ಕೊಬ್ಬಿದ ಕಾಂಗರೂ ‘ಸೆಡೆ’ಗಳಿಗೆ ತಕ್ಕ ಪಾಠ ಕಲಿಸಿದ ಭಾರತೀಯರು!
ಆಸ್ಟ್ರೇಲಿಯಾ ಆಟಗಾರರ ಲೆಕ್ಕಾಚಾರ ಉಲ್ಟಾ ಹೊಡೆದುಬಿಟ್ಟಿದೆ, ಭಾರತ ತಂಡದ ಅಬ್ಬರ ಕಂಡು ಆಸ್ಟ್ರೇಲಿಯಾ ತಂಡ ಶಾಕ್ ಆಗಿದೆ. ಇನ್ನೇನು ಗೆಲುವು ನಮ್ಮದೆ ಬಿಡು ಅಂತಾ ಇಡೀ ಆಸ್ಟ್ರೇಲಿಯಾ ತಂಡ ಕುಣಿದಾಡಿತ್ತು. ಇಷ್ಟು ಮಾತ್ರವಲ್ಲದೆ ದುರಹಂಕಾರ ತೋರಿಸಿ ಜಗತ್ತಿನ ಕ್ರೀಡಾ ಅಭಿಮಾನಿಗಳ ಬಾಯಲ್ಲಿ ಸರಿಯಾಗಿ ಪಾಠ ಮಾಡಿಸಿಕೊಂಡಿತ್ತು ಆಸ್ಟ್ರೇಲಿಯಾ. ಆದ್ರೆ ಭಾರತ & ಆಸ್ಟ್ರೇಲಿಯಾ 4ನೇ ಟೆಸ್ಟ್ ಪಂದ್ಯದ 2ನೇ ದಿನ ಇದ್ದ ಕಾಂಗರೂ ಪಡೆಯ ಕೊಬ್ಬು, 3ನೇ ದಿನ ಸಂಪೂರ್ಣ ಕರಗಿ ಹೋಗಿತ್ತು!
ವಿರಾಟ್ ಕೊಹ್ಲಿ ಜೊತೆಗೆ ಬೇಕು ಅಂತಲೇ ಕಿರಿಕ್ ಮಾಡಿಕೊಂಡು ಆಸ್ಟ್ರೇಲಿಯಾದ ಸ್ಯಾಮ್ ಕೋನ್‌ಸ್ಟಾಸ್ ರಾತ್ರೋರಾತ್ರಿ ಹೆಸರು ಮಾಡಿದ್ದಾನೆ. ಹಾಗೇ ವಿರಾಟ್ ಕೊಹ್ಲಿಗೆ ದಂಡ ಹಾಕಿ, ಐಸಿಸಿ ಎಚ್ಚರಿಕೆ ಸಂದೇಶ ರವಾನಿಸಿದ ವಿಚಾರ ಕೂಡ ಸಿಕ್ಕಾಪಟ್ಟೆ ಸದ್ದು ಮಾಡಿ ವೈರಲ್ ಆಗಿದೆ. ಮೆಲ್ಬೋರ್ನ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಮಹತ್ವದ ಭಾರತ & ಆಸ್ಟ್ರೇಲಿಯಾ ನಡುವಿನ ಬಾರ್ಡರ್ ಗವಾಸ್ಕರ್ ಟ್ರೋಫಿ 4ನೇ ಟೆಸ್ಟ್ ಪಂದ್ಯದ 1ನೇ ದಿನದಾಟವು ಭಾರಿ ಗಮನ ಸೆಳೆದಿತ್ತು. ಅದನ್ನು ಮೀರಿ 3ನೇ ದಿನದಾಟ ಭರ್ಜರಿ ದಾಖಲೆ ಬರೆದಿದೆ!

200 ರನ್ ಒಳಗೆ 6 ವಿಕೆಟ್ ಢಮಾರ್!
2ನೇ ದಿನದಾಟದಲ್ಲಿ ಹಿನ್ನಡೆ ಕಂಡಿದ್ದ ಭಾರತ ತಂಡ 3ನೇ ದಿನದಾಟದಲ್ಲಿ ಕಂಬ್ಯಾಕ್ ಮಾಡಿ ಆಸಿಸ್ ಪಡೆಗೆ ತಿರುಗೇಟು ನೀಡಿತ್ತು. 2ನೇ ದಿನದಾಟದಲ್ಲಿ ಭಾರತ ತಂಡ 200 ರನ್ ಆಗುವುದರ ಒಳಗೆ ಬರೋಬ್ಬರಿ 6 ವಿಕೆಟ್ ಕಳೆದುಕೊಂಡು ನರಳಾಡಿತ್ತು. ಹೀಗಿದ್ದಾಗಲೇ ನೋಡಿ ನಿತೀಶ್ ರೆಡ್ಡಿ & ವಾಷಿಂಗ್ಟನ್ ಸುಂದರ್ ಕಮಾಲ್ ಮಾಡಿ ಬಿಟ್ಟರು. ನಿತೀಶ್ ರೆಡ್ಡಿ & ವಾಷಿಂಗ್ಟನ್ ಸುಂದರ್ ಜೋಡಿಯ ಆಟ ನೋಡಿ ಕೊಬ್ಬಿದ ಕಾಂಗರೂ ಪಡೆ ಆಘಾತಕ್ಕೆ ಒಳಗಾಗಿತ್ತು.
ನಿತೀಶ್ ರೆಡ್ಡಿ 105 ರನ್!
ಭಾರತ ತಂಡದ 3ನೇ ದಿನದಾಟ ಹೇಗಿತ್ತು ಅಂದ್ರೆ, ಆಸ್ಟ್ರೇಲಿಯಾ ತಂಡ ಕಕ್ಕಾಬಿಕ್ಕಿ ಆಗಿತ್ತು. ಭಾರತದ ಪರವಾಗಿ ನಿತೀಶ್ ರೆಡ್ಡಿ 105 ರನ್ ಗಳಿಸಿದ್ದು ಈಗಲೂ ಆಟವಾಡುತ್ತಿದ್ದಾರೆ, ಹಾಗೇ ನಿತೀಶ್ ರೆಡ್ಡಿಗೆ ಸಾಥ್ ನೀಡಿದ್ದ ವಾಷಿಂಗ್ಟನ್ ಸುಂದರ್ ಭರ್ಜರಿ 50 ರನ್‌ಗಳ ಗಿಫ್ಟ್ ನೀಡಿದ್ದಾರೆ. ಒಂದೊಂದು ಹಂತದಲ್ಲೂ ನಿತೀಶ್ ರೆಡ್ಡಿ & ವಾಷಿಂಗ್ಟನ್ ಸುಂದರ್ ಜೋಡಿಯನ್ನ ಬೇರೆ, ಬೇರೆ ಮಾಡಲು ಆಸ್ಟ್ರೇಲಿಯಾ ಬೌಲರ್‌ಗಳು ಹರಸಾಹ ಮಾಡಿಬಿಟ್ಟರು. ಆದರೆ ಆಸ್ಟ್ರೇಲಿಯಾ ತಂಡ ಈ ಪ್ರಯತ್ನದಲ್ಲಿ ಪ್ರತಿಬಾರಿ ಕೂಡ ಸೋತು ಹೋಗಿತ್ತು.
ಈ ಮೂಲಕ, ಭಾರತ ತಂಡವು 3ನೇ ದಿನದಾಟ ಅಂತ್ಯಕ್ಕೆ 358 ರನ್ ಗಳಿಸಿದ್ದು, 9 ವಿಕೆಟ್ ಕಳೆದುಕೊಂಡಿದೆ. ಹಾಗೇ 116 ರನ್ ಹಿಂದೆ ಉಳಿದಿದೆ. ಹೀಗಿದ್ದಾಗ ಭಾರತ ತಂಡ ಸದ್ಯಕ್ಕೆ ಸೋಲಿನ ಸುಳಿಯಿಂದ ಬಚಾವ್ ಆಗಿದ್ದರೂ ಗೆಲುವಿಗಾಗಿ ದೊಡ್ಡ ಹೋರಾಟ ನಡೆಸಬೇಕಿದೆ. ಈ ಮೂಲಕ ಕೊಬ್ಬಿದ ಕಾಂಗರೂ 'ಸೆಡೆ'ಗಳಿಗೆ ತಕ್ಕ ಪಾಠ ಕಲಿಸಬೇಕಿದೆ ಅಂತಾ ಫ್ಯಾನ್ಸ್ ಒತ್ತಾಯ ಮಾಡ್ತಿದ್ದಾರೆ!












Click it and Unblock the Notifications