Ind vs NZ: ಭಾರತ - ನ್ಯೂಜಿಲೆಂಡ್ ಸೆಮಿಫೈನಲ್ ಪಂದ್ಯಕ್ಕೆ ಮಳೆ ಅಡ್ಡಿಯಾಗುತ್ತಾ?
ದೀಪಾವಳಿ ಸಂಭ್ರಮದ ಜೊತೆಗೆ ಕ್ರಿಕೆಟ್ ಅಭಿಮಾನಿಗಳು ಭಾರತ- ನ್ಯೂಜಿಲೆಂಡ್ ಏಕದಿನ ವಿಶ್ವಕಪ್ ಪಂದ್ಯಕ್ಕಾಗಿ ಕಾಯುತ್ತಿದ್ದಾರೆ. ನವೆಂಬರ್ 15ರಂದು ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಕೋಟ್ಯಂತರ ಅಭಿಮಾನಿಗಳು ಭಾರತದ ಗೆಲುವಿಗೆ ಪ್ರಾರ್ಥನೆ ಮಾಡುತ್ತಿದ್ದಾರೆ.
ಇನ್ನು ಈ ರೋಚಕ ಸೆಮಿಫೈನಲ್ ಪಂದ್ಯಕ್ಕೆ ಮಳೆ ಅಡ್ಡಿಪಡಿಸುತ್ತಾ ಎನ್ನುವ ಆತಂಕ ಕೂಡ ಇತ್ತು. ಆದರೆ ಹವಾಮಾನ ಇಲಾಖೆ ವರದಿ ಪ್ರಕಾರ ಮುಂಬೈನಲ್ಲಿ ಬುಧವಾರ ಒಣಹವೆ ಇರಲಿದ್ದು, ಮಳೆ ಈ ಪಂದ್ಯಕ್ಕೆ ತೊಂದರೆ ಕೊಡುವುದಿಲ್ಲ ಎಂದು ಹೇಳಿದೆ.
ಮುನ್ನೆಚ್ಚರಿಕಾ ಕ್ರಮವಾಗಿ ಸೆಮಿಫೈನಲ್ ಪಂದ್ಯಕ್ಕೆ ಐಸಿಸಿ ಮೀಸಲು ದಿನವನ್ನು ಕೂಡ ನಿಗದಿ ಮಾಡಿದೆ. ಆದರೆ ನಿಗದಿಯಂತೆ ಪಂದ್ಯ ನಡೆಯಲಿದ್ದು, ಮಳೆ ಅಡ್ಡಿಯಾಗುವುದಿಲ್ಲ ಎಂದು ಹೇಳಿದ್ದು, ಅಭಿಮಾನಿಗಳೂ ಕೂಡ ಖುಷಿಯಾಗಿದ್ದಾರೆ.

ವಾಂಖೆಡೆ ಅಂಗಳದಲ್ಲಿ ಗೆಲ್ಲುತ್ತಾ ರೋಹಿತ್ ಪಡೆ?
ಸೆಮಿಫೈನಲ್‌ಗೆ ಭಾರತ ತಂಡ ಸಜ್ಜಾಗುತ್ತಿದೆ, ಮಂಗಳವಾರ ಟೀಂ ಇಂಡಿಯಾ ಆಟಗಾರರು ವಾಂಖೆಡೆ ಕ್ರೀಡಾಂಗಣದಲ್ಲಿ ಕಠಿಣ ಅಭ್ಯಾಸ ಮಾಡುತ್ತಿದ್ದಾರೆ. ಸೆಮಿಫೈನಲ್‌ನಲ್ಲಿ ಭಾರತವೇ ಗೆಲ್ಲುವ ಫೇವರಿಟ್ ಆಗಿದ್ದರೂ, ನ್ಯೂಜಿಲೆಂಡ್ ತಂಡವನ್ನು ಕಡೆಗಣಿಸುವಂತಿಲ್ಲ.
ರೋಹಿತ್ ಶರ್ಮಾ ಹೇಳಿದ್ದೇನು?
ಇನ್ನು ಸೆಮಿಫೈನಲ್ ಪಂದ್ಯಕ್ಕೆ ಮುನ್ನ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಮಾಧ್ಯಮಗಳ ಜೊತೆ ಸಂವಾದ ನಡೆಸಿದರು.
ಪಂದ್ಯದ ಪೂರ್ವಭಾವಿ ಪತ್ರಿಕಾಗೋಷ್ಠಿಯಲ್ಲಿ ರೋಹಿತ್ ಡ್ರೆಸ್ಸಿಂಗ್ ರೂಮ್ ಪರಿಸರದ ಬಗ್ಗೆ ಮಾತನಾಡಿದರು ಮತ್ತು ಆಟಗಾರರು ತಂಡವಾಗಿ ಮಾಡುವ ವಿವಿಧ ಚಟುವಟಿಕೆಗಳನ್ನು ವಿವರಿಸಿದರು.
ಸೆಮಿಫೈನಲ್ ಒತ್ತಡದ ಬಗ್ಗೆ ಮಾತನಾಡಿದ ಅವರು, "ನಾವು 1983 ರಲ್ಲಿ ಭಾರತ ವಿಶ್ವಕಪ್ ಗೆದ್ದಾಗ ನಾವು ಹುಟ್ಟಿರಲಿಲ್ಲ. 2011 ರಲ್ಲಿ ನಾವು ಗೆದ್ದಾಗ ಅವರಲ್ಲಿ ಅರ್ಧದಷ್ಟು ಜನರು ಆಡುತ್ತಿರಲಿಲ್ಲ. ನಮ್ಮ ಹಿಂದಿನ ವಿಶ್ವಕಪ್‌ಗಳನ್ನು ನಾವು ಹೇಗೆ ಗೆದ್ದಿದ್ದೇವೆ ಎಂಬುದರ ಕುರಿತು ಅವರು ಮಾತನಾಡುವುದನ್ನು ನಾನು ನೋಡುತ್ತಿಲ್ಲ. ನಾವು ಹೇಗೆ ಉತ್ತಮಗೊಳ್ಳಬಹುದು ಮತ್ತು ನಾವು ಹೇಗೆ ಸುಧಾರಿಸಬಹುದು ಎಂಬುದರ ಮೇಲೆ ಗಮನ ಕೇಂದ್ರೀಕರಿಸಿದೆ. ಪಂದ್ಯವನ್ನು ಗೆಲ್ಲುವತ್ತ ಮಾತ್ರ ಗಮನ ಹರಿಸಿದ್ದೇವೆ" ಎಂದು ಹೇಳಿದರು.
ಉಭಯ ತಂಡಗಳ ಸಂಭಾವ್ಯ ಆಡುವ ಬಳಗ
ಭಾರತ: ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (WK), ಸೂರ್ಯಕುಮಾರ್ ಯಾದವ್, ರವೀಂದ್ರ ಜಡೇಜಾ, ಮೊಹಮ್ಮದ್ ಶಮಿ, ಜಸ್ಪ್ರೀತ್ ಬುಮ್ರಾ, ಕುಲದೀಪ್ ಯಾದವ್, ಮೊಹಮ್ಮದ್ ಸಿರಾಜ್.
ನ್ಯೂಜಿಲೆಂಡ್: ಡೆವೊನ್ ಕಾನ್ವೇ, ರಚಿನ್ ರವೀಂದ್ರ, ಕೇನ್ ವಿಲಿಯಮ್ಸನ್ (ನಾಯಕ), ಡೇರಿಲ್ ಮಿಚೆಲ್, ಟಾಮ್ ಲ್ಯಾಥಮ್ (ವಿಕೆಟ್ ಕೀಪರ್), ಗ್ಲೆನ್ ಫಿಲಿಪ್ಸ್, ಮಾರ್ಕ್ ಚಾಪ್ಮನ್, ಮಿಚೆಲ್ ಸ್ಯಾಂಟ್ನರ್, ಇಶ್ ಸೋಧಿ, ಟಿಮ್ ಸೌಥಿ, ಟ್ರೆಂಟ್ ಬೌಲ್ಟ್.












Click it and Unblock the Notifications