T20 World cup: ಐಪಿಎಲ್‌ನಲ್ಲಿ ಮಿಂಚಿದರು ಈ ಐದು ಆಟಗಾರರಿಗೆ ಟೀಮ್ ಇಂಡಿಯಾದಲ್ಲಿ ಸಿಗದ ಅವಕಾಶ

ವೆಸ್ಟ್‌ ಇಂಡೀಸ್ ಹಾಗೂ ಅಮೆರಿಕದಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ಗೆ ಭಾರತ ತಂಡವನ್ನು ಪ್ರಕಟಿಸಲಾಗಿದೆ. ಈ ತಂಡದಲ್ಲಿ ಸ್ಥಾನ ಸಿಗುವ ಆಸೆಯನ್ನು ಕಾಣುತ್ತಿದ್ದ ಐಪಿಎಲ್‌ನಲ್ಲಿ ಮಿಂಚುತ್ತಿರುವ ಸ್ಟಾರ್ ಆಟಗಾರರಿಗೆ ನಿರಾಸೆ ಆಗಿದೆ. ಟೀಮ್ ಇಂಡಿಯಾ ಜೆರ್ಸಿ ತೊಟ್ಟ, ರಾಷ್ಟ್ರೀಯ ತಂಡದ ಜಯದಲ್ಲಿ ಮಿಂಚುವ ಹಂಬಲ ಹೊಂದಿದ್ದ ಆಟಗಾರರ ಪಟ್ಟಿ ಇಲ್ಲಿದೆ.

ಈ ಪಟ್ಟಿಯನ್ನು ಮಾಡುತ್ತಾ ಹೋದರೆ ದೊಡ್ಡದೆ ಆಗುತ್ತದೆ. ಆದರೆ ಸಿಕ್ಕ ಅವಕಾಶವನ್ನು ಎರಡೂ ಕೈಗಳಿಂದ ಬಳಸಿಕೊಂಡು, ಐಪಿಎಲ್‌ನಲ್ಲಿ ತಮ್ಮ ತಮ್ಮ ತಂಡಕ್ಕೆ ನೆರವಾಗುತ್ತಿರುವ ಆಟಗಾರರು ಟೀಮ್ ಇಂಡಿಯಾದಲ್ಲಿ ಸ್ಥಾನ ಪಡೆಯುವಲ್ಲಿ ವಿಫಲರಾಗಿದ್ದಾರೆ. ಈ ಪಟ್ಟಿಯಲ್ಲಿ ಇಬ್ಬರು ಪಂಜಾಬ್‌ ಕಿಂಗ್ಸ್ ಆಟಗಾರರು ಇರುವುದು ವಿಶೇಷ. ಅದರಲ್ಲಿ ಒಬ್ಬರು ಶಶಾಂಕ್‌ ಸಿಂಗ್‌..

IND T20 World Cup Squad 5 Players Denied Tickets to WI amp amp USA

ಪಂಜಾಬ್‌ ಕಿಂಗ್ಸ್‌ಗೆ ಅಗತ್ಯ ಇದ್ದಾಗಲೇಲ್ಲಾ ರನ್‌ ಬಾರಿಸಿದ ಆಟಗಾರರ ಪಟ್ಟಿಯನ್ನು ಈ ಬಾರಿ ತೆಗೆದರೆ ಆ ಪಟ್ಟಿಯಲ್ಲಿ ಶಶಾಂಕ್‌ ಸಿಂಗ್ ಹೆಸರು ಮುಂಚೂಣಿಯಲ್ಲಿರುತ್ತದೆ. ಇವರು ಮಿಡ್ಲ್ ಆರ್ಡರ್‌ ಬ್ಯಾಟರ್‌ ಆಗಿ ತಂಡದ ಬಲು ತುಂಬಿದ್ದಾರೆ. ಯಾವುದೇ ಬೌಲರ್‌ ಇದ್ದರೂ ಹೆದರದೆ ಬ್ಯಾಟ್ ಮಾಡುವ ಇವರ ಧಾಟಿ ಅಭಿಮಾನಿಗಳಿಗೆ ಹಬ್ಬದೂಟವನ್ನು ಹಾಕಿದೆ. ಇವರು ಪ್ರಸಕ್ತ ಐಪಿಎಲ್‌ನಲ್ಲಿ ಆಡಿದ 9 ಪಂದ್ಯಗಳಲ್ಲಿ ಇವರು 182.63ರ ಸರಾಸರಿಯಲ್ಲಿ 263 ರನ್‌ ಕಲೆ ಹಾಕಿದ್ದಾರೆ. ಇವರ ಆಟ ನೋಡಿ ಇವರಿಗೆ ಟಿ20 ವಿಶ್ವಕಪ್‌ನಲ್ಲಿ ಸ್ಥಾನ ಲಭಿಸುತ್ತದೆ ಎಂದೇ ಅಂದಾಜಿಸಲಾಗಿತ್ತು.

IND T20 World Cup Squad 5 Players Denied Tickets to WI amp amp USA

ಆಶುತೋಷ್ ಶರ್ಮಾ

ಈ ರೇಸ್‌ನಲ್ಲಿದ್ದ ಮತ್ತೊಬ್ಬ ಪ್ಲೇಯರ್‌ ಎಂದರೆ ಅದು ಸಹ ಪಂಜಾಬ್‌ ಕಿಂಗ್ಸ್ ಮಿಡ್ಲ್‌ ಆರ್ಡರ್‌ ಬ್ಯಾಟರ್‌ ಆಶುತೋಷ್‌ ಶರ್ಮಾ. ಶಶಾಂಕ್‌ ಸಿಂಗ್ ಹಾಗೂ ಆಶುತೋಷ್‌ ತಮ್ಮ ಪ್ರಭಾವಿ ಬ್ಯಾಟಿಂಗ್‌ನಿಂದಲೇ ಎಲ್ಲರ ಮನ ಕದ್ದ ಆಟಗಾರರು. ಆಶುತೋಷ್‌ ಪಂಜಾಬ್‌ ಪರ 6 ಪಂದ್ಯಗಳಲ್ಲಿ ಬ್ಯಾಟ್ ಮಾಡಿ 190.28ರ ಸರಾಸರಿಯಲ್ಲಿ 159 ರನ್‌ ಸಿಡಿದ್ದಾರೆ. ಈ ವೇಳೆ ಅವರ ಗರಿಷ್ಠ ಸ್ಕೋರ್‌ 61. ಇವರನ್ನು ಆಯ್ಕೆ ಮಾಡಬಹುದು ಎಂದು ಲೆಕ್ಕಾಚಾರ ಹಾಕಿಕೊಳ್ಳಲಾಗಿತ್ತು.

IND T20 World Cup Squad 5 Players Denied Tickets to WI amp amp USA

ರುತುರಾಜ್ ಗಾಯಕ್ವಾಡ್‌

ಸಿಎಸ್‌ಕೆ ತಂಡವನ್ನು ಮುನ್ನಡೆಸುತ್ತಿರುವ ರುತುರಾಜ್‌ ಸಹ ಈ ರೇಸ್‌ನಲ್ಲಿದ್ದರು. ಇವರು ಸಹ ಐಪಿಎಲ್‌ನಲ್ಲಿ ಆಡಿದ 9 ಪಂದ್ಯಗಳಲ್ಲಿ 447 ರನ್ ಸೇರಿಸಿರುವ ಇವರು, 150.28ರ ಸ್ಟ್ರೈಕ್‌ ರೇಟ್‌ನಲ್ಲಿ ರನ್ ಕಲೆ ಹಾಕಿದ್ದಾರೆ. ಇನ್ನು ಈ ಟೂರ್ನಿಯಲ್ಲಿ ಒಂದು ಶತಕ ಸಹ ಬಾರಿಸಿದ್ದಾರೆ.

IND T20 World Cup Squad 5 Players Denied Tickets to WI amp amp USA

ದಿನೇಕ್ ಕಾರ್ತಿಕ್

ಈ ರೇಸ್‌ಗೆ ಐಪಿಎಲ್‌ನಲ್ಲಿ ತಮ್ಮ ಧಮಾಕೆದಾರ್ ಬ್ಯಾಟಿಂಗ್ ಮೂಲಕವೇ ಎಂಟ್ರಿ ಕೊಟ್ಟ ಇನ್ನೊಬ್ಬ ಪ್ಲೇಯರ್‌ ದಿನೇಶ್ ಕಾರ್ತಿಕ್. ಇವರ ಬ್ಯಾಟಿಂಗ್ ಧಾಟಿ ಕಂಡು ಅಭಿಮಾನಿಗಳು ಫುಲ್‌ ಮಾರ್ಕ್ಸ್‌ ನೀಡಿದ್ದಾರೆ. ಸೋಲಿನ ಅಂಚಿನಲ್ಲಿದ್ದ ಪಂದ್ಯಗಳನ್ನು ಗೆಲುವಿನ ಸನಿಹಕ್ಕೆ ತಂದು ನಿಲ್ಲಿಸಿರುವ ಬ್ಯಾಟರ್‌ ತಾನು ಸಹ ಟಿ20 ವಿಶ್ವಕಪ್‌ ಆಡಬಲ್ಲೇ ಎಂದೇ ಹೇಳಿದ್ದರು. ಆದರೆ ಆಯ್ಕೆದಾರರು ಇವರಿಗೆ ನಿರಾಸೆ ಮೂಡಿಸಿದ್ದಾರೆ. ಇವರು ಐಪಿಎಲ್‌ನಲ್ಲಿ 195.52ರ ಸ್ಟ್ರೈಕ್ ರೇಟ್‌ನಲ್ಲಿ ರನ್ ಕಲೆ ಹಾಕುತ್ತಿದ್ದಾರೆ. ಆರ್‌ಸಿಬಿ ಪರ ಎಲ್ಲ ಪಂದ್ಯಗಳಲ್ಲೂ ಬ್ಯಾಟ್ ಮಾಡಿರುವ ಇವರು ಫಿನಿಶರ್ ಪಾತ್ರ ಸೂಟ್ ಆಗುವ ಪ್ಲೇಯರ್‌.

IND T20 World Cup Squad 5 Players Denied Tickets to WI amp amp USA

ಶ್ರೇಯಸ್ ಅಯ್ಯರ್‌

ಈ ಪಟ್ಟಿಯಲ್ಲಿ ಕಾಣಿಸಿಕೊಳ್ಳುವ ಇನ್ನೊಂದು ಹೆಸರು ಶ್ರೇಯಸ್ ಅಯ್ಯರ್.. ಇವರು ಟಿ20 ವಿಶ್ವಕಪ್‌ನಲ್ಲಿ ಸ್ಥಾನ ಸಿಗಬಹುದು ಎಂದೇ ಹೋಪ್‌ ಇಟ್ಟುಕೊಂಡಿದ್ದರು. ಆದರೆ ಇವರಿಗೆ ನಿರಾಸೆ ಅಪ್ಪಿಕೊಂಡಿದೆ. ಇವರು ಐಪಿಎಲ್‌ನಲ್ಲಿ ಆಡಿದ 9 ಪಂದ್ಯಗಳಲ್ಲಿ 251 ರನ್‌ ಕಲೆ ಹಾಕಿ ಮಿಂಚಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+