿದವು.

ಮೂರನೇ ಅವಧಿಯಲ್ಲಿ ಗ್ರೇಟ್ ಬ್ರಿಟನ್ ಆಕ್ರಮಣಕಾರಿ ಆಟಕ್ಕೆ ಮಣೆ ಹಾಕಿತು. ಭಾರತದ ಸ್ಟಾರ್ ರಕ್ಷಣಾ ಆಟಗಾರನಿಗೆ ರೆಡ್ ಕಾರ್ಡ್ ನೀಡಲಾಗಿತ್ತು. ಆದರೂ ಸಹ ಹರ್ಮನ್ ಪ್ರೀತ್ ಬಳಗ 10 ಆಟಗಾರರೊಂದಿಗೆ ಮನನೋಹಕ ಆಟದ ಪ್ರದರ್ಶನ ನೀಡಿತು. ಅಲ್ಲದೆ ಬ್ರಿಟನ್‌ಗೆ ಯಾವುದೇ ಅಂಕಗಳನ್ನು ನೀಡದಂತೆ ತಡೆಯುವಲ್ಲಿ ಸಫಲವಾಯಿತು. ಈ ವೇಳೆ ಭಾರತ ತಂಡದ ರಕ್ಷಣಾ ಆಟ ಮನಮೋಹಕವಾಗಿತ್ತು.
ಕೊನೆಯ ಅವಧಿಯಲ್ಲಿ ಎರಡೂ ತಂಡಗಳು ಎಚ್ಚರಿಕೆಯ ಆಟವನ್ನು ಆಡಿ ಗಮನ ಸೆಳೆದವು. ಈ ಹಂತದಲ್ಲಿ ಭಾರತ ಗೋಲು ಗಳಿಸುವ ಆಟ ಫಲಿಸಲಿಲ್ಲ. ನಿಗದಿತ ಸಮಯದಲ್ಲಿ ಗೋಲುಗಳು ಬಾರದೇ ಇದ್ದಾಗ ಫಲಿತಾಂಶ ಅರಿತಯ ಪೆನಾಲ್ಟಿ ಶೂಟೌಟ್ ಮೊರೆ ಹೋಗಲಾಯಿತು.

ಶ್ರೀಜೇಶ್ ಗೋಡೆ
ಪೆನಾಲ್ಟಿ ಶೂಟೌಟ್‌ನಲ್ಲಿ ಭಾರತದ ಆಟಗಾರರು ಅಮೋಘ ಪ್ರದರ್ಶನವನ್ನು ನೀಡಿ ಅಂಕಗಳನ್ನು ಕಲೆ ಹಾಕಿದರು. ಭಾರತ ಪೆನಾಲ್ಟಿ ಶೂಟೌಟ್‌ನಲ್ಲಿ 4-2ರಿಂದ ಬ್ರಿಟನ್ ತಂಡವನ್ನು ಮಣಿಸಿ ಸೆಮಿಫೈನಲ್‌ಗೆ ಪ್ರವೇಶ ಪಡೆಯಿತು. ಈ ವೇಳೆ ಭಾರತದ ಗೋಲಿ ಶ್ರೀಜೇಶ್ ಗ್ರೇಟ್ ಬ್ರಿಟನ್ ತಂಡಕ್ಕೆ ಭಾರೀ ಕಾಡಿದರು. ಅಲ್ಲದೆ ಪೆನಾಲ್ಟಿ ಶೂಟೌಟ್ ವೇಳೆ ಎದುರಾಳಿ ತಂಡಕ್ಕೆ ಗೋಲುಗಳನ್ನು ನೀಡಿದಂತೆ ತಡೆಯುವಲ್ಲಿ ಸಫಲರಾದರು. ಅಲ್ಲದೆ ಪಂದ್ಯದ ಹಿರೋ ಆದರು.
-
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Bengaluru Property: ಬೆಂಗಳೂರಿನ ಆಸ್ತಿದಾರರೇ ನಿಮ್ಮ ಆಸ್ತಿ ಉಳಿಸಿಕೊಳ್ಳಲು ಕೊನೆಯ ಅವಕಾಶ: ಈ ಎಚ್ಚರಿಕೆ ಯಾರಿಗೆಲ್ಲ ಅನ್ವಯ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications