India vs Bangladesh: ಬಾಂಗ್ಲಾ ಹುಲಿಗಳಿಗೆ ಬಗ್ಗಿಸಿ ಬುದ್ಧಿ ಕಲಿಸಿದ ಭಾರತದ ಕ್ರಿಕೆಟ್ ಆಟಗಾರರು!

ಭಾರತ ಕ್ರಿಕೆಟ್ ತಂಡ ಮತ್ತೊಮ್ಮೆ ತನ್ನ ಸಾಮರ್ಥ್ಯವನ್ನು ಇಡೀ ಜಗತ್ತಿಗೇ ತೋರಿಸಿದೆ. ಈ ಮೂಲಕ ಟೆಸ್ಟ್ ಕ್ರಿಕೆಟ್‌ನಲ್ಲಿ ಭಾರತ ಕ್ರಿಕೆಟ್ ತಂಡವೇ ಬಾಸ್ ಅನ್ನೋ ವಿಚಾರ ಮತ್ತೊಮ್ಮೆ ಕ್ರಿಕೆಟ್ ಪ್ರಪಂಚಕ್ಕೆ ಪರಿಚಯವಾಗಿದೆ. ಮಳೆ ಬಂದು ಆಟ ನಡೆಯದೇ ಇದ್ದರೂ, ಬಾಂಗ್ಲಾ ಹುಲಿಗಳಿಗೆ ಸರಿಯಾಗಿ ಬುದ್ಧಿ ಕಲಿಸಿದೆ ಭಾರತ ತಂಡ. ಮೊದಲ ಇನ್ನಿಂಗ್ಸ್‌ನಲ್ಲಿ 233 ರನ್ ಗಳಿಸಿದ್ದ ಬಾಂಗ್ಲಾದೇಶ ತಂಡ 2ನೇ ಇನ್ನಿಂಗ್ಸ್‌ನಲ್ಲಿ ಹೀನಾಯ ಪ್ರದರ್ಶನ ನೀಡಿದ್ದು, ಈಗ ಭಾರತಕ್ಕೆ ಇಷ್ಟು ರನ್‌ಗಳ ಗುರಿ ನೀಡಿದೆ!

ಬಾಂಗ್ಲಾದೇಶ ಹುಲಿಗಳು ಇಂದು ಭಾರತದ ಬೌಲಿಂಗ್ ದಾಳಿ ಎದುರು ಥೇಟ್ ಇಲಿಗಳ ರೀತಿ ಆಗಿಬಿಟ್ಟರು. ಯಾಕಂದ್ರೆ ಭಾರತದ ಸ್ಪಿನ್ ಬೌಲಿಂಗ್ ದಾಳಿಗೆ ಬೆಚ್ಚಿಬಿದ್ದ ಬಾಂಗ್ಲಾ ಇಲಿಗಳು ಅಲ್ಲಲ್ಲ ಹುಲಿಗಳು, ಒಬ್ಬೊಬ್ಬರೇ ಮಾವಿನ ಕಾಯಿ ಮರದಿಂದ ಉದುರುವ ರೀತಿ ಔಟಾಗಿ ಪೆವಿಲಿಯನ್ ಸೇರಿದರು. ಟೆಸ್ಟ್ ಪಂದ್ಯದ 4ನೇ ದಿನ ಮೊದಲನೇ ಇನ್ನಿಂಗ್ಸ್‌ನಲ್ಲಿ ಬಾಂಗ್ಲಾದೇಶ ತಂಡವನ್ನು ಭಾರತ 233 ರನ್‌ಗೆ ಆಲೌಟ್ ಮಾಡಿತ್ತು. ಮೊಮಿನುಲ್ ಹಕ್ 107 ರನ್ ಗಳಿಸಿದ್ದು ಬಿಟ್ಟು ಬಾಂಗ್ಲಾದೇಶದ ಪರವಾಗಿ ಯಾರೂ ಕೆಮ್ಮಲಿಲ್ಲ. ಬಳಿಕ ಟೀಮ್ ಇಂಡಿಯಾ ಮೊದಲ ಇನಿಂಗ್ಸ್‌ ಶುರು ಮಾಡಿ 9 ವಿಕೆಟ್ ಕಳೆದುಕೊಂಡು 285 ರನ್‌ ಚಚ್ಚಿ ಬಿಸಾಡಿ ಡಿಕ್ಲೇರ್ ಮಾಡಿತ್ತು. ಹೀಗಾಗಿ ನಿನ್ನೆ ಸಂಜೆ 2ನೇ ಇನ್ನಿಂಗ್ಸ್ ಆರಂಭ ಮಾಡಿದ್ದ ಬಾಂಗ್ಲಾದೇಶ ಇಲಿಗಳಂತೆ ಆಡಿದ್ದು ಇಂದು ಬೆಳ್ಳಂಬೆಳಗ್ಗೆ ಆಲೌಟ್ ಆಗಿಬಿಟ್ಟಿದೆ!

India And Bangladesh 2nd Test Cricket Match Got Very Big Twist On Final Day

4ನೇ ದಿನದಲ್ಲಿ ಎಲ್ಲಾ ಚೇಂಜ್!

ಭಾರತ & ಬಾಂಗ್ಲಾದೇಶ ನಡುವಿನ ಟೆಸ್ಟ್ ಕ್ರಿಕೆಟ್ ಸರಣಿ ಸಾಕಷ್ಟು ಕುತೂಹಲ ಕೆರಳಿಸಿತ್ತು, ಹೀಗಾಗಿ ಭಾರತೀಯ ಕ್ರಿಕೆಟ್ ಅಭಿಮಾನಿಗಳು ಕೂಡ ಕುತೂಹಲದಿಂದ ಕಾಯುತ್ತಿದ್ದರು. ಈ ಸಮಯದಲ್ಲೇ ಮಳೆ ಕಾಟ ಕೊಟ್ಟು ಇನ್ನೇನು 2ನೇ ಟೆಸ್ಟ್ ಪಂದ್ಯ ಡ್ರಾ ಆಗುವುದು ಗ್ಯಾರಂಟಿ ಎನ್ನಲಾಗಿತ್ತು. ಆದರೆ ಇದೇ ಸಮಯದಲ್ಲಿ ಮಳೆ ಒಂದಷ್ಟು ಬ್ರೇಕ್ ತೆಗೆದುಕೊಂಡ ಕಾರಣ 4ನೇ ದಿನದ ಆಟದಲ್ಲಿ ಬಾಂಗ್ಲಾದೇಶಕ್ಕೆ ಆಘಾತ ಎದುರಾಗಿತ್ತು. 2ನೇ ಇನ್ನಿಂಗ್ಸ್‌ನಲ್ಲಿ ಬಾಂಗ್ಲಾ ತಂಡ ಕೇವಲ 146 ರನ್‌ಗಳಿಗೆ ಆಲೌಟ್ ಆಗಿ ಹೋಯಿತು.

ಭಾರತಕ್ಕೆ ಕೇವಲ 95 ರನ್‌ಗಳ...

ಕಾನ್ಪುರ ಗ್ರೀನ್ ಪಾರ್ಕ್ ಸ್ಟೇಡಿಯಂನಲ್ಲಿ 2ನೇ ಇನ್ನಿಂಗ್ಸ್‌ನಲ್ಲಿ ಬಾಂಗ್ಲಾದೇಶ ತಂಡಕ್ಕೆ ಭಾರತದ ಸ್ಪಿನ್ ಪಡೆ ಕಾಡಿಬಿಟ್ಟಿತು. ಟೀಂ ಇಂಡಿಯಾ ಪರ ರವಿಚಂದ್ರನ್ ಅಶ್ವಿನ್, ಜಡೇಜಾ & ಜಸ್ಪ್ರೀತ್ ಬುಮ್ರಾ ತಲಾ 3 ವಿಕೆಟ್ ಕಬಳಿಸಿ ಮಿಂಚಿದರೆ, ಆಕಾಶ್ ದೀಪ್ 1 ವಿಕೆಟ್ ಪಡೆದರು. ಹೀಗಿದ್ದಾಗ ಬಾಂಗ್ಲಾ ತಂಡ ಕೇವಲ 146 ರನ್‌ಗಳಿಗೆ ಆಲೌಟ್ ಆಗಿದ್ದು, ಭಾರತಕ್ಕೆ ಕೇವಲ 95 ರನ್‌ಗಳ ಗುರಿ ನೀಡಲಾಗಿದೆ. ಭಾರತ ತಂಡದ ಆಟಗಾರರು ಈಗ ಬಾಂಗ್ಲಾ ಬೌಲರ್‌ಗಳನ್ನ ಓಡಾಡಿಸಿ ಬಾರಿಸುತ್ತಿದ್ದಾರೆ!

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+