ODI World Cup 2023: ಏಕದಿನ ವಿಶ್ವಕಪ್‌ ಅಧಿಕೃತ ಗೀತೆ ಬಿಡುಗಡೆ ಮಾಡಿದ ಐಸಿಸಿ

ಅಕ್ಟೋಬರ್ 5ರಿಂದ ಆರಂಭವಾಗಲಿರುವ ಏಕದಿನ ವಿಶ್ವಕಪ್ 2023ರ ಪಂದ್ಯಾವಳಿಯ ಅಧಿಕೃತ ಗೀತೆಯನ್ನು ಐಸಿಸಿ ಬಿಡುಗಡೆ ಮಾಡಿದೆ. ಐಸಿಸಿ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಬಿಡುಗಡೆ ಮಾಡಿದ 3 ನಿಮಿಷಗಳ ವೀಡಿಯೋದಲ್ಲಿ 'ದಿಲ್ ಜಶ್ನ್ ಬೋಲೆ' ಶೀರ್ಷಿಕೆಯ ಗೀತೆಯಲ್ಲಿ ರಣವೀರ್ ಸಿಂಗ್ ಕಾಣಿಸಿಕೊಂಡಿದ್ದಾರೆ.

ಅಕ್ಟೋಬರ್ 5 ರಂದು ಏಕದಿನ ವಿಶ್ವಕಪ್ ಪ್ರಾರಂಭವಾಗುವ ಕೆಲವೇ ವಾರಗಳ ಮೊದಲು 'ಬೋರ್ಡ್ ದಿ ಒನ್ ಡೇ ಎಕ್ಸ್‌ಪ್ರೆಸ್' ಗೆ ಹೋಗಲು ಅಭಿಮಾನಿಗಳನ್ನು ಆಹ್ವಾನಿಸುವ ಗೀತೆ ಬಿಡುಗಡೆಯಾಗಿದೆ.

ICC Releases ODI World Cup 2023 Anthem with Ranveer Singh

ಬಾಲಿವುಡ್ ನಟ ರಣವೀರ್ ಸಿಂಗ್ ಮತ್ತು ಸಂಗೀತಗಾರ ಪ್ರೀತಮ್ ಅವರಲ್ಲದೆ, ಬಿ ಯೂನಿಕ್, ಫ್ಲೈಯಿಂಗ್ ಬೀಸ್ಟ್, ಸ್ಕೌಟ್, ವಿರಾಜ್ ಘೆಲಾನಿ ಮತ್ತು ಧನಶ್ರೀ ವರ್ಮಾ (ಯುಜ್ವೇಂದ್ರ ಚಾಹಲ್ ಅವರ ಪತ್ನಿ) ನಂತಹ ಹಲವಾರು ಸಾಮಾಜಿಕ ಮಾಧ್ಯಮ ಪ್ರಭಾವಿಗಳನ್ನು ಸಹ ವೀಡಿಯೊದಲ್ಲಿ ನೋಡಬಹುದಾಗಿದೆ.

ಸ್ಟಾರ್ ಸ್ಪೋರ್ಟ್ಸ್‌ನೊಂದಿಗಿನ ಒಡನಾಟಕ್ಕೆ ಹೆಸರುವಾಸಿಯಾದ ಕ್ರೀಡೆಯ ನಿರೂಪಕ, ಪ್ರಸಾರಕರು ಮತ್ತು ಕ್ರಿಕೆಟ್ ವಿವರಣೆಗಾರ ಜತಿನ್ ಸಪ್ರು ಕೂಡ ವಿಡಿಯೋದಲ್ಲಿ ಕಾಣಿಸಿಕೊಂಡಿದ್ದಾರೆ.

ವಿಶ್ವಕಪ್ ಗೀತೆಯಲ್ಲಿ ಅನ್ವೀರ್ ಮತ್ತು ಪ್ರೀತಮ್

ವಿಶ್ವಕಪ್ 2023 ರ ಗೀತೆ ಬಿಡುಗಡೆಯಲ್ಲಿ, ರಣವೀರ್ ಸಿಂಗ್ ಅವರು ಕ್ರಿಕೆಟ್ ಜಗತ್ತಿಗೆ ಹಾಡನ್ನು ತಲುಪಿಸುವ ಅವಕಾಶ ನೀಡಿದ್ದಕ್ಕಾಗಿ ಧನ್ಯವಾದಗಳನ್ನು ತಿಳಿಸಿದ್ದಾರೆ. "ಐಸಿಸಿ ಪುರುಷರ ಕ್ರಿಕೆಟ್ ವಿಶ್ವಕಪ್ 2023 ಗಾಗಿ ಈ ಗೀತೆ ಬಿಡುಗಡೆಯ ಭಾಗವಾಗಿರುವುದು ನನಗೆ ಸಿಕ್ಕ ದೊಡ್ಡ ಗೌರವವಾಗಿದೆ ಎಂದು ಹೇಳಿದ್ದಾರೆ.

ಪ್ರೀತಮ್ ತಮ್ಮ ಭಾವನೆಗಳನ್ನು ಹಂಚಿಕೊಂಡರು, ಪ್ರಪಂಚದಾದ್ಯಂತದ ಅಭಿಮಾನಿಗಳಿಗೆ ಭಾರತ ಮತ್ತು ಅದರ ಕ್ರಿಕೆಟ್‌ನ ದೃಶ್ಯಗಳನ್ನು ಹಾಡಿನ ಮೂಲಕ ತರಬೇಕೆನ್ನುವ ಬಯಕೆ ಹೊಂದಿದ್ದಾಗ ಹೇಳಿದರು.

ಕ್ರಿಕೆಟ್ ಭಾರತದ ದೊಡ್ಡ ಹಬ್ಬವಾಗಿದೆ ಮತ್ತು ಇದುವರೆಗಿನ ಅತಿದೊಡ್ಡ ವಿಶ್ವಕಪ್‌ಗಾಗಿ 'ದಿಲ್ ಜಶ್ನ್ ಬೋಲೆ' ಗೀತೆಯನ್ನು ರಚಿಸುವುದು ನನಗೆ ಸಿಕ್ಕ ದೊಡ್ಡ ಗೌರವವಾಗಿದೆ ಎಂದು ಹೇಳಿದರು.

ಈ ಹಾಡು ಕೇವಲ 1.4 ಶತಕೋಟಿ ಭಾರತೀಯ ಅಭಿಮಾನಿಗಳಿಗೆ ಮಾತ್ರವಲ್ಲ, ಇಡೀ ಜಗತ್ತು ಭಾರತಕ್ಕೆ ಬರಲು ಮತ್ತು ಇದುವರೆಗಿನ ಅತಿದೊಡ್ಡ ಆಚರಣೆಯ ಭಾಗವಾಗಲು ರಚಿಸಲಾಗಿದೆ ಎಂದು ಅವರು ಹೇಳಿದರು.

ಅಕ್ಟೋಬರ್ 5ರಿಂದ ಕ್ರಿಕೆಟ್ ಹಬ್ಬ

ಅಕ್ಟೋಬರ್ 5ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಹಾಲಿ ಚಾಂಪಿಯನ್ ಇಂಗ್ಲೆಂಡ್ ಮತ್ತು ರನ್ನರ್ ಅಪ್ ತಂಡ ನ್ಯೂಜಿಲೆಂಡ್ ತಂಡಗಳ ಮುಖಾಮುಖಿಯೊಂದಿಗೆ ಏಕದಿನ ವಿಶ್ವಕಪ್‌ಗೆ ಚಾಲನೆ ಸಿಗಲಿದೆ. ನವೆಂಬರ್ 19ರಂದು ಇದೇ ಕ್ರೀಡಾಂಗಣದಲ್ಲಿ ಫೈನಲ್ ಪಂದ್ಯ ನಡೆಯಲಿದೆ.

ಅಕ್ಟೋಬರ್ 14ರಂದು ಅಹಮದಾಬಾದ್‌ನಲ್ಲಿ ಬಹು ನಿರೀಕ್ಷಿತ ಭಾರತ - ಪಾಕಿಸ್ತಾನ ಪಂದ್ಯ ನಡೆಯಲಿದೆ. ಈ ಪಂದ್ಯಕ್ಕೆ ವಿಶ್ವ ದಾಖಲೆಯ ಅಭಿಮಾನಿಗಳು ಮೈದಾನದಲ್ಲಿ ಸೇರಲಿದ್ದು, ಹೊಸ ದಾಖಲೆ ನಿರ್ಮಾಣವಾಗಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+