India & Australia: ಸೋಲಿನ ಸುಳಿಯಿಂದ ಪಾರಾದ ಭಾರತ ಕ್ರಿಕೆಟ್ ತಂಡ!

ಭಾರತ ಕ್ರಿಕೆಟ್ ತಂಡ & ಆಸ್ಟ್ರೇಲಿಯಾ ಟೀಂ ನಡುವೆ ನಡೆಯುತ್ತಿರುವ ಟೆಸ್ಟ್ ಪಂದ್ಯ ಇದೀಗ ನಿರ್ಣಾಯಕ ಹಂತ ತಲುಪಿದೆ. ಒಂದು ಕಡೆ ಈ ಪಂದ್ಯ ಗೆಲ್ಲಬೇಕಾದ ಅನಿವಾರ್ಯ ಪರಿಸ್ಥಿತಿ ಆಸ್ಟ್ರೇಲಿಯಾ ತಂಡಕ್ಕೆ ಎದುರಾಗಿದ್ದರೆ, ಇನ್ನೊಂದು ಕಡೆ ಭಾರತ ತಂಡ ಕೂಡ ಗೆಲ್ಲಲೇಬೇಕು ಎಂಬ ಅನಿವಾರ್ಯತೆಗೆ ಸಿಲುಕಿದೆ. ಈ ಎಲ್ಲಾ ಒತ್ತಡಗಳ ನಡುವೆ ಆರಂಭದಲ್ಲೇ ಸಾಲು, ಸಾಲು ವಿಕೆಟ್ ಕಳೆದುಕೊಂಡು ನರಳುತ್ತಿರುವ ಭಾರತ ತಂಡ ಸೋಲಿನ ಸುಳಿಯಿಂದ ಈಗ ಪಾರಾಗಿದೆ!

ಭಾರತದ ಬ್ಯಾಟಿಂಗ್ ಲೈನ್ ಕೈಕೊಟ್ಟು ಸಮಸ್ಯೆ ಎದುರಾಗಿತ್ತು. ಯಾಕೆ ಅಂದ್ರೆ ಈಗಾಗಲೇ ಮೊದಲ ಇನ್ನಿಂಗ್ಸ್‌ನಲ್ಲಿ ಆಸ್ಟ್ರೇಲಿಯಾ ತಂಡ 474 ರನ್ ಬಾರಿಸಿತ್ತು. ಈ ಸ್ಕೋರ್ ನೋಡಿದರೆ, 2ನೇ ಇನ್ನಿಂಗ್ಸ್ ಕೂಡ ಆಸ್ಟ್ರೇಲಿಯಾ ತಂಡದಿಂದ ಭರ್ಜರಿ ರನ್‌ಗಳೇ ಹರಿದು ಬರುವ ನಿರೀಕ್ಷೆ ಇತ್ತು. ಇಷ್ಟೆಲ್ಲದರ ನಡುವೆ, 3ನೇ ದಿನದಾಟದಲ್ಲಿ ಭಾರತ 200 ರನ್ ಆಗುವುದರ ಒಳಗಾಗಿ ಬರೋಬ್ಬರಿ 6 ವಿಕೆಟ್ ಕಳೆದುಕೊಂಡು ನರಳಾಡಿತ್ತು. ಹೀಗಿದ್ದಾಗಲೇ ನೋಡಿ ನಿತೀಶ್ ರೆಡ್ಡಿ & ವಾಷಿಂಗ್ಟನ್ ಸುಂದರ್ ಕಮಾಲ್ ಮಾಡಿಬಿಟ್ಟರು!

India And Australia 4Th Test Match Reached To Crucial Stage

ಸೋಲಿನ ಸುಳಿಯಿಂದ ಟೀಂ ಇಂಡಿಯಾ ಬಚಾವ್!

ಈಗಿನ ಪರಿಸ್ಥಿತಿ ನೋಡಿದರೆ ಭಾರತ ತಂಡ 4ನೇ ಟೆಸ್ಟ್ ಮ್ಯಾಚ್ ಗೆಲ್ಲುವುದು ಭಾರಿ ಕಷ್ಟವಾಗಿದೆ. ಹೌದು, ಇಂಡಿಯಾ & ಆಸ್ಟ್ರೇಲಿಯಾ ನಡುವೆ ಬಾರ್ಡರ್​ ಗವಾಸ್ಕರ್​ ಟ್ರೋಫಿಯ 4ನೇ ಟೆಸ್ಟ್ ಪಂದ್ಯವು ಆಸ್ಟ್ರೇಲಿಯಾದ ಮೆಲ್ಬೋರ್ನ್​​ ಸ್ಟೇಡಿಯಂನಲ್ಲಿ ನಡೆಯುತ್ತಿದೆ. ಆದರೆ ಈ ಮ್ಯಾಚ್ ಎರಡೂ ದೇಶಗಳಿಗೂ ಮಾಡು ಇಲ್ಲವೇ ಮಡಿ ಪಂದ್ಯವಾಗಿದೆ.

ಇಂತಹ ಪಂದ್ಯದಲ್ಲಿ ಭಾರತ ತಂಡದ ಬ್ಯಾಟಿಂಗ್ ಪಡೆ ಮುಗ್ಗರಿಸಿದ್ದು ಭಾರಿ ಹಿನ್ನಡೆ ತಂದಿತ್ತು. ವಿರಾಟ್ ಕೊಹ್ಲಿ ಸೇರಿ ಟೀಂ ಕ್ಯಾಪ್ಟನ್ ರೋಹಿತ್ ಶರ್ಮಾ ಸಮೇತ ಹಲವರು ಈ ಹಂತದಲ್ಲಿ ಭಾರಿ ಹಿನ್ನಡೆ ಕಂಡಿದ್ರೂ ಸೋಲಿನ ಸುಳಿಯಿಂದ ಭಾರತ ಬಚಾವ್ ಆಗಿದೆ. ಇದಕ್ಕೆಲ್ಲಾ ಕಾರಣ ಆಗಿದ್ದು ನಿತೀಶ್ ರೆಡ್ಡಿ & ವಾಷಿಂಗ್ಟನ್ ಸುಂದರ್ ಅವರು!

3ನೇ ದಿನಕ್ಕೆ ಭಾರತದ ಸ್ಕೋರ್ ಇಷ್ಟು

ಮೆಲ್ಬೋರ್ನ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಮಹತ್ವದ ಭಾರತ & ಆಸ್ಟ್ರೇಲಿಯಾ ನಡುವಿನ ಬಾರ್ಡರ್​ ಗವಾಸ್ಕರ್​ ಟ್ರೋಫಿಯ 4ನೇ ಟೆಸ್ಟ್ ಪಂದ್ಯದ 3ನೇ ದಿನದಾಟ ಭಾರಿ ಗಮನ ಸೆಳೆದಿದೆ. 2ನೇ ದಿನದಾಟದಲ್ಲಿ ಹಿನ್ನಡೆ ಕಂಡಿದ್ದ ಭಾರತ ತಂಡ 3ನೇ ದಿನದಾಟದಲ್ಲಿ ಕಂಬ್ಯಾಕ್ ಮಾಡಿ ಆಸಿಸ್ ಪಡೆಗೆ ತಿರುಗೇಟು ನೀಡಿತ್ತು. ಆಸ್ಟ್ರೇಲಿಯಾ ಬೌಲರ್ಸ್‌ಗೆ ನಿತೀಶ್ ರೆಡ್ಡಿ & ವಾಷಿಂಗ್ಟನ್ ಸುಂದರ್ ನೀರು ಕುಡಿಸಿದರು!

ಭಾರತದ ಪರವಾಗಿ ನಿತೀಶ್ ರೆಡ್ಡಿ 105 ರನ್ ಗಳಿಸಿದ್ದು ಈಗಲೂ ಆಟವಾಡುತ್ತಿದ್ದಾರೆ, ಹಾಗೇ ನಿತೀಶ್ ರೆಡ್ಡಿಗೆ ಸಾಥ್ ನೀಡಿದ್ದ ವಾಷಿಂಗ್ಟನ್ ಸುಂದರ್ ಭರ್ಜರಿ 50 ರನ್‌ಗಳ ಗಿಫ್ಟ್ ನೀಡಿದ್ದಾರೆ. ಈ ಮೂಲಕ, ಭಾರತ ತಂಡವು 3ನೇ ದಿನದಾಟ ಅಂತ್ಯಕ್ಕೆ 358 ರನ್ ಗಳಿಸಿದ್ದು, 9 ವಿಕೆಟ್ ಕಳೆದುಕೊಂಡಿದೆ. ಹಾಗೇ 116 ರನ್ ಹಿಂದೆ ಉಳಿದಿದೆ. ಮತ್ತೊಂದು ಕಡೆ ಈ ಪಂದ್ಯ ಈಗ ಡ್ರಾ ಆಗುವ ಹಂತದಲ್ಲಿದೆ ಎನ್ನಲಾಗುತ್ತಿದ್ದು, 4ನೇ ದಿನದಾಟ ಎಲ್ಲವನ್ನೂ ನಿರ್ಧರಿಸಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+