Virat Kohli: ಆಸ್ಟ್ರೇಲಿಯಾ ಆಟಗಾರರಿಗೆ ರಕ್ತ ಬರಿಸಿದ ವಿರಾಟ್ ಕೊಹ್ಲಿ ಶಿಷ್ಯ...

ಆರ್‌ಸಿಬಿ.. ಆರ್‌ಸಿಬಿ.. ಆರ್‌ಸಿಬಿ.. ರೀತಿಯಲ್ಲೇ ಕೊಹ್ಲಿ.. ಕೊಹ್ಲಿ.. ಕೊಹ್ಲಿ.. ಅಂತ ಕೂಡ ನೂರಾರು ಕೋಟಿ ಕ್ರಿಕೆಟ್ ಅಭಿಮಾನಿಗಳು ಕ್ರಿಕೆಟ್ ಮೈದಾನದಲ್ಲಿ ಕೂಗಿ ಸಂಭ್ರಮಿಸುತ್ತಾರೆ. ವಿರಾಟ್ ಕೊಹ್ಲಿ... ಹೀಗೆ ಕೊಹ್ಲಿ ಹೆಸರು ಕೇಳಿದರೆ ಸಾಕು ಆಸ್ಟ್ರೇಲಿಯಾ ಆಟಗಾರರು ಇದೀಗ ನಿದ್ದೆಯಲ್ಲೂ ಎದ್ದು ಬೆಚ್ಚಿಬೀಳುವ ವಾತಾವರಣ ನಿರ್ಮಾಣ ಆಗಿದೆ. ಯಾಕಂದ್ರೆ, ವಿರಾಟ್ ಕೊಹ್ಲಿ ಹವಾ ಕಂಡು ಆಸ್ಟ್ರೇಲಿಯಾದ ಆಟಗಾರರು ಹೆದರಿ ಹೋಗಿದ್ದಾರೆ.

ಒಂದಾನೊಂದು ಕಾಲದಲ್ಲಿ ಜಗತ್ತಿನ ಯಾವುದೆ ತಂಡವನ್ನಾದ್ರೂ ಹೆದರಿಸುತ್ತಿದ್ದ ಆಸ್ಟ್ರೇಲಿಯಾ ಆಟಗಾರರ ಪಾಲಿಗೆ ಇದೀಗ ವಿರಾಟ್ ಕೊಹ್ಲಿ ವಿಲನ್ ಆಗಿದ್ದಾರೆ ಎಂಬ ಆರೋಪ ಕೂಡ ಇದೆ. ಹೀಗಿದ್ದಾಗ ಇಂದು ಕೂಡ ದೊಡ್ಡ ಗಲಾಟೆ ನಡೆದು ಹೋಗಿದ್ದು, ವಿರಾಟ್ ಕೊಹ್ಲಿ ನೇರವಾಗಿ ಹೋಗಿ ಆಸ್ಟ್ರೇಲಿಯಾ ಆಟಗಾರನ ಎದೆಗೆ ಬುಜದಿಂದ ಗುದ್ದಿದ ಆರೋಪ ಕೂಡ ಸಂಚಲನ ಸೃಷ್ಟಿ ಮಾಡಿದೆ. ಇಂತಹ ಸಮಯದಲ್ಲೇ, ಆಸ್ಟ್ರೇಲಿಯಾ ಆಟಗಾರರಿಗೆ ರಕ್ತ ಬರಿಸಿದ ವಿರಾಟ್ ಕೊಹ್ಲಿ ಶಿಷ್ಯ....

India And Australia 4Th Test Match Is Creating Storm For This Reason

ಆಸ್ಟ್ರೇಲಿಯಾ ಆಟಗಾರರಿಗೆ ರಕ್ತ ಬರಿಸಿದ...?

ಹೌದು, ಇಂಡಿಯಾ & ಆಸ್ಟ್ರೇಲಿಯಾ ನಡುವೆ ಬಾರ್ಡರ್​ ಗವಾಸ್ಕರ್​ ಟ್ರೋಫಿಯ 4ನೇ ಟೆಸ್ಟ್ ಪಂದ್ಯವು ಆಸ್ಟ್ರೇಲಿಯಾದ ಮೆಲ್ಬೋರ್ನ್​​ ಸ್ಟೇಡಿಯಂನಲ್ಲಿ ನಡೆಯುತ್ತಿದೆ. ಆದರೆ ಈ ಮ್ಯಾಚ್ ಎರಡೂ ದೇಶಗಳಿಗೂ ಮಾಡು ಇಲ್ಲವೇ ಮಡಿ ಪಂದ್ಯವಾಗಿದೆ. ಇಂತಹ ಪಂದ್ಯದಲ್ಲಿ ಕಿಂಗ್ ಕೊಹ್ಲಿ ಮತ್ತು ಆಸ್ಟ್ರೇಲಿಯಾ ಆಟಗಾರ ಕೋನ್‌ಸ್ಟಾಸ್ ನಡುವೆ ದೊಡ್ಡ ಜಗಳ ನಡೆದಿದ್ದು, ಈ ಘಟನೆ ನಡುವೆಯೇ ರಕ್ತ ಚಲ್ಲಾಡಿದೆ ಎಂಬ ಆರೋಪ ಮಾಡ್ತಿದ್ದಾರೆ ಅಭಿಮಾನಿಗಳು!

ಅಂದಹಾಗೆ ಇಂಡಿಯಾ & ಆಸ್ಟ್ರೇಲಿಯಾ ಮ್ಯಾಚ್ ಯುದ್ಧದ ರೀತಿ ಆಗಿದ್ದು, ವಿರಾಟ್ ಕೊಹ್ಲಿ ಜೊತೆಗೆ ಆಸ್ಟ್ರೇಲಿಯಾ ಆಟಗಾರರು ಕಿರಿಕ್ ಮಾಡಿದ್ದಾರೆ ಅನ್ನೋ ಕಾರಣಕ್ಕೆ ಈಗ ಆಕ್ರೋಶ ಹೊರ ಹಾಕುತ್ತಿರುವ ಭಾರತೀಯ ಆಟಗಾರರು ಮೈಕೊಡವಿದ್ದಾರೆ. ಅದ್ರಲ್ಲೂ ವಿರಾಟ್ ಕೊಹ್ಲಿ ಶಿಷ್ಯ ಅಂತಾನೇ ಗುರುತಿಸಿಕೊಂಡಿರುವ ಮೊಹಮ್ಮದ್ ಸಿರಾಜ್ ಅವರು, ಗುರುವಿನ ತಂಟೆಗೆ ಯಾರಾದರೂ ಬಂದರೆ ಸುಮ್ಮನೆ ಇರೋದಿಲ್ಲ. ಹೀಗಿದ್ದಾಗಲೇ, ಆಸ್ಟ್ರೇಲಿಯಾ ಆಟಗಾರರು ಪದೇ ಪದೇ ಕಿರಿಕ್ ಮಾಡುತ್ತಿದ್ದರು. ಸಿರಾಜ್ ಜೊತೆಗೆ ಲಾಬುಷೇನ್ ಕೂಡ ಕಿರಿಕ್ ಮಾಡಿ, ಮುಸಿಮುಸಿ ನಕ್ಕಿದ್ದ. ಇದನ್ನ ನೋಡಿ ಸಿರಾಜ್ ಮಾಡಿದ್ದೇನು ಗೊತ್ತೆ?

ಬೀಳಬಾರದ ಜಾಗಕ್ಕೆ ಬಿತ್ತು ಬಾಲ್!

ಹೌದು ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ದಾಂಡಿಗ ಲಾಬುಷೇನ್, ಸಿರಾಜ್ ಅವರ ಬೌಲಿಂಗ್‌ನ ನೋಡಿ ನಕ್ಕ ನಂತರ ನಡೆದಿದ್ದೇ ಬೇರೆ. ಮೊಹಮ್ಮದ್ ಸಿರಾಜ್ ಅವರು ತಮ್ಮ ಬೌಲಿಂಗ್‌ನ ಶಕ್ತಿ ಏನು? ಅನ್ನೋದನ್ನ ಇಡೀ ಜಗತ್ತಿಗೇ ತೋರಿಸಿದರು. ಮೊಹಮ್ಮದ್ ಸಿರಾಜ್ ಅವರು, ಲಾಬುಷೇನ್ ಕುಹಕವಾಗಿ ನಕ್ಕ ನಂತರ ಎಸೆದ ನಂತರದ ಬಾಲ್‌ಗಳು ನೇರ ಲಾಬುಷೇನ್‌ರ ಮರ್ಮಾಂಗಕ್ಕೆ ಹೋಗಿ ಬಿದ್ದವು! ಹೀಗೆ ಒಂದಾದ ನಂತರ ಒಂದು ಲೆದರ್ ಬಾಲ್ ಆಸಿಸ್ ಆಟಗಾರ ಲಾಬುಷೇನ್ ಮರ್ಮಾಂಗಕ್ಕೆ ಬಿದ್ದ ನಂತರ ಪ್ಯಾಂಟ್‌ನಲ್ಲಿ ಕೆಂಪು ಬಣ್ಣ ಕಂಡಿದೆ. ಒಂದು ಕಡೆ ಇದನ್ನ ರಕ್ತ ಎಂದು ಭಾರತದ ಕ್ರಿಕೆಟ್ ಫ್ಯಾನ್ಸ್ ವಾದ ಮಾಡುತ್ತಿದ್ದಾರೆ! ಹೀಗೆ ಕ್ರಿಕೆಟ್ ಮೈದಾನದಲ್ಲಿ ಚಲ್ಲಾಡಿದ ಆಸ್ಟ್ರೇಲಿಯಾ ಆಟಗಾರನ ರಕ್ತ ಅಂತಾ ಹೇಳ್ತಿದ್ದಾರೆ...

ರಕ್ತ ಹೌದೋ? ರಕ್ತ ಅಲ್ಲವೋ?

ಆದರೆ ಇನ್ನೊಂದು ಕಡೆ ಲಾಬುಷೇನ್‌ರ ಪ್ಯಾಂಟ್ ಕೆಂಪಾಗಿದ್ದು ರಕ್ತದ ಕಾರಣಕ್ಕೆ ಅಲ್ಲ ಆ ರೀತಿ ಪ್ಯಾಂಟ್ ಕೆಂಪಾಗಲು ಕಾರಣವಾಗಿದ್ದು ಲೆದರ್ ಬಾಲ್‌ನ ಬಣ್ಣ ಅಂತಾ ಹೇಳುತ್ತಿದ್ದಾರೆ ಕೆಲವರು. ಯಾಕಂದ್ರೆ ಟೆಸ್ಟ್ ಪಂದ್ಯಗಳಿಗೆ ಕೆಂಪು ಬಣ್ಣದ ಲೆದರ್ ಬಾಲ್ ಬಳಸುವುದು ವಾಡಿಕೆ ಆಗಿದ್ದು, ಇದೀಗ ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ದಾಂಡಿಗ ಲಾಬುಷೇನ್ ಮರ್ಮಾಂಗಕ್ಕೆ ಬಡಿದ ಹಿನ್ನೆಲೆ ಲೆದರ್ ಬಾಲ್ ಬಣ್ಣವೇ ಅಲ್ಲಿಗೆ ಮೆತ್ತಿದೆ ಆದರೆ ರಕ್ತ ಬಂದಿಲ್ಲ ಅಂತಾ ಕೂಡ ಕೆಲ ವಿಶ್ಲೇಷಕರು ವಾದ ಮಾಡುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+