ICC World Cup 2023: ಐಸಿಸಿ ಏಕದಿನ ವಿಶ್ವಕಪ್ ಗೆದ್ದ ತಂಡಗಳು & ವರ್ಷ!
ಇಡೀ ಜಗತ್ತು ಉಸಿರು ಬಿಗಿಹಿಡಿದು ಕಾಯುತ್ತಿರುವ ಸಮಯ ಬಂದೇ ಬಿಟ್ಟಿದೆ, ಭಾರತ & ಆಸ್ಟ್ರೇಲಿಯಾ ನಡುವೆ ರಣಕಾಳಗ ನೋಡಲು ಜಗತ್ತೇ ಸಜ್ಜಾಗಿದೆ. ಗುಜರಾತ್ ರಾಜಧಾನಿ ಅಹಮದಾಬಾದ್ ಶತಕೋಟಿ ಭಾರತೀಯರಿಗೆ ಈಗ ಹೃದಯವಾಗಿದೆ. ಹಾಗಾದರೆ ಈ ವೇಳೆ ನಾವು ಐಸಿಸಿ ಏಕದಿನ ಕ್ರಿಕೆಟ್ ವಿಶ್ವಕಪ್ ಚರಿತ್ರೆಯ ಬಗ್ಗೆ ತಿಳಿಯೋಣ. ಈವರೆಗೆ ಯಾರು, ಯಾರು ವಿಶ್ವಕಪ್ ಗೆದ್ದಿದ್ದಾರೆ? ಯಾವ ವರ್ಷದಲ್ಲಿ? ಎನ್ನುವ ಮಾಹಿತಿ ಇಲ್ಲಿದೆ ಮುಂದೆ ಓದಿ.
ಏಕದಿನ ಕ್ರಿಕೆಟ್ ಅಂದ್ರೆ ಒಂದು ಗತ್ತಿದೆ ಅದರಲ್ಲೂ ವಿಶ್ವಕಪ್ ಎಂಬ ಸಂಭ್ರಮ ಶುರುವಾಗಿದ್ದೂ ಇದೇ ಏಕದಿನ ಮಾದರಿ ಪಂದ್ಯಗಳಿಂದ. ಮೊಟ್ಟ ಮೊದಲ ಬಾರಿ 1975 ರಲ್ಲಿ ಆರಂಭವಾದ ಕ್ರಿಕೆಟ್ ವಿಶ್ವಕಪ್ ಹಬ್ಬ, ಈವರೆಗೂ ಒಟ್ಟಾರೆ 12 ವಿಶ್ವಕಪ್ ಟೂರ್ನಿಗಳನ್ನು ಕಂಡಿದೆ. ಈಗಿನ ವಿಶ್ವಕಪ್‌ನ ಲೆಕ್ಕಕ್ಕೆ ತೆಗೆದುಕೊಂಡರೆ ಈ ಸಂಖ್ಯೆ 13 ಆಗುತ್ತದೆ. 1975, 1979, 1983, 1987, 1992, 1996, 1999, 2003, 2007, 2011, 2015, 2019 ರಲ್ಲಿ ನಡೆದ ಐಸಿಸಿ ವಿಶ್ವಕಪ್ ಟೂರ್ನಿಗಳಲ್ಲಿ ಗೆದ್ದು ಬೀಗಿದ ತಂಡಗಳು ಯಾವುವು? ಫೈನಲ್ ಪಂದ್ಯ ನಡೆದ ನಗರಗಳು ಯಾವುವು? 2023 ರ ವಿಶ್ವಕಪ್ ಅಖಾಡದಲ್ಲಿ ಭಾರತದ ಶಕ್ತಿ ಹೇಗಿದೆ? ಬನ್ನಿ ತಿಳಿಯೋಣ.

ಕೋಟಿ ಕೋಟಿ ಹಣ ಸಿಗುತ್ತೆ!
'ಐಸಿಸಿ ಏಕದಿನ ವಿಶ್ವಕಪ್-2023'ರ ಬಹುಮಾನ ಮೊತ್ತ ಒಟ್ಟು 10 ಮಿಲಿಯನ್. ಅಂದರೆ 84 ಕೋಟಿ ರೂಪಾಯಿ. ಇದು ಒಂದೆ ಟೀಂಗೆ ಸಿಗಲ್ಲ ಬದಲಾಗಿ 'ಐಸಿಸಿ ಏಕದಿನ ವಿಶ್ವಕಪ್-2023' ಟೂರ್ನಿ ಬಹುಮಾನ ಮೊತ್ತ ಇದಾಗಿದೆ. ನವೆಂಬರ್ 19 ರಂದು ಅಂದ್ರೆ ಇವತ್ತೇ ಫೈನಲ್‌ಗೆ ಸಿದ್ಧತೆ ಸಾಗಿದೆ. ಅಹಮದಾಬಾದ್ ನಗರದ 'ನರೇಂದ್ರ ಮೋದಿ' ಕ್ರೀಡಾಂಗಣದಲ್ಲಿ, ಫೈನಲ್ ಪಂದ್ಯ ನಡೆಯಲಿದೆ. ಇಂದಿನ ಫೈನಲ್ ಪಂದ್ಯದಲ್ಲಿ ಗೆದ್ದು ಬೀಗುವ ತಂಡವು, ಒಟ್ಟಾರೆ 4 ಮಿಲಿಯನ್ ಡಾಲರ್ ಅಂದರೆ 33 ಕೋಟಿ ರೂಪಾಯಿ ಪ್ರೈಜ್ ಪಡೆಯಲಿದ್ದಾರೆ. ಹಾಗಾದ್ರೆ ಈ ರೀತಿ ಈವರೆಗೂ ಏಕದಿನ ವಿಶ್ವಕಪ್ ಗೆದ್ದ ತಂಡಗಳು ಯಾವುವು?
ಐಸಿಸಿ ಏಕದಿನ ವಿಶ್ವಕಪ್ ಚರಿತ್ರೆ
| ವರ್ಷ | ಕದನ ಕಲಿಗಳು | ವಿಶ್ವಕಪ್ ಯುದ್ಧ ಗೆದ್ದ ತಂಡ | ನಡೆದಿದ್ದು ಎಲ್ಲಿ |
| 1975 | ಆಸ್ಟ್ರೇಲಿಯಾ vs ವೆಸ್ಟ್ ಇಂಡೀಸ್ | ವೆಸ್ಟ್ ಇಂಡೀಸ್ | ಲಂಡನ್ |
| 1979 | ಇಂಗ್ಲೆಂಡ್ vs ವೆಸ್ಟ್ ಇಂಡೀಸ್ | ವೆಸ್ಟ್ ಇಂಡೀಸ್ | ಲಂಡನ್ |
| 1983 | ವೆಸ್ಟ್ ಇಂಡೀಸ್ vs ಭಾರತ | ಭಾರತ | ಲಂಡನ್ |
| 1987 | ಆಸ್ಟ್ರೇಲಿಯಾ vs ಇಂಗ್ಲೆಂಡ್ | ಆಸ್ಟ್ರೇಲಿಯಾ | ಕೊಲ್ಕತ್ತಾ |
| 1992 | ಪಾಕಿಸ್ತಾನ vs ಇಂಗ್ಲೆಂಡ್ | ಪಾಕಿಸ್ತಾನ | ಮೆಲ್ಬರ್ನ್ |
| 1996 | ಶ್ರೀಲಂಕಾ vs ಆಸ್ಟ್ರೇಲಿಯಾ | ಶ್ರೀಲಂಕಾ | ಲಾಹೋರ್ |
| 1999 | ಆಸ್ಟ್ರೇಲಿಯಾ vs ಪಾಕಿಸ್ತಾನ | ಆಸ್ಟ್ರೇಲಿಯಾ | ಲಂಡನ್ |
| 2003 | ಆಸ್ಟ್ರೇಲಿಯಾ vs ಭಾರತ | ಆಸ್ಟ್ರೇಲಿಯಾ | ಜೋಹಾನ್ಸ್ ಬರ್ಗ್ |
| 2007 | ಆಸ್ಟ್ರೇಲಿಯಾ vs ಶ್ರೀಲಂಕಾ | ಆಸ್ಟ್ರೇಲಿಯಾ | ಬ್ರಿಡ್ಜ್‌ಟೌನ್ |
| 2011 | ಭಾರತ vs ಶ್ರೀಲಂಕಾ | ಭಾರತ | ಮುಂಬೈ |
| 2015 | ಆಸ್ಟ್ರೇಲಿಯಾ vs ನ್ಯೂಜಿಲೆಂಡ್ | ಆಸ್ಟ್ರೇಲಿಯಾ | ಮೆಲ್ಬರ್ನ್ |
| 2019 | ಇಂಗ್ಲೆಂಡ್ vs ನ್ಯೂಜಿಲೆಂಡ್ | ಇಂಗ್ಲೆಂಡ್ | ಲಂಡನ್ |
| 2023 | ಭಾರತ vs ಆಸ್ಟ್ರೇಲಿಯಾ | ------ | ಅಹಮದಾಬಾದ್ |
2 ಬಾರಿ ವಿಶ್ವಕಪ್ ಗೆದ್ದಿದೆ ಭಾರತ
ಹೀಗೆ ಭಾರತ ತಂಡ ಐಸಿಸಿ ಏಕದಿನ ವಿಶ್ವಕಪ್ ಅಖಾಡದಲ್ಲಿ ತನ್ನದೇ ತಾಕತ್ ತೋರಿಸಿದೆ ಮತ್ತು ತೋರಿಸುತ್ತಲೂ ಇದೆ. ಆಸ್ಟ್ರೇಲಿಯಾ ಮತ್ತು ವೆಸ್ಟ್ ಇಂಡೀಸ್ ತಂಡಗಳನ್ನ ಬಿಟ್ಟರೆ ಭಾರತ ತಂಡವೇ ಅತಿಹೆಚ್ಚು ಬಾರಿ ಐಸಿಸಿ ಏಕದಿನ ವಿಶ್ವಕಪ್ ಗೆದ್ದಿದೆ. 1983 ಮತ್ತೆ 2011 ಎರಡೂ ಏಕದಿನ ವಿಶ್ವಕಪ್ ಗೆದ್ದು ಬೀಗಿದೆ ಭಾರತ. ಮತ್ತೊಂದು ಕಡೆ 2023 ರಲ್ಲಿ ಕೂಡ ಭಾರತವೇ ಐಸಿಸಿ ಏಕದಿನ ವಿಶ್ವಕಪ್ ಗೆಲ್ಲುವ ತಂಡವಾಗಿದೆ.

5 ಬಾರಿ ಚಾಂಪಿಯನ್ಸ್ ಆಗಿದ್ದ ಆಸ್ಟ್ರೇಲಿಯಾ
ಆಸ್ಟ್ರೇಲಿಯಾ ಟೀಂ 5 ಬಾರಿ ಚಾಂಪಿಯನ್ಸ್ ಆಗಿದೆ ಅಂದ್ರೆ, 1987, 1999, 2003, 2007, 2015 ರಲ್ಲಿ ವಿಶ್ವಕಪ್ ಗೆದ್ದು ಬೀಗಿದೆ. ಹಾಗೇ 2 ಬಾರಿ ರನ್ನರ್ಸ್ ಅಪ್ ಆಗಿದೆ, ಹೀಗೆಂದರೆ ಫೈನಲ್ ಪಂದ್ಯದಲ್ಲಿ ಸೋತಿದೆ. 1975 & 1996ರಲ್ಲಿ ಹೀಗೆ ಆಸ್ಟ್ರೇಲಿಯಾ ಐಸಿಸಿ ಏಕದಿನ ವಿಶ್ವಕಪ್ ಪಂದ್ಯದಲ್ಲಿ ಸೋತಿದ್ದು. ಈ ಬಾರಿ ಇಟ್ ಮೀನ್ಸ್ 2023 ರಲ್ಲಿ ಕೂಡ ಭಾರತದ ಎದುರು ಆಸ್ಟ್ರೇಲಿಯಾ ಹೀನಾಯವಾಗಿ ಸೋಲುವುದು ಗ್ಯಾರಂಟಿ ಅಂತಿದ್ದಾರೆ ಫ್ಯಾನ್ಸ್.

ಒಟ್ನಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಭೀಕರ ರಣಕಾಳಗಕ್ಕೆ ಈಗ ವೇದಿಕೆ ಸಿದ್ಧತೆ ಮಾಡಲಾಗುತ್ತಿದೆ. ಇನ್ನೇನು ಕೆಲವೇ ನಿಮಿಷದಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ನಡುವೆ, 2023ರ ಐಸಿಸಿ ಏಕದಿನ ವಿಶ್ವಕಪ್ ಫೈನಲ್ ಪಂದ್ಯ ಆರಂಭವಾಗಲಿದೆ. ಹಾಗಾದರೆ ಇಂದು ಗೆದ್ದು ಬೀಗುವುದು ಯಾರು? ಸೋತು ಮನೆಗೆ ಹೋಗುವುದು ಯಾರು? ಅನ್ನೋದು ರಾತ್ರಿ 11 ಗಂಟೆಯ ಒಳಗೆ ಫೈನಲ್ ಆಗಲಿದೆ.
-
Dhurandhar 2 Pakistan: ಅರಬ್ ರಾಷ್ಟ್ರದ ಸಾಲ ತೀರಿಸಲು ದುರಂಧರ್ 2 ಬಿಡುಗಡೆಗೆ ಮುಂದಾಯ್ತಾ ಪಾಕಿಸ್ತಾನ, ಟ್ವಿಸ್ಟ್ -
Lata Mangeshkar & Asha Bhosle: ಆ ಒಂದು ಕಾರಣಕ್ಕೆ ತಂಗಿ ಆಶಾ ಬೋಸ್ಲೆ ಜೊತೆ ಮಾತು ಬಿಟ್ಟಿದ್ದ ಲತಾ ಮಂಗೇಶ್ಕರ್ -
Karntaka Weather: ಹವಾಮಾನ ವೈಪರೀತ್ಯ! ರಾಜ್ಯದ ಒಳನಾಡು, ಕರಾವಳಿ ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ -
Gas Booking New Rules: ಎಲ್ಪಿಜಿ ಗ್ಯಾಸ್ ಬುಕ್ಕಿಂಗ್ನಲ್ಲಿ ಹೊಸ ನಿಯಮ, ಎಷ್ಟು ದಿನಕ್ಕೆ ಸಿಗುತ್ತೆ ಗ್ಯಾಸ್ ಸಿಲಿಂಡರ್ -
Ram Gopal Varma: ದಾವೂದ್ ಇಬ್ರಾಹಿಂ ಇಲ್ಲದಿದ್ದರೆ ನಾನು ಬದುಕು ಕಟ್ಟಿಕೊಳ್ಳುತ್ತಿರಲಿಲ್ಲ: ನಿರ್ದೇಶಕ ರಾಮ್ ಗೋಪಾಲ್ ವರ್ಮಾ -
Asha Bhosle Kannada Songs: ಆಶಾ ಭೋಸ್ಲೆ ಹಾಡಿದ ಕನ್ನಡದ ಹಾಡುಗಳು: ಕರ್ನಾಟಕದ ಜನರ ಮನ ಗೆದ್ದ ಖ್ಯಾತ ಗಾಯಕಿ -
Banana Price: ತಮಿಳುನಾಡು ಬಿಸಿಗಾಳಿ ಎಫೆಕ್ಟ್ಗೆ ಕುಸಿದ ಬಾಳೆಹಣ್ಣು ಧಾರಣೆ: ಬೆಂಗಳೂರಿನಲ್ಲಿ ಕೆ.ಜಿಗೆ 7 ರೂಪಾಯಿ -
Summer Specail Train: ಮೈಸೂರಿನಿಂದ ಇಲ್ಲಿಗೆ ವಿಶೇಷ ಎಕ್ಸ್ಪ್ರೆಸ್ ರೈಲು, 3 ರಾಜ್ಯಗಳಿಗೆ ಅನುಕೂಲ -
April 12 Horoscope: 12 ರಾಶಿಗಳಿಗೆ ಇಂದು ಹಣ-ಪ್ರೇಮದಲ್ಲಿ ಅದೃಷ್ಟ ಯಾರಿಗೆ? ಸಂಪೂರ್ಣ ವಿವರ -
IPL 2026: ಗಿಲ್ ಮತ್ತು ಬಟ್ಲರ್ ಸ್ಫೋಟಕ ಬ್ಯಾಟಿಂಗ್, ಎಲ್ಎಸ್ಜಿ ಮಣಿಸಿದ ಗುಜರಾತ್ ಟೈಟಾನ್ಸ್ -
Asha Bhosle: ಭಾರತೀಯ ಸಿನಿಮಾ ರಂಗದ ಖ್ಯಾತ ಗಾಯಕಿ ಆಶಾ ಭೋಸ್ಲೆ ಇನ್ನಿಲ್ಲ, ಸಂಗೀತ ರಾಣಿ ಎಂದೇ ಖ್ಯಾತಿ -
Karnataka Train: ಕಲಬುರಗಿ - ಕಲ್ಯಾಣ ಕರ್ನಾಟಕದಲ್ಲಿ ರೈಲು ಪ್ರಯಾಣಿಕರ ನಿತ್ಯ ಪರದಾಟ: ಸಿದ್ದು ಮಠಪತಿ ಬರಹ












Click it and Unblock the Notifications