India Vs Pakistan: ಭಾರತದ ವಿರುದ್ಧ ಪಂದ್ಯಕ್ಕೂ ಮುನ್ನವೇ ಪಾಕಿಸ್ತಾನಕ್ಕೆ ಫುಲ್ ಟೆನ್ಷನ್‌

ಸೆಪ್ಟೆಂಬರ್-ಅಕ್ಟೋಬರ್ ತಿಂಗಳಿನಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಕನಿಷ್ಠ ಮೂರು ಬಾರಿ ಮುಖಾಮುಖಿಯಾಗಲಿದ್ದು, ಕ್ರಿಕೆಟ್ ಅಭಿಮಾನಿಗಳಿಗೆ ಮನರಂಜನೆಯ ರಸದೌತಣ ನೀಡಲಿವೆ. ಏಷ್ಯಾಕಪ್ ಮತ್ತು ಏಕದಿನ ವಿಶ್ವಕಪ್‌ನಲ್ಲಿ ಭಾರತ-ಪಾಕಿಸ್ತಾನ ಮುಖಾಮುಖಿಗೆ ಅಭಿಮಾನಿಗಳು ಕಾಯುತ್ತಿದ್ದಾರೆ. ಈ ರೋಚಕ ಹಣಾಹಣಿಗೆ ಮುನ್ನವೇ ಪಾಕಿಸ್ತಾನ ತಂಡಕ್ಕೆ ಟೆನ್ಷನ್ ಶುರುವಾಗಿದೆ.

ಭಾರತ - ಪಾಕಿಸ್ತಾನ ನಡುವಿನ ಪಂದ್ಯ ಎಂದರೆ ಎರಡೂ ದೇಶಗಳ ಅಭಿಮಾನಿಗಳಿಗೆ ಭಾರಿ ನಿರೀಕ್ಷೆ ಇರುತ್ತದೆ. ಗೆಲ್ಲಲೇಬೆಕೆನ್ನುವ ಒತ್ತಡ ಎರಡೂ ತಂಡಗಳ ಆಟಗಾರರಿಗೆ ಇರುತ್ತದೆ. ಅದರಲ್ಲೂ ಭಾರತದ ನೆಲದಲ್ಲಿ ಭಾರತದ ವಿರುದ್ಧ ವಿಶ್ವಕಪ್ ಪಂದ್ಯ ಆಡುವ ಪಾಕಿಸ್ತಾನ ಆಟಗಾರರು ಒತ್ತಡದ ಭಯದಲ್ಲಿದ್ದು, ಅದರ ನಿವಾರಣೆಗೆ ಮುಂದಾಗಿದ್ದಾರೆ.

IND vs PAK World Cup Match

ವಿಶ್ವಕಪ್ 2023 ರಲ್ಲಿ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಪಂದ್ಯ ನಡೆಯಲಿದ್ದು 1.30 ಲಕ್ಷ ಅಭಿಮಾನಿಗಳು ಕ್ರೀಡಾಂಗಣದಲ್ಲಿ ಜಮಾಯಿಸಲಿದ್ದಾರೆ. ನಾಯಕ ಬಾಬರ್ ಅಜಮ್ ಸೇರಿದಂತೆ ಪಾಕಿಸ್ತಾನದ ಹೆಚ್ಚಿನ ಆಟಗಾರರು ಭಾರತದಲ್ಲಿ ಯಾವುದೇ ಪಂದ್ಯವನ್ನು ಆಡಿಲ್ಲ. ಆದ್ದರಿಂದ, ಸಾಂಪ್ರದಾಯಿಕ ಎದುರಾಳಿಗಳ ಗುಂಪಿನಿಂದ ಮತ್ತು ಲಕ್ಷಾಂತರ ಜನರ ಮುಂದೆ ಆಡಬೇಕಿರುವುದರಿಂದ ಭಾರಿ ಒತ್ತಡದ ಬಗ್ಗೆ ತಂಡಕ್ಕೆ ತಿಳಿದಿರುವುದಿಲ್ಲ.

ಭಾರತದಲ್ಲಿ ಆಡಿದ ಅನುಭವ ಇಲ್ಲ

ತಂಡವು ಒತ್ತಡವನ್ನು ನಿಭಾಯಿಸಲು ಪಾಕಿಸ್ತಾನ ಕ್ರಿಕೆಟ್ ಮಂಡಳಿಯು ಕ್ರೀಡಾ ಮನಶ್ಶಾಸ್ತ್ರಜ್ಞರನ್ನು ಹುಡುಕುತ್ತಿದೆ. ವಿಶ್ವಕಪ್‌ಗಿಂತ ಮೊದಲು, ಏಷ್ಯಾ ಕಪ್ 2023 ರಲ್ಲಿ ಸೆಪ್ಟೆಂಬರ್ 2 ರಂದು ಭಾರತ ಮತ್ತು ಪಾಕಿಸ್ತಾನ ನಡುವೆ ಪಂದ್ಯ ನಡೆಯಲಿದೆ.

ಎರಡು ಟಿ20 ವಿಶ್ವಕಪ್‌ಗಳಲ್ಲಿ ಪಾಕಿಸ್ತಾನವು ಈಗಾಗಲೇ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್‌ ವಿರುದ್ಧ ಹೆಚ್ಚಿನ ಒತ್ತಡದ ಪಂದ್ಯಗಳಲ್ಲಿ ಸೋತಿರುವ ಕಾರಣ, ಪಾಕಿಸ್ತಾನ ಕ್ರಿಕೆಟ್ ಮಂಡಳಿ ಅಧ್ಯಕ್ಷ ಝಾಕಾ ಅಶ್ರಫ್ ಅವರು ತಂಡದ ಜೊತೆ ಮನಶ್ಶಾಸ್ತ್ರಜ್ಞ ಅಥವಾ ಮಾನಸಿಕ ಕಂಡೀಷನಿಂಗ್ ತರಬೇತುದಾರ ಇರಬೇಕೆಂದು ಬಯಸಿದ್ದಾರೆ.

2012 ರಲ್ಲಿ, ಪಾಕಿಸ್ತಾನವು ಸೀಮಿತ ಓವರ್‌ಗಳ ಸರಣಿಗಾಗಿ (ಮೂರು ಏಕದಿನ, 5 ಟಿ20 ಪಂದ್ಯಗಳು) ಭಾರತಕ್ಕೆ ಭೇಟಿ ನೀಡಿದಾಗ, ಪಾಕಿಸ್ತಾನ ಕ್ರಿಕೆಟ್ ಮಂಡಳಿ ತಂಡದೊಂದಿಗೆ ಕ್ರೀಡಾ ಮನಶ್ಶಾಸ್ತ್ರಜ್ಞರನ್ನು ಕಳುಹಿಸಿತು. ಝಾಕಾ ಅಶ್ರಫ್ ಆಗ ಪಿಸಿಬಿ ಅಧ್ಯಕ್ಷರೂ ಆಗಿದ್ದರು.

ಪ್ಯಾಡಿ ಅಪ್ಟನ್ ನೇಮಕ ಸಾಧ್ಯತೆ

ಪಾಕಿಸ್ತಾನ ಕ್ರಿಕೆಟ್ ತಂಡವು ಎರಡು ಟಿ20 ವಿಶ್ವಕಪ್‌ಗಳಲ್ಲಿ ಎರಡು ನಿರಾಶಾದಾಯಕ ಸೋಲಿನಿಂದ ಪುಟಿದೇಳಲು ಬಯಸುತ್ತಿರುವಾಗ, ಕ್ರೀಡಾ ಮನಶ್ಶಾಸ್ತ್ರಜ್ಞರು ಉತ್ತಮ ಸಹಾಯ ಮಾಡುತ್ತಾರೆ ಎಂದು ನಂಬಿದೆ. ಜಿಯೋನ್ಯೂಸ್ ಪ್ರಕಾರ, ಈ ಪಾತ್ರವನ್ನು ಯಾರು ತುಂಬುತ್ತಾರೆ ಎಂಬುದನ್ನು ಪಿಸಿಬಿ ಇನ್ನೂ ನಿರ್ಧಾರ ಮಾಡಿಲ್ಲ. ಮಾನಸಿಕ ಕಂಡೀಷನಿಂಗ್ ತರಬೇತುದಾರ ಪ್ಯಾಡಿ ಆಪ್ಟನ್ ಆಯ್ಕೆಯಾಗುವ ಸಾಧ್ಯತೆಯಿದೆ. ಅವರು ಈ ಹಿಂದೆ ಪಾಕಿಸ್ತಾನಿ ಸೂಪರ್ ಲೀಗ್ ಫ್ರಾಂಚೈಸಿ ಲಾಹೋರ್ ಖಲಂದರ್ಸ್‌ನಲ್ಲಿ ಪಾಕಿಸ್ತಾನಿ ಆಟಗಾರರೊಂದಿಗೆ ಕೆಲಸ ಮಾಡಿದ್ದಾರೆ.

ಭಾರತ ಕೂಡ 2022 ರ ಟಿ20 ವಿಶ್ವಕಪ್‌ಗೆ ಮುಂಚಿತವಾಗಿ ಪ್ಯಾಡಿ ಅಪ್ಟನ್ ಅವರನ್ನು ನೇಮಿಸಿತ್ತು. 2011 ರ ವಿಶ್ವಕಪ್-ವಿಜೇತ ಅಭಿಯಾನಕ್ಕಾಗಿ ಆಪ್ಟನ್ ಭಾರತೀಯ ಸಹಾಯಕ ಸಿಬ್ಬಂದಿಯ ಭಾಗವಾಗಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+